ಆಗಸ್ಟ್​ 15ಕ್ಕೆ ಬಿಡುಗಡೆಯಾಗಲಿದೆ 'ಮಣಿಕರ್ಣಿಕಾ' ಸಿನಿಮಾ ಟೀಸರ್​!

news18
Updated:July 20, 2018, 4:10 PM IST
ಆಗಸ್ಟ್​ 15ಕ್ಕೆ ಬಿಡುಗಡೆಯಾಗಲಿದೆ 'ಮಣಿಕರ್ಣಿಕಾ' ಸಿನಿಮಾ ಟೀಸರ್​!
news18
Updated: July 20, 2018, 4:10 PM IST
ನ್ಯೂಸ್ 18 ಕನ್ನಡ

ಬಾಲಿವುಡ್​ನ ಕ್ವೀನ್​ ಕಂಗನಾ ರನೋಟ್​ ಅಭಿನಯಿಸುತ್ತಿರುವ ಮುಂದಿನ ಸಿನಿಮಾ 'ಮಣಿಕರ್ಣಿಕಾ: ದ ಕ್ವೀನ್​ ಆಫ್​ ಜಾನ್ಸಿ'. ಕಂಗನಾ ಈಗ ಈ  ಸಿನಿಮಾ ಕುರಿತಾದ ಒಂದು ಸಂತೋಷದ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಅದು ಈ ಸಿನಿಮಾದ ಟೀಸರ್​ ಸ್ವಾತಂತ್ರ್ಯ ದಿನಾಚರಣೆಯಂದು ಅಂದರೆ ಆಗಸ್ಟ್​ 15ರಂದು ಬಿಡುಗಡೆಯಾಗಲಿದೆ ಎಂದು ಖುದ್ದು ಕಂಗನಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಸಿನಿಮಾದ ಕೆಲವೊಂದು ದೃಶ್ಯಗಳನ್ನು ವೀಕ್ಷಿಸಿದ ನಂತರ ಖುದ್ದು ಕಂಗನಾ ಸಿನಿಮಾದ ಟೀಸರ್​ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ.

ಇತ್ತೀಚೆಗೆ ಸಿನಿಮಾ ಕುರಿತಾಗಿ ಆಯೋಜಿಸಲಾಗಿದ್ದ ಒಂದು ಭೇಟಿಯಲ್ಲಿ ಕಂಗನಾ ಸಿನಿಮಾ ನಿರ್ಮಾಪಕ ಕಮಲ್​ ಜೈನ್​ ಅವರನ್ನು ಭೇಟಿ ಮಾಡಿದ್ದರು. ಆಗ ಸಿನಿಮಾದ ಕೆಲವು ದೃಶ್ಯಗಳನ್ನು ನೋಡಿ ತುಂಬಾ ಖುಷಿಯಾಗಿದ್ದರು. ಈ ಭೇಟಿ ಮುಗಿದ ನಂತರ ಕಚೇರಿಯಿಂದ ಹೊರ ಬರುತ್ತಿದ್ದಂತೆಯೇ ಕಂಗನಾ ಅಲ್ಲೇ ಇದ್ದ ಮಾಧ್ಯಮಗಳ ಎದುರು ಟೀಸರ್​ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿದ್ದರಂತೆ.

ಈ ಸಿನಿಮಾದಲ್ಲಿ ಕಂಗನಾ ಜಾನ್ಸಿ ರಾಣಿ ಪಾತ್ರದಲ್ಲಿ ಅಭಿಯಿಸುತ್ತಿದ್ದು, ಈ ಪಾತ್ರಕ್ಕಾಗಿ ಕುದುರೆ ಸವಾರೆ, ಕತ್ತಿ ವರಸೆ ಸೇರಿದಂತೆ ಇತರೆ ವಿದ್ಯೆಗಳನ್ನು ಕಲಿತ್ತಿದ್ದಾರಂತೆ. ಈ ಹಿಂದೆ ಹೈದರಾಬಾದಿನಲ್ಲಿ ಈ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ನಡೆದಿತ್ತು. ಅದರಲ್ಲೂ ಕತ್ತಿ ವರಸೆಯ ದೃಶ್ಯ ಚಿತ್ರೀಕರಿಸುವಾಗ ಕಂಗನಾ ಹಣೆಗೆ ಕತ್ತಿ ತಗುಲಿ ಪೆಟ್ಟಾಗಿತ್ತಂತೆ. ತಕ್ಷಣ ಅವರನ್ನು ಹೈದರಾಬಾದಿನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು.

 

Loading...


First published:July 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ