Kangana Ranaut: ಈ ಬಾರಿ ಮಹೇಶ್‌ ಭಟ್​​ರನ್ನೇ ಟಾರ್ಗೆಟ್ ಮಾಡ್ಬಿಟ್ರು ಕಂಗನಾ; ನಿರ್ದೇಶಕನ ಹಳೆ ಹೆಸರಿನ ಬಗ್ಗೆ ಏನಂದ್ರು ನಟಿ?

ಬಾಲಿವುಡ್‌ ನಲ್ಲಿ ನಿರ್ದೇಶಕ ಮಹೇಶ್‌ ಭಟ್‌ ಮತ್ತು ಕಂಗನಾ ರಣಾವತ್‌ ಇಬ್ಬರೂ ಹಲವಾರು ವರ್ಷಗಳಿಂದ ಆರೋಪ-ಪ್ರತ್ಯಾರೋಪವನ್ನೇ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆ ಮಹೇಶ್‌ ಭಟ್‌ ಕಂಗನಾಳ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂಬ ಆರೋಪ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಕಂಗನಾ ರಣಾವತ್ ನಿರ್ಮಾಪಕ ಮಹೇಶ್ ಭಟ್ ಅವರ ಹಳೆಯ ವಿಡಿಯೋವನ್ನು ಹಂಚಿಕೊಂಡಿದ್ದು, ಅವರ ನಿಜವಾದ ಹೆಸರು ಏನೆಂದು ಬಿಚ್ಚಿಟ್ಟಿದ್ದಾರೆ.

ಕಂಗನಾ ರಣಾವತ್ ಮತ್ತು ಮಹೇಶ್‌ ಭಟ್‌

ಕಂಗನಾ ರಣಾವತ್ ಮತ್ತು ಮಹೇಶ್‌ ಭಟ್‌

  • Share this:
ಬಾಲಿವುಡ್ ನಟಿ (Bollywood actress), ಕ್ವೀನ್ ಖ್ಯಾತಿಯ ಕಂಗನಾ (Kangana) ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ಹೆಚ್ಚಾಗಿ ಅವರ ಹೇಳಿಕೆ, ಟ್ವೀಟ್‌ ಗಳಿಂದ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಾಲಿವುಡ್‌ ನಲ್ಲಿ ನಿರ್ದೇಶಕ ಮಹೇಶ್‌ ಭಟ್‌ (Mahesh Bhatt) ಮತ್ತು ಕಂಗನಾ ರಣಾವತ್‌ ಇಬ್ಬರೂ ಹಲವಾರು ವರ್ಷಗಳಿಂದ ಆರೋಪ-ಪ್ರತ್ಯಾರೋಪವನ್ನೇ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆ ಮಹೇಶ್‌ ಭಟ್‌ ಕಂಗನಾಳ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂಬ ಆರೋಪ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಕಂಗನಾ ರಣಾವತ್ ನಿರ್ಮಾಪಕ ಮಹೇಶ್ ಭಟ್ ಅವರ ಹಳೆಯ ವಿಡಿಯೋವನ್ನು (Video) ಹಂಚಿಕೊಂಡಿದ್ದು, ಅವರ ನಿಜವಾದ ಹೆಸರು ಏನೆಂದು ಬಿಚ್ಚಿಟ್ಟಿದ್ದಾರೆ.

ಮಹೇಶ್‌ ಭಟ್‌ ಏಕೆ ತಮ್ಮ ಹಳೆಯ ಹೆಸರನ್ನು ಮರೆಮಾಚಿದ್ದಾರೆ - ಕಂಗನಾ
ಸದ್ಯ ಕಂಗನಾ ರಣಾವತ್ ನಿರ್ಮಾಪಕ ಮಹೇಶ್ ಭಟ್ ಅವರ ಹಳೆಯ ವಿಡಿಯೋವನ್ನು ಹಂಚಿಕೊಂಡಿದ್ದು, ಅವರ ನಿಜವಾದ ಹೆಸರು ಮಹೇಶ್ ಅಲ್ಲ ʼಅಸ್ಲಾಂʼ ಎಂಬ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಇಷ್ಟೇ ಅಲ್ಲ, ಮಹೇಶ್‌ ಭಟ್‌ ಏಕೆ ತಮ್ಮ ಹಳೆಯ ಹೆಸರನ್ನು ಮರೆಮಾಚಿದ್ದಾರೆ ಎಂದು ಸಹ ಕಂಗನಾ ಪ್ರಶ್ನೆ ಮಾಡಿದ್ದಾರೆ.

ಮಹೇಶ್ ಭಟ್‌ ತಮ್ಮ ನಿಜವಾದ ಹೆಸರನ್ನು ಬಳಸಬೇಕು ಮತ್ತು ಮತಾಂತರವಾದಾಗ ನಿರ್ದಿಷ್ಟ ಧರ್ಮವನ್ನು ಪ್ರತಿನಿಧಿಸಬಾರದು ಎಂದು ಅವರು ಬರೆದುಕೊಂಡಿದ್ದಾರೆ.

ವಿಡಿಯೋಗಳನ್ನು ಹಂಚಿಕೊಂಡು ಮಹೇಶ್‌ ಭಟ್‌ ಗೆ ಟಾಂಗ್
ಕೆಲವು ಆರೋಪ-ಪ್ರತ್ಯಾರೋಪಗಳ ನಂತರ ಬಾಲಿವುಡ್‌ ಚಿತ್ರರಂಗದಲ್ಲಿ ಮಹೇಶ್‌ ಭಟ್‌ ಮತ್ತು ಬೋಲ್ಡ್‌ ನಟಿ ಕಂಗನಾ ರಣಾವತ್‌ ಸಂಬಂಧ ಅಷ್ಟಾಗಿ ಚೆನ್ನಾಗಿಲ್ಲ. ಸದ್ಯ ಮಹೇಶ್ ಭಟ್‌ ಬಗ್ಗೆ ಪೋಸ್ಟ್‌ ಗಳನ್ನು ಮಾಡಿದ ಕಂಗನಾ ಅವರ ನಿಜವಾದ ಹೆಸರಿನ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Pushpa 2 ಚಿತ್ರದಲ್ಲಿ ಶೈನ್ ಆಗಲಿದ್ದಾರೆ ಸಾಯಿ ಪಲ್ಲವಿ! ಆ ಇಂಟ್ರಸ್ಟಿಂಗ್ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ!

ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ ನಲ್ಲಿ ಈ ಬಗ್ಗೆ ಭಾನುವಾರ ಕೆಲವು ವಿಡಿಯೋ ಕ್ಲಿಪ್‌ ಗಳ ಸರಣಿ ಪೋಸ್ಟ್‌ ಗಳನ್ನು ಮಾಡಿದ್ದು, ಕ್ಲಿಪ್‌ಗಳ ಜೊತೆಗೆ ಮಹೇಶ್ ಮತ್ತು ಅವರ ನಿಜವಾದ ಹೆಸರು ಮತ್ತು ಧರ್ಮದ ಬಗ್ಗೆ ಕೆಲವು ಹೇಳಿಕೆಗಳನ್ನು ಪೋಸ್ಟ್‌ ಮಾಡಿದ್ದಾರೆ. ಇನ್‌ ಸ್ಟಾಗ್ರಾಮ್‌ ನಲ್ಲಿ ಮಹೇಶ್ ಭಟ್ ಅವರ ಹಳೆಯ ಭಾಷಣದ ಒಂದು ತುಣುಕನ್ನು ಕಂಗನಾ ರಣಾವತ್ ಹಂಚಿಕೊಂಡು "ಮಹೇಶ್ ಜೀ ಆಕಸ್ಮಿಕವಾಗಿ ಮತ್ತು ಕಾವ್ಯಾತ್ಮಕವಾಗಿ ಜನರನ್ನು ಹಿಂಸೆಗೆ ಪ್ರಚೋದಿಸುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.‌

"ಎರಡನೆ ಮದುವೆಯಾಗಲು ಹೆಸರು ಬದಲಾವಣೆ"
ಅದೇ ವಿಡಿಯೋದ ಮತ್ತೊಂದು ಕ್ಲಿಪ್ ಅನ್ನು ಹಂಚಿಕೊಂಡ ಅವರು, "ನನಗೆ ಮಹೇಶ್ ಭಟ್ ಅವರ ನಿಜವಾದ ಹೆಸರು ಅಸ್ಲಾಂ ಎಂದು ತಿಳಿದಿದೆ. ಅವರು ತನ್ನ ಎರಡನೇ ಹೆಂಡತಿಯನ್ನು (ಸೋನಿ ರಜ್ದಾನ್) ಮದುವೆಯಾಗಲು ಹೆಸರು ಬದಲಿಸಿಕೊಂಡು ಮತಾಂತರಗೊಂಡಿದ್ದಾರೆ. ಇದು ಸುಂದರವಾದ ಹೆಸರಾಗಿತ್ತು, ಅದನ್ನು ಏಕೆ ಮರೆಮಾಡಿದ್ದಾರೆ?" ಎಂದು ಪ್ರಶ್ನೆ ಮಾಡಿ ಪೋಸ್ಟ್‌ ಮಾಡಿದ್ದಾರೆ.

ದೋಖಾ ಸಿನಿಮಾವನ್ನು ಕಂಗನಾ ತಿರಸ್ಕರಿಸಿದಾಗಿನಿಂದಲೂ ಇಬ್ಬರ ಸಂಬಂಧ ಹಳಸಿದೆ. 2020 ರಲ್ಲಿ ಮಹೇಶ್ ಭಟ್ ಬರೆದಿದ್ದ 'ದೋಖಾ' ಎಂಬ ಸಿನಿಮಾದಲ್ಲಿ ಕಂಗನಾ ಅಭಿನಯಿಸಬೇಕು ಎನ್ನುವುದು ಅವರ ಆಸೆಯಾಗಿತ್ತು. ಆ ಚಿತ್ರದಲ್ಲಿ ಕಂಗನಾ ಸೂಸೈಡ್ ಬಾಂಬರ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಕಂಗನಾ ನಿರಾಕರಿಸಿದ ಕಾರಣ ಮಹೇಶ್ ಭಟ್ ಆಕೆಯ ವಿರುದ್ಧ ಕಿರುಚಾಡಿದ್ದರು. ಅಷ್ಟಕ್ಕೆ ಸುಮ್ಮನಾಗದೆ ಮಹೇಶ್ ಭಟ್ 'ವೋ ಲಮ್ಹೇ' ಚಿತ್ರದ ಪ್ರೀವ್ಯೂನಲ್ಲಿ ಕಂಗನಾ ಮೇಲೆ ಚಪ್ಪಲಿ ಎಸೆದಿದ್ದರು ಎನ್ನಲಾಗಿತ್ತು.

ಅಪ್ಪ-ಮಗಳನ್ನು ಟೀಕಿಸಿದ್ದ ಕಂಗನಾ
ಮಹೇಶ್‌ ಭಟ್‌ ಬಗ್ಗೆ ಟೀಕೆಗಳನ್ನು ಮುಂದುವರೆಸಿದ ಕಂಗನಾ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಬಿಡುಗಡೆಯಾದಾಗಲೂ ಟೀಕಿಸಿದ್ದರು. ಈ ವರ್ಷದ ಆರಂಭದಲ್ಲಿ, ಆಲಿಯಾ ಅವರ ಚಿತ್ರ ಗಂಗೂಬಾಯಿ ಕಥಿಯಾವಾಡಿ ಬಿಡುಗಡೆಗೂ ಮುನ್ನ ಕಂಗನಾ ಮಹೇಶ್ ಭಟ್ ಮತ್ತು ಅವರ ಮಗಳು ನಟಿ ಆಲಿಯಾ ಭಟ್ ವಿರುದ್ಧ ಪರೋಕ್ಷವಾಗಿ ಟಾಂಗ್‌ ನೀಡಿದ್ದರು.

ಇದನ್ನೂ ಓದಿ:  Vikram Movie: ಕನ್ನಡದ ಈ ವಾಹಿನಿಯಲ್ಲಿ ವಿಕ್ರಂ ಸಿನಿಮಾ ನೋಡಿ! ಯಾವ ಚಾನೆಲ್​​ ಪ್ರಸಾರ ಮಾಡುತ್ತಿದೆ ಗೊತ್ತಾ?

ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಗಂಗೂಬಾಯಿ ಕಥಿಯಾವಾಡಿ ಬಗ್ಗೆ "ಚಿತ್ರದ ದೊಡ್ಡ ತಪ್ಪು ಎಂದರೆ ತಪ್ಪಾದ ಕಲಾವಿದರ ಆಯ್ಕೆ ಎಂದು ಅಪ್ಪ-ಮಗಳ ಮೇಲೆ ಕಿಡಿಕಾರಿದ್ದರು. ಫೆಬ್ರವರಿ 2022 ರಲ್ಲಿ ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ “ಈ ಶುಕ್ರವಾರ ಬಾಕ್ಸ್ ಆಫೀಸ್‌ನಲ್ಲಿ ₹200 ಕೋಟಿ ಸುಟ್ಟು ಬೂದಿಯಾಗಲಿದೆ. ಚಿತ್ರದ ದೊಡ್ಡ ನ್ಯೂನತೆಯೆಂದರೆ ತಪ್ಪಾದ ಕಾಸ್ಟಿಂಗ್... ಈ ಜನರು ಬದಲಾಗುವುದಿಲ್ಲ" ಎಂದು ಪೋಸ್ಟ್‌ ಮಾಡಿದ್ದರು.
Published by:Ashwini Prabhu
First published: