Thalaivii: ತಲೈವಿ ಚಿತ್ರಕ್ಕಿದೆ ಸಾಲು ಸಾಲು ಸವಾಲು - ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಲಿದೆಯಾ ಕಂಗನಾ ಸಿನೆಮಾ

Kangana Ranaut: ತಲೈವಿ ಭಾರತೀಯ ರಾಜಕೀಯದಲ್ಲಿ ಅತ್ಯಂತ ಕ್ರಿಯಾತ್ಮಕ ಮತ್ತು ಆಸಕ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರಾದ ತಮಿಳುನಾಡಿನ ಮಾಜಿ ಸಿಎಂ ಜೆ ಜಯಲಲಿತಾ ಅವರ ಜೀವನ ಮತ್ತು ಅವರ ಆಡಳಿತದ ಸಮಯವನ್ನು ಆಧರಿಸಿದೆ

ತಲೈವಿ ಚಿತ್ರ ಪೋಸ್ಟರ್

ತಲೈವಿ ಚಿತ್ರ ಪೋಸ್ಟರ್

  • Share this:
ಕೊರೊನಾ ವೈರಸ್(Coronavirus) ವಿಶ್ವದಾದ್ಯಂತ ಬಾಕ್ಸ್ ಆಫೀಸ್ (Box Office)ಮೇಲೆ ದೊಡ್ಡ ಹೊಡೆತ ನೀಡಿದೆ. ಭಾರತದಲ್ಲಿ ಸಹ ಸಿನೆಮಾಗಳ ಗಳಿಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಮುಂಬೈ ಮತ್ತು ಪುಣೆಯಂತಹ ಪ್ರಮುಖ ಪ್ರದೇಶಗಳಲ್ಲಿಚಿತ್ರ ಮಂದಿರಗಳು ಇನ್ನೂ ತೆರೆದಿಲ್ಲ, ಇದು ಬಾಲಿವುಡ್‌ನ(Bollywood) ಪ್ರಮುಖ ಆದಾಯಕ್ಕೆ ಧಕ್ಕೆಯಾಗುತ್ತದೆ. ಕೊರೊನಾ ಭಯ ಪ್ರೇಕ್ಷಕರನ್ನು ಚಿತ್ರ ಮಂದಿರದಿಂದ ದೂರ ಉಳಿಯುವಂತೆ ಮಾಡಿದೆ. ಈ ಸಮಯದಲ್ಲಿ ಅನೇಕ ಚಿತ್ರಮಂದಿರಗಳು ನಷ್ಟವನ್ನು ಅನುಭವಿಸುತ್ತಿವೆ. ಹಲವಾರು ಚಿತ್ರಗಳನ್ನು ನಿರ್ಮಾಪಕರು ಓಟಿಟಿಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ, ಆದರು ಸಹ ಕೆಲವರು ಥೀಯಟರ್​ಗಳಿಗೆ ಪ್ರೇಕ್ಷಕರನ್ನು ಕರೆತರಲು ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಹಿಂದಿ ಚಿತ್ರಗಳಾದ ಬೆಲ್ ಬಾಟಮ್ ಮತ್ತು ಚೆಹ್ರೆ ಇತ್ತೀಚೆಗೆ ತೆರೆ ಮೇಲೆ ಬಂದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಧ್ಯ ಬಾಲಿವುಡ್​ನ ಬಹು ನಿರೀಕ್ಷಿತ ಚಿತ್ರ ಕಂಗನಾ ರಣಾವತ್ ಅಭಿನಯದ ತಲೈವಿ. ಇದು  ಸೆಪ್ಟೆಂಬರ್ 10 ರಂದು ಬಿಡುಗಡೆಯಾಗಲಿದ್ದು, ಉತ್ತಮ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ.  ಆದರೂ ಆದಾಯದ ವಿಚಾರವಲ್ಲದೇ ಹಲವು ಸವಾಲುಗಳನ್ನು ತಲೈವಿ ಚಿತ್ರ ಎದುರಿಸಬೇಕಾಗಿದೆ.

ತಲೈವಿ ಭಾರತೀಯ ರಾಜಕೀಯದಲ್ಲಿ ಅತ್ಯಂತ ಕ್ರಿಯಾತ್ಮಕ ಮತ್ತು ಆಸಕ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರಾದ ತಮಿಳುನಾಡಿನ ಮಾಜಿ ಸಿಎಂ ಜೆ ಜಯಲಲಿತಾ ಅವರ ಜೀವನ ಮತ್ತು ಅವರ ಆಡಳಿತದ ಸಮಯವನ್ನು ಆಧರಿಸಿದೆ.  ಬಾಲಿವುಡ್​ನಲ್ಲಿ  ರಾಜಕೀಯ ಜೀವನಚರಿತ್ರೆ ನಿರೀಕ್ಷಿಸಿದಂತೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿಲ್ಲ. ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್, ಠಾಕ್ರೆ ಮತ್ತು ಯಾತ್ರಾ ಈ ಹಿಂದೆ ಬಿಡುಗಡೆಯಾದ ಕೆಲವು ರಾಜಕೀಯ ಜೀವನ ಚರಿತ್ರೆಯ ಚಿತ್ರಗಳಿಗೆ ಕಡಿಮೆ ಪ್ರತಿಕ್ರಿಯೆ ಬಂದಿತ್ತು.  ಹಾಗಾಗಿ ಜಯಲಲಿತಾ ಜೀವನ ಆಧಾರಿತ ಈ ಚಿತ್ರ ಹೇಗೆ ಅವರ ಜೀವನವನ್ನ ಮತ್ತು ರಾಜಕೀಯ ನಿರ್ಧಾರಗಳನ್ನು ಬಿಂಬಿಸಿದೆ ಎಂಬುದು ಆಸಕ್ತಿದಾಯಕ ವಿಚಾರವಾಗಿದೆ.

ಇದನ್ನೂ ಓದಿ: ಅಕ್ಷಯ್​ ಕುಮಾರ್​ ತಾಯಿ ಅರುಣಾ ಭಾಟಿಯಾ ಇನ್ನಿಲ್ಲ

ಬಾಲಿವುಡ್‌ನಲ್ಲಿ ಮಹಿಳಾ ಕೇಂದ್ರಿತ ಕಥೆಗಳು ಹೊಸ  ಆಯಾಮವನ್ನು ನೀಡಿದ್ದರೂ ಸಹ  ,  ಬಾಕ್ಸ್ ಆಫೀಸಿನಲ್ಲಿ ಹೆಚ್ಚು ಗಳಿಸಲು ಸಾಧ್ಯವಾಗಿಲ್ಲ. ತಲೈವಿಯ ಯಶಸ್ಸು ಮಹಿಳಾ ಕೇಂದ್ರಿತ ಚಲನಚಿತ್ರಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರ ಮಧ್ಯೆ , ಮೂರು ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಈ ಚಿತ್ರಕ್ಕೆ ಅವಕಾಶ ನೀಡದಿರಲು ನಿರ್ಧರಿಸಿದ್ದಾರೆ. ಇದು ಕಂಗನಾ ಮತ್ತು ನಿರ್ಮಾಪಕರಿಗೆ ಸಂಕಷ್ಟವನ್ನು ಸೃಷ್ಟಿಮಾಡಿದೆ.

ಕೊರೊನಾ ಸಮಯದಲ್ಲಿ ಚಿತ್ರ ಬಿಡುಗಡೆ ಮಾಡುವುದು ಚಿತ್ರತಂಡದ ಪ್ರತಿಯೊಬ್ಬರಿಗೂ ಚಿಂತೆಯಾಗಿದೆ.  ತಲೈವಿಯ ಹಿಂದಿ ಆವೃತ್ತಿಯು ಬಿಡುಗಡೆಯಾದ ಎರಡು ವಾರಗಳ ನಂತರ OTT ಯಲ್ಲಿ ಬಿಡುಗಡೆಯಾಗಲಿದೆ, ಈಗಾಗಲೇ ಹಣದ ಕೊರತೆಯಿರುವ ಕಾರಣ ಚಿತ್ರಮಂದಿರಗಳು ಅವಕಾಶ ನೀಡಲು ಯೋಚನೆ ಮಾಡುತ್ತವೆ. ತಲೈವಿ ಚಿತ್ರಕ್ಕೆ ಇದು ದೊಡ್ಡ ಸಮಸ್ಯೆಯಾಗಿದೆ. ಸಲ್ಮಾನ್ ಖಾನ್ ಅಭಿನಯದ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್. ಚಿತ್ರ OTT ಯಲ್ಲಿ  ಹಣ ಪಾವತಿಸಿ ವೀಕ್ಷಿಸಲು ಅವಕಾಶ ನೀಡಲಾಗಿತ್ತು ಹಾಗೂ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿಲ್ಲ.

ಇದನ್ನೂ ಓದಿ: ವಿಕ್ಕಿ ಕೌಶಲ್ ಅಭಿನಯದ The Immortal Ashwatthama ಚಿತ್ರದ ಚಿತ್ರೀಕರಣ ಸ್ಥಗಿತ?

ಪೇ-ಪರ್-ವ್ಯೂ ಮಾದರಿಯು ಭಾರತದಲ್ಲಿ ಅಭಿವೃದ್ಧಿಯ ಆರಂಭಿಕ ಹಂತದಲ್ಲಿದೆ. ಸಮಸ್ಯೆಯೆಂದರೆ ಓಟಿಟಿಯಲ್ಲಿ ಚಿತ್ರಗಳನ್ನು ಬಹು ಬೇಗನೆ ನೋಡಬಹುದು ಇದು ಚಿತ್ರಗಳ ಸಮಯದ ಮೇಲೆ ಪರಿಣಾಮ ಬೀರುತ್ತದೆ. ಇದು ನಟರ ಸ್ಟಾರ್ ಸಿಸ್ಟಂ ಮೇಲೆ ಕೂಡ ಪರಿಣಾಮ ಬೀರುತ್ತದೆ. ಅನೇಕ ಸಣ್ಣ ಬಜೆಟ್ ಚಿತ್ರಗಳು ನೇರವಾಗಿ ಡಿಜಿಟಲ್ ಬಿಡುಗಡೆಯನ್ನು ಅವಲಂಭಿಸಿವೆ. ಯಾಕೆಂದರೆ ಸಧ್ಯದ ಪರಿಸ್ಥಿತಿಯಲ್ಲಿ ಜನರನ್ನು ಚಿತ್ರಮಂದಿರಕ್ಕೆ ಕರೆತರುವುದು ಸುಲಭವಲ್ಲ. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ ನಷ್ಟ ಅನುಭವಿಸುವ ಬದಲು ಓಟಿಟಿಯಲ್ಲಿ ಬಿಡುಗಡೆ ಮಾಡುವುದು ಒಳ್ಳೆಯದು ಎಂದು ನಿರ್ಧರಿಸಿದ್ದಾರೆ.
Published by:Sandhya M
First published: