ಮಂಡ್ಯ(ಮೇ 30): ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಬಾಡಿಗಾರ್ಡ್ ಕುಮಾರಶೆಟ್ಟಿ ಅಲಿಯಾಸ್ ಕುಮಾರ ಹೆಗಡೆಯನ್ನು ಮುಂಬೈ ಪೊಲೀಸರು ಮಂಡ್ಯದಲ್ಲಿ ಬಂಧಿಸಿದ್ದಾರೆ. ಆರೋಪಿ ಮುಂಬೈನ ಬ್ಯೂಟಿಷಿಯನ್ನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ. ಈತ ಮೂಲತಃ ಮಂಡ್ಯ ಜಿಲ್ಲೆಯ ಒಂದು ಹೆಗ್ಗಡಹಳ್ಳಿ ಗ್ರಾಮದವನು ಎನ್ನಲಾಗಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಕಿಕ್ಕೇರಿ ಪೊಲೀಸ್ ಠಾಣೆಯ ಪೊಲೀಸರ ಸಹಾಯದೊಂದಿಗೆ ಮುಂಬೈ ಪೊಲೀಸರು ಆರೋಪಿ ಕುಮಾರ್ ಹೆಗಡೆಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:Sidewing: ಥಿಯೇಟರ್ಗಳಲ್ಲೂ ಬರಲ್ಲ, ಓಟಿಟಿಯಲ್ಲೂ ರಿಲೀಸ್ ಇಲ್ಲ; ಸೈಡ್ವಿಂಗ್ ಅವಿನಾಶ್ ವಿನೂತನ ಪ್ರಯತ್ನ
ಈತ ಮುಂಬೈ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಆಕೆಯಿಂದ 50 ಸಾವಿರ ಹಣ ಪಡೆದಿದ್ದ. ಬಳಿಕ ಯುವತಿಯೊಂದಿಗೆ ಸಂಪರ್ಕ ಕಡಿದುಕೊಂಡು ಕರ್ನಾಟಕಕ್ಕೆ ಬಂದು ತಲೆಮರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಮಹಿಳೆ ಕುಮಾರ್ ಹೆಗಡೆಗೆ ಫೋನ್ ಮಾಡಲು ಪ್ರಯತ್ನಿಸಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಆಗ ಆತನ ವಂಚನೆ ಅರಿತ ಆಕೆ ಮುಂಬೈನ ಉಪನಗರ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಮೇ 22ರಂದು ದೂರು ನೀಡಿದ್ದರು.
ಶನಿವಾರ ಮಂಡ್ಯಕ್ಕೆ ಆಗಮಿಸಿದ ಮುಂಬೈ ಪೊಲೀಸ್ ತಂಡ, ಹೆಗ್ಗಡಹಳ್ಳಿಯಲ್ಲಿ ಆರೋಪಿ ಕುಮಾರ್ ಹೆಗಡೆಯನ್ನು ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ