• Home
  • »
  • News
  • »
  • entertainment
  • »
  • Kantara-Kangana Ranaut: ಕಾಂತಾರ ನೋಡಿ ವಾವ್ ವಾವ್ ಎಂದ ಕ್ವೀನ್! ರಿಷಬ್ ಬಗ್ಗೆ ವಿಡಿಯೋ ಮಾಡಿದ ಕಂಗನಾ

Kantara-Kangana Ranaut: ಕಾಂತಾರ ನೋಡಿ ವಾವ್ ವಾವ್ ಎಂದ ಕ್ವೀನ್! ರಿಷಬ್ ಬಗ್ಗೆ ವಿಡಿಯೋ ಮಾಡಿದ ಕಂಗನಾ

ಫ್ಯಾಮಿಲಿ ಜೊತೆ ಹೋಗಿ ಕಾಂತಾರ ಹಿಂದಿ ಸಿನಿಮಾವನ್ನು ನೋಡಿದ್ದಾರೆ ಬಾಲಿವುಡ್ ಕ್ವೀನ್. ಸಿನಿಮಾ ನೋಡಿ ಸೆಲ್ಫಿ ವಿಡಿಯೋ ಮಾಡಿ ಸಿನಿಮಾ ಹಾಗೂ ರಿಷಬ್ ಬಗ್ಗೆ ನಟಿ ಏನಂದ್ರು?

ಫ್ಯಾಮಿಲಿ ಜೊತೆ ಹೋಗಿ ಕಾಂತಾರ ಹಿಂದಿ ಸಿನಿಮಾವನ್ನು ನೋಡಿದ್ದಾರೆ ಬಾಲಿವುಡ್ ಕ್ವೀನ್. ಸಿನಿಮಾ ನೋಡಿ ಸೆಲ್ಫಿ ವಿಡಿಯೋ ಮಾಡಿ ಸಿನಿಮಾ ಹಾಗೂ ರಿಷಬ್ ಬಗ್ಗೆ ನಟಿ ಏನಂದ್ರು?

ಫ್ಯಾಮಿಲಿ ಜೊತೆ ಹೋಗಿ ಕಾಂತಾರ ಹಿಂದಿ ಸಿನಿಮಾವನ್ನು ನೋಡಿದ್ದಾರೆ ಬಾಲಿವುಡ್ ಕ್ವೀನ್. ಸಿನಿಮಾ ನೋಡಿ ಸೆಲ್ಫಿ ವಿಡಿಯೋ ಮಾಡಿ ಸಿನಿಮಾ ಹಾಗೂ ರಿಷಬ್ ಬಗ್ಗೆ ನಟಿ ಏನಂದ್ರು?

  • News18 Kannada
  • Last Updated :
  • Bangalore, India
  • Share this:

ಬಾಲಿವುಡ್ (Bollywood) ಕ್ವೀನ್ ನಟಿ (Queen) ಕಂಗನಾ ರಣಾವತ್ (Kangana Ranaut) ಕಾಂತಾರ ಸಿನಿಮಾ ನೋಡಿಕೊಂಡು ಬಂದಿದ್ದಾರೆ. ಫ್ಯಾಮಿಲಿ ಜೊತೆ ಹೋಗಿ ಕಾಂತಾರ ಹಿಂದಿ ಸಿನಿಮಾವನ್ನು ನೋಡಿದ್ದಾರೆ ಬಾಲಿವುಡ್ ಕ್ವೀನ್. ಈಗಾಗಲೇ ಕಾಂತಾರ (Kantara) ಹವಾ ಜೋರಾಗಿದ್ದು ಇದರ ನಡುವೆ ಬಾಲಿವುಡ್ ಸೆಲೆಬ್ರಿಟಿಗಳು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸೌತ್ ಸ್ಟಾರ್​ಗಳಾದ ಪ್ರಭಾಸ್, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಧನುಷ್, ಕಾರ್ತಿ, ಕಿಚ್ಚ ಸುದೀಪ್, ಪೃಥ್ವಿರಾಜ್ ಸುಕುಮಾರನ್ ಅವರಂತಹ ನಟ, ನಟಿಯರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಕಂಗನಾ ಕೂಡಾ ಅವರ ಸಾಲಿಗೆ ಸೇರಿದ್ದಾರೆ. ಈಗಾಗಲೇ ನಟಿ ಸಿನಿಮಾ ನೋಡಲು ಕುತೂಹಲ ಹೆಚ್ಚಿರೋದಾಗಿ ಹೇಳಿದ್ದರು. ಈಗ ನಟಿ ಸಿನಿಮಾ ನೋಡಿ ಪ್ರತಿಕ್ರಿಯಿಸಿದ್ದಾರೆ.


ಕಾಂತಾರದ ಬಗ್ಗೆ ಕಂಗನಾ ವಿಡಿಯೋ


ಕಾಂತಾರ ಸಿನಿಮಾ ನೋಡಿ ಕಂಗನಾ ರಣಾವತ್ ಕಾರ್​​ನಲ್ಲಿಯೇ ಸೆಲ್ಫೀ ವಿಡಿಯೋ ಮಾಡಿ ಚಿತ್ರ ವಿಮರ್ಶೆ ಮಾಡಿದ್ದಾರೆ. ವಿಡಿಯೋವನ್ನು ತಮ್ಮ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಅದೇ ರೀತಿ ಸಿನಿಮಾ ಬಗ್ಗೆ ಮತ್ತೊಂದು ಪೋಸ್ಟ್ ಕೂಡಾ ಸ್ಟೋರಿಯಲ್ಲಿ ಹಾಕಿದ್ದಾರೆ.
ವಿಡಿಯೋದಲ್ಲಿ ಏನು ಹೇಳಿದ್ದಾರೆ?


ನಾನು ಫ್ಯಾಮಿಲಿ ಜೊತೆ ನಾನು ಒಂದು ಸಿನಿಮಾ ನೋಡಿಕೊಂಡು ಬಂದೆ ಕಾಂತಾರ. ಎಂಥಾ ಅನುಭವ. ನಾನು ಈಗಲೂ ನಡುಗುತ್ತಿದ್ದೇನೆ. ಎಂಥಾ ಎಕ್ಸ್​ಕ್ಲೂಸಿವ್ ಅನುಭವ. ರಿಷಬ್ ಶೆಟ್ಟಿ ಹ್ಯಾಟ್ಸಾಫ್. ಬರವಣಿಗೆ, ನಿರ್ದೇಶನ, ಆ್ಯಕ್ಟಿಂಗ್ ಆ್ಯಕ್ಷನ್ ಬ್ರಿಲಿಯೆಂಟ್. ನಂಬಲಸಾಧ್ಯವಾದದ್ದು. ಜಾನಪದ, ಕಲೆ, ಆತಂರಿಕ ವಿಚಾರಗಳು, ಸಂಸ್ಕೃತಿಯನ್ನು ಎಷ್ಟು ಚೆನ್ನಾಗಿ ಮಿಕ್ಸ್ ಮಾಡಿದ್ದೀರಿ.
ಫೋಟೋಗ್ರಫಿ, ಆ್ಯಕ್ಷನ್, ಥ್ರಿಲ್ಲರ್ ಇದುವೇ ಸಿನಿಮಾ. ಸಿನಿಮಾ ಎಂದರೆ ಇದುವೇ. ಥಿಯೇಟರ್ ಅನುಭವ ಎಂದರೆ ಇದು. ಇಂಥದ್ದನ್ನು ನಾವೆಂದೂ ನೋಡಿಲ್ಲ ಎಂದು ಬಹಳಷ್ಟು ಜನರು ಥಿಯೇಟರ್​​ನಲ್ಲಿ ಹೇಳುವುದನ್ನು ಕೇಳಿದೆ. ಈ ಸಿನಿಮಾಗಾಗಿ ಧನ್ಯವಾದಗಳು. ಬ್ರಿಲಿಯೆಂಟ್. ಈ ಅನುಭವದಿಂದ ನಾನು ಇನ್ನೂ ಒಂದು ವಾರ ಹೊರಗೆ ಬರಲಾದರೆ, ವಾವ್ ವಾವ್ ಎಂದಿದ್ದಾರೆ ಕಂಗನಾ ರಣಾವತ್.
ಇದನ್ನೂ ಓದಿ: Kantara-Kangana Ranaut: ಕಾಂತಾರ ಸಿನಿಮಾ ನೋಡೋಕೆ ಕುತೂಹಲ ತಡೆಯೋಕಾಗ್ತಿಲ್ಲ ಎಂದ ಕಂಗನಾ


ಕಾಂತಾರ ಸಿನಿಮಾ ಬಗ್ಗೆ ಈಗಾಗಲೇ ಸ್ಟೋರಿ ಹಾಕಿದ್ದ ಕಂಗನಾ ಸಿನಿಮಾ ಕುರಿತು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. ಅನಿಲ್ ಕುಂಬ್ಳೆ, ಪ್ರಶಾಂತ್ ನೀಲ್, ಪೃಥ್ವಿರಾಜ್ ಸುಕುಮಾರನ್, ಧನುಷ್, ರಾಣಾ ದಗ್ಗುಬಾಟಿ ಮುಂತಾದವರು ಚಿತ್ರವನ್ನು ಹೊಗಳಿದ ನಂತರ, ನಟಿ ಕಂಗನಾ ರಣಾವತ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಾಂತಾರ ಬಗ್ಗೆ ಅಸಾಧಾರಣವಾದ ವಿಷಯಗಳನ್ನು ಕೇಳುತ್ತಿದ್ದೇನೆ ಎಂದಿದ್ದಾರೆ ಕಂಗನಾ. ಕಾಂತಾರ ಬಗ್ಗೆ ಅಸಾಧಾರಣವಾದ ವಿಷಯಗಳನ್ನು ಕೇಳುತ್ತಿದ್ದು ಸಿನಿಮಾ ನೋಡಲು ಕುತೂಹಲ ಹೆಚ್ಚಾಗಿದೆ. ಇನ್ನೂ ಕಾಯಲು ಸಾಧ್ಯವಿಲ್ಲ ಎಂದಿದ್ದರು.


150 ಕೋಟಿ ದಾಟಿತು ಕಾಂತಾರ ಕಲೆಕ್ಷನ್


ಕಾಂತಾರ ಸಿನಿಮಾ ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದರೂ ಸಿಕ್ಕಾಪಟ್ಟೆ ವೈರಲ್ ಆಗಿ ಕಲೆಕ್ಷನ್ ಕೂಡಾ ಹೆಚ್ಚಾಗಿತ್ತು. ಆ ನಂತರ ಸಿನಿಮಾ ಬೇರೆ ಭಾಷೆಗಳಲ್ಲಿಯೂ ರಿಲೀಸ್ ಆಗಿದ್ದು ಅಲ್ಲಿನ ಮೂಲ ಭಾಷೆಯ ಸಿನಿಮಾಗಳಿಗೆ ಟಫ್ ಕಾಂಪಿಟೇಷನ್ ಕೊಟ್ಟು ರೇಸ್ ಮುಂದುವರಿಸಿದೆ.


ಮುಂಬೈ ಮರಾಠ ಮಂದಿರದಲ್ಲಿ ಕನ್ನಡ ಸಿನಿಮಾ


ಮುಂಬೈನ ಮರಾಠ ಮಂದಿರ್ ಚಿತ್ರಮಂದಿರದಲ್ಲಿ ಮೊದಲ ಬಾರಿಗೆ ಸೌತ್ ಸಿನಿಮಾ ಒಂದನ್ನು ಅದರ ಮೂಲಭಾಷೆಯಲ್ಲಿ ರಿಲೀಸ್ ಮಾಡಲಾಗಿದ್ದು ಈ ಹಿರಿಮೆ ಕಾಂತಾರ ಖಾತೆಗೆ ಸೇರುತ್ತದೆ. ವಿದೇಶಗಳಲ್ಲಿಯೂ ಸಿನಿಮಾಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Published by:Divya D
First published: