Kangana Ranaut: ಡ್ರಗ್ಸ್​ ಮಾಫಿಯಾ: ಜಯಾ ಬಚ್ಚನ್​ ವಿರುದ್ಧ ತಿರುಗಿಬಿದ್ದ ಕಂಗನಾ ರನೌತ್​..!

Jaya Bachchan: ಸಂಸದೆ ಜಯಾ ಬಚ್ಚನ್​ ಅವರು ಸಿನಿರಂಗದ ಪರವಾಗಿ ಸರ್ಕಾರ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ. ಸದಾ ಸಿನಿರಂಗ ಯಾವುದೇ ಸಮಸ್ಯೆಯಾದರೂ ಸಹಾಯ ಮಾಡಲು ಮುಂದಿರುತ್ತದೆ. ಇನ್ನು ಇಲ್ಲೇ ಹೆಸರು ಮಾಡಿದವರು ಸಿನಿರಂಗವನ್ನು ಮೋರಿಗೆ ಹೋಲಿಸಿದ್ದಾರೆ. ಇದನ್ನು ನಾನು ಒಪ್ಪುವುದಿಲ್ಲ. ಇಂತಹ ಭಾಷೆಯನ್ನು ಬಳಸಬಾರದು ಎಂದು ಸರ್ಕಾರ ಈ ಸೆಲೆಬ್ರಿಟಿಗಳಿಗೆ ಹೇಳಬೇಕು ಎಂದು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

Anitha E | news18-kannada
Updated:September 15, 2020, 2:14 PM IST
Kangana Ranaut: ಡ್ರಗ್ಸ್​ ಮಾಫಿಯಾ: ಜಯಾ ಬಚ್ಚನ್​ ವಿರುದ್ಧ ತಿರುಗಿಬಿದ್ದ ಕಂಗನಾ ರನೌತ್​..!
ಕಂಗನಾ ರನೌತ್​ ಹಾಗೂ ಜಯಾ ಬಚ್ಚನ್​
  • Share this:
ಬಾಲಿವುಡ್​ಗೂ, ಡ್ರಗ್​ ಮಾಫಿಯಾಗೂ ಇರುವ ನಂಟಿನ ವಿಷಯವಾಗಿ ಸೆಲೆಬ್ರಿಟಿಗಳು ಹಾಗೂ ರಾಜಕೀಯ ವ್ಯಕ್ತಿಗಳು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಅದಲ್ಲರೂ ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್​ ಮಾಫಿಯಾದ ವಿಷಯ ಬೆಳಕಿಗೆ ಬಂದಿದ್ದು, ಈ ಕುರಿತಾಗಿ ಎನ್​ಸಿಬಿ ತನಿಖೆ ನಡೆಸುತ್ತಿದೆ. ಈ ವಿಷಯವಾಗಿ ಈಗಾಗಲೇ ರಿಯಾ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ ಎನ್​ಸಿಬಿ ಅಧಿಕಾರಿಗಳು. ಈಗ ಡ್ರಗ್ಸ್ ಮಾಫಿಯಾ ಕುರಿತಾಗಿ ನಟಿ ಕಂಗನಾ ಸಾಕಷ್ಟು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಇನ್ನು ಭೋಜ್​ಪುರಿ ನಟ ಹಾಗೂ ಸಂಸದ ರವಿ ಕಿಷನ್ ಅವರೂ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಇಬ್ಬರು ಕೊಟ್ಟಿರುವ ಹೇಳಿಕೆಯನ್ನು ಖಂಡಿಸುತ್ತಾ ಜಯಾ ಬಚ್ಚನ್​ ಅವರು ಯಾರ ಹೆಸರೂ ಉಲ್ಲೇಖಿಸದೆ ರಾಜ್ಯಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಇನ್ನು ಜಯಾ ಅವರ ಮಾತುಗಳನ್ನು ಕೇಳಿದ ನಂತರ ನಟಿ ಕಂಗನಾ ರನೌತ್​ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. 

ಸಂಸದೆ ಜಯಾ ಬಚ್ಚನ್​ ಅವರು ಸಿನಿರಂಗದ ಪರವಾಗಿ ಸರ್ಕಾರ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ. ಸದಾ ಸಿನಿರಂಗ ಯಾವುದೇ ಸಮಸ್ಯೆಯಾದರೂ ಸಹಾಯ ಮಾಡಲು ಮುಂದಿರುತ್ತದೆ. ಇನ್ನು ಇಲ್ಲೇ ಹೆಸರು ಮಾಡಿದವರು ಸಿನಿರಂಗವನ್ನು ಮೋರಿಗೆ ಹೋಲಿಸಿದ್ದಾರೆ. ಇದನ್ನು ನಾನು ಒಪ್ಪುವುದಿಲ್ಲ. ಇಂತಹ ಭಾಷೆಯನ್ನು ಬಳಸಬಾರದು ಎಂದು ಸರ್ಕಾರ ಈ ಸೆಲೆಬ್ರಿಟಿಗಳಿಗೆ ಹೇಳಬೇಕು ಎಂದು ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಜಯಾ ಬಚ್ಚನ್​ ಅವರ ಈ ಹೇಳಿಕೆ ಹೊರ ಬೀಳುತ್ತಿದ್ದಂತೆಯೇ ಕಂಗನಾ ರನೌತ್​ ಖಾರವಾಗಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ನನ್ನ ಸ್ಥಾನದಲ್ಲಿ ನಿಮ್ಮ ಮಗ ಅಭಿಷೇಕ್​ ಅಥವಾ ಮಗಳು ಶ್ವೇತಾ ಇದಿದ್ದರೂ ಇದೇ ರೀತಿ ಮಾತನಾಡಿತ್ತಿದ್ದೀರಾ. ಟೀನೇಜ್​ನಲ್ಲಿದ್ದಾಗ ಡ್ರಗ್ಸ್ ಕೊಟ್ಟು, ಹಲ್ಲೆ ಮಾಡಿ ಲೈಂಗಿಕ ದೌರ್ಜನ ಮಾಡಿದ್ದರೆ ಹೀಗೆ ಹೇಳುತ್ತಿದ್ರಾ ಜಯಾ ಅವರೇ ಎಂದು ಪ್ರಶ್ನಿಸಿದ್ದಾರೆ.


ಕಂಗನಾ ರನೌತ್ ಅವರ ಕಚೇರಿಯ ಕೆಲವು ಭಾಗಗಳನ್ನು ಬಿಎಂಸಿ ತೆರವುಗೊಳಿಸಿದಾ ಹಾಗೂ ಡ್ರಗ್ಸ್​ ಮಾಫಿಯಾ ಕುರಿತಾಗಿ ಅಮಿತಾಭ್​ ಬಚ್ಚನ್​ ಯಾವ ಪ್ರತಿಕ್ರಿಯೆ ನೀಡಲಿಲ್ಲವೆಂದು ನೆಟ್ಟಿಗರು ಅವರನ್ನು ಸಾಕಷ್ಟು ಟ್ರೋಲ್​ ಮಾಡಿದ್ದಾರೆ. ಸಾಕಷ್ಟು ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಅಮಿತಾಭ್​ ಅವರು ಈ ಗ ಮೌನ ವಹಿಸಿರುವುದನ್ನು ಸಾಕಷ್ಟು ಮಂದಿ ಟೀಕಿಸುತ್ತಿದ್ದಾರೆ.
Published by: Anitha E
First published: September 15, 2020, 2:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading