ನೆಟ್​ಫ್ಲಿಕ್ಸ್​ನಲ್ಲಿ ಇಂದಿನಿಂದ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ ಕಂಗನಾರ Thalaivii

ಬಾಲಿವುಡ್​ ನಟಿ ಕಂಗನಾ ರನೌತ್ ನಟಿಸಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನ ಕುರಿತಾದ ತಲೈವಿ ಸಿನಿಮಾ ಇಂದಿನಿಂದ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಶುರು ಮಾಡಿದೆ.

ನಟಿ ಕಂಗನಾ ರನೌತ್​

ನಟಿ ಕಂಗನಾ ರನೌತ್​

  • Share this:
ಸದಾ ಒಂದಿಲ್ಲೊಂದು ವಿವಾದಗಳಿಂದಾಗಿಯೇ ಸುದ್ದಿಯಲ್ಲಿರುತ್ತಿದ್ದ ಕಂಗನಾ ಕಳೆದ ಕೆಲ ಸಮಯದಿಂದ ತಮ್ಮ ಸಿನಿಮಾ ವಿಷಯವಾಗಿ ಚರ್ಚೆಯಲ್ಲಿದ್ದಾರೆ. ಸಿನಿಮಾ ಪ್ರಚಾರಕ್ಕೆಂದು ಹೋದ ಕಡೆಯಲ್ಲ ಕಂಗನಾರನ್ನು ಸಾಕಷ್ಟು ವಿವಾದಕ್ಕೀಡಾಗುವ ಪ್ರಶ್ನೆಗಳನ್ನೇ ಕೇಳಲಾಯಿತು. ಆದರೂ ಕಂಗನಾ ಜಾಣ್ಮೆಯಿಂದ ಆ ಪ್ರಶ್ನೆಗಳಿಗೆ  ಉತ್ತರಿಸುವ ಮೂಲಕ  ಯಾವುದೇ ಕಾಂಟ್ರವರ್ಸಿಗೆ ಸಿಲುಕಲಿಲ್ಲ. ಶ್ರದ್ಧೆಯಿಂದ ತಮ್ಮ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಗಣೇಶ ಚತುರ್ಥಿ ಪ್ರಯುಕ್ತ ಸೆ.10ರಂದು ಕಂಗನಾ ಅಭಿನಯದ ‘ತಲೈವಿ’ ಸಿನಿಮಾ ಎಲ್ಲೆಡೆ ಬಿಡುಗಡೆಗೊಂಡಿತ್ತು. ಹಿಂದಿ, ತೆಲುಗು ಮತ್ತು ತಮಿಳು ವರ್ಷನ್​ಗಳಲ್ಲಿ ಈ ಸಿನಿಮಾ ತೆರೆಕಂಡು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಬಾಕ್ಸಾಫಿಸ್​ನಲ್ಲಿ ಗಳಿಕೆ ತಕ್ಕಮಟ್ಟಿಗೆ ಆದರೂ ಸಿನಿಪ್ರಿಯರುವ ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. 

ಬಾಲಿವುಡ್​ ನಟಿ ಕಂಗನಾ ರನೌತ್ ನಟಿಸಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನ ಕುರಿತಾದ ತಲೈವಿ ಸಿನಿಮಾ ಇಂದಿನಿಂದ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಶುರು ಮಾಡಿದೆ. ಈ ಕುರಿತು ಕೊ ಮಾಡಿರುವ ನಟಿ ಕಂಗನಾ ರನೌತ್, ಇಂದಿನಿಂದ ನೆಟ್​ಫ್ಲಿಕ್ಸ್​ನಲ್ಲಿ ತಲೈವಿ ಸ್ಟ್ರೀಮಿಂಗ್ ಶುರು ಎಂದು ಬರೆದುಕೊಂಡಿದ್ದಾರೆ.

ತಲೈವಿ ಸಿನೆಮಾವನ್ನು ನೆಟ್​ಫ್ಲಿಕ್ಸ್ ಮತ್ತು ಅಮೆಜಾನ್​​ ಎರಡು ಕೊಂಡುಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ಸಿನಿಮಾ ಒಂದೇ ಡಿಜಿಟಲ್​ ಫ್ಲಾರ್ಟ್​ಫಾರ್ಮ್​ನಲ್ಲಿ ಮಾರಾಟ ಮಾರಾಟವಾಗುತ್ತದೆ. ಆದರೆ ತಲೈವಿ ಮಾತ್ರ ಎರಡು ಒಟಿಟಿ ಫ್ಲಾರ್ಟ್​ಫಾರ್ಮ್​ನಲ್ಲಿ ಮಾರಾಟವಾಗಿದೆ. ಹಿಂದಿ ಅವತರಣಿಗೆ ನೆಟ್​​ಫ್ಲಿಕ್ಸ್​ಗೆ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಮೂಡಿಬಂದ ‘ತಲೈವಿ‘ ಅಮೆಜಾನ್ ಪ್ರೈಮ್​​ನಲ್ಲಿ ಮಾರಾಟವಾಗಿದೆ.

ಇದನ್ನೂ ಓದಿ: Koo Appನಲ್ಲಿ ನಂ 1 ಸ್ಥಾನಕ್ಕೇರಿದ Kangana Ranaut: 1 ಮಿಲಿಯನ್​ ಹಿಂಬಾಲಕರನ್ನು ಹೊಂದಿದ್ದಾರೆ ಬಾಲಿವುಡ್​ ಕ್ವೀನ್​

ಭಾರತದ ರಾಜಕಾರಣದಲ್ಲಿ ಜಯಲಲಿತಾ ಹೆಸರು ದೊಡ್ಡದು. ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅವರು ಜನಮನ ಗೆದ್ದಿದ್ದರು. ಅದಕ್ಕೂ ಮುನ್ನ ಸಿನಿಮಾ ನಟಿಯಾಗಿ ಕೂಡ ಪ್ರೇಕ್ಷಕರನ್ನು ಅವರು ರಂಜಿಸಿದ್ದರು. ಹೀಗೆ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಜಯಲಲಿತಾ ಅವರು ವೈಯಕ್ತಿಕ ಜೀವನದಲ್ಲಿ ಹಲವು ಏರು-ಪೇರುಗಳನ್ನು ಕಂಡಿದ್ದರು. ಸಿನಿಮಾ ಮತ್ತು ರಾಜಕೀಯದಲ್ಲಿ ಅವರ ಜರ್ನಿ ಅಷ್ಟು ಸುಲಭದ್ದಾಗಿರಲಿಲ್ಲ. ಅದನ್ನು ಈಗ ‘ತಲೈವಿ’ ಸಿನಿಮಾ ಮೂಲಕ ತೆರೆಮೇಲೆ ತೋರಿಸಲಾಗಿದೆ.

ಎಂ.ಜಿ. ರಾಮಚಂದ್ರನ್​ ಪಾತ್ರದಲ್ಲಿ ಅರವಿಂದ್​ ಸ್ವಾಮಿ ನಟಿಸಿದ್ದಾರೆ. ಎಂ. ಕರುಣಾನಿಧಿಯಾಗಿ ನಾಸರ್​ ಬಣ್ಣ ಹಚ್ಚಿದ್ದಾರೆ. ಭಾಗ್ಯಶ್ರೀ, ಸಮುದ್ರಖಣಿ ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಖ್ಯಾತ ನಿರ್ದೇಶಕ ಎ.ಎಲ್​. ವಿಜಯ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​ ಅವರು ಚಿತ್ರಕಥೆ ಬರೆದಿದ್ದಾರೆ.

ತಲೈವಿ 2 ಮಾಡುವ ಚಿಂತನೆಯಲ್ಲಿದೆ ಚಿತ್ರತಂಡ

ಜಯಲಲಿತಾ ಅವರ ಜೀವನವನ್ನು ಕೇವಲ ಒಂದು ಸಿನಿಮಾದಲ್ಲಿ ತೋರಿಸಲು ಸಾಧ್ಯವಿಲ್ಲ. ಅಲ್ಲದೆ, ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಂತರದ ಜರ್ನಿಯನ್ನು ಸಿನಿಮಾದಲ್ಲಿ ತೋರಿಸಬೇಕಿತ್ತು ಎಂಬ ಮಾತುಗಳು ಕೇಳಿ ಬಂದಿದ್ದು, ಇದೇ ಕಾರಣದಿಂದ ಈಗ ತಲೈವಿ 2 ಸಿನಿಮಾಗಾಗಿ ತಯಾರಿ ನಡೆಯುತ್ತಿದೆಯಂತೆ. ಈ ಸಿನಿಮಾದಲ್ಲಿ ದಿ. ಜಯಲಲಿತಾ ಅವರ ರಾಜಕೀಯ ಜರ್ನಿಯನ್ನು ತೋರಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲೂ ಕಂಗನಾ ಅವರನ್ನೇ ತಲೈವಿಯಾಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನು ಜಯಲಲಿತಾ ಅವರ ಪಾತ್ರದಲ್ಲಿ ಕಂಗನಾ ಅವರ ಅಭಿನಯದ ನಿಜಕ್ಕೂ ಮನಮುಟ್ಟುವಂತಿದೆ. ಈಗಾಗಲೇ ಸಿನಿಮಾ ನೋಡಿದ ಸಾಕಷ್ಟು ಮಂದಿ ಸೆಲೆಬ್ರಿಟಿಗಳೂ ಇದನ್ನೇ ಹೇಳಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ಕಾರ್ಯಕ್ರಮಕ್ಕಾಗಿ ಮಾಡಿಸಿಕೊಂಡ ಒಡವೆಗಳನ್ನು ಈಗ ತೊಟ್ಟ Kangana Ranaut: ಹೇಗಿದೆ ನೋಡಿ ಆ ನೆಕ್ಲೆಸ್

ಮುಂದಿನ ಸಿನಿಮಾದಲ್ಲಿ ಕಂಗನಾ ಅವರು ಮಾಜಿ ಪ್ರಧಾನಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಕಂಗನಾ ರನೋತ್​ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಿನಿಮಾ ಬಗ್ಗೆ ತಿಳಿದೇ ಇದೆ. ಈ ಸಿನಿಮಾ ಕುರಿತಂತೆ ಇತ್ತೀಚೆಗಷ್ಟೆ ಹೊಸ ಅಪ್ಡೇಟ್​ ಹೊರ ಬಿದ್ದಿತ್ತು. ಹೌದು, ಈ ಸಿನಿಮಾಗೆ ಟೈಟಲ್​ ಫಿಕ್ಸ್​ ಆಗಿದ್ದು, ಪಾತ್ರಕ್ಕೆ ಅಗತ್ಯವಿರುವ ಸಿದ್ಧತೆಗಳನ್ನೂ ಸಹ ಆರಂಭಿಸಿದ್ದಾರಂತೆ.
Published by:Anitha E
First published: