ಕಂಗನಾ ರನೌತ್ (Kangana Ranaut) ಅಭಿನಯದ ತಲೈವಿ (Thalaivii) ಸಿನಿಮಾ ಕಳೆದ ಶುಕ್ರವಾರ ಎಲ್ಲಡೆದ ತೆರೆ ಕಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಕಂಗನಾ ರನೌತ್ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಲೈವಿ ಸಿನಿಮಾ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಿದ್ದು, ತಮಿಳು ವರ್ಷನ್ ಮಾತ್ರ ಮಲ್ಟಿಪ್ಲೆಕ್ಸ್ಗಳಲ್ಲಿ ರಿಲೀಸ್ ಆಗಿದೆ. ಉಳಿದಂತೆ ಬೇರೆ ಭಾಷೆಯ ಚಿತ್ರಗಳು ಕೇವಲ ಸಿಂಗಲ್ ಸ್ಟ್ರೀನ್ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಜೊತೆಗೆ ತಲೈವಿ ಸಿನಿಮಾವನ್ನು ಒಟಿಟಿ ಮೂಲಕ ಸಹ ರಿಲೀಸ್ ಮಾಡಲು ಚಿತ್ರತಂಡ ಈಗಾಗಲೇ ನಿರ್ಧರಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಅಮೆಜಾನ್ ಹಾಗೂ ನೆಟ್ಫ್ಲಿಕ್ಸ್ಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಹೀಗಿದ್ದರೂ ಸಹ ತಲೈವಿ ಸಿನಿಮಾದ ವಾರಾಂತ್ಯದ ಕಲೆಕ್ಷನ್ (Box Office Collection) ಜೋರಾಗಿಯೇ ಇದೆ. ವಿಮರ್ಶಕರು ಹಾಗೂ ಸಿನಿಪ್ರಿಯರಿಂದ ಮೆಚ್ಚುಗೆಗೆ ಪಾತ್ರವಾಗಿರುವ ತಲೈವಿ ಸಿನಿಮಾ ಬಾಕ್ಸಾಫಿಸ್ನಲ್ಲಿ ಕೊಂಚ ಕಡಿಮೆ ಸದ್ದು ಮಾಡುತ್ತಿದೆ.
ಬಾಕ್ಸಾಫಿಸ್ ಇಂಡಿಯಾದ ಪ್ರಕಾರ ಕಳೆದ ವಾರಾಂತ್ಯದಲ್ಲಿ
ತಲೈವಿ ಸಿನಿಮಾ 4.75ಕೋಟಿ ಗಳಿಕೆ ಮಾಡಿದೆ. ಈ ಚಿತ್ರ ರಿಲೀಸ್ ಆದ ಮೊದಲ ದಿನ 1.25 ಕೋಟಿ ಗಳಿಸಿತ್ತು. ತಮಿಳುನಾಡಿನಲ್ಲಿ 80 ಲಕ್ಷ ಕಲೆಕ್ಷನ್ ಆಗಿತ್ತು. ಉತ್ತರ ಭಾರತದಲ್ಲಿ ಈ ಸಿನಿಮಾ 25 ಲಕ್ಷ ಗಳಿಕೆ ಮಾಡಿದೆ.
![kangana ranaut, movie thalaivi, j jayalalitha, kangana ranaut movie thalaivi, Hollywood Movies, Kangana on Hollywood movies, Kangana Ranaut entering Politics, ಕಂಗನಾ ರನೋತ್, ಕಂಗನಾ ರನೋತ್ ರಾಜಕೀಯ ಪ್ರವೇಶ, ಹಾಲಿವುಡ್ ಸಿನಿಮಾಗಳನ್ನು ದೂರವಿಡಿ ಎಂದ ಕಂಗನಾ, Thalaivi star Kangana Ranaut said we need to discourage hollywood movies ae]()
ತಲೈವಿ ಸಿನಿಮಾದಲ್ಲಿ ನಟಿ ಕಂಗನಾ ರನೌತ್
ತಲೈವಿ ಸಿನಿಮಾವನ್ನು ಎ. ಎಲ್. ವಿಜಯ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.
ಜೆ. ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ ಇದಾಗಿದೆ. ತಲೈವಿ ಸಿನಿಮಾದ ಹಿಂದಿ ವರ್ಷನ್ ಸಿನಿಮಾ ಮೂರು ದಿನಗಳಲ್ಲಿ ಒಂದು ಕೋಟಿ ಗಳಿಕೆ ಮಾಡಿದೆ. ಈ ಚಿತ್ರ ಶೂಕ್ರವಾರ 25 ಲಕ್ಷ, ಶನಿವಾರ 30 ಲಕ್ಷ ಹಾಗೂ ಭಾನುವಾರ 45 ಲಕ್ಷ ಗಳಿಕೆ ಮಾಡಿದೆ. ತಮಿಳು ನಾಡಿನಲ್ಲಿ ಈ ಸಿನಿಮಾ ಇಲ್ಲಿಯವರೆಗೆ 2.475 ಕೋಟಿ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ಸೀಮಂತಕ್ಕೂ ಮೊದಲು ಫೋಟೋಶೂಟ್ಗೆ ಪೋಸ್ ಕೊಟ್ಟ Nikhil Kumaraswamy-Revathi
ತಲೈವಿ ಸಿನಿಮಾ ಒಟಿಟಿಯಲ್ಲಿ ಇನ್ನೇನು ತೆರೆ ಕಾಣಬೇಕಿದೆ. ನೆಟ್ಫ್ಲೆಕ್ಸ್, ಅಮೆಜಾನ್ ಪ್ರೈಮ್ನಲ್ಲಿ ತಲೈವಿ ಚಿತ್ರವನ್ನು ರಿಲೀಸ್ ಮಾಡಲಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ತಲೈವಿ ಹಿಂದಿ ವರ್ಷನ್, ಅಮೆಜಾನ್ ಪ್ರೈಂನಲ್ಲಿ ತೆಲುಗು, ತಮಿಳು ಹಾಗೂ ಮಲಯಾಳಂ ವರ್ಷನ್ ಚಿತ್ರಗಳು ತೆರೆಕಾಣಲಿವೆ. ಈ ಹಿಂದೆ ದೊಡ್ಡ ಮಟ್ಟದಲ್ಲಿ ಆಫರ್ ಸಿಕ್ಕರೂ ನಿರ್ಮಾಪಕರು ಒಟಿಟಿಯಲ್ಲಿ ರಿಲೀಸ್ ಮಾಡಲು ಹಿಂಜರಿಯುತ್ತಿದ್ದರು. ಆದರೆ, ಈಗ ತಲೈವಿ ಸಿನಿಮಾದ ನಿರ್ಮಾಪಕರು ಮಾತ್ರ ಒಟಿಟಿ ಹಾಗೂ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಿದ್ದಾರೆ. ಈ ಸಿನಿಮಾದ ಒಟಿಟಿ ರಿಲೀಸ್ಗೆ 55 ಕೋಟಿ ಹಣ ಸಿಕ್ಕಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಅಪರಿಚಿತುಡು ಸಿನಿಮಾ ಖ್ಯಾತಿಯ ನಟಿ Sadha ಈಗ ಹೇಗಿದ್ದಾರೆ ಗೊತ್ತಾ..?
ನಟಿ ಮತ್ತು ರಾಜಕಾರಣಿ ಆಗಿದ್ದ ಜೆ ಜಯಲಲಿತಾ ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದರು. ಕಂಗನಾ ಅಭಿನಯದ ತಲೈವಿ ಸಿನಿಮಾ ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಏಪ್ರಿಲ್ 30ರಂದೇ ಬಿಡುಗಡೆ ಆಗಬೇಕಿತ್ತಾದರೂ, ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಬಳಿಕ ನಿರ್ಮಾಪಕರು ಸೆಪ್ಟೆಂಬರ್ನಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದರು.
ಕಂಗನಾ ರಾಜಕೀಯ ಪ್ರವೇಶ
ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಕಂಗನಾ ರನೋತ್ ತಮ್ಮ ರಾಜಕೀಯ ಪ್ರವೇಶ ಕುರಿತಂತೆ ಮಾತನಾಡಿದ್ದರು. 'ನಾನು ರಾಷ್ಟ್ರೀಯವಾದಿ ಹಾಗೂ ನಾನು ನನ್ನ ದೇಶಕ್ಕಾಗಿ ಮಾತನಾಡುತ್ತೇನೆ. ಅದಕ್ಕೆ ನಾನು ರಾಜಕಾರಣಿಯಾಗಬೇಕಿಲ್ಲ. ಅದಕ್ಕೆ ಜವಾಬ್ದಾರಿ ಇರುವ ನಾಗರಿಕರಾಗಿದ್ದರೆ ಸಾಕು. ರಾಜಕೀಯಕ್ಕೆ ಬರಲು ನನಗೆ ಸಾರ್ವಜನಿಕರ ಬೆಂಬಲ ಬೇಕು. ಆದರೆ, ಸದ್ಯಕ್ಕೆ ನಾನು ನಟಿಯಾಗಿ ಖುಷಿಯಾಗಿದ್ದೇನೆ. ಭವಿಷ್ಯದಲ್ಲಿ ಜನರು ನನಗೆ ಇಷ್ಟಪಟ್ಟು ಬೆಂಬಲ ನೀಡಿದರೆ, ಖಂಡಿತ ನಾನು ಖುಷಿಯಿಂದ ರಾಜಕೀಯಕ್ಕೆ ಬರುತ್ತೇನೆ' ಎಂದು ಸ್ಪಷ್ಟಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ