ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ ತಲೈವಿ. ಈ ಚಿತ್ರದಲ್ಲಿ ಜಯಲಲಿತಾ ಅವರ ಪಾತ್ರದಲ್ಲಿ ಬಾಲಿವುಡ್ ರೆಬೆಲ್ ಕ್ವೀನ್ ಕಂಗನಾ ರನೋತ್ ಅವರು ನಟಿಸಿದ್ದಾರೆ. ಈ ಸಿನಿಮಾದ ಪೋಸ್ಟರ್ ರಿಲೀಸ್ ಆದಗಲೇ ಸಖತ್ ಸದ್ದು ಮಾಡಿತ್ತು. ಸಿನಿಮಾದ ವಿಡಿಯೋ ಹಾಗೂ ಹಾಡು ರಿಲೀಸ್ ಆಗಿದ್ದು ಈಗಾಗಲೇ ಸಿನಿಮಾ ಕುರಿತಾಗಿ ಪ್ರೇಕ್ಷಕರಲ್ಲಿ ಇದ್ದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ. ಈ ಸಿನಿಮಾದಲ್ಲಿ ಜಯಲಲಿತಾ ಅವರ ರಾಜಕೀಯ ಹಾಗೂ ಸಿನಿ ಜೀವನದ ಕುರಿತಾದ ವಿಷಯಗಳಿರಲಿವೆ. ಇನ್ನು ಕಂಗನಾ ರನೋತ್ ಜತೆ ಈ ಸಿನಿಮಾದಲ್ಲಿ ಖ್ಯಾತ ನಟ ಅರವಿಂದ್ ಸ್ವಾಮಿ ಅಭಿನಯಿಸಿದ್ದಾರೆ.
ಜಯಲಲಿತಾ ಅವರ ಹುಟ್ಟುಹಬ್ಬದಂದು ಈ ಸಿನಿಮಾದ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿತ್ತು. ಇನ್ನು ಕಂಗನಾ ರನೋತ್ ಅವರು ಜಯಲಲಿತಾ ಅವರ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಕಾಣುತ್ತಿದೆ. ರಿಲೀಸ್ ಆಗಿರುವ ಪೋಸ್ಟರ್, ವಿಡಿಯೋ ಹಾಗೂ ಹಾಡುಗಳನ್ನು ನೋಡಿದರೆ ಬೆಳ್ಳಿ ತೆರೆಯಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಕಾತರರಾಗಿರುವ ವಿಷಯ ತಿಳಿಯುತ್ತದೆ.
ಎ.ಎಲ್ ವಿಜಯ್ ಅವರು ನಿರ್ದೇಶನ ಮಾಡಿರುವ ಈ ಸಿನಿಮಾಗೆ ರಾಜಮೌಳಿ ಅವರ ತಂದೆ ವಿ. ವಿಜಯೇಂದ್ರ ಪ್ರಸಾದ್ ಅವರು ಕಥೆ ಬರೆದಿದ್ದಾರೆ. ಇನ್ನು ಜಯಲಲಿತಾ ಅವರ ಜೀವದಲ್ಲಿ ಯಾರಿಗೂ ತಿಳಿಯದ ಸಾಕಷ್ಟು ವಿಷಯಗಳನ್ನು ಚಿತ್ರೀಕರಿಸಲಾಗಿದೆಯಂತೆ. ಈ ಚಿತ್ರವನ್ನು ಬಾಲಕೃಷ್ಣ ಅವರ ಜತೆ ಎನ್ಟಿಆರ್ ಅವರ ಬಯೋಪಿಕ್ ನಿರ್ಮಿಸಿದ್ದ ವಿಷ್ಣು ಇಂದೂರಿ ಅವರೇ ನಿರ್ಮಾಣ ಮಾಡಿದ್ದಾರೆ.
'THALAIVII' CENSORED... 10 SEPT RELEASE... #Thalaivii [#Hindi] passed with 'U' certificate by #CBFC on 1 Sept 2021. Duration: 153 min, 22 sec [2 hours, 33 minutes, 22 seconds]. #India
ಸೆಪ್ಟೆಂಬರ್ 10ರಂದು ಜಯಲಲಿತ ಅವರ ಬಯೋಪಿಕ್ ತಲೈವಿ ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ ಶೂಟಿಂಗ್ ಮುಗಿದು ವರ್ಷ ಕಳೆಯುತ್ತಿದೆ. ಆದರೆ, ಕೊರೋನಾ ಕಾರಣದಿಂದಾಗಿ ಈ ಸಿನಿಮಾ ರಿಲೀಸ್ ಆಗಲಿಲ್ಲ. ಈ ಸಿನಿಮಾ ರಿಲೀಸ್ಗೆ ಯಾವುದೇ ತಡೆ ಇಲ್ಲ. ತಲೈವಿ ಹಿಂದಿ ವರ್ಷನ್ ಈಗಾಗಲೇ ಸೆನ್ಸಾರ್ನಲ್ಲಿ ಪಾಸಾಗಿದೆ. ಹೌದು, ಸೆನ್ಸಾರ್ನಲ್ಲಿ ಈ ಸಿನಿಮಾಗೆ ಯು ಪ್ರಮಾಣ ಪತ್ರ ಸಿಕ್ಕಿದೆ. ಈ ವಿಷಯವನ್ನು ಸಿನಿಮಾ ವಿಶ್ಲೇಷಕ ತರನ್ ಆದರ್ಶ್ ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Sidharth Shukla Passes Away: ಬಿಗ್ ಬಾಸ್ ಸೀಸನ್ 13ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ ನಿಧನ
ಈ ಸಿನಿಮಾಗೆ ಯು ಪ್ರಮಾಣಪತ್ರ ಸಿಕ್ಕಿದ್ದು, ಸಿನಿಮಾ 153 ನಿಮಿಷ 22 ಸೆಕೆಂಡ್ ಇದೆಯಂತೆ. ಅಂದರೆ 2 ಗಂಟೆ 33 ನಿಮಿಷ ಹಾಗೂ 22 ಸೆಕೆಂಡ್ ಇದೆ. ಈ ಸಿನಿಮಾ ಮೇಲೆ ಕಂಗನಾ ಅವರಿಗೂ ತುಂಬಾ ನಿರೀಕ್ಷೆ ಇದೆ.
ನಟಿ ಕಂಗನಾ ರನೋತ್ ಸದ್ಯ ತಮ್ಮ ಬಹು ನಿರೀಕ್ಷಿತ ಸಿನಿಮಾ ಧಾಡಕ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅರ್ಜುನ್ ರಾಮ್ಪಾಲ್ ಸಹ ನಟಿಸಿದ್ದಾರೆ. ಇತ್ತೀಚೆಗೆ ವಿದೇಶದಲ್ಲಿ ಧಾಕಡ್ ಸಿನಿಮಾದ ಪೂರ್ಣಗೊಂಡಿತ್ತು. ಚಿತ್ರೀಕರಣ ಪೂರ್ಣಗೊಂಡ ಹಿನ್ನಲೆಯಲ್ಲೇ ಚಿತ್ರತಂಡ ಸಖತ್ ಪಾರ್ಟಿ ಆಯೋಜಿಸಿತ್ತು. ಈ ಪಾರ್ಟಿಯಲ್ಲಿ ಕಂಗನಾ ಬಿಳಿ ಬಣ್ಣದ ಸಖತ್ ಹಾಟ್ ಡ್ರೆಸ್ ತೊಟ್ಟು ಕಾಣಿಸಿಕೊಂಡಿದ್ದರು. ಪಾರ್ಟಿಗಳಿಂತ ಹೆಚ್ಚಾಗಿ ಕಂಗನಾ ಅವರ ಹಾಟ್ ಫೋಟೋಗಳು ವೈರಲ್ ಆಗಿದ್ದವು. ಲೇಸ್ ಬ್ರಾಲೆಟ್ ಡ್ರೆಸ್ನಲ್ಲಿ ಮಿಂಚಿದ್ದ ಕಂಗನಾ, ಇದರಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಆಗಲೂ ಎಂದಿನಂತೆ ಕೆಲವರು ಕಂಗನಾರನ್ನು ಟ್ರೋಲ್ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ