Dhaakad Movie: ಧಾಕಡ್​ನಲ್ಲಿ ಕಂಗನಾರ ಕಿಲ್ಲರ್ ಲುಕ್ಸ್​ಗೆ ಅಭಿಮಾನಿಗಳು ಫಿದಾ..!​

Dhaakad FirstLook Teaser: ಜಡ್ಜ್​ಮೆಂಟಲ್​ ಹೈ ಕ್ಯಾ ಸಿನಿಮಾದ ಬಾಬಿಯ ಗುಂಗಿನಿಂದ ಹೊರ ಬಾರದ ಅಭಿಮಾನಿಗಳಿಗೆ ಕಂಗನಾ ಈಗ ಮತ್ತೊಂದು ಸಖತ್​ ಉಡುಗೊರೆ ಕೊಟ್ಟಿದ್ದಾರೆ. ಅದೇ ಅವರ ಬಹುನಿರೀಕ್ಷಿತ ಸಿನಿಮಾ ಧಾಕಡ್​ನ ಫಸ್ಟ್​ ಲುಕ್​ ಟೀಸರ್​.

Anitha E | news18
Updated:August 10, 2019, 5:22 PM IST
Dhaakad Movie: ಧಾಕಡ್​ನಲ್ಲಿ ಕಂಗನಾರ ಕಿಲ್ಲರ್ ಲುಕ್ಸ್​ಗೆ ಅಭಿಮಾನಿಗಳು ಫಿದಾ..!​
ಧಾಕಡ್​ ಸಿನಿಮಾದಲ್ಲಿ ಕಂಗನಾ ಲುಕ್​
  • News18
  • Last Updated: August 10, 2019, 5:22 PM IST
  • Share this:
ಬಾಲಿವುಡ್​ ಕ್ವೀನ್​ ಕಂಗನಾ ತಮ್ಮ ಅಭಿನಯ ಹಾಗೂ ವಿಭಿನ್ನ ಪಾತ್ರಗಳಿಂದಲೇ ಹೆಸರು ಮಾಡಿರುವ ನಟಿ. ಇತ್ತೀಚೆಗಷ್ಟೆ ಕಂಗನಾ ಅಭಿನಯದ 'ಜಡ್ಜ್​ಮೆಂಟಲ್​ ಹೈ ಕ್ಯಾ' ಸಿನಿಮಾ ಬಾಕ್ಸಾಫಿಸ್​ನಲ್ಲಿ ಸದ್ದು ಮಾಡಿತ್ತು. ಈ ಚಿತ್ರದಲ್ಲಿ ಅವರ ಅಭಿನಯ ಪ್ರೇಕ್ಷಕರ ಮನ ಸೆಳೆದಿದೆ.

ಇನ್ನೂ ಬಾಬಿಯ ಗುಂಗಿನಿಂದ ಹೊರ ಬಾರದ ಅಭಿಮಾನಿಗಳಿಗೆ ಕಂಗನಾ ಈಗ ಮತ್ತೊಂದು ಸಖತ್​ ಉಡುಗೊರೆ ಕೊಟ್ಟಿದ್ದಾರೆ. ಅದೇ ಅವರ ಬಹುನಿರೀಕ್ಷಿತ ಸಿನಿಮಾ 'ಧಾಕಡ್​'ನ ಫಸ್ಟ್​ ಲುಕ್​ ಟೀಸರ್​.ಇಂದು ಈ ಸಿನಿಮಾದ ಫಸ್ಟ್​ಲುಕ್​ ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಅದರಲ್ಲೂ ಕಂಗನಾ ಕೈಯಲ್ಲಿ ಮಷಿನ್​ ಗನ್ ಹಿಡಿದು ಬರುತ್ತಿರುವ 45 ಸೆಕೆಂಡ್​ನ ಈ ಟೀಸರ್​ ಸಂಪೂರ್ಣವಾಗಿ ರಕ್ತಸಿಕ್ತವಾಗಿದೆ.

kangana ranaut starrer dhaakad teaser released today
ಕ್ವೀನ್ ಕಂಗನಾ


ಇದು ಬಿಡುಗಡೆಯಾಗಿ ಇನ್ನೂ 24 ಗಂಟೆಗಳೂ ಕಳೆದಿಲ್ಲ ಈಗಲೇ 38 ಲಕ್ಷ ವೀಕ್ಷಣೆ ಸಿಕ್ಕಿದೆ. ಅಲ್ಲದೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತಿದೆ. ಈ ಚಿತ್ರದ ಚಿತ್ರೀಕರಣವನ್ನು ಭಾರತವಲ್ಲದೆ ಥೈಲ್ಯಾಂಡ್ ಹಾಗೂ ಹಾಂಗ್​ ಕಾಂಗ್​ನಲ್ಲೂ ಚಿತ್ರೀಕರಿಸಲಾಗುತ್ತದೆ ಎನ್ನಲಾಗಿದೆ. ರಜನೀಶ್​ ರಾಜಿ ನಿರ್ದೇಶನದ ಈ ಸಿನಿಮಾ 2020ರ ದೀಪಾವಳಿಗೆ ತೆರೆ ಕಾಣಲಿದೆ.

ಇದನ್ನೂ ಓದಿ: Rakhi Sawanth: ರಾಖಿ ಸಾವಂತ್​ರ ಗಂಡ ಮಾಧ್ಯಮಗಳ ಮುಂದೆ ಬರದೇ ಇರುವುದಕ್ಕೆ ಕಾರಣ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ..! 

Shah Rukh Khan: ಕಿಂಗ್​ ಖಾನ್​ ಶಾರುಕ್​ಗೆ ಡಾಕ್ಟರೇಟ್​ ನೀಡಿ ಗೌರವಿಸಿದ ಮೆಲ್ಬೋರ್ನ್​ನ ವಿಶ್ವವಿದ್ಯಾಲಯ..!
First published:August 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ