ಕಂಗನಾ ರಣಾವತ್ (Kangana Ranaut) ಅವರು ದೇವಸ್ಥಾನಗಳಿಗೆ (Temple) ಭೇಟಿ (Visit) ಕೊಡುತ್ತಲೇ ಇರುತ್ತಾರೆ. ದೇವಸ್ಥಾನಕ್ಕೆ ಶಾರ್ಟ್ಸ್ (Shorts) ಬಟ್ಟೆ ಧರಿಸಿ ಬಂದ ಯುವತಿಯನ್ನು ನೋಡಿ ಕಂಗನಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಯುವತಿಯ ಡ್ರೆಸ್ಸಿಂಗ್ ಸ್ಟೈಲ್ಗೆ (Dressing Style) ಗರಂ ಆಗಿದ್ದಾರೆ. ಬೈಜ್ನಾಥ್ ದೇವಾಲಯದ ಆವರಣದಲ್ಲಿ ಇಬ್ಬರು ಯುವತಿಯರು ಶಾರ್ಟ್ ಬಟ್ಟೆ ಧರಿಸಿ ನಿಂತಿದ್ದರು. ಒಬ್ಬ ಯುವತಿ ಕ್ರಾಪ್ ಟಾಪ್ ಹಾಗೂ ಶಾರ್ಟ್ಸ್ ಧರಿಸಿದ್ದರೆ ಇನ್ನೊಬ್ಬರು ಯುವತಿ ಡೆನಿಮ್ಸ್ ಧರಿಸಿ ಶಾಲ್ ಧರಿಸಿದ್ದು ಫೋಟೋದಲ್ಲಿ (Photos) ಕಂಡುಬಂದಿದೆ. ಇದು ಬೈಜ್ನಾಥ್ ದೇವಾಲಯದಲ್ಲಿ ಕಂಡುಬಂದ ದೃಶ್ಯ. ಇದು ಹಿಮಾಚಲಪ್ರದೇಶದ (Himachala Pradesh) ಪ್ರಸಿದ್ಧ ಶಿವ ದೇವಾಲಯ. ಅವರು ಪಬ್ (Pub) ಅಥವಾ ನೈಟ್ ಕ್ಲಬ್ಗೆ ಹೋದಂತೆ ದೇವಸ್ಥಾನಕ್ಕೆ ಬಂದಿದ್ದಾರೆ ಎಂದಿದ್ದಾರೆ ನಟಿ.
ಅಂಥವರನ್ನು ದೇವಸ್ಥಾನ ಪ್ರವೇಶಿಸಲು ಬಿಡಬಾರದು. ನಾನು ಇದನ್ನು ಬಲವಾಗಿ ವಿರೋಧಿಸುತ್ತೇನೆ. ನನ್ನ ಹೇಳಿಕೆ ನೋಡಿ ಇದು ಸಣ್ಣತನ ಎಂದು ಹೇಳುವವರಿದ್ದರೆ ಅದನ್ನೂ ನಾನು ಕೇಳುತ್ತೇನೆ ಎಂದಿದ್ದಾರೆ ನಟಿ.
These are western clothes, invented and promoted by white people, I was once at the Vatican wearing shorts and t shirt, I wasn’t even allowed in the premises, I had to go back to my hotel and change…. These clowns who wear night dresses like they are casuals are nothing but lazy… https://t.co/EtPssi3ZZj
— Kangana Ranaut (@KanganaTeam) May 26, 2023
ये दृश्य है हिमाचल के प्रसिद्ध शिव मंदिर बैजनाथ का।बैजनाथ मंदिर में ऐसे पहुंचे हैं जैसे किसी पब या नाइटक्लब में गये हों ऐसे लोगों मंदिर में घुसने की अनुमति नहीं दी जानी चाहिए।मैं इसका कड़ा विरोध करता हूं
मेरी सोच को अगर ये सब देख कर छोटा या घटिया कहा जाता है तो भी मंजूर है ! pic.twitter.com/cdxrmobZqf
— Nikhi Uniyal (@NikhileshUniyal) May 25, 2023
ಅವರಿಗೆ ಬೇರೆ ಉದ್ದೇಶ ಇದ್ದಂತೆ ನನಗನಿಸುವುದಿಲ್ಲ. ಆದರೆ ಇಂಥ ಘಟನೆ ತಡೆಯಲು ಕಠಿಣ ಕ್ರಮಗಳನ್ನು ತರಬೇಕು ಎಂದು ಹೇಳಿದ್ದಾರೆ. ಇತ್ತೀಚೆಗೆ ಕಂಗನಾ ರಣಾವತ್ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು.
ಇದನ್ನೂ ಓದಿ: Pavitra Lokesh: ನರೇಶ್ ಐ ಲವ್ ಯೂ ಎಂದಾಗ ಪವಿತ್ರಾ ಏನಂದ್ರು ಗೊತ್ತಾ?
ಕಂಗನಾ ಅವರು ಮನಾಲಿಯವರು. ಅವರು ಆಗಾಗ ಹಿಮಾಚಲ ಪ್ರದೇಶದ ಬಗ್ಗೆ ಮಾತನಾಡುತ್ತಾರೆ. ಅಲ್ಲಿನ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ನಟಿ ಇತ್ತೀಚೆಗೆ ಅವರ ಹರಿದ್ವಾರ ಟ್ರಿಪ್ನ ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಗಂಗಾ ನದಿಯ ತೀರದಲ್ಲಿ ಕುಳಿತಿದ್ದ ವಿಡಿಯೋ ಶೇರ್ ಮಾಡಿದ್ದರು.
View this post on Instagram
ಕ್ವೀನ್ ನಟಿ ಕಂಗನಾ ರಣಾವತ್ ಹರ್ ಹರ್ ಮಹಾದೇವ್ ಎಂದು ಹೇಳುತ್ತಿದ್ದರು. ನಂತರ ನಟಿಯ ಭೇಟಿಯ ಕೆಲವು ಫೋಟೋಗಳು ಕೂಡಾ ಕಾಣಿಸಿವೆ. ನಟಿ ಕ್ಯಾಪ್ಶನ್ನಲ್ಲಿ ದರ್ಶನ ಮಾಡಿರುವುದರ ಕುರಿತು ಖುಷಿ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಕೈಲಾಶಾನಂದ ಹಾಗೂ ವಿಜಯೇಂದ್ರ ಪ್ರಸಾದ್ ಅವರೂ ಇದ್ದರು.ನಟಿಯ ಭಕ್ತಿಯನ್ನು ಮೆಚ್ಚಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಹರ್ ಹರ್ ಮಹಾದೇವ್ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಕಂಗನಾ ಅವರ ಸರಳೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ