Alia Bhatt: `ಗಂಗೂಬಾಯಿ’ ವಿರುದ್ಧ ಮತ್ತೆ ಗರಂ ಆದ ಕಂಗನಾ! ಏನಿದು ಹಾಲು-ನೀರು ಮ್ಯಾಟರ್​? ನೀವೇ ನೋಡಿ..

ಈ ಸಿನಿಮಾ ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ಬಾಚಿಕೊಂಡಿದೆ. ಆದರೆ, ಈ  ಸಿನಿಮಾದ ಕಲೆಕ್ಷನ್​ನಲ್ಲಿ ಗೋಲ್​ಮಾಲ್​ ನಡೆದಿದೆ ಎಂದು ಹೇಳಲಾಗತ್ತಿದೆ. ಆಗಿರುವ ಕಲೆಕ್ಷನ್​ಗಿಂತ ಹೆಚ್ಚಾಗಿ ಚಿತ್ರತಂಡ ತೋರಿಸುತ್ತಿದೆ ಎಂದು ಸಿನಿ ಪಂಡಿತರು ಹೇಳುತ್ತಿದ್ದಾರೆ.

ಆಲಿಯಾ ಭಟ್​, ಕಂಗನಾ

ಆಲಿಯಾ ಭಟ್​, ಕಂಗನಾ

  • Share this:
ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ನಿರ್ದೇಶನದ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ಕಳೆದ ವಾರ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಚಿತ್ರ ಅದ್ಬುತ ಯಶಸ್ಸಿನ ಜೊತೆಗೆ ಹೊಸ ಆಯಾಮಗಳನ್ನು ಸೃಷ್ಟಿಸಿದೆ. ಚಿತ್ರವು ಅಭಿಮಾನಿಗಳು ಮತ್ತು ವಿಮರ್ಶಕರಿಂದ  ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಆಲಿಯಾ ನಟ(Alia Performance)ನೆ ಬಗ್ಗೆ ಮಾತನಾಡುತ್ತಿದ್ದಾರೆ. ‘ಗಂಗೂಬಾಯಿ’ ಪಾತ್ರದಲ್ಲಿ ಆಲಿಯಾ ಭಟ್​ ಜೀವಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ(Sanjay Leela Bansali)ಯ ಹೊಸ ಸಿನಿಮಾ 'ಗಂಗೂಬಾಯಿ ಕಾಥಿಯಾವಾಡಿ' ಸತ್ಯ ಕತೆಗೆ ಕಾಲ್ಪನಿಕತೆ ಬೆರೆಸಿ ಸಂಜಯ್‌ರ ಅದ್ಧೂರಿ ಮೇಕಿಂಗ್​(Grand Making)ನಲ್ಲಿ ಮಾಡಿರುವ ಸಿನಿಮಾ.ಈ ಸಿನಿಮಾ ರಿಲೀಸ್​ಗೂ ಮುನ್ನ ವಿವಾದಗಳಿಂದ ಸಖತ್​ ಸುದ್ದಿಯಾಗಿತ್ತು. 

‘ಗಂಗೂಬಾಯಿ’ ಕಲೆಕ್ಷನ್​ ವಿಚಾರದಲ್ಲಿ ನಡೆದಿದ್ಯಾ ಸ್ಕ್ಯಾಮ್?

ಚಿತ್ರ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್(Box Office)ನಲ್ಲಿ ಭಾರಿ ಸದ್ದು ಮಾಡುತ್ತಿದೆ. ವಾರಾಂತ್ಯದಲ್ಲಿ ಕಲೆಕ್ಷನ್‌ (Collection) ಭಾರಿ ಏರಿಕೆಯಾಗಿದೆ. ವಿಶ್ವಾದ್ಯಂತ ಮೆಚ್ಚುಗೆ ಗಳಿಸಿರುವ ಈ ಸಿನಿಮಾ ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ಬಾಚಿಕೊಂಡಿದೆ. ಆದರೆ, ಈ  ಸಿನಿಮಾದ ಕಲೆಕ್ಷನ್​ನಲ್ಲಿ ಗೋಲ್​ಮಾಲ್​ ನಡೆದಿದೆ ಎಂದು ಹೇಳಲಾಗತ್ತಿದೆ. ಆಗಿರುವ ಕಲೆಕ್ಷನ್​ಗಿಂತ ಹೆಚ್ಚಾಗಿ ಚಿತ್ರತಂಡ ತೋರಿಸುತ್ತಿದೆ ಎಂದು ಸಿನಿ ಪಂಡಿತರು ಹೇಳುತ್ತಿದ್ದಾರೆ. ಜೊತೆಗೆ ಇದೀಗ ಈ ಸಿನಿಮಾ ರಿಲೀಸ್​​ಗೂ ಮುನ್ನ ಆಲಿಯಾ, ಬಾಲಿವುಡ್​ ವಿರುದ್ಧ ಕಂಗನಾ ಗರಂ ಆಗಿದ್ದರು. ಇದೀಗ ಮತ್ತೆ ಕಿಡಿಕಾರಿದ್ದಾರೆ.

ನೀರಿಗೆ ಹಾಲನ್ನು ಹಾಕಲಾಗುತ್ತಿದೆ ಎಂದ ಕಂಗನಾ!

ಮಾರ್ಚ್​ 7ರಂದು ಒಂದೇ ಸಿನಿ 10 ಕೋಟಿ ಕಲೆಕ್ಷನ್ ಮಾಡಿ ಸಿನಿಮಾ ಭೇಷ್​ ಎನಿಸಿಕೊಂಡಿದೆ. ಆದರೆ, ಈ ಸಿನಿಮಾ ಕಲೆಕ್ಷನ್ ಬಗ್ಗೆ ಕೆಲ ಅನುಮಾನ ಹುಟ್ಟಿಕೊಂಡಿದೆ. ಈ ಬಗ್ಗೆ ಪತ್ರಿಕೆಯೊಂದರಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಇದರ ಸ್ಕ್ರೀನ್​ ಶಾಟ್​ ಶೇರ್​ ಮಾಡಿರುವ ಕಂಗನಾ ‘ಹಾಲಿಗೆ ನೀರು ಹಾಕುವುದನ್ನು ಕೇಳಿದ್ದೇವೆ. ಆದರೆ, ನೀರಿಗೆ ಹಾಲನ್ನು ಹಾಕಲಾಗುತ್ತಿದೆ’ ಎಂದು ಟೀಕಿಸಿದ್ದಾರೆ. ಈ ಮೂಲಕ ಆಲಿಯಾ ಭಟ್ ವಿರುದ್ಧ ಅವರು ಟೀಕೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಮೊನ್ನೆ ಹಂಗ್​ ಅಂದ್ರು, ಈಗ ನೋಡಿದ್ರೆ ಇನ್ನೊಂಥರ.. `ಕಿರಿಕ್​ ಕ್ವೀನ್​’ನ ಅರ್ಥ ಮಾಡಿಕೊಳ್ಳೋದು ಕಷ್ಟ!

ಮೊನ್ನೆಯಷ್ಟೇ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಕಂಗನಾ!

ಇತ್ತೀಚೆಗೆ ನಟಿ ಕಂಗನಾ ಆಲಿಯಾ ಭಟ್ ಮತ್ತು ದೀಪಿಕಾ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಆಲಿಯಾ ಅಭಿನಯದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ ಬಗ್ಗೆ ಕಂಗನಾ ಅಸಮಾಧಾನ ಹೊರ ಹಾಕಿದ್ದರು. ಆದರೆ ಈಗ ಇದೇ ಚಿತ್ರದ ಬಗ್ಗೆ ಆಲಿಯಾ ಅಚ್ಚರಿಯ ಹೇಳಿಕೆ ಒಂದನ್ನು ನೀಡಿದ್ದರು. ಸಿನಿಮಾಗೆ ವ್ಯಕ್ತವಾಗುತ್ತಿರುವ ಉತ್ತಮ ರೆಸ್ಪಾನ್ಸ್ ಬಗ್ಗೆ ಕಂಗನಾ ಮಾತನಾಡಿ, ಹೆಮ್ಮೆ ಇದೆ ಎಂದಿದ್ದಾರೆ. ಕಂಗನಾ ಅವರ ಈ ಪೋಸ್ಟ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಮೊನ್ನೆ ನೋಡಿದರೆ, ಬಾಲಿವುಡ್​ ಮತ್ತು ಆಲಿಯಾ ಬಗ್ಗೆ ಗರಂ ಆಗಿದ್ದರು. ಇದೀಗ ಈ ರೀತಿಯ ಮಾತುಗಳನ್ನು ಆಡುತ್ತಿದ್ದಾರೆ. ಏನಿದರ ಮರ್ಮ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ ಲಾಟ್ರಿ.. `ವಂಡರ್​ ವುಮೆನ್​’ ಜೊತೆ ಹಾಲಿವುಡ್​ ಸಿನಿಮಾದಲ್ಲಿ ನಟಿಸ್ತಿದ್ದಾರೆ ರೀ ಆಲಿಯಾ!

ಆಲಿಯಾಗೆ ‘ಪಾಪ ಕಿ ಪಾರಿ’ ಎಂದಿದ್ದ ಕಂಗನಾ!

ಕಂಗನಾ ಆಲಿಯಾ ಅವರನ್ನು 'ಪಾಪಾ ಕಿ ಪರಿ' ಮತ್ತು 'ರೋಮ್‌ಕಾಮ್ ಬೇಬೋ' ಅಂತ ಕರೆದಿದ್ದರು. ಆದರೆ ಗಂಗೂಬಾಯಿಯ ಚಿತ್ರದ ಅಬ್ಬರ ಕಂಡು ಅದಕ್ಕೂ ಕಂಗನಾ ಹೊಗಳಿದ್ದಾರೆ. ಪರೋಕ್ಷವಾಗಿ ಆಲಿಯಾ ಭಟ್ ಚಿತ್ರಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಆಕೆ 'ಗಂಗೂಬಾಯಿ ಕಾಥಿಯಾವಾಡಿ' ಚಿತ್ರದ ಒಂದು ವೈರಲ್ ದೃಶ್ಯದ ವಿರುದ್ಧವೂ ಕಂಗನಾ ಕಿಡಿ ಕಾರಿದ್ದರು.
Published by:Vasudeva M
First published: