ತನ್ನ ಇನ್​ಸ್ಟಾಗ್ರಾಂನಿಂದ ಸಹೋದರಿ ರಂಗೋಲಿಯನ್ನು ಅನ್‌ಫಾಲೋ ಮಾಡುತ್ತೇನೆಂದ Kangana Ranaut..!

ತಲೈವಿ ಸಿನಿಮಾದ ಪ್ರಚಾರದಲ್ಲಿರುವ ಕಂಗನಾ ಎದುರಾಗುತ್ತಿರುವ ವಿವಾದಾತ್ಮ ಪ್ರಶ್ನೆಗಳಿಗೆ ತುಂಬಾ ಜಾಣ್ಮೆಯಿಂದ ಉತ್ತರಿಸುತ್ತಿದ್ದಾರೆ. ಆದರೆ ಈಗ ತಮ್ಮ ಬೆನ್ನೆಲುಬಿನಂತಿರುವ ಸಹೋದರಿ ಕುರಿತಾಗಿ ಕಂಗನಾ ಕೊಟ್ಟಿರುವ ಹೇಳಿಕೆ ಕೊಂಚ ಆಶ್ಚರ್ಯಕರವಾಗಿದೆ.

ಸಹೋದರಿ ರಂಗೋಲಿ ಜತೆ ಕಂಘನಾ ರನೌತ್​

ಸಹೋದರಿ ರಂಗೋಲಿ ಜತೆ ಕಂಘನಾ ರನೌತ್​

  • Share this:
ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುವಂತಹ ಕಂಗನಾ ರನೌತ್  (Kangana Ranaut)ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರ ಟ್ವಿಟ್ಟರ್‌​ ಖಾತೆಯನ್ನು ಶಾಶ್ವತವಾಗಿ ರದ್ದುಗೊಳಿಸಿರುವ ವಿಷಯ ನಮಗೆಲ್ಲ ಗೊತ್ತೇ ಇದೆ. ಈಗ ಮತ್ತೊಮ್ಮೆ ಸುದ್ದಿಯಲ್ಲಿರುವ ಕಂಗನಾ ರನೌತ್​ ಈ ಬಾರಿ ಮಾತನಾಡಿದ್ದು ತನ್ನ ಸಹೋದರಿಯ ಬಗ್ಗೆ ಅಂದರೆ ನೀವು ನಂಬಲಿಕ್ಕಿಲ್ಲ.ಇತ್ತೀಚೆಗೆ ಆರ್‌ಜೆ ರೌನಕ್‌ಗೆ ನೀಡಿರುವ ಸಂದರ್ಶನದಲ್ಲಿ ಕಂಗನಾಗೆ ಅವರಿಗೆ ನೀವು ಇನ್‌ಸ್ಟಾಗ್ರಾಂನಲ್ಲಿ ಯಾರನ್ನು ಅನ್‌ಫಾಲೋ ಮಾಡಲು ಬಯಸುತ್ತೀರಿ ಎಂದು ಪ್ರಶ್ನಿಸಿದಾಗ, ವಿವಾದ ತಪ್ಪಿಸಿಕೊಳ್ಳಲು ನಾನು ರಂಗೋಲಿಯನ್ನು ಅನ್‌ಫಾಲೋ ಮಾಡುತ್ತೇನೆ" ಎಂದು ಹೇಳಿದ್ದಾರೆ. ರಂಗೋಲಿ ಚಾಂದೇಲ್ ಕಂಗನಾ ಅವರ ಸಹೋದರಿ. ಕಂಗನಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಯಾರೇ ಕೆಟ್ಟದಾಗಿ ಅಥವಾ ನೆಗೆಟಿವ್ ಆಗಿ ಕಮೆಂಟ್ ಮಾಡಿದರೂ ಮೊದಲು ಉತ್ತರಿಸುವುದು ಇದೇ ರಂಗೋಲಿ.

ಕಂಗನಾ ರನೌತ್​ ಸಂದರ್ಶನದಲ್ಲಿ ತಮ್ಮ ಮೊಬೈಲ್‌ನಲ್ಲಿ ಡಯಲ್ ಮಾಡಿದ ಕೊನೆಯ ಸಂಖ್ಯೆಗೆ ಆರ್‌ಜೆ ಕರೆ ಮಾಡಿ ಆ ವ್ಯಕ್ತಿಗೆ ತಮ್ಮ ಜೀವನದಲ್ಲಿ ಅವರು ಬೇಕಾಗಿಲ್ಲ ಎಂದು ಹೇಳಿ ಎಂದು ಹೇಳಿದರು. ಆ ಸಂಖ್ಯೆ ಅವಳ ಸಹೋದರಿಯದ್ದಾಗಿತ್ತು ಮತ್ತು ಕಂಗನಾ ಅರಿಳಿಗೆ ನೇರವಾಗಿ “ನೀನು ನನ್ನ ಜೀವನದಲ್ಲಿ ಬೇಕಾಗಿಲ್ಲ” ಎಂದು ಹೇಳಿದ್ದಾರೆ.


ಕಂಗನಾ ಕರೆಯನ್ನು ಸ್ವೀಕರಿಸಿ ಅವರ ಮಾತನ್ನು ಆಲಿಸಿದಂತಹ ಸಹೋದರಿ "ಆದರೂ ನಾನು ನಿನ್ನ ಜೀವನದಲ್ಲಿ ಇನ್ನೂ ಇರುತ್ತೇನೆ" ಎಂದು ಕಂಗನಾಗೆ ಹೇಳಿದ್ದಾರೆ. ಇದನ್ನು ಕೇಳಿದ ಕಂಗನಾ "ಇದಪ್ಪಾ ನನ್ನ ಸಹೋದರಿಯ ಉತ್ಸಾಹ" ಎಂದು ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಇನ್​ಸ್ಟಾಗ್ರಾಂನಲ್ಲಿ ಯಾರನ್ನು ಅನ್​ಫಾಲೋ ಮಾಡಲು ಬಯಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಜಾಣತನದಿಂದ ತನ್ನ ಸಹೋದರಿಯನ್ನು ಅಂತ ತಮಾಷೆ ಮಾಡಿದ್ದಾರೆ. ಒಟ್ಟಾರೆ ತಲೈವಿ ಸಿನಿಮಾದ ಪ್ರಚಾರದಲ್ಲಿರುವ ಕಂಗನಾ ಎದುರಾಗುತ್ತಿರುವ ವಿವಾದಾತ್ಮ ಪ್ರಶ್ನೆಗಳಿಗೆ ತುಂಬಾ ಜಾಣ್ಮೆಯಿಂದ ಉತ್ತರಿಸುತ್ತಿದ್ದಾರೆ.

ಇದನ್ನೂ ಓದಿ: MuayThai Championship: ನಟ ಅರುಣ್ ಸಾಗರ್​ ಮಗ ಸೂರ್ಯ ಸಾಗರ್​ ಸಾಧನೆಗೆ ಶುಭ ಕೋರಿದ Kichcha Sudeep

“ಬಾಲಿವುಡ್‌ಗೆ ಹೋಲಿಸಿದರೆ ದಕ್ಷಿಣ ಚಿತ್ರೋದ್ಯಮವು ಕೆಲಸ ಮಾಡಲು ಹೆಚ್ಚು ಸಾಮರಸ್ಯದಿಂದ ಕೂಡಿದ ಸ್ಥಳವಾಗಿದೆ” ಎಂದು ನಟಿ ಕಂಗನಾ ಹೇಳಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ತಲೈವಿ ಚಿತ್ರದ ನಟಿ, ಬಾಲಿವುಡ್‌ನ ಇತರ ಚಿತ್ರೋದ್ಯಮಗಳಿಂದ ಕಲಿಯುವುದು ಬಹಳಷ್ಟಿದೆ ಎಂದಿದ್ದಾರೆ.

ಸಂದರ್ಶನದಲ್ಲಿ ಕಂಗನಾ ರನೌತ್​ ಅವರನ್ನು ತಮ್ಮ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ಬಗ್ಗೆ ಮಾತನಾಡಿದ ಅವರು, "ನಾನು ದೇಶದಲ್ಲಿ ನೋಡಿದಾಗ ನೀವು ದೇಶ ಒಡೆಯುವ ಬಗ್ಗೆ ಮಾತನಾಡಿದರೆ, ಯಾವುದೇ ಸಮಸ್ಯೆ ಇಲ್ಲ. ಆದರೆ ನೀವು ಅದನ್ನು ಮತ್ತೆ ಸೇರಿಸುವ ಬಗ್ಗೆ ಮಾತನಾಡಿದರೆ, ಸಮಸ್ಯೆ ಇದೆ" ಎಂದು ಹೇಳಿದ್ದಾರೆ.

ಅವರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಾಗ ಉಂಟಾಗುವ ಪರಿಣಾಮಗಳ ಬಗ್ಗೆ ಮಾತನಾಡಿ, "ನನ್ನ ಬ್ರ್ಯಾಂಡ್ ಗಳು ನನ್ನನ್ನು ಕೈಬಿಟ್ಟವು ಮತ್ತು ನನ್ನ ಒಪ್ಪಂದಗಳನ್ನು ಸಹ ರದ್ದುಗೊಳಿಸಿದವು, ನನಗೆ ಕೋಟಿಗಳ ಆರ್ಥಿಕ ನಷ್ಟವಾಗಿತ್ತು" ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Stop Hindi Imposition: ಹಿಂದಿ ಹೇರಿಕೆ ಸಲ್ಲದು ಎಂದ ನಟ ಧನಂಜಯ್​-ನಿರ್ದೇಶಕ ಸಿಂಪಲ್​ ಸುನಿ..!

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಬಗ್ಗೆ ನೀವು ಎಂದಾದರೂ ಎರಡು ಬಾರಿ ಯೋಚಿಸುತ್ತೀರಾ ಎಂದು ಕೇಳಿದಾಗ, "ಜೀವನದ ಬಗ್ಗೆ ನನ್ನ ದೃಷ್ಟಿಕೋನ ಹೇಗಿದೆಯೋ ನಾನು ಹಾಗೆ ನಡೆದುಕೊಳ್ಳುತ್ತೇನೆ. ನನಗೆ ಇಲ್ಲೊಂದು ಅಲ್ಲೊಂದು ಮಾತನಾಡಲು ಬರುವುದಿಲ್ಲ, ನನ್ನದು ನೇರ ನುಡಿ" ಎಂದಿದ್ದಾರೆ.

ಬಾಲಿವುಡ್ ಮತ್ತು ದಕ್ಷಿಣ ಚಿತ್ರೋದ್ಯಮದ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿದ ಕಂಗನಾ, "ಉದ್ಯಮವನ್ನು ಮುನ್ನಡೆಸಲು ಬೇಕಾದಂತಹ ಒಗ್ಗಟ್ಟು ಬಾಲಿವುಡ್​ನಲ್ಲಿ ನೋಡಲು ಸಿಗುವುದೇ ಇಲ್ಲ. ಯಾರಾದರೂ ಮುಂದೆ ಹೋಗುತ್ತಿದ್ದರೆ, ಅವರನ್ನು ಕೆಳಗಿಳಿಸಲು ಪ್ರಯತ್ನಿಸುವ ಜನರು ತುಂಬಾ ಇದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಲೈವಿ ವಾರಾಂತ್ಯದ ಕಲೆಕ್ಷನ್​

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ ತಲೈವಿ ಕಳೆದ ಶುಕ್ರವಾರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತಲೈವಿ ಸಿನಿಮಾವನ್ನು ಎ. ಎಲ್​. ವಿಜಯ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ ಇದಾಗಿದೆ.

ಬಾಕ್ಸಾಫಿಸ್​ ಇಂಡಿಯಾದ ಪ್ರಕಾರ ಕಳೆದ ವಾರಾಂತ್ಯದಲ್ಲಿ ತಲೈವಿ ಸಿನಿಮಾ 4.75ಕೋಟಿ ಗಳಿಕೆ ಮಾಡಿದೆ. ಈ ಚಿತ್ರ ರಿಲೀಸ್ ಆದ ಮೊದಲ ದಿನ 1.25 ಕೋಟಿ ಗಳಿಸಿತ್ತು. ತಮಿಳುನಾಡಿನಲ್ಲಿ 80 ಲಕ್ಷ ಕಲೆಕ್ಷನ್​ ಆಗಿತ್ತು. ಉತ್ತರ ಭಾರತದಲ್ಲಿ ಈ ಸಿನಿಮಾ 25 ಲಕ್ಷ ಗಳಿಕೆ ಮಾಡಿದೆ. ತಲೈವಿ ಸಿನಿಮಾದ ಹಿಂದಿ ವರ್ಷನ್ ಸಿನಿಮಾ ಮೂರು ದಿನಗಳಲ್ಲಿ ಒಂದು ಕೋಟಿ ಗಳಿಕೆ ಮಾಡಿದೆ. ಈ ಚಿತ್ರ ಶೂಕ್ರವಾರ 25 ಲಕ್ಷ, ಶನಿವಾರ 30 ಲಕ್ಷ ಹಾಗೂ ಭಾನುವಾರ 45 ಲಕ್ಷ ಗಳಿಕೆ ಮಾಡಿದೆ. ತಮಿಳು ನಾಡಿನಲ್ಲಿ ಈ ಸಿನಿಮಾ ಇಲ್ಲಿಯವರೆಗೆ 2.475 ಕೋಟಿ ಕಲೆಕ್ಷನ್ ಮಾಡಿದೆ.
Published by:Anitha E
First published: