• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Kangana Ranaut: ಸೀಕ್ರೆಟ್ ಕಾಲ್ ಮೂಲಕ ತಲೈವಿ ಸಿನಿಮಾ ಹೊಗಳಿದ ಅಕ್ಷಯ್ ಕುಮಾರ್; ಮೂವಿ ಮಾಫಿಯಾ ವಿರುದ್ಧ ಗುಡಗಿದ ಕಂಗನಾ

Kangana Ranaut: ಸೀಕ್ರೆಟ್ ಕಾಲ್ ಮೂಲಕ ತಲೈವಿ ಸಿನಿಮಾ ಹೊಗಳಿದ ಅಕ್ಷಯ್ ಕುಮಾರ್; ಮೂವಿ ಮಾಫಿಯಾ ವಿರುದ್ಧ ಗುಡಗಿದ ಕಂಗನಾ

ನಟಿ ಕಂಗನಾ.

ನಟಿ ಕಂಗನಾ.

ಆಲಿಯಾ ಮತ್ತು ದೀಪಿಕಾ ಪಡುಕೋಣೆ ಸಿನಿಮಾಗಳಂತೆ ಎಲ್ಲರೆದುರು ನನ್ನ ಸಿನಿಮಾವನ್ನು ಹೊಗಳುವ ಮುಕ್ತ ಅವಕಾಶದಿಂದ ವಂಚಿತರಾಗಿದ್ದಾರೆ. ಬಾಲಿವುಡ್​ನಲ್ಲಿ ಮೂವಿ ಮಾಫಿಯಾ ಭಯೋತ್ಪಾದನೆ ಅಬ್ಬರಿಸುತ್ತಿದೆ ಎಂದು ನಟಿ ಕಂಗನಾ ಕಿಡಿಕಾರಿದ್ದಾರೆ.

  • Share this:

ಬಾಲಿವುಡ್ ನಟಿ ಕಂಗನಾ ರಣಾವತ್ ಬುಧವಾರ ತಡರಾತ್ರಿ ಟ್ವೀಟ್​ ಮಾಡಿದ್ದು, ಅಕ್ಷಯ್​ ಕುಮಾರ್​ ಸೇರಿದಂತೆ ಬಾಲಿವುಡ್​ನ ಹಲವಾರು ಸ್ಟಾರ್ಸ್​ ರಹಸ್ಯವಾಗಿ ಕರೆ ಮಾಡಿ ತಲೈವಿ ಸಿನಿಮಾ ಟ್ರೈಲರ್ ಬಗ್ಗೆ ಹೊಗಳಿಕೆ ವ್ಯಕ್ತಪಡಿಸಿದ್ದಾರೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ. ಆ ಮೂಲಕ ಬಾಲಿವುಡ್​ನಲ್ಲಿರುವ ಮೂವಿ ಮಾಫಿಯಾ ಭಯೋತ್ಪಾದನೆ ಬಗ್ಗೆ ಕಂಗನಾ ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ಟ್ವೀಟ್​ ಒಂದಕ್ಕೆ ಉತ್ತರಿಸುತ್ತಾ , "ತಮ್ಮ ಸಿನಿಮಾ ಕೆಲಸನ್ನು ಶ್ಲಾಘಿಸಿದ್ದಾರೆ. ಬಾಲಿವುಡ್​ನಲ್ಲಿ ಎಂತಹ ಸಂಕಷ್ಟದ ಸ್ಥಿತಿ ಇದೆ ಎಂದರೆ, ನನ್ನ ಸಿನಿಮಾವನ್ನು ಹೊಗಳುವುದು ಸಹ ಜನರಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಇದೇ ಕಾರಣಕ್ಕೆ ಅಕ್ಷಯ್​ ಕುಮಾರ್​ ಸೇರಿದಂತೆ ಹಲವಾರು ನಟರು ರಹಸ್ಯವಾಗಿ ನಮಗೆ ಕರೆ ಮಾಡಿ ಸಿನಿಮಾವನ್ನು ಶ್ಲಾಘಿಸಿದ್ದಾರೆ.


ಆದರೆ, ಆಲಿಯಾ ಮತ್ತು ದೀಪಿಕಾ ಪಡುಕೋಣೆ ಸಿನಿಮಾಗಳಂತೆ ಎಲ್ಲರೆದುರು ನನ್ನ ಸಿನಿಮಾವನ್ನು ಹೊಗಳುವ ಮುಕ್ತ ಅವಕಾಶದಿಂದ ವಂಚಿತರಾಗಿದ್ದಾರೆ. ಬಾಲಿವುಡ್​ನಲ್ಲಿ ಮೂವಿ ಮಾಫಿಯಾ ಭಯೋತ್ಪಾದನೆ ಅಬ್ಬರಿಸುತ್ತಿದೆ" ಎಂದಿದ್ದಾರೆ. ಅಲ್ಲದೇ ಅನಿರುದ್ಧ ಗುಹಾ ಚಿತ್ರಕಥೆ ಬರೆದಿದ್ದು, ಕಂಗನಾ ಅಸಾಧಾರಣವಾಗಿ ಅಭಿನಯಿಸಿದ್ದಾರೆ.


ಕಲಾ ಪ್ರಪಂಚವೂ ಕಲೆಯ ವಿಷಯಕ್ಕೆ ಬಂದಾಗ ವಸ್ತುನಿಷ್ಠವಾಗಬಹುದು. ಸಿನಿಮಾ ಎಂದು ಬಂದಾಗ ಅಲ್ಲಿ ರಾಜಕೀಯ, ಶಕ್ತಿ ಪ್ರದರ್ಶನದಲ್ಲಿ ಪಾಲ್ಗೊಳ್ಳಬಾರದು.  ನನ್ನ ರಾಜಕೀಯ ಮತ್ತು ಅಧ್ಯಾತ್ಮಿಕ ದೃಷ್ಟಿಕೋನಗಳು ನನಗೆ ಕಿರುಕುಳ, ಬೆದರಿಕೆಯನ್ನು ಒಡ್ಡಬಾರದು. ಅವರು ಹಾಗೆ ಮಾಡಿದರೆ, ನಾನು ಗೆದ್ದಂತೆ ಎಂದು ಟ್ವೀಟ್ ಮಾಡಿದ್ದಾರೆ.


ಮಾರ್ಚ್​ನಲ್ಲಿ ಕಂಗನಾ ಹುಟ್ಟು ಹಬ್ಬದ ದಿನ ತಲೈವಿ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಹಿರಿಯ ರಾಜಕಾರಣಿ, ನಟಿ ಜಯಲಲಿತಾ ಅವರ ಜೀವನ ಚರಿತ್ರೆಯನ್ನು ಆಧರಿಸಿದೆ. ಈ ಚಿತ್ರದ ಟ್ರೈಲರ್​ಗಾಗಿ ಕಂಗನಾ ಸಾಕಷ್ಟು ಪ್ರಶಂಸೆಯನ್ನೂ ಸಹ ಪಡೆದಿದ್ದಾರೆ. ನಿರ್ದೇಶಕ ರಾಮ್​ ಗೋಪಾಲ್ ವರ್ಮಾ, ಹನ್ಸಲ್ ಮೆಹ್ತಾ ಮತ್ತು ತೆಲುಗು ನಟಿ ಸಮಂತಾ ಅಕ್ಕಿನೇನಿ ಕಂಗನಾ ಅಭಿನಯವನ್ನು ಹೊಗಳಿದ್ದಾರೆ. ಆದರೆ ಬಾಲಿವುಡ್​ನ ಬಹುತೇಕ ಮಂದಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.


ಕಂಗನಾ ಇತ್ತೀಚೆಗೆ ತಮ್ಮ ಹಳೆಯದೊಂದು ವೀಡಿಯೊವನ್ನು ಹಂಚಿಕೊಂಡಿದ್ದರು. ದೀಪಿಕಾ ಪಡುಕೋಣೆ ಮತ್ತು ಆಲಿಯಾ ಅವರ ಸಿನಿಮಾವನ್ನು ಕಂಗನಾ ಅವರು ಹೊಗಳಿದ್ದರು. ಆದರೆ ಈ ನಟಿಯರು ಅದೇ ರೀತಿ ಕಂಗನಾ ಸಿನಿಮಾದ ಬಗ್ಗೆ ಒಂದು ಮಾತು ಹೇಳಿಲ್ಲ ಎನ್ನುವ ಮೂಲಕ ಇಬ್ಬರು ನಟಿರು ಥ್ಯಾಂಕ್​ಲೆಸ್​ ಎಂದಿದ್ದಾರೆ.


ಇದರ ಜೊತೆಗೆ 'ನಾನು ಪ್ರಶಂಸೆ ಮಾಡದ ಮತ್ತು ಬೆಂಬಲಿಸದ ಒಬ್ಬ ನಟಿಯೂ ಕೂಡ ಇಲ್ಲ. ಆದರೆ ನನ್ನ ಸಿನಿಮಾಗೆ ಯಾರೊಬ್ಬರೂ ಕೂಡ ಪ್ರೋತ್ಸಾಹವನ್ನು ನೀಡಿಲ್ಲ ಎಂದು ಹೇಳಿದ್ದಾರೆ. ಇದು ಹೀಗೆ ಏಕೆ ? ನಿಮಗೆ ಗೊತ್ತೆ? ನನ್ನ ವಿರುದ್ಧ ಹೀಗೆ ಗ್ರೂಪಿಸಂ ಮಾಡಿರುವುದಕ್ಕೆ ಕಾರಣ ಗೊತ್ತೆ? ಈ ರೀತಿ ನನ್ನ ಸಿನಿಮಾ ಮತ್ತು ಕೆಲಸದ ಬಗ್ಗೆ ಇಷ್ಟು ಗುಟ್ಟು ಕಾಯ್ದುಕೊಂಡಿರುವುದು ಏಕೆ ? ಬಲವಾಗಿ ನೀವೇ ಯೋಚಿಸಿ' ಎಂದು ಹೇಳಿದ್ದಾರೆ.


ಇದನ್ನೂ ಓದಿ: Chaithra Kotoor: ಮದುವೆ ವಿವಾದ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಿಗ್​ಬಾಸ್​ ಅಭ್ಯರ್ಥಿ ಚೈತ್ರಾ ಕೋಟೂರು


ಈ ಹಿಂದೆ ಕಂಗನಾ , ಎಂಟರ್‌ಟೈನ್‌ಮೆಂಟ್ ವೆಬ್‌ಸೈಟ್ ಬಾಲಿವುಡ್ ಲೈಫ್  ಎನ್ನುವ ಪೋಲ್​ನಲ್ಲಿ 2019 ರಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದ ನಟಿ ಯಾರೆಂದು ವೋಟ್ ಮಾಡಲು ಕೇಳಿತ್ತು. ಮಣಿಕರ್ಣಿಕಾ ಅಭಿನಯಕ್ಕಾಗಿ ಕಂಗನಾ 37% ಮತಗಳನ್ನು ಗಳಿಸಿದ್ದರು. ಗಲ್ಲಿ ಬಾಯ್​ ಸಿನಿಮಾಕ್ಕಾಗಿ ಆಲಿಯಾ 33% ಮತ ಪಡೆದು ಎರಡನೇ ಸ್ಥಾನದಲ್ಲಿದ್ದರು. ಈ ಬಗ್ಗೆ ವೆಬ್​ ಕಂಗನಾ ಅವರನ್ನು ಮಾತನಾಡಿಸಿದ್ದಾಗ, ಗಲ್ಲಿ ಬಾಯ್ ಸಿನಿಮಾದೊಂದಿಗೆ ಸ್ಪರ್ಧಿಸುವುದೆಂದರೆ ಏನು? ಅದು ಎಲ್ಲಾ ಸಿನಿಮಾದಂತೆ ಇದೆ.


ಅದರಲ್ಲಿ ವಿಶೇಷವೇನಿಲ್ಲ. ಸಿನಿಮಾ ಮಕ್ಕಳಿಗೆ ನೀವು ಮಣೆ ಹಾಕುವುದನ್ನು ನಿಲ್ಲಿಸಿ ಎಂದಿದ್ದರು. ಸದ್ಯ ಕಂಗನಾ ದಾಖಡ್ ಮತ್ತು ತೇಜಸ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇರುವ ಕಂಗನಾ 2019 ರಲ್ಲಿ ಮಣಿಕರ್ಣಿಕಾ:  ಜಾನ್ಸಿಯ ರಾಣಿ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

Published by:MAshok Kumar
First published: