Hindi Controversy: ಅಜಯ್‌ ದೇವಗನ್ ಬೆಂಬಲಕ್ಕೆ ನಿಂತ ಕಂಗನಾ! "ಹಿಂದಿ ನಮ್ಮ ರಾಷ್ಟ್ರಭಾಷೆ" ಎಂದ ನಟಿ

"ಈಗಿನಂತೆ, ಸಂವಿಧಾನದ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆಯಾಗಿದೆ. ಹಾಗಾಗಿ ಹಿಂದಿ ಭಾರತದ ರಾಷ್ಟ್ರ ಭಾಷೆ ಎಂದು ಅಜಯ್ ದೇವಗನ್ ಜೀ ಹೇಳಿದಾಗ ಅವರು ತಪ್ಪಾಗಿ ಹೇಳಿಲ್ಲ" ಅಂತ ಕಂಗನಾ ಹೇಳಿದ್ದಾರೆ.

ಕಂಗನಾ ರಣಾವತ್

ಕಂಗನಾ ರಣಾವತ್

  • Share this:
“ಹಿಂದಿ ನಮ್ಮ ರಾಷ್ಟ್ರ ಭಾಷೆ” (Hindi is our National Language) ಎಂಬ ಖ್ಯಾತ ಬಾಲಿವುಡ್‌ ನಟ (Bollywood Actor) ಅಜಯ್ ದೇವಗನ್ (Ajay Devagan) ಹೇಳಿಕೆಗೆ ದಕ್ಷಿಣ ಭಾರತದಾದ್ಯಂತ (South India) ತೀವ್ರ ವಿರೋಧ ವ್ಯಕ್ತವಾಗಿದೆ. ಅಜಯ್ ದೇವಗನ್ ಹಿಂದಿ ಹೇಳಿಕೆಗೆ ಕನ್ನಡದ ಖ್ಯಾತ ನಟ, ಕಿಚ್ಚ ಸುದೀಪ್ (Kichcha Sudeep) ಸರಿಯಾಗಿಯೇ ತಿರುಗೇಟು ನೀಡಿದ್ದರು. ಕಿಚ್ಚನ ಬೆನ್ನಿಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai), ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah), ನಟಿ ರಮ್ಯಾ (Actress Ramya) ಸೇರಿದಂತೆ ಸಾಕಷ್ಟು ಮಂದಿ ಬೆಂಬಲ ಸೂಚಿಸಿದ್ದರು. ಇನ್ನು ದಕ್ಷಿಣ ಭಾರತದ ಬೇರೆ ಬೇರೆ ಭಾಷೆಯ ಜನರು, ಸೆಲಬ್ರಿಟಿಗಳೂ (Celebrity) ಸಹ ಕಿಚ್ಚನ ಮಾತಿಗೆ ದನಿಗೂಡಿಸಿದ್ದರು. ಇದೇ ವಿಚಾರವಾಗಿ ಟ್ವಿಟರ್ (Twitter) ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಸಾಕಷ್ಟು ಪರ-ವಿರೋಧದ ಚರ್ಚೆಯಾಗಿತ್ತು. ಇದೀಗ ಅಜಯ್ ದೇವಗನ್ ಬೆಂಬಲಕ್ಕೆ ಬಾಲಿವುಡ್‌ನ ವಿವಾದಾತ್ಮಕ ನಟಿ ಕಂಗನಾ ರಣಾವತ್ (Kangana Ranaut) ನಿಂತಿದ್ದಾರೆ.

 “ಹಿಂದಿ ನಮ್ಮ ರಾಷ್ಟ್ರ ಭಾಷೆ” ಎಂದ ಕಂಗನಾ

ಬಾಲಿವುಡ್‌ನ ವಿವಾದಾತ್ಮಕ ನಟಿ ಕಂಗನಾ ರಣಾವತ್, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಂತ ಅಭಿಪ್ರಾಯ ಪಟ್ಟಿದ್ದಾರೆ. ‘’ನಮ್ಮದು ವೈವಿಧ್ಯತೆಯ ದೇಶ. ಇಲ್ಲಿ ಭಾಷೆಗಳು, ಸಂಸ್ಕೃತಿಗಳು ತುಂಬಿರುವ ದೇಶವಾಗಿದೆ. ನಮ್ಮ ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಹೆಮ್ಮೆ ಪಡುವುದು ನಮ್ಮ ಜನ್ಮಸಿದ್ಧ ಹಕ್ಕು. ನಾನು ಪಹಾಡಿ. ಆದರೂ, ನಾವು ನಮ್ಮ ರಾಷ್ಟ್ರವನ್ನು ಪರಿಗಣಿಸಿದಾಗ, ಅದನ್ನು ಒಂದುಗೂಡಿಸಲು ನಮ್ಮೆಲ್ಲರನ್ನೂ ಒಟ್ಟುಗೂಡಿಸಲು ಒಂದು ಥ್ರೆಡ್ ಅಗತ್ಯವಿದೆ. ಸಂವಿಧಾನ ರಚನೆಯಾದಾಗ ಹಿಂದಿ ರಾಷ್ಟ್ರ ಭಾಷೆಯಾಯಿತು. ಹೀಗಾಗಿ ಹಿಂದಿಯೇ ನಮ್ಮ ರಾಷ್ಟ್ರ ಭಾಷೆ ಎಂದಿದ್ದಾರೆ.

“ಅಜಯ್‌ ಜೀ ಹೇಳಿದ್ದರಲ್ಲಿ ತಪ್ಪಿಲ್ಲ”

‘‘ಸದ್ಯಕ್ಕೆ ಹಿಂದಿ ನಮ್ಮ ರಾಷ್ಟ್ರ ಭಾಷೆ. ನನ್ನ ಅಭಿಪ್ರಾಯದಲ್ಲಿ ಸಂಸ್ಕೃತ ನಮ್ಮ ರಾಷ್ಟ್ರ ಭಾಷೆಯಾಗಬೇಕು’’ ಎಂದು ನಟಿ ಕಂಗನಾ ಅಭಿಪ್ರಾಯ ಪಟ್ಟಿದ್ದಾರೆ. "ಈಗಿನಂತೆ, ಸಂವಿಧಾನದ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆಯಾಗಿದೆ. ಹಾಗಾಗಿ ಹಿಂದಿ ಭಾರತದ ರಾಷ್ಟ್ರ ಭಾಷೆ ಎಂದು ಅಜಯ್ ದೇವಗನ್ ಜಿ ಹೇಳಿದಾಗ ಅವರು ತಪ್ಪಾಗಿಲ್ಲ ಅಂತ ಕಂಗನಾ ಹೇಳಿದ್ದಾರೆ.

ಇದನ್ನೂ ಓದಿ: Explained: ರಾಷ್ಟ್ರೀಯ ಭಾಷೆ ಎಂದರೇನು? ಹಿಂದಿ ನಮ್ಮ ರಾಷ್ಟ್ರ ಭಾಷೆಯೇ?

“ಸಂಸ್ಕೃತ ನಮ್ಮ ರಾಷ್ಟ್ರಭಾಷೆಯಾಗಬೇಕು” ಎಂದ ನಟಿ

ಸಂಸ್ಕೃತ ನಮ್ಮ ರಾಷ್ಟ್ರ ಭಾಷೆಯಾಗಬೇಕು ಎಂದು ನಾನು ಹೇಳುತ್ತೇನೆ. ಹಿಂದಿ, ಜರ್ಮನಿ, ಇಂಗ್ಲಿಷ್, ಫ್ರೆಂಚ್ ಮುಂತಾದ ಭಾಷೆಗಳು ಸಂಸ್ಕೃತದಿಂದ ಹುಟ್ಟಿಕೊಂಡಿವೆ, ನಮಗೆ ಸಂಸ್ಕೃತ ಏಕೆ ರಾಷ್ಟ್ರ ಭಾಷೆಯಾಗಿಲ್ಲ? ಶಾಲೆಗಳಲ್ಲಿ ಏಕೆ ಕಡ್ಡಾಯವಾಗಿಲ್ಲ? ಅದು ನನಗೆ ತಿಳಿದಿಲ್ಲ! ” ಅಂತ ಅವರು ಹೇಳಿದ್ದಾರೆ.

“ವಿದೇಶಕ್ಕೆ ಹೋದಾಗ ಹೆಮ್ಮೆಯಿಂದ ಹೇಳಬೇಕು”

“ನೀವು ದೇಶದಾದ್ಯಂತ ಪ್ರಯಾಣಿಸಿದಾಗ ಅಥವಾ ಜರ್ಮನ್, ಸ್ಪ್ಯಾನಿಷ್ ಅಥವಾ ಫ್ರೆಂಚ್ ದೇಶಗಳಿಗೆ ಹೋದಾಗ, ಅವರು ತಮ್ಮ ಭಾಷೆಯ ಬಗ್ಗೆ ತುಂಬಾ ಹೆಮ್ಮೆಪಡುತ್ತಾರೆ. ವಸಾಹತುಶಾಹಿ ಇತಿಹಾಸವು ಎಷ್ಟೇ ಕರಾಳವಾಗಿರಲಿ, ಅದೃಷ್ಟವಶಾತ್ ಅಥವಾ ದುರದೃಷ್ಟವಶಾತ್, ಇಂಗ್ಲಿಷ್ ಆ ಕೊಂಡಿಯಾಗಿ ಮಾರ್ಪಟ್ಟಿದೆ. ಇಂದು, ದೇಶದೊಳಗೆ, ನಾವು ಸಂವಹನ ಮಾಡಲು ಇಂಗ್ಲಿಷ್ ಬಳಸುತ್ತಿದ್ದೇವೆ. ಅದು ಲಿಂಕ್ ಆಗಬೇಕೇ ಅಥವಾ ಹಿಂದಿ ಅಥವಾ ಸಂಸ್ಕೃತ ಅಥವಾ ತಮಿಳು ಲಿಂಕ್ ಆಗಬೇಕೇ?  ಅಂತ ಕಂಗನಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Explained: ಕಿಚ್ಚ ಸುದೀಪ್-ಅಜಯ್ ದೇವಗನ್ ಮಧ್ಯೆ 'ಹಿಂದಿ' ವಾರ್! ಶುರುವಾಗಿದ್ದು ಹೇಗೆ, ಬಂದು ನಿಂತಿದ್ದೆಲ್ಲಿಗೆ?

“ಹಿಂದಿ ನಿರಾಕರಿಸಿದರೆ ಸಂವಿಧಾನ ನಿರಾಕರಿಸಿದಂತೆ”!

‘’ಭಾಷಾ ಸಮಸ್ಯೆಗೆ ಹಲವು ಪದರಗಳಿವೆ. ಭಾಷೆಯ ಬಗ್ಗೆ ಮಾತನಾಡುವಾಗ ಈ ಎಲ್ಲಾ ಪದರಗಳ ಬಗ್ಗೆ ನಿಮಗೆ ಅರಿವಿರಬೇಕು. ನೀವು ಹಿಂದಿಯನ್ನು ನಿರಾಕರಿಸಿದರೆ, ನೀವು ಸಂವಿಧಾನ ಮತ್ತು ದೆಹಲಿ ಸರ್ಕಾರವನ್ನು ನಿರಾಕರಿಸಿದಂತೆ’’ ಅಂತ ಕಂಗನಾ ಹೇಳಿದ್ದಾರೆ.
Published by:Annappa Achari
First published: