Kangana Ranaut: ಡಿಪ್ಪಿ ಆಯ್ತು ಈಗ ಆಲಿಯಾ ಮೇಲೆ ಕಂಗನಾ ಕಣ್ಣು, 200 ಕೋಟಿ ಬೂದಿ ಆಗುತ್ತೆ ಅಂದಿದ್ಯಾಕೆ ಕಾಂಟ್ರವರ್ಸಿ ಕ್ವೀನ್​?

ಇತ್ತೀಚೆಗೆ ರಿಲೀಸ್​ ಆಗಿದ್ದ ದೀಪಿಕಾ ಪಡುಕೋಣೆ(Deepika Padukone) ಅಭಿನಯದ ‘ಗೆಹುರಾರಿಯಾ’ ಸಿನಿಮಾದ ವಿರುದ್ಧ ಕಂಗನಾ ಕಿಡಿಕಾರಿದ್ದರು. ಇದೊಂದು ‘ಟ್ರ್ಯಾಶ್​’(Trash) ಇಂಥ ಸಿನಿಮಾಗಳಿಂದ ಸಮಾಜಕ್ಕೆ ಯಾವ ಸಂದೇಶ ಕೊಡಲು ಮುಂದಾಗಿದ್ದೀರಾ? ಎಂದು ಚಿತ್ರತಂಡವನ್ನು ಕಂಗನಾ ಜಾಡಿಸಿದ್ದರು. ಇದೀಗ ಆಲಿಯಾ ವಿರುದ್ಧ ಕಂಗನಾ ರಾಂಗ್ ಆಗಿದ್ದಾರೆ.

ಕಂಗನಾ, ಆಲಿಯಾ

ಕಂಗನಾ, ಆಲಿಯಾ

  • Share this:
ಬಾಲಿವುಡ್(Bollywood)​ನಲ್ಲಿ ಈಗ ‘ಗಂಗೂಬಾಯಿ ಕಾಥಿಯಾವಾಡಿ’(Gangubai Kathiawadi) ಸಿನಿಮಾದೇ ಹವಾ. ಫೆಬ್ರವರಿ25ರಂದು ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್(Release)​ ಆಗುತ್ತಿದೆ. ಇನ್ನೂ ಕೇವಲ 4 ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಸಿನಿಮಾದ ಸುತ್ತ ವಿವಾದ(Controversy) ಹುತ್ತ ಸೃಷ್ಟಿಯಾಗಿದೆ. ಜನಾಂಗೀಯ ನಿಂಧನೆ ಸೇರಿ ಸಾಕಷ್ಟು ಆರೋಪಗಳು ಈ ಸಿನಿಮಾದ ಮೇಲೆ. ಇದೀಗ ಕಾಂಟ್ರವರ್ಸಿ ಕ್ವೀನ್​(Controversy Queen) ಕಂಗನಾ(Kanagana) ಕೂಡ  ಈ ಸಿನಿಮಾ ಹಾಗೂ ಆಲಿಯಾ(Alia) ವಿರುದ್ಧ ಫುಲ್​ ಗರಂ ಆಗಿದ್ದಾರೆ. ಇತ್ತೀಚೆಗೆ ರಿಲೀಸ್​ ಆಗಿದ್ದ ದೀಪಿಕಾ ಪಡುಕೋಣೆ(Deepika Padukone) ಅಭಿನಯದ ‘ಗೆಹುರಾರಿಯಾ’ ಸಿನಿಮಾದ ವಿರುದ್ಧ ಕಂಗನಾ ಕಿಡಿಕಾರಿದ್ದರು. ಇದೊಂದು ‘ಟ್ರ್ಯಾಶ್​’(Trash) ಇಂಥ ಸಿನಿಮಾಗಳಿಂದ ಸಮಾಜಕ್ಕೆ ಯಾವ ಸಂದೇಶ ಕೊಡಲು ಮುಂದಾಗಿದ್ದೀರಾ? ಎಂದು ಚಿತ್ರತಂಡವನ್ನು ಕಂಗನಾ ಜಾಡಿಸಿದ್ದರು. ಇದೀಗ ಆಲಿಯಾ ವಿರುದ್ಧ ಕಂಗನಾ ರಾಂಗ್ ಆಗಿದ್ದಾರೆ.

ಆಲಿಯಾ ಡ್ಯಾಡಿಸ್​ ಏಂಜೆಲ್​ ಎಂದ ಕಂಗನಾ!

'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದಲ್ಲಿ ಆಲಿಯಾ ಅಭಿನಯದ ಬಗ್ಗೆ ನಟಿ ಕಂಗನಾ ಕಿಂಡಲ್ ಮಾಡಿದ್ದಾರೆ. ಆಲಿಯಾ ಅವರನ್ನು 'ಡ್ಯಾಡಿಸ್ ಏಂಜೆಲ್' ಮತ್ತು 'ರೋಮ್‍ಕಾಮ್ ಬಿಂಬೋ' ಎಂದು ಕರೆದಿದ್ದಾರೆ. ಬಾಲಿವುಡ್​ನಲ್ಲಿ ಸ್ಟಾರ್​ ಡಮ್​ ಹೇಗೆ ವರ್ಕ್​ ಆಗುತ್ತೆ ಅನ್ನುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ‘ಗಂಗೂಬಾಯಿ ಕಾಥಿಯಾವಾಡಿ' ಸಿನಿಮಾ ರಿಲೀಸ್ ಗೆ ಇನ್ನೂ 4 ದಿನ ಬಾಕಿ ಇದೆ. ಈಗಾಗಲೇ ಸಿನಿಮಾದ ಬಗ್ಗೆ ಸಾಕಷ್ಟು ಹೈಪ್​  ಕ್ರಿಯೆಟ್​ ಆಗಿದೆ. ಸಿನಿಮಾ ನೋಡಲು ಸಿನಿರಸಿಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಶುಕ್ರವಾರ ಬಾಕ್ಸಾಫೀಸ್​ ಉಡೀಸ್​ ಆಗುತ್ತೆ ಎಂಬ ಟಾಕ್​ ಶುರುವಾಗಿದೆ.

ಪಾಪಾ ಕಿ ಪಾರಿ ಎಂದು ಕಿಂಡಲ್​ ಮಾಡಿದ ನಟಿ!

ಈ ಸುದ್ದಿಯನ್ನು ರೋಚಿಗೆದ್ದ ಕಂಗನಾ ಇನ್‍ಸ್ಟಾಗ್ರಾಮ್ ನಲ್ಲಿ, ಈ ಶುಕ್ರವಾರ 200 ಕೋಟಿ ರೂ. ಬಾಕ್ಸ್ ಆಫೀಸ್‍ನಲ್ಲಿ ಸುಟ್ಟು ಬೂದಿಯಾಗಲಿದೆ. ‘ಪಾಪಾ ಕಿ ಪರಿ’ ಏಕೆಂದರೆ ಅಪ್ಪ ತನ್ನ ‘ರೋಮ್‍ಕಾಮ್ ಬಿಂಬೋ’ ನಟಿಸುತ್ತಾಳೆ ಎಂದು ಸಾಬೀತು ಮಾಡಲು ಬಯಸುತ್ತಾರೆ. ಅದಕ್ಕೆ ಈ ಸಿನಿಮಾದ ದೊಡ್ಡ ನ್ಯೂನತೆಯೆಂದರೆ ಪಾತ್ರಕ್ಕೆ ಸರಿಯಾದ ಕಾಸ್ಟಿಂಗ್ ಮಾಡದಿರುವುದು. ಇವರೆಲ್ಲ ಎಂದು ಬದಲಾಗುವುದಿಲ್ಲ ಸ್ಟಾರ್​ಡಮ್ ಎಂದು ಭಜನೆ ಮಾಡುತ್ತಾರೆ. ಬಾಲಿವುಡ್​ ಸಿನಿಮಾ ಈಗ ದೊಡ್ಡ ಮಾಫಿಯಾ ಆಗಿದೆ ಎಂದು ಕಂಗನಾ ಕಿಡಿಕಾರಿದ್ದಾರೆ.

ಇದನ್ನೂ ಓದಿ: Gangubai Kathiawadi ಚಿತ್ರತಂಡದ ಮೇಲೆ ಗುಡುಗಿದ ಗಂಗೂಬಾಯಿ ಪುತ್ರ

ಇವ್ರಿಂದ ಎಲ್ಲರಿಗೂ ತೊಂದರೆ ಎಂದು ಅಸಮಾಧಾನ

‘ಮೂವಿ ಮಾಫಿಯಾ’ದ ಪ್ರಭಾವದಿಂದ ದೊಡ್ಡ ಸಿನಿಮಾಗಳ ನಿರ್ಮಾಪಕರು ಸಹ ತಮ್ಮ ಸಿನಿಮಾಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಮಾಡಿದೆ ಎಂದು ಅಸಮಾಧಾನ ಹೊರಹಾಕಿದರು. ಕರಣ್​ ಜೋಹರ್​​ ಅವರನ್ನು ಬಾಲಿವುಡ್ ಮಾಫಿಯಾ ಪಾಪಾ ಎಂದು ಕರೆದು, ಇವರ ಮನೋರಂಜನೆಯನ್ನು ನಿಲ್ಲಿಸುವಂತೆ ಜನರಲ್ಲಿ ಕೇಳಿಕೊಂಡಿದ್ದಾರೆ. ಈ ಶುಕ್ರವಾರ ಬಿಡುಗಡೆಯಾಗುವ ಸಿನಿಮಾದಲ್ಲಿ ದೊಡ್ಡ ನಾಯಕ ಮತ್ತು ಶ್ರೇಷ್ಠ ನಿರ್ದೇಶಕರೂ ಸಹ ಅವನ ಮಾಫಿಯಾಗೆ ಹೊಸ ಬಲಿಪಶುಗಳಾಗಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಪ್ರಾಣಿಪ್ರಿಯನಿಗೆ ಪಾಗಲ್​ ಅಂದವನಿಗೆ ನಟಿ ಕ್ಲಾಸ್​​.. `ಹುಚ್ಚ’ ಅವರಲ್ಲ ನೀನು ಅಂದಿದ್ಯಾಕೆ ಅನುಷ್ಕಾ?

ಚಿತ್ರತಂಡದ ಮೇಲೆ ಗುಡುಗಿದ ಗಂಗೂಬಾಯಿ ಪುತ್ರ

ಗಂಗೂಬಾಯಿ ಅವರ ದತ್ತು ಪುತ್ರ ಎಂದು ಹೇಳಿಕೊಂಡಿರುವ ಬಾಬು ರಾವ್‍ಜೀ ಶಾ ಮತ್ತು ಮೊಮ್ಮಗಳು ಭಾರತಿ ಚಿತ್ರದ ಟ್ರೇಲರ್ ನೋಡಿ ಕೋಪಕೊಂಡಿದ್ದಾರೆ.“ನನ್ನ ತಾಯಿಯನ್ನು ವೇಶ್ಯೆಯನ್ನಾಗಿ ಪರಿವರ್ತಿಸಲಾಗಿದೆ. ಜನರು ಈಗ ನನ್ನ ತಾಯಿಯ ಬಗ್ಗೆ  ಇಲ್ಲ ಸಲ್ಲದ ಮಾತುಗಳನ್ನು ಆಡತೊಡಗಿದ್ದಾರೆ” ಎಂದು ಬಾಬು ರಾವ್‍ಜೀ ಶಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. 2020ರಲ್ಲಿ, ಗಂಗೂಬಾಯಿ ಅವರ ಕುರಿತು ಸಿನಿಮಾ ಮಾಡಲಾಗುತ್ತಿದೆ ಎಂಬುವುದು ಗೊತ್ತಾದ ದಿನದಿಂದ, ಆಕೆಯ ಕುಟುಂಬ ತಲೆ ಮರೆಸಿಕೊಳ್ಳುತ್ತಾ ಮತ್ತು ಮನೆಗಳನ್ನು ಬದಲಾಯಿಸುತ್ತಾ ಬಂದಿದೆ ಎಂದು ಆ ಕುಟುಂಬದ ವಕೀಲ ನರೇಂದ್ರ ಹೇಳಿದ್ದಾರೆ.
Published by:Vasudeva M
First published: