Gehraiyaan Movie: ದೀಪಿಕಾ ಸಿನಿಮಾ ಕೆಟ್ಟದಾಗಿದೆ ಎಂದ ಕಂಗನಾ, ಮೈ ತೋರಿಸಿದ್ರೂ ಸಿನಿಮಾ ಬಚಾವಾಗ್ಲಿಲ್ಲ ಎಂದ ಕ್ವೀನ್

ದೀಪಿಕಾ ಬೋಲ್ಡ್ ಆಗಿ ನಟಿಸಿದ ಗೆಹರಿಯಾ ಸಿನಿಮಾ ಕಂಗನಾ ವೀಕ್ಷಿಸಿದ್ದಾರೆ. ಹಾಗೆಯೇ ಸಿನಿಮಾ ಕೆಟ್ಟದಾಗಿದೆ ಎಂದು ಹೇಳಿಬಿಟ್ಟಿದ್ದಾರೆ.

ಕಂಗನಾ ರಣಾವತ್

ಕಂಗನಾ ರಣಾವತ್

  • Share this:
ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಇತ್ತೀಚೆಗೆ ಪ್ರೆಸ್​ಮೀಟ್​ನಲ್ಲಿ ದೀಪಿಕಾಗಳ ಸಿನಿಮಾ ಪ್ರಚಾರ ಮಾಡೋಕೆ ಬಂದಿಲ್ಲ ನಾನು ಎಂದು ರಿಪೋರ್ಟರ್ ಮೇಲೆ ಗರಂ ಆಗಿದ್ದು ಎಲ್ಲರಿಗೂ ಗೊತ್ತು. ಇದೀಗ ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ಲೇಟೆಸ್ಟ್ ರಿಲೀಸ್ ಗೆಹರಿಯಾ(Gehraiyaan) ಬಗ್ಗೆ ವಿಮರ್ಶೆ ತಿಳಿಸಿದ್ದಾರೆ. ಹೌದು. ಕ್ವೀನ್ ಕಂಗನಾ (Queen) ಆಗಲೇ ಸಿನಿಮಾ ನೋಡಿ ತಮ್ಮ ರಿವ್ಯೂ (Review) ಕೂಡಾ ಕೊಟ್ಟಾಗಿದೆ. ಆಧುನಿಕ ಸಂಬಂಧಗಳ ಒಳ ಹಾಗು ಹೊರ ಹರಿವಿನ ಸ್ಪಷ್ಟ ಚಿತ್ರಣವನ್ನು ನೀಡುವ ಪ್ರಯತ್ನ ಮಾಡಿರುವ ಗೆಹರಿಯಾ ಬಗ್ಗೆ ಕಂಗನಾ ಏನೆಂದು ಹೇಳಿದ್ದಾರೆ ? ಡಿಪ್ಪಿ ಸಿನಿಮಾವನ್ನು ಕಂಗನಾ ಮೆಚ್ಚಿಕೊಂಡ್ರಾ ? ನಟಿ ಸಿನಿಮಾ ಕುರಿತು ಹೇಳಿದ್ದೇನು ?

ದೀಪಿಕಾ ಪಡುಕೋಣೆ ಅವರ ಕುರಿತು ಪ್ರಶ್ನೆ ಕೇಳಿದ ಕುರಿತು ಪತ್ರಕರ್ತರ ಮೇಲೆ ವಾಗ್ದಾಳಿ ನಡೆಸಿದ ದಿನಗಳ ನಂತರ, ಕಂಗನಾ ರಣಾವತ್ ಈಗ ನಟಿಯ ಲೇಟೆಸ್ಟ್ ರಿಲೀಸ್ ಗೆಹರಿಯಾ ಬಗ್ಗೆ ಬರೆದಿದ್ದಾರೆ. ಸಿನಿಮಾ ಶುಕ್ರವಾರ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ (Amazon Prime) ಬಿಡುಗಡೆಯಾಗಿದೆ.

ಸ್ಟೋರಿಯಲ್ಲಿ ಹಳೆ ಸಿನಿಮಾ ಹಾಡು

ಶನಿವಾರ ರಾತ್ರಿ ಕಂಗನಾ 1965 ರ ಸಿನಿಮಾ, ಹಿಮಾಲಯ ಕಿ ಗಾಡ್ ಮೇ ನಿಂದ ಮನೋಜ್ ಕುಮಾರ್ ಮತ್ತು ಮಾಲಾ ಸಿನ್ಹಾ ಅವರ ಜನಪ್ರಿಯ ಹಾಡು ಚಾಂದ್ ಸಿ ಮೆಹಬೂಬಾ (Chand Ki Mehabooba) ಹೋ ಮೇರಿಯನ್ನು ತಮ್ಮ Instagram ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಈ ಹಾಡಿನಲ್ಲಿ ಮನೋಜ್ ಕುಮಾರ್ ನದಿಯ ದಡದಲ್ಲಿ ಮತ್ತು ಪಕ್ಕದ ಪ್ರದೇಶಗಳಲ್ಲಿ ಹಾಡಿದ್ದಾರೆ. ಮಾಲಾ ಲೆಹೆಂಗಾ ಧರಿಸಿಕೊಂಡು ನೃತ್ಯ ಮಾಡಿದ್ದಾರೆ. ಇದನ್ನು ಪ್ರಸಿದ್ಧ ಗಾಯಕ-ಸಂಯೋಜಕ ಮುಖೇಶ್ ಹಾಡಿದ್ದಾರೆ.

ಸಿನಿಮಾವನ್ನು ಕಸಕ್ಕೆ ಹೋಲಿಸಿದ ನಟಿ

ಗೆಹ್ರೈಯಾನ್‌ಗೆ ಬಗ್ಗೆ ಕಂಗನಾ ಕಂಗನಾ, ನಾನಿನ್ನೂ ಸಹಸ್ರಮಾನದವಳು. ಆದರೆ ನಾನು ಈ ರೀತಿಯ ಪ್ರಣಯವನ್ನು ಗುರುತಿಸಿದ್ದೇನೆ. ಅರ್ಥಮಾಡಿಕೊಂಡಿದ್ದೇನೆ. ಸಾವಿರವರ್ಷ ಹಳೆಯದು/ಹೊಸಯುಗ/ನಗರದ ಸಿನಿಮಾ ಎಂಬ ಹೆಸರಿನಲ್ಲಿ ಕಸವನ್ನು ಮಾರಾಟ ಮಾಡಬೇಡಿ ಪ್ಲೀಸ್.. ದೇಹ ಪ್ರದರ್ಶನ(Skin Show) ಅಥವಾ ಅಶ್ಲೀಲತೆ ಕೂಡಾ ಕೆಟ್ಟ ಸಿನಿಮಾಗಳನ್ನು ಉಳಿಸಲು ಸಾಧ್ಯವಿಲ್ಲ. ಇದು ಸತ್ಯ, ಗೆಹರಿಯಾ ಕುರಿತ ಮಾತಲ್ಲ ಎಂದಿದ್ದಾರೆ.

ಇದನ್ನೂ ಓದಿ:  ದೀಪಿಕಾ ಹೆಸರು ಹೇಳಿದ ಪತ್ರಕರ್ತನ ಜೊತೆ ಕಂಗನಾ ಜಗಳ, ಆಗಿದ್ದೇನು ?

ಲಾಕಪ್ ಪ್ರಮೋಷನ್​ನಲ್ಲಿ ಕಿರಿಕ್

ಈ ತಿಂಗಳ ಆರಂಭದಲ್ಲಿ, ಕಂಗನಾ ತಮ್ಮ ಹೊಸ ರಿಯಾಲಿಟಿ ಶೋ, ಲಾಕ್ ಅಪ್ ಈವೆಂಟ್‌ನಲ್ಲಿ ಮಾತನಾಡುವ ವೇಳೆ ದೀಪಿಕಾ ಕುರಿತು ಪ್ರಶ್ನಿಸಿದ್ದಕ್ಕೆ ಸಿಟ್ಟಾಗಿದ್ದರು. ನಂತರ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ದೀಪಿಕಾ ಅವರ ಗೆಹ್ರೈಯಾನ್ ಪ್ರಚಾರದ ಸಮಯದಲ್ಲಿ ದೀಪಿಕಾ ಫ್ಯಾಷನ್(Fashion) ಉಡುಪುಗಳನ್ನು ಧರಿಸಿದ್ದು ನೋಡಿದ್ದೀರಿ. ಸಖತ್ ಟ್ರೆಂಡಿಯಾಗಿದ್ದವು ನಟಿ ಡ್ರೆಸ್. ಆದರೆ ದೀಪಿಕಾ ಅವರ ಉಡುಪುಗಳ 'ಹೆಮ್‌ಲೈನ್‌ಗಳು ಹಾಗೂ ನೆಕ್‌ಲೈನ್‌ಗಳಿಗಾಗಿ' ಇನ್ಫ್ಲುಯೆನ್ಸರ್ ಒಬ್ಬರಿಂದ ತೀವ್ರವಾಗಿ ಟೀಕೆಗೊಳಗಾದರು.

ಕೂತ್ಕೊಳಪ್ಪಾ ಎಂದು ಗದರಿದ ಕಂಗನಾ

ಈ ಬಗ್ಗೆ ಪತ್ರಕರ್ತ ಕಂಗನಾ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಗರಂ ಆಗಿದ್ದಾರೆ ಕಂಗನಾ. ‘ಇಲ್ಲಿ ನೋಡಿ, ತಮ್ಮನ್ನು ತಾವು ರಕ್ಷಿಸಿಕೊಳ್ಳಲಾಗದವರನ್ನು ರಕ್ಷಿಸಲು ನಾನು ಇಲ್ಲಿದ್ದೇನೆ. ಹೌದಲ್ವಾ? ಅವರು ಅವರನ್ನು ಅವರು ರಕ್ಷಿಸಿಕೊಳ್ಳಬಹುದು. ಆಕೆಗೆ ಸವಲತ್ತು, ವೇದಿಕೆ ಇದೆ. ನಾನು ಅವಳ ಸಿನಿಮಾವನ್ನು ಇಲ್ಲಿ ಪ್ರಚಾರ ಮಾಡಲು ಸಾಧ್ಯವಿಲ್ಲ. ಕೂತ್ಕೊಳಪ್ಪಾ ಎಂದು ಕಂಗನಾ ಗುಡುಗಿದ್ದಾರೆ.

ಇದನ್ನೂ ಓದಿ: Kangana Ranaut: ಪ್ರೀತಿಯಲ್ಲಿ ಬಿದ್ದಿದ್ದಾರಂತೆ ಕಂಗನಾ, 5 ವರ್ಷದಲ್ಲಿ ಮದುವೆ-ಮಕ್ಕಳು ರೆಡಿ!

ದೀಪಿಕಾ, ಅನನ್ಯಾ ಪಾಂಡೆ, ಸಿದ್ಧಾಂತ್ ಚತುರ್ವೇದಿ ಮತ್ತು ಧೈರ್ಯ ಕರ್ವಾ ಅಭಿನಯದ ಗೆಹ್ರೈಯಾನ್ ಫೆಬ್ರವರಿ 11 ರಂದು ಅಮೆಜಾನ್ ಪ್ರೈಮ್(Amazon Prime) ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಅಕ್ರಮ ಸಂಬಂಧ, ಪ್ರೇಮ, ಪ್ರಣಯದ ಸುತ್ತ ತಿರುಗುವ ಸಿನಿಮಾದಲ್ಲಿ ದೀಪಿಕಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
Published by:Divya D
First published: