ನೆಟ್​ಫ್ಲಿಕ್ಸ್​, ಅಮೆಜಾನ್​ಗೆ ಮಾರಾಟವಾಯ್ತು ಕಂಗನಾ ರಣಾವತ್​ ‘ತಲೈವಿ‘ ಸಿನಿಮಾ: ಹಾಗಿದ್ದರೆ ಥಿಯೇಟರ್​ಗೆ?

Thalaivi: ‘ತಲೈವಿ‘ ಸಿನಿಮಾ ಒಟಿಟಿ ಫ್ಲಾಟ್​​ಫಾರ್ಮ್​ನಲ್ಲಿ ಮಾರಾಟವಾಗಿದೆ. ವಿಶೇಷವೆಂದರೆ, ನೆಟ್​ಫ್ಲಿಕ್ಸ್ ಮತ್ತು ಅಮೆಜಾನ್​​ ಈ ಸಿನಿಮಾವನ್ನು ಕೊಂಡುಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ಸಿನಿಮಾ ಡಿಜಿಟಲ್​ ಫ್ಲಾರ್ಟ್​ಫಾರ್ಮ್​ನಲ್ಲಿ ಮಾರಾಟ ಮಾರಾಟವಾಗುತ್ತದೆ. ಆದರೆ ತಲೈವಿ ಮಾತ್ರ ಎರಡು ಒಟಿಟಿ ಫ್ಲಾರ್ಟ್​ಫಾರ್ಮ್​ನಲ್ಲಿ ಮಾರಾಟವಾಗಿದೆ.

 ಜಯಲಲಿತಾ- ಕಂಗನಾ ರಣಾವತ್​

ಜಯಲಲಿತಾ- ಕಂಗನಾ ರಣಾವತ್​

 • Share this:
  ಬಾಲಿವುಡ್​ ನಟಿ ಕಂಗನಾ ರಣಾವತ್​ ‘ತಲೈವಿ‘ ಸಿನಿಮಾದಲ್ಲಿ ನಟಿಸಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಕುರಿತಾಗಿ ಚಿತ್ರಿಸಿರುವ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಶೂಟಿಂಗ್​ ಮುಗಿದಿದ್ದು, ಇಷ್ಟರಲ್ಲಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾ ಲಾಕ್​​ಡೌನ್​ನಿಂದಾಗಿ ಈ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ.

  ಈ ಸಮಯದಲ್ಲಿ ‘ತಲೈವಿ‘ ಸಿನಿಮಾ ಒಟಿಟಿ ಫ್ಲಾಟ್​​ಫಾರ್ಮ್​ನಲ್ಲಿ ಮಾರಾಟವಾಗಿದೆ. ವಿಶೇಷವೆಂದರೆ, ನೆಟ್​ಫ್ಲಿಕ್ಸ್ ಮತ್ತು ಅಮೆಜಾನ್​​ ಈ ಸಿನಿಮಾವನ್ನು ಕೊಂಡುಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ಸಿನಿಮಾ ಡಿಜಿಟಲ್​ ಫ್ಲಾರ್ಟ್​ಫಾರ್ಮ್​ನಲ್ಲಿ ಮಾರಾಟ ಮಾರಾಟವಾಗುತ್ತದೆ. ಆದರೆ ತಲೈವಿ ಮಾತ್ರ ಎರಡು ಒಟಿಟಿ ಫ್ಲಾರ್ಟ್​ಫಾರ್ಮ್​ನಲ್ಲಿ ಮಾರಾಟವಾಗಿದೆ.

  ಕಂಗಾನ ಅವರು ಜಯಲಲಿತಾ ಪ್ರಾತ್ರದಲ್ಲಿ ಕಾಣಿಸಿಕೊಂಡಿರುವ ‘ತಲೈವಿ‘ ದ್ವಿಭಾಷಾ ಸಿನಿಮಾವಾಗಿದೆ. ಹಿಂದಿ ಮತ್ತು ತಮಿಳಿನಲ್ಲಿ ಈ ಸಿನಿಮಾವನ್ನು ಏಕಕಾಲಕ್ಕೆ ಚಿತ್ರತಂಡ ಬಿಡುಗಡೆ ಮಾಡಲು ಪ್ಲಾನ್​​ ಹಾಕಿಕೊಂಡಿದೆ. ಅದರಂತೆ ಒಂದೊಂದು ಅವತರಣಿಕೆ ಒಂದೊಂದು ಒಟಿಟಿಗೆ ಮಾರಾಟವಾಗಿದೆ.

  ಇನ್ನು ‘ತಲೈವಿ‘ ಹಿಂದಿ ಅವತರಣಿಗೆ ನೆಟ್​​ಫ್ಲಿಕ್ಸ್​ಗೆ ಮಾರಾಟವಾದರೆ. ತಮಿಳು ಭಾಷೆಯಲ್ಲಿ ಮೂಡಿಬಂದ ‘ತಲೈವಿ‘ ಅಮೆಜಾನ್​ನಲ್ಲಿ ಮಾರಾಟವಾಗಿದೆ. ಸಿನಿಮಾ ಚಿತ್ರಮಂದಿರದಲ್ಲಿ ತೆರೆಕಂಡ ನಂತರ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಹಾಗಾಗಿ ಇವೆರಡು ಒಟಿಟಿ ಫ್ಲಾರ್ಟ್​ಫಾರ್ಮ್​ ಸುಮಾರು 55 ಕೋಟಿಗೆ ಈ ಸಿನಿಮಾವನ್ನು ಖರೀದಿಸಿದೆ.

  ಈ ಬಗ್ಗೆ ನಟಿ ಕಂಗನಾ ಮಾತನಾಡಿ ‘ ಸಿನಿಮಾ ಒಟಿಟಿ ಫ್ಲಾಟ್​​​ಫಾರ್ಮ್​ನಲ್ಲಿ ಮಾರಾಟವಾಯ್ತು ಎಂಬ ಕಾರಣಕ್ಕೆ ಬರೀ ಡಿಜಿಟಲ್​ ವೇದಿಕೆಯಲ್ಲಿ ಪ್ರಸಾರ ಕಾಣಲಿದೆ ಎಂದು ಅರ್ಥವಲ್ಲ.  ಏಕೆಂದರೆ ಇದು ದೊಡ್ಡ ಬಜೆಟ್​ ಸಿನಿಮಾ ಡಿಜಿಟಲ್​ ಹಕ್ಕನ್ನು ನಂಬಿಕೊಂಡು ಸಿನಿಮಾ ಬಿಡುಗಡೆ ಮಾಡಲು ಆಗುವುದಿಲ್ಲ. ಮೊದಲಿಗೆ ಥಿಯೇಟರ್​​ನಲ್ಲಿ ಬಿಡುಗಡೆಯಾಗಿ ನಂತರ ಒಟಿಟಿಯಲ್ಲಿ ಚಿತ್ರವನ್ನು ವೀಕ್ಷಿಸಬಹುದು‘ಎಂದು ಹೇಳಿದ್ದಾರೆ.

  ನತಾಶಗೆ ಇಟಲಿ ಮೂಲದ ದುಬಾರಿ ಬ್ಯಾಗ್ ಗಿಫ್ಟ್​​ ಕೊಟ್ಟ ಹಾರ್ದಿಕ್​​​ ಪಾಂಡ್ಯ!
  First published: