• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Kangana Ranaut: ಆಸ್ಕರ್​​ಗೆ ಹೋಗುವ ಮುನ್ನ ದೇವರಿಗೆ ಕೈ ಮುಗಿದ ರಾಮ್ ಚರಣ್, ಫೋಟೋ ಬಗ್ಗೆ ಕಂಗನಾ ಹೇಳಿದ್ದೇನು?

Kangana Ranaut: ಆಸ್ಕರ್​​ಗೆ ಹೋಗುವ ಮುನ್ನ ದೇವರಿಗೆ ಕೈ ಮುಗಿದ ರಾಮ್ ಚರಣ್, ಫೋಟೋ ಬಗ್ಗೆ ಕಂಗನಾ ಹೇಳಿದ್ದೇನು?

ನಟಿ ಕಂಗನಾ

ನಟಿ ಕಂಗನಾ

ತೆಲುಗು ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಅವರು ದೇವರ ಮುಂದೆ ಕೈ ಜೋಡಿಸಿಕೊಂಡು ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿರುವ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ನಟಿ ಕಂಗನಾ ಪ್ರತಿಕ್ರಿಯಿಸಿದ್ದಾರೆ.

  • Share this:

ಸಾಮಾನ್ಯವಾಗಿ ಈ ಚಿತ್ರರಂಗದಲ್ಲಿ (Film Industry) ಇರುವ ಕೆಲವರಿಗೆ ದೇವರ (God) ಮೇಲೆ ತುಂಬಾನೇ ನಂಬಿಕೆ ಮತ್ತು ಭಕ್ತಿ ಇರುತ್ತದೆ. ಏಕೆಂದರೆ ಅವರ ಕಲೆಯ ಜೀವನ ನಿಂತಿರುವುದೇ ಅಭಿಮಾನಿಗಳ ಪ್ರೀತಿಯಿಂದ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಒಂದು ಸಿನಿಮಾವನ್ನು ಎಷ್ಟೋ ದುಡ್ಡು ಹಾಕಿ ತುಂಬಾನೇ ಪ್ರಯತ್ನಗಳಿಂದ ಮಾಡಿ ಮುಗಿಸುತ್ತಾರೆ. ನಂತರ ನಟ-ನಟಿಯರು, ನಿರ್ದೇಶಕ ಮತ್ತು ನಿರ್ಮಾಪಕರು (Director And Producer) ಆ ಸಿನಿಮಾವನ್ನು ಜನರು ನೋಡಿ ಇಷ್ಟಪಡಲಿ, ಸಿನಿಮಾ ಚೆನ್ನಾಗಿ ದುಡ್ಡು ಮಾಡಲಿ ಮತ್ತು ಒಳ್ಳೆಯ ಹೆಸರು ಪಡೆಯಲಿ ಅಂತ ಅನೇಕ ದೇವರುಗಳಲ್ಲಿ ಭಕ್ತಿಯಿಂದ ಬೇಡಿಕೊಳ್ಳುವುದು ಮತ್ತು ಪೂಜೆ ಮಾಡಿಸುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ.


ಇದನ್ನೆಲ್ಲಾ ನಾವು ಈಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಆಶ್ಚರ್ಯವಾಗಬಹುದು ಅಲ್ಲವೇ? ಮೊನ್ನೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭ ನಡೆದಿದ್ದು, ಅದರಲ್ಲಿ ತೆಲುಗು ಚಿತ್ರ ಆರ್‌ಆರ್‌ಆರ್ ನಲ್ಲಿರುವ ‘ನಾಟು ನಾಟು’ ಹಾಡಿಗೆ ಎಂ ಎಂ ಕೀರವಾಣಿ ಅವರಿಗೆ ಆಸ್ಕರ್ ಪ್ರಶಸ್ತಿ ಲಭಿಸಿದ್ದು ಎಲ್ಲವೂ ನಮಗೆ ಗೊತ್ತಿದೆ.


ಆದರೆ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಹೋಗುವ ಮೊದಲು ಆ ಚಿತ್ರದ ನಟರು ಏನೆಲ್ಲಾ ಮಾಡಿದ್ರು ಅಂತ ಬಹುಶಃ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.


ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಹೋಗುವ ಮೊದಲು ದೇವರಿಗೆ ಕೈ ಮುಗಿದ ರಾಮ್ ಚರಣ್


ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ಅವರ ಮಗ ಮತ್ತು ನಟ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಅವರು ದೇವರ ಮುಂದೆ ಕೈ ಜೋಡಿಸಿಕೊಂಡು ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿರುವ ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ವೈರಲ್ ಆಗಿವೆ.


ಮತ್ತು ಈಗ, ಅವರ ಫೋಟೋಗಳನ್ನು ನೋಡಿದ ಅನೇಕರು ತಮ್ಮ ಕಾಮೆಂಟ್ ಗಳನ್ನು ಅದಕ್ಕೆ ಹಾಕುತ್ತಿದ್ದಾರೆ ಅಂತ ಹೇಳಬಹುದು. ಅದರಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್ ಸಹ ಅವರ ಫೋಟೋಗಳನ್ನು ನೋಡಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ ನೋಡಿ.


ಆಸ್ಕರ್ ಪ್ರಶಸ್ತಿ ನೀಡುವ ಸಮಾರಂಭದಲ್ಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ, ಚಿತ್ರದಲ್ಲಿ ನಟಿಸಿದ್ದ ನಟರಾದ ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಸೇರಿದಂತೆ ಆರ್‌ಆರ್‌ಆರ್ ಚಿತ್ರ ತಂಡದ ಅನೇಕರು ಭಾಗವಹಿಸಿದ್ದರು.


ಆಸ್ಕರ್ ಪ್ರಶಸ್ತಿ ಗೆದ್ದ ನಂತರ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ವೀಡಿಯೋ ಹಂಚಿಕೊಂಡಿರುವ ರಾಮ್


ಆಸ್ಕರ್ ಪ್ರಶಸ್ತಿ ಗೆದ್ದ ನಂತರ, ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಅವರು ರಾಮ, ಲಕ್ಷ್ಮಣ ಮತ್ತು ಹನುಮಾನ್ ಗೆ ಪ್ರಾರ್ಥನೆ ಸಲ್ಲಿಸುತ್ತಿರುವ ಮತ್ತು ಆಶೀರ್ವಾದ ಪಡೆಯುತ್ತಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.


ಈ ಕ್ಲಿಪ್ ನಲ್ಲಿ "ನಾನು ಎಲ್ಲಿಗೆ ಹೋದರೂ, ನನ್ನ ಹೆಂಡತಿ ಮತ್ತು ನಾನು ಸಣ್ಣ ಪೊರ್ಟೆಬಲ್ ದೇವಾಲಯವನ್ನು ಸ್ಥಾಪಿಸುತ್ತೇವೆ, ಅದು ನಮ್ಮನ್ನು ನಮ್ಮ ಶಕ್ತಿ ಮತ್ತು ಭಾರತದೊಂದಿಗೆ ಸಂಪರ್ಕಿಸುತ್ತದೆ" ಎಂದು ಅವರು ಹೇಳುವುದನ್ನು ನೋಡಬಹುದು.


ಇವರ ಫೋಟೋಗಳಿಗೆ ಏನಂತ ಪ್ರತಿಕ್ರಿಯಿಸಿದ್ರು ಕಂಗನಾ?


ಕಂಗನಾ ರನೌತ್ ಅವರು ರಾಮ್ ಚರಣ್ ಅವರ ಈ ಫೋಟೋಗಳನ್ನು ನೋಡಿ ಅವುಗಳಿಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲಿ ಅವರು ಪೋರ್ಟಬಲ್ ದೇವಾಲಯದ ಎದುರು ನಿಂತು ನಮಸ್ಕರಿಸುವುದನ್ನು ಕಾಣಬಹುದು.
ಕಂಗನಾ ರನೌತ್ ತಮ್ಮ ಇನ್ಸ್ಟಾ ಸ್ಟೋರಿಗಳಲ್ಲಿ ರಾಮ್ ಚರಣ್ ಮತ್ತು ಉಪಾಸನಾ ಅವರ ವೈರಲ್ ಫೋಟೋಗಳನ್ನು ನೋಡಿದರು. "ಇದು ದಕ್ಷಿಣ ಭಾರತದಲ್ಲಿ ತುಂಬಾ ಸಾಮಾನ್ಯವಾಗಿದೆ, ಇಂದು ನಾನು ರಾಘವ್ ಲಾರೆನ್ಸ್ ಸರ್ (ಚಂದ್ರಮುಖಿ 2 ಹೀರೋ) ವ್ಯಾನ್ ಗೆ ಹೋಗಿದ್ದೆ ಮತ್ತು ಅಲ್ಲಿ ಹೂವುಗಳು ಮತ್ತು ಇತರ ಪೂಜಾ ಸಾಮಾಗ್ರಿಗಳೊಂದಿಗೆ ಸ್ಥಾಪಿಸಲಾದ ಸಣ್ಣ ಕೃಷ್ಣ ದೇವಾಲಯವನ್ನು ನೋಡಿ ನನಗೆ ತುಂಬಾನೇ ಆಶ್ಚರ್ಯವಾಯಿತು... ಹರೇ ಕೃಷ್ಣ" ಎಂದು ಹೇಳಿದರು.

Published by:ಪಾವನ ಎಚ್ ಎಸ್
First published: