Thalaivii: ಬಾಲಿವುಡ್ ಮಾಫಿಯಾ ವಿರುದ್ಧ ಮತ್ತೆ ಧ್ವನಿ ಎತ್ತಿದ ನಟಿ Kangana Ranaut..!

ದೇಶದ ಹಲವು ಭಾಗಗಳ ಚಿತ್ರಮಂದಿರಗಳಲ್ಲಿ ತಲೈವಿ ಚಲನಚಿತ್ರ ಬಿಡುಗಡೆಯಾಗಿದ್ದರೂ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದ ಕಾರಣಕ್ಕೆ ಮುಂಬೈ ಚಿತ್ರಮಂದಿರಗಳಲ್ಲಿ ತಲೈವಿ ಪ್ರದರ್ಶನಗೊಳ್ಳಲಿಲ್ಲ. ಈಗ, ಕಂಗನಾ ಹಿಂದಿ ಚಿತ್ರೋದ್ಯಮದ ಮುಂದೆ ಬಂದು ಚಿತ್ರಕ್ಕೆ ಬೆಂಬಲ ನೀಡಬೇಕೆಂದಿದ್ದಾರೆ.

ನಟ ಕಂಗನಾ ರನೌತ್​

ನಟ ಕಂಗನಾ ರನೌತ್​

  • Share this:
ಬಾಲಿವುಡ್ ನಟಿ ಕಂಗನಾ ರನೌತ್ (Kangana Ranaut) ಅಭಿನಯದ ತಲೈವಿ (Thalaivii) ಸಿನಿಮಾ ಸೆಪ್ಟೆಂಬರ್ 10ರಂದು ಬಿಡುಗಡೆಯಾಗಿದೆ. ಕಂಗನಾ ಅಭಿನಯಕ್ಕೆ, ಉತ್ತಮ ಸಿನಿಮಾ ನೀಡಿದ ತಂಡಕ್ಕೆ ಶುಭಾಶಯ, ಹೊಗಳಿಕೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಸಿನಿಮಾ ಇದೀಗ ನೆಟ್‍ಫ್ಲಿಕ್ಸ್‌ನಲ್ಲೂ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾಗೆ ಪ್ರತಿಯೊಬ್ಬರು ತೋರುತ್ತಿರುವ ಅಗಾಧವಾದ ಪ್ರೀತಿ, ಬೆಂಬಲಕ್ಕೆ ಕಂಗನಾ ರನೌತ್ ಅವರು ಸಿನಿಮಾ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್​ ಮಾಡುವ ಮೂಲಕ  ಧನ್ಯವಾಗಿ ಹೇಳಿದ್ದಾರೆ ಕ್ವೀನ್​.

ಯಾವುದೇ ಒಂದು ಚಿತ್ರವು ಭಾವೋದ್ರಿಕ್ತವಾಗಿ ಮತ್ತು ಸರ್ವಾನುಮತದಿಂದ ಪ್ರೀತಿಸಲ್ಪಡುವುದು ಬಹಳ ವಿರಳ. ಆದರೆ ತಲೈವಿ ಇದಕ್ಕೆ ವಿರುದ್ಧವಾಗಿದ್ದು, ಪ್ರತಿಯೊಬ್ಬರು ಭಾವನಾತ್ಮಕವಾಗಿ ಸರ್ವಾನುಮತದಿಂದ ಇಷ್ಟಪಡುತ್ತಿದ್ದಾರೆ. ತಲೈವಿ ಸಿನಿಮಾ ಮೂಲಕ ಡಾ. ಜೆ. ಜಯಲಲಿತಾ ಕತೆಯನ್ನು ತಿಳಿದುಕೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ. ಹಾಗೆಯೇ, ನನ್ನ ಸಿನಿಮಾದ ಪಯಣದಲ್ಲಿ ಸದಾ ಹೊಳೆಯುವ ವಜ್ರದಂತಹ ಚಿತ್ರವನ್ನು ಮಾಡಲು ಅನುವು ಮಾಡಿಕೊಟ್ಟ ನನ್ನ ತಂಡಕ್ಕೆ ದೊಡ್ಡ ಧನ್ಯವಾದಗಳು. #ಕೃತಜ್ಞತೆ ಎಂದು ತಮ್ಮ ಇನ್​ಸ್ಟಾ ಸ್ಟೋರೀಸ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ಧನ್ಯವಾದ ಹೇಳಿದ್ದಾರೆ.


ದೇಶದ ಹಲವು ಭಾಗಗಳ ಚಿತ್ರಮಂದಿರಗಳಲ್ಲಿ ತಲೈವಿ ಚಲನಚಿತ್ರ ಬಿಡುಗಡೆಯಾಗಿದ್ದರೂ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದ ಕಾರಣಕ್ಕೆ ಮುಂಬೈ ಚಿತ್ರಮಂದಿರಗಳಲ್ಲಿ ತಲೈವಿ ಪ್ರದರ್ಶನಗೊಳ್ಳಲಿಲ್ಲ. ಈಗ, ಕಂಗನಾ ಹಿಂದಿ ಚಿತ್ರೋದ್ಯಮದ ಮುಂದೆ ಬಂದು ಚಿತ್ರಕ್ಕೆ ಬೆಂಬಲ ನೀಡಬೇಕೆಂದಿದ್ದಾರೆ.

ಬಾಲಿವುಡ್ ಮಾಫಿಯಾ ಸೇರಿದಂತೆ ರಾಜಕೀಯ ಹಾಗೂ ಸೈದ್ಧಾಂತಿಕ ಅಭಿಪ್ರಾಯಗಳನ್ನು ಹೊಂದಿರುವವರೆಲ್ಲರೂ ಎಲ್ಲವನ್ನೂ ಬದಿಗಿಟ್ಟು ನಿಜವಾದ ಕಲೆಗೆ ಬಾಲಿವುಡ್ ಪ್ರೋತ್ಸಾಹ ನೀಡುವುದು ಕಷ್ಟಕರ ಸಂಗತಿಯೇನಲ್ಲ ಎಂಬುದು ನನ್ನ ಅಭಿಪ್ರಾಯ. ಮಾನವೀಯ ಭಾವನೆಗಳೂ ಕಲೆಯ ಗೆಲುವಿಗೆ ನೆರವಾಗಬಲ್ಲವು. ಕಲೆಗೆ ಜಯ ಸಿಗಲಿ ಎಂಬುದಾಗಿ ಕಂಗನಾ ರನೌತ್​ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ತಲೈವಿ ಸಿನಿಮಾಗಾಗಿ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದ Kangana Ranaut: ಇಲ್ಲಿದೆ Weight Loss ಜರ್ನಿ

ತಲೈವಿ ಸಿನಿಮಾ ತಮಿಳುನಾಡಿದ ಮಾಜಿ ಮುಖ್ಯಮಂತ್ರಿ ದಿವಂಗತ ಡಾ. ಜೆ ಜಯಲಲಿತಾ ಜೀವನದ ವಿವಿಧ ಘಟ್ಟಗಳ ಹೂರಣವಾಗಿದೆ. ಚಿಕ್ಕ ವಯಸ್ಸಿನಲ್ಲಿ ಸಿನಿಮಾ ನಟಿಯಾಗಿ ನಂತರ ರಾಜಕೀಯಕ್ಕೆ ಪ್ರವೇಶಿಸಿ ಕ್ರಾಂತಿಕಾರಿ ರಾಜಕಾರಣಿಯಾಗಿ ಹೊರಹೊಮ್ಮಿದ ಅವರ ಜೀವನದ ವಿವಿಧ ಮಜಲುಗಳನ್ನು ಒಳಗೊಂಡಿದೆ.

ಜಯಲಲಿತಾ ಪಾತ್ರದಲ್ಲಿ ಕಂಗನಾ ರನೌತ್ ಕಾಣಿಸಿಕೊಂಡಿದ್ದು, ಎಂ.ಜಿ ರಾಮಚಂದ್ರನ್ ಪಾತ್ರದಲ್ಲಿ ನಟ ಅರವಿಂದ ಸ್ವಾಮಿ ಕಾಣಿಸಿಕೊಂಡಿದ್ದಾರೆ. ತಲೈವಿ ಚಿತ್ರವನ್ನು ಎ.ಎಲ್.ವಿಜಯ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕತೆ ವಿಜಯೇಂದ್ರ ಪ್ರಸಾದ್, ಮದನ್ ಕರ್ಕಿ (ತಮಿಳು), ರಜತ್ ಅರೋರಾ (ಹಿಂದಿ) ಬರೆದಿದ್ದಾರೆ. ಚಿತ್ರದಲ್ಲಿ ನಾಸರ್, ಭಾಗ್ಯಶ್ರೀ, ರಾಜ್ ಅರ್ಜುನ್, ಮಧೂ, ಜಿಸ್ಶು ಸೇನ್‌ಗುಪ್ತಾ, ತಂಬಿ ರಾಮಯ್ಯ, ಶಮ್ನಾ ಕಾಸಿಂ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ನೆಟ್​ಫ್ಲಿಕ್ಸ್​ನಲ್ಲಿ ಇಂದಿನಿಂದ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ ಕಂಗನಾರ Thalaivii

ಕಂಗನಾ ಇತ್ತೀಚೆಗೆ 'ಧಾಕಡ್' ಚಿತ್ರದ ಚಿತ್ರೀಕರಣವನ್ನು ಪೂರೈಸಿದ್ದಾರೆ. ಈಗ ತಮ್ಮ ಮುಂದಿನ 'ತೇಜಸ್' ಚಿತ್ರೀಕರಣದಲ್ಲಿ ನಿರತರಾಗಿದ್ದು, ಈ ಸಿನಿಮಾದಲ್ಲಿ ಫೈಟರ್ ಪೈಲಟ್ ಆಗಿ ಬಣ್ಣ ಹಚ್ಚಿದ್ದಾರೆ. ಭಾರತೀಯ ವಾಯುಪಡೆಯು 2016ರಲ್ಲಿ ದೇಶದ ರಕ್ಷಣಾ ಪಡೆಗಳಲ್ಲಿ ಮಹಿಳೆಯರನ್ನು ಯುದ್ಧದ ವಿಮಾನಗಳಲ್ಲಿ ಪೈಲಟ್ ಆಗಿ ನೇಮಿಸಿತು. ಈ ಚಿತ್ರವು ಈ ಘಟನೆಯಿಂದ ಸ್ಫೂರ್ತಿ ಪಡೆದಿದೆ. 'ತೇಜಸ್' ಅನ್ನು ಸರ್ವೇಶ್ ಮೇವಾರ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವು ಆರ್‌ಎಸ್‍ವಿಪಿಯ ಎರಡನೇ ಚಿತ್ರವಾಗಿದ್ದು, ಇದು 2019ರ ಜನವರಿಯಲ್ಲಿ ಬಿಡುಗಡೆಯಾದ "ಉರಿ: ದಿ ಸರ್ಜಿಕಲ್ ಸ್ಟ್ರೈಕ್" ಚಿತ್ರದ ನಂತರ ಭಾರತೀಯ ಸೇನೆಗೆ ಗೌರವ ಸಲ್ಲಿಸುವುದಕ್ಕಾಗಿ ಈ ಚಿತ್ರ ನಿರ್ಮಾಣವಾಗುತ್ತಿದೆ.
Published by:Anitha E
First published: