ಸುಶಾಂತ್ ಸಿಂಗ್ ಅವರ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸಿಬಿಐ ಇದರ ತನಿಖೆ ನಡೆಸುತ್ತಿದೆ. ಇದೇ ವೇಳೆ ಸುಶಾಂತ್ ಸಾವಿಗೂ ಡ್ರಗ್ಸ್ ಮಾಫಿಯಾಗೂ ಲಿಂಕ್ ಇರಬಹುದು ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ನಟಿ ಕಂಗನಾ ಬಾಲಿವುಡ್ನಲ್ಲಿರುವ ಡ್ರಗ್ ಮಾಫಿಯಾ ಕುರಿತಂತೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ಕ್ವೀನ್ ಕಂಗನಾ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬಾಲಿವುಡ್ನಲ್ಲಿ ಡ್ರಗ್ಸ್ ಹೇಗೆಲ್ಲ ಬಳಕೆಯಾಗುತ್ತದೆ ಹಾಗೂ ಇದರಲ್ಲಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಇದ್ದಾರೆ ಎನ್ನುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಕಂಗನಾ ರನೋತ್ ಬಣ್ಣದ ಲೋಕಕ್ಕೆ ಕಾಲಿಟ್ಟಾಗ ಹೇಗೆ ಅವರಿಗೂ ಬಲವಂತವಾಗಿ ಡ್ರಗ್ಸ್ ನೀಡಲಾಗುತ್ತಿತ್ತು, ಅದರಿಂದ ಅವರು ಹೇಗೆ ಹೊರ ಬಂದರು. ಅವರಿಗೆ ಸಹಾಯ ಮಾಡಿದವರು ಯಾರೆಂದು ವಿವರವಾಗಿ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
![Sushant Sing Rajput Case Kanga Ranaut says its a victory against Bollywood Mafia]()
ಕಂಗನಾ
ನಂತರ, ಬಾಲಿವುಡ್ನ ಸ್ಟಾರ್ ನಟರೊಬ್ಬರು ಯಾವ ಮಟ್ಟಕ್ಕೆ ಮಾದಕ ವ್ಯಸನಿಯಾಗಿದ್ದರು. ಅದರಿಂದ ಅವರ ಪತ್ನಿ ಹೇಗೆ ದೂರಾದರೂ ಎಂದು ಕಂಗನಾ ಹೇಳಿದ್ದಾರೆ. ಯಾವ ನಟನ ಹೆಸರನ್ನೂ ನೇರವಾಗಿ ತೆಗೆದುಕೊಳ್ಳದೆ ಕಂಗನಾ ಕೇವಲ ನಡೆದ ಘಟನೆಗಳನ್ನು ಮಾತ್ರ ವಿವರಿಸಿದ್ದಾರೆ.
ಇದನ್ನೂ ಓದಿ: Jaggesh: ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ: ಕೆಲವರು ಮಾಡಿದ ತಪ್ಪಿಗೆ ಇಡೀ ಚಿತ್ರರಂಗವನ್ನು ದೂರಬೇಡಿ ಎಂದ ಜಗ್ಗೇಶ್
ತಾನು ಸಿನಿಮಾವೊಂದರ ಶೂಟಿಂಗ್ಗಾಗಿ ವಿದೇಶಕ್ಕೆ ಹೋಗಿದ್ದೆ. ಅಲ್ಲಿ ತನ್ನೊಂದಿಗೆ ನಟಿಸುತ್ತಿದ್ದ ನಾಯಕ ನಟ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ, ಜೊತೆಗೆ ಅಲ್ಲಿ ಅವರಿಗಿದ್ದ ವಿದೇಶಿ ಸ್ನೇಹಿತರು ಹೇಗೆಲ್ಲ ಅವುಗಳನ್ನು ನೀಡುತ್ತಿದ್ದರು ಎಂದು ವಿವರಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕೆ ಆ ನಟನ ಪತ್ನಿ ಸಹ ಬಂದಿದ್ದರು. ಅಲ್ಲಿ ನಟನಿಗಿದ್ದ ಡ್ರಗ್ಸ್ ಅಭ್ಯಾಸ ಹಾಗೂ ಅವರಿಗೆ ಬೇರೆ ಹೆಣ್ಣುಮಕ್ಕಳೊಂದಿಗೆ ಇದ್ದ ಸಂಬಂಧಗಳನ್ನೆಲ್ಲ ನೋಡಿ, ನೊಂದು ವಿಚ್ಛೇಧನ ಪಡೆದರು ಎಂದು ಆರೋಪಿಸಿದ್ದಾರೆ ನಟಿ.
ಆ ವಿಚ್ಛೇದಿತ ನಟನೊಂದಿಗೆ ಕೆಲ ಸಮಯ ತಾನು ಡೇಟಿಂಗ್ ಮಾಡಿದ್ದಾಗಿಯೂ, ನಂತರ ಆ ನಟ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ, ಜೈಲಿಗೆ ಕಳುಹಿಸುವ ಹುನ್ನಾರ ಮಾಡಿದ್ದ ಎಂದು ಹೇಳಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ನಡೆಯುವ ದೊಡ್ಡವರ ಪಾರ್ಟಿಗಳಲ್ಲಿ ಡ್ರಗ್ಸ್ ಬಳಕೆ ಕಾಮನ್ ಎಂದಿದ್ದಾರೆ ಕಂಗನಾ.
ಇದನ್ನೂ ಓದಿ: ಐದು ತಿಂಗಳ ನಂತರ ಓಣಂ ಹಬ್ಬಕ್ಕಾಗಿ ಅಮ್ಮನ ಮನೆಗೆ ಬಂದ ಮಲೈಕಾ ಅರೋರಾ..!
ಇನ್ನು ಡ್ರಗ್ಸ್ ವಿಷಯವಾಗಿ ಹೀಗೆ ಬಹಿರಂಗವಾಗಿ ಮಾತನಾಡುತ್ತಿರುವ ತನಗೆ ಭದ್ರತೆ ಬೇಕೆಂದು ಕಂಗನಾ ಮನವಿ ಮಾಡಿದ್ದಾರೆ. ಆದರೆ ತನಗೆ ಮುಂಬೈ ಪೊಲೀಸರನ್ನು ಕಂಡರೆ ಭಯವಿರುವ ಕಾರಣದಿಂದ ಕೇಂದ್ರ ಅಥವಾ ಹಿಮಾಚಲ ಪ್ರದೇಶದ ವತಿಯಿಂದ ರಕ್ಷಣೆ ನೀಡುವಂತೆ ಕೋರಿದ್ದಾರೆ ಈ ನಟಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ