Kangana Ranaut: ಕಂಗನಾಗೆ ಮತ್ತೊಂದು ಶಾಕ್​ ಕೊಟ್ಟ ಮಹಾರಾಷ್ಟ್ರ ಸರ್ಕಾರ: ಭಾರವಾದ ಮನಸ್ಸಿನಿಂದ ಮುಂಬೈನಿಂದ ಹೊರಟ ಕ್ವೀನ್​​..!

ಭಾರವಾದ ಹೃದಯದಿಂದ ನಾನು ಮುಂಬೈನಿಂದ ಹೊರ ಹೋಗುತ್ತಿದ್ದೇನೆ. ನಾನು ಭಯಬೀತಗೊಂಡಿದ್ದು, ಸಾಕಷ್ಟು ನಿಂದನೆಯನ್ನೂ ಅನುಭವಿಸಿದ್ದೇನೆ. ನನ್ನ ಕಚೇರಿಯ ಕೆಲ ಭಾಗಗಳನ್ನು ನೆಲಸಮಗೊಳಿಸಿದ ನಂತರ ಈಗ ಮನೆಯನ್ನೂ ತೆರೆವುಗೊಳಿಸುವ ಹುನ್ನಾರ ನಡೆಯುತ್ತಿದೆ. ನಾನು ಮುಂಬೈ ಅನ್ನು ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

Anitha E | news18-kannada
Updated:September 14, 2020, 4:10 PM IST
Kangana Ranaut: ಕಂಗನಾಗೆ ಮತ್ತೊಂದು ಶಾಕ್​ ಕೊಟ್ಟ ಮಹಾರಾಷ್ಟ್ರ ಸರ್ಕಾರ: ಭಾರವಾದ ಮನಸ್ಸಿನಿಂದ ಮುಂಬೈನಿಂದ ಹೊರಟ ಕ್ವೀನ್​​..!
ಕಂಗನಾ ಹಾಗೂ ಉದ್ಧವ್​ ಠಾಕ್ರೆ
  • Share this:
ಕಂಗನಾ ರನೌತ್​ ಸುಶಾಂತ್​ ಸಿಂಗ್​ ಸಾವಿನ ಪ್ರಕರಣದ ತನಿಖೆ ವಿಷಯದಲ್ಲಿ ಮುಂಬೈ ಪೊಲೀಸರು ನಿರ್ಲಕ್ಷ ತೋರಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದಾಗಿ ಶಿವಸೇನೆ ಹಾಗೂ ಕಂಗನಾ ನಡುವೆ ಮೊದಲಿಗೆ ಕಿಡಿ ಹೊತ್ತಿಕೊಂಡಿತ್ತು. ನಂತರ ಕಂಗನಾ ಮುಂಬೈ ಅನ್ನು ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದರು. ಇದರಿಂದಾಗಿ ಶಿವಸೇನೆಯ ಮುಖಂಡರು ಹಾಗೂ ಕಂಗನಾ ನಡುವೆ ವಾಕ್ಸಮರ ಆರಂಭವಾಯಿತು. ಕಂಗನಾರನ್ನು ಮುಂಬೈಗೆ ಕಾಲಿಡದಂತೆ ಶಿವಸೇನೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿತ್ತು. ಆದರೂ ಕಂಗನಾ ಧೈರ್ಯವಾಗಿ ಮುಂಬೈಗೆ ಬಂದರು. ಈ ನಡುವೆ ಕೇಂದ್ರ ಸರ್ಕಾರ ಸಹ ಕಂಗನಾಗೆ ವೈ ಪ್ಲಸ್​ ಶ್ರೇಣಿಯ ಭದ್ರತೆ ನೀಡಿತ್ತು. ಆದರೆ ಈಗ  ಕಂಗನಾ ಮುಂಬೈನಿಂದ ಮತ್ತೆ ತಮ್ಮ ತವರು ರಾಜ್ಯವಾದ ಹಿಮಾಚಲ ಪ್ರದೇಶಕ್ಕೆ ಮರಳಿದ್ದಾರೆ. ಮುಂಬೈನಿಂದ ಹೊರ ಹೋಗುವ ಮುನ್ನ ಭಾವುಕರಾಗಿ ಟ್ವೀಟ್​ ಮಾಡಿದ್ದಾರೆ ಕ್ವೀನ್​ ಕಂಗನಾ. 

ಭಾರವಾದ ಹೃದಯದಿಂದ ನಾನು ಮುಂಬೈನಿಂದ ಹೊರ ಹೋಗುತ್ತಿದ್ದೇನೆ. ನಾನು ಭಯಭೀತಗೊಂಡಿದ್ದು, ಸಾಕಷ್ಟು ನಿಂದನೆಯನ್ನೂ ಅನುಭವಿಸಿದ್ದೇನೆ. ನನ್ನ ಕಚೇರಿಯ ಕೆಲ ಭಾಗಗಳನ್ನು ನೆಲಸಮಗೊಳಿಸಿದ ನಂತರ ಈಗ ಮನೆಯನ್ನೂ ತೆರೆವುಗೊಳಿಸುವ ಹುನ್ನಾರ ನಡೆಯುತ್ತಿದೆ. ನಾನು ಮುಂಬೈ ಅನ್ನು ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇಲ್ಲಿ ರಕ್ಷಕರೇ ಭಕ್ಷಕರಾಗಿದ್ದಾರೆ. ಒಂದು ಹೆಣ್ಣನ್ನು ಅಬಲೆ ಎಂದು ತಿಳಿದು ತುಂಬಾ ದೊಡ್ಡ ತಪ್ಪು ಮಾಡುತ್ತಿದ್ದೀರಿ. ಒಂಧು ಹೆಣ್ಣನ್ನು ಹೆದರಿಸಿ, ನೀಚವಾಗಿ ಕಂಡು ನಿಮ್ಮ ವರ್ಚಸ್ಸನ್ನು ನೀವೇ ಮಣ್ಣಲ್ಲಿ ಸೇರಿಸುತ್ತಿದ್ದೀರಿ ಎಂದು ಶಿವಸೇನೆ ಹಾಗೂ ಮಹಾರಾಷ್ಟ್ರ ಸರ್ಕಾರದ ನಡವಳಿಕೆಯನ್ನು ಟೀಕಿಸಿದ್ದಾರೆ ಕಂಗನಾ.


ಭಾನುವಾರ ಕಂಗನಾ ರಾಜ್ಯಪಾಲರನ್ನು ಭೇಟಿ ಮಾಡಿ, ತಮಗಾಗಿರುವ ಅನ್ಯಾಯದ ಬಗ್ಗೆ ತಿಳಿಸಿದ್ದಾರೆ. ಅವರು ಮಗಳಂತೆ ಹೇಳಿದ್ದನ್ನೆಲ್ಲ ಕೇಳಿದ್ದಾರೆ. ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ. ನನ್ನ ಮೇಲೆ ನಡೆದ ದೌರ್ಜನ್ಯದ ಕುರಿತಾಗಿ ಮಾಹಿತಿ ನೀಡಲು ಹೋಗಿದ್ದೆ ಎಂದಿದ್ದರು ಕಂಗನಾ.
Published by: Anitha E
First published: September 14, 2020, 4:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading