ಬಾಲಿವುಡ್(Bollywood) ಕ್ವೀನ್ ಕಂಗನಾ ರಣಾವತ್(Kangana Ranaut) ಕಾಂಟ್ರವರ್ಸಿಗಳಿಗೆ ಹೆಸರುವಾಸಿ. ಯಾವುದೋ ವಿಚಾರಕ್ಕೆ ಇನ್ನೇನೋ ಕಮೆಂಟ್ ಮಾಡಿ ನಟಿ ಟ್ರೋಲ್(Troll) ಆಗೋದು, ಟೀಕೆಗೆ ಗುರಿಯಾಗೋದು ಸರ್ವೇ ಸಮಾನ್ಯವಾಗಿಬಿಟ್ಟಿದೆ. ಇಂಥಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ದೀಪಿಕಾ ಪಡುಕೋಣೆಯ ಹೆಸರಿನಿಂದ ಪತ್ರಕರ್ತ ಹಾಗೂ ಕಂಗನಾ ನಡುವೆ ವಾಗ್ವಾದ ನಡೆದಿದೆ. ನಟಿಯ ಹೊಸ ರಿಯಾಲಿಟಿ ಶೋ ಲಾಕಪ್(Lock Up) ಪ್ರಮೋಷನ್ ವೇಳೆ ಪತ್ರಕರ್ತ ಕೇಳಿದ ಪ್ರಶ್ನೆಯಿಂದ ಗರಂ ಆಗಿದ್ದಾರೆ ನಟಿ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ? ದೀಪಿಕಾ ಹೆಸರು ಕೇಳಿ ಕಂಗನಾ ಉರಿದುಬಿದ್ದಿದ್ದೇಕೆ ? ಇಲ್ಲಿದೆ ಡೀಟೆಲ್ಸ್.
ಕಂಗನಾ ಹಾಗೂ ಪತ್ರಕರ್ತನ ಮಧ್ಯೆ ವಾಕ್ಸಮರ ನಡೆದಿದೆ. ಇದೇನು ವಿಶೇಷ, ಕಂಗನಾ ಇದ್ದಲ್ಲಿ ಇದು ತುಂಬಾ ಕಾಮನ್ ಅನ್ಬೇಡಿ, ಈ ಜಗಳ ನಡೆದಿರೋದು ದೀಪಿಕಾ ಪಡುಕೋಣೆ(Deepika Padukone) ಹೆಸರಿನ ಸುತ್ತಮುತ್ತ ಎನ್ನುವುದು ವಿಶೇಷ. ನಟಿ ಕಂಗನಾ ರಣಾವತ್ ರಿಯಾಲಿಟಿ ಶೋ(Reality Show) ಪ್ರಪಂಚಕ್ಕೆ ಬರುತ್ತಿದ್ದಾರೆ. ಲಾಕಪ್ ಎಂಬ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಬರುತ್ತಿರುವ ನಟಿ ಇದರ ಪ್ರಮೋಷನ್ ಕಾರ್ಯಕ್ರಮದಲ್ಲಿ ಪತ್ರಕರ್ತನ ಪ್ರಶ್ನೆಗೆ ಕಿರಿಕ್ ಆಗಿದ್ದಾರೆ. ಲಾಕಪ್ ಕಾರ್ಯಕ್ರಮವನ್ನು ಕಂಗನಾ ನಡೆಸಿಕೊಡಲಿದ್ದು, ಈ ಕಾರ್ಯಕ್ರಮದ ಪ್ರಮೋಷನ್ ಸಂದರ್ಭ ಪತ್ರಕರ್ತ ಕಂಗನಾ ಹಾಗೂ ದೀಪಿಕಾ ನಡುವಿನ ಕಾಂಟ್ರವರ್ಸಿ ಬಗ್ಗೆ ಪ್ರಶ್ನೆ ಮಾಡಿ ಹೊಸ ಕಾಂಟ್ರವರ್ಸಿ ಮಾಡಿದ್ದಾರೆ.
ಇದನ್ನೂ ಓದಿ:ಕೊನೆಗೂ ಹಸೆಮಣೆ ಏರೋಕೆ ಸಜ್ಜಾದ Shamita Shetty, ಮೊಹಬ್ಬತೇ ನಟಿ ವರಿಸೋ ವರನ್ಯಾರು ಗೊತ್ತಾ?
‘ಕೂತ್ಕೊಳಪ್ಪ, ನಾನು ಬೇರೆ ಸಿನಿಮಾ ಪ್ರಚಾರಕ್ಕೆ ಬಂದಿದ್ದಲ್ಲ ಎಂದ ಕಂಗನಾ’
ದೀಪಿಕಾ ಅವರ ಗೆಹ್ರೈಯಾನ್ ಪ್ರಚಾರದ ಸಮಯದಲ್ಲಿ ದೀಪಿಕಾ ಫ್ಯಾಷನ್(Fashion) ಉಡುಪುಗಳನ್ನು ಧರಿಸಿದ್ದು ನೋಡಿದ್ದೀರಿ. ಸಖತ್ ಟ್ರೆಂಡಿಯಾಗಿದ್ದವು ನಟಿ ಡ್ರೆಸ್. ಆದರೆ ದೀಪಿಕಾ ಅವರ ಉಡುಪುಗಳ 'ಹೆಮ್ಲೈನ್ಗಳು ಹಾಗೂ ನೆಕ್ಲೈನ್ಗಳಿಗಾಗಿ' ಇನ್ಫ್ಲುಯೆನ್ಸರ್ ಒಬ್ಬರಿಂದ ತೀವ್ರವಾಗಿ ಟೀಕೆಗೊಳಗಾದರು. ಈ ಬಗ್ಗೆ ಪತ್ರಕರ್ತ ಕಂಗನಾ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಗರಂ ಆಗಿದ್ದಾರೆ ಕಂಗನಾ. ‘ಇಲ್ಲಿ ನೋಡಿ, ತಮ್ಮನ್ನು ತಾವು ರಕ್ಷಿಸಿಕೊಳ್ಳಲಾಗದವರನ್ನು ರಕ್ಷಿಸಲು ನಾನು ಇಲ್ಲಿದ್ದೇನೆ. ಹೌದಲ್ವಾ? ಅವರು ಅವರನ್ನು ಅವರು ರಕ್ಷಿಸಿಕೊಳ್ಳಬಹುದು. ಆಕೆಗೆ ಸವಲತ್ತು, ವೇದಿಕೆ ಇದೆ. ನಾನು ಅವಳ ಸಿನಿಮಾವನ್ನು ಇಲ್ಲಿ ಪ್ರಚಾರ ಮಾಡಲು ಸಾಧ್ಯವಿಲ್ಲ. ಕೂತ್ಕೊಳಪ್ಪಾ ಎಂದು ಕಂಗನಾ ಗುಡುಗಿದ್ದಾರೆ. ಅಂದಹಾಗೆ ದೀಪಿಕಾ, ಅನನ್ಯಾ ಪಾಂಡೆ, ಸಿದ್ಧಾಂತ್ ಚತುರ್ವೇದಿ ಮತ್ತು ಧೈರ್ಯ ಕರ್ವಾ ಅಭಿನಯದ ಗೆಹ್ರೈಯಾನ್ ಫೆಬ್ರವರಿ 11 ರಂದು ಅಮೆಜಾನ್ ಪ್ರೈಮ್(Amazon Prime) ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.
ಕಂಗನಾ ಹಾಗೂ ಪತ್ರಕರ್ತನ ಮಧ್ಯೆ ವಾಕ್ಸಮರ ಹೆಚ್ಚುತ್ತಿದ್ದಂತೆ ರಿಯಾಲಿಟಿ ಶೋ ನಿರ್ಮಾಪಕಿ ಏಕ್ತಾ ಮಧ್ಯೆ ಪ್ರವೇಶಿಸಿದ್ದಾರೆ. ಏಕ್ತಾ ಕಪೂರ್ ಮಧ್ಯ ಪ್ರವೇಶಿಸಿ, ‘ ನೋಡಪ್ಪಾ ಇದು ಬೇರೆಯೇ ಪತ್ರಿಕಾಗೋಷ್ಠಿ ಎಂದು ಹೇಳಿದ್ದಾರೆ. ಪತ್ರಕರ್ತರು ಕಂಗನಾ ಅವರ ಸ್ವರವು 'ಸ್ವಲ್ಪ ಅಸಮಾಧಾನಕರವಾಗಿತ್ತು' ಎಂದು ಹೇಳಿದ್ದು ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: Deepika Padukone: ಡ್ರೆಸ್ ಯಾವುದಾದ್ರೇನು, ಡಿಪ್ಪಿ ತೊಟ್ರೆ ಅದಕ್ಕೂ ಒಂದು ಕಳೆ ಅಲ್ವಾ? ದೀಪಿಕಾ ಸಖತ್ ಹಾಟ್ ಮಗಾ!
ಸಿಟ್ಟಾದ ಕಂಗನಾ
ಪತ್ರಕರ್ತನ ನಡೆಗೆ ಕಟುವಾಗಿ ಉತ್ತರಿಸಿದ ಕಂಗನಾ, ನಿಮಗೆ ಗೊತ್ತಾ, ಇದು ಹಳೆಯ ತಂತ್ರ. ಕಳೆದ ಬಾರಿ ಅದೇ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಂದ ನನ್ನನ್ನು ನಿಷೇಧಿಸಲಾಗಿತ್ತು. ಅದರಿಂದೇನೂ ಆಗಲಿಲ್ಲ. ದಯವಿಟ್ಟು ಕುಳಿತುಕೊಳ್ಳಿ ಎಂದು ಕಂಗನಾ ಹೇಳಿದ್ದಾರೆ. ಅವರು 2019 ರಲ್ಲಿ ಜಡ್ಜ್ಮೆಂಟಲ್ ಹೈ ಕ್ಯಾ ಪತ್ರಿಕಾಗೋಷ್ಠಿಯಲ್ಲಿ ನಟಿ ಹಾಗೂ ಪತ್ರಕರ್ತರ ನಡೆದ ಘಟನೆ ಭಾರೀ ಸುದ್ದಿಯಾಗಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಪತ್ರಕರ್ತರು ನಟಿಯ ವಿರುದ್ಧ ಒಂದಾಗಿದ್ದರು. ತಲೈವಿ ಸಿನಿಮಾ ಮಾಡಿ ಸೌತ್ನಲ್ಲೂ ಮಿಂಚಿದ ನಟಿ ಈಗ ರಿಯಾಲಿಟಿ ಶೋ ಲೋಕದಲ್ಲೂ ತಮ್ಮ ಕೈ ನೋಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ