• Home
  • »
  • News
  • »
  • entertainment
  • »
  • Pathaan-Kangana Ranaut: ಚಿತ್ರರಂಗ ಇರೋದು ಹಣ ಮಾಡೋಕಲ್ಲ, ಪಠಾಣ್​ ಸಿನಿಮಾ ಬಗ್ಗೆ ಗೇಲಿ ಮಾಡಿದ್ರಾ ಕಂಗನಾ?

Pathaan-Kangana Ranaut: ಚಿತ್ರರಂಗ ಇರೋದು ಹಣ ಮಾಡೋಕಲ್ಲ, ಪಠಾಣ್​ ಸಿನಿಮಾ ಬಗ್ಗೆ ಗೇಲಿ ಮಾಡಿದ್ರಾ ಕಂಗನಾ?

ಕಂಗನಾ ರಣಾವತ್​, ಪಠಾಣ್​

ಕಂಗನಾ ರಣಾವತ್​, ಪಠಾಣ್​

ಕಳೆದ ವರ್ಷ ಕಂಗನಾ ರಣಾವತ್​ ನಟನೆಯ ಧಾಕಡ್​ ಸಿನಿಮಾ ಹೀನಾಯವಾಗಿ ಸೋತಿತ್ತು. ಹೀಗಾಗಿ ಶಾರುಖ್​ ಖಾನ್​ ಚಿತ್ರದ ಗೆಲುವಿನ ಬಗ್ಗೆ ಅವರು ಪರೋಕ್ಷವಾಗಿ ಕೊಂಕು ನುಡಿದಿದ್ದಾರೆ.

  • Share this:

ಬಾಲಿವುಡ್​ ಬಾದ್​ ಷಾ ಶಾರುಖ್​ ಖಾನ್​ (Shah Rukh Khan) ಅಭಿನಯದ ಪಠಾಣ್ ಸಿನಿಮಾ (Pathaan Movie) ಇಂದು (ಜ.25) ವಿಶ್ವದಾದ್ಯಂತ ತೆರೆ ಕಂಡಿದ್ದು, ಎಲ್ಲೆಡೆ ಹೌಸ್​ ಫುಲ್​ ಪ್ರದರ್ಶನ ಕಾಣುತ್ತಿದೆ. ಪಠಾಣ್​ ಸಿನಿಮಾ ನೋಡಿದ ಪ್ರೇಕ್ಷಕರು ಕೂಡ್ ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ನಿರೀಕ್ಷೆ ಮಾಡಲಾಗಿದೆ. ಈ ವೇಳೆ ನಟಿ ಕಂಗನಾ ರಣಾವತ್ (Kangana Ranaut) ಅಚ್ಚರಿಯ ಹೇಳಿಕೆ ನೀಡಿದ್ದಾರೆ.


ಚಿತ್ರರಂಗ ಇರುವುದು ಹಣ ಮಾಡೋಕಲ್ಲ


ಒಂದೂವರೆ ವರ್ಷಗಳ ಕಾಲ ಟ್ವಿಟರ್​ನಿಂದ ಸಸ್ಪೆಂಡ್​ ಆಗಿದ್ದ ನಟಿ ಕಂಗನಾ ರಣಾವತ್​,  ಇದೀಗ ಮತ್ತೆ ಟ್ವಿಟರ್​ನಲ್ಲಿ ಕಿರಿಕ್​ ಶುರು ಮಾಡಿದ್ದಾರೆ. ಚಿತ್ರರಂಗ ಇರುವುದು ಹಣ ಮಾಡೋಕಲ್ಲ ಎಂದು ಟ್ವೀಟ್​ ಮಾಡಿದ್ದಾರೆ. ಸಿನಿಮಾ ಸಕ್ಸಸ್​ ತಿಳಿಯೋದೇ  ಬಾಕ್ಸ್ ಆಫೀಸ್​ ಮಾನದಂಡದಿಂದ ಇದನ್ನು ಬಹುತೇಕರು ಒಪ್ಪಿಕೊಳ್ಳುತ್ತಾರೆ. ಆದ್ರೆ ಕಂಗಾನಾ ಟ್ವೀಟ್​ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.


Bollywood Pathaan Cinema Review Story


ಪಠಾಣ್​ ಭರ್ಜರಿ ಪ್ರದರ್ಶನ ನೋಡಿ ನಟಿ ಕೊಂಕು


ಕಳೆದ ವರ್ಷ ಕಂಗನಾ ರಣಾವತ್​ ನಟನೆಯ ‘ಧಾಕಡ್​’ ಸಿನಿಮಾ ಹೀನಾಯವಾಗಿ ಸೋತಿತ್ತು. ಹೀಗಾಗಿ ಶಾರುಖ್​ ಖಾನ್​ ಚಿತ್ರದ ಗೆಲುವಿನ ಬಗ್ಗೆ ಅವರು ಪರೋಕ್ಷವಾಗಿ ಕೊಂಕು ನುಡಿದಿದ್ದಾರೆ. ತಮ್ಮ ಪೋಸ್ಟ್​ನಲ್ಲಿ ಅವರು ಎಲ್ಲಿಯೂ ಪಠಾಣ್ ಹೆಸರನ್ನು ಪ್ರಸ್ತಾಪಿಸಿಲ್ಲ.  ಆದ್ರೆ ಸಿನಿಮಾ ಸಕ್ಸಸ್​ ನೋಡಿಯೇ ಕಂಗನಾ ಹೀಗೆ ಟ್ವೀಟ್​ ಮಾಡಿದ್ದಾರೆ ಎಂದು ನೆಟ್ಟಿಗರು ಹೇಳ್ತಿದ್ದಾರೆ.ಚಿತ್ರರಂಗ ದುಡ್ಡು ಮಾಡೋಕೆ ಇರುವುದಲ್ಲ


ಒಂದು ಸಿನಿಮಾದ ಯಶಸ್ಸನ್ನು ದುಡ್ಡಿನಿಂದಲೇ ತೋರಿಸಬೇಕಿಲ್ಲ. ಕಲೆಗೆ ಬೇರೆ ಯಾವುದೇ ಉದ್ದೇಶವೇನೂ ಇಲ್ಲ ಎಂಬಂತೆ ವರ್ತಿಸುತ್ತಾರೆ.  ಚಿತ್ರರಂಗ ಒಂದು ಉದ್ಯಮ ಹೌದು. ಆದರೆ ಇದು ಬೇರೆ ಬಿಸ್ನೆಸ್​ ರೀತಿ ಕೋಟಿಗಟ್ಟಲೆ ದುಡ್ಡು ಮಾಡೋಕೆ ಇರುವುದಲ್ಲ ಎಂದು ಕಂಗನಾ ಪೋಸ್ಟ್​ ಮಾಡಿದ್ದಾರೆ.


 ಶಾರುಖ್‌ ಸಿನಿಮಾಗೆ ಫ್ಯಾನ್ಸ್​ ಫಿದಾ


4 ವರ್ಷದ ಬಳಿಕ ಶಾರುಖ್‌ ಖಾನ್​ ಮತ್ತೆ ಪಠಾಣ್‌ ಮೂಲಕ ತೆರೆ ಮೇಲೆ ಅಬ್ಬರಿಸಿದ್ದಾರೆ. ಈಗಾಗಲೇ ಟ್ರೇಲರ್‌ ಮತ್ತು ಹಾಡುಗಳಿಂದ ಸದ್ದು ಮಾಡಿದ್ದ ಈ ಸಿನಿಮಾ, ವಿವಾದಗಳಿಂದಲೂ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿತ್ತು. ಇದೀಗ ಪಠಾಣ್​ ಸಿನಿಮಾ ತೆರೆ ಮೇಲೆ ಬಂದಿದ್ದು, ಭರ್ಜರಿ ಪ್ರದರ್ಶನ ಕಾಣ್ತಿದೆ.


ವಾರ್‌ ಸಿನಿಮಾ ಖ್ಯಾತಿಯ ಸಿದ್ಧಾರ್ಥ್‌ ಆನಂದ್‌ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಯಶ್‌ ರಾಜ್‌ ಫಿಲಂಸ್‌ ಈ ಚಿತ್ರಕ್ಕೆ ಕೋಟಿ ಕೋಟಿ ಹಣ ಸುರಿದಿದೆ. ಶಾರುಖ್‌ ಜತೆಗೆ ದೀಪಿಕಾ ಪಡುಕೋಣೆ, ಜಾನ್‌ ಅಬ್ರಹಾಂ ಸಹ ಸಾಥ್‌ ನೀಡಿದ್ದಾರೆ.
ಹಲವೆಡೆ ಪರ-ವಿರೋಧ ಹೋರಾಟ


ಸೋಷಿಯಲ್​ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಬಹುತೇಕ ಥಿಯೇಟರ್​ ಮುಂಭಾಗ ಪ್ರತಿಭಟನೆ ಕೂಡ ನಡೆದಿದೆ. ಡಿಸೆಂಬರ್​ 2ನೇ ವಾರದಲ್ಲಿ ಭುಗಿಲೆದ್ದಿರುವ ಬೇಶರಂ ರಂಗ್​ ವಿವಾದದ ಕಿಡಿ ಸ್ಪೋಟಗೊಂಡಿದೆ.

Published by:ಪಾವನ ಎಚ್ ಎಸ್
First published: