ಬೀದಿಗೆ ಬಂತು ಆಲಿಯಾ-ಕಂಗನಾ ಜಗಳ; ‘ರಾಝಿ’ ನಾಯಕಿಯ ಯಶಸ್ಸಿಗೆ ಕರಣ್ ಜೋಹರ್ ಸೂತ್ರಧಾರ

ಇದು ಒನ್​ ವೇ ಜಗಳ! ಇಲ್ಲಿ ಆಲಿಯಾ ತುಂಬಾನೇ ಶಾಂತವಾಗಿ ಮಾತನಾಡುತ್ತಿದ್ದಾರೆ. ಆದರೆ, ಕಂಗನಾ ಮಾತ್ರ ತುಂಬಾ ಕೋಪದಿಂದ ಟಾಂಗ್​ ನೀಡಿದ್ದಾರೆ. ಅವರು ಕೋಪಗೊಳ್ಳಲು ಕಾರಣ ‘ಮಣಿಕರ್ಣಿಕಾ’ ಸಿನಿಮಾ.

Rajesh Duggumane | news18
Updated:February 11, 2019, 12:02 PM IST
ಬೀದಿಗೆ ಬಂತು ಆಲಿಯಾ-ಕಂಗನಾ ಜಗಳ; ‘ರಾಝಿ’ ನಾಯಕಿಯ ಯಶಸ್ಸಿಗೆ ಕರಣ್ ಜೋಹರ್ ಸೂತ್ರಧಾರ
ಆಲಿಯಾ-ಕಂಗನಾ
Rajesh Duggumane | news18
Updated: February 11, 2019, 12:02 PM IST
ಬಾಲಿವುಡ್​ ನಟಿ ಆಲಿಯಾ ಭಟ್​ ವಿವಾದಗಳಿಂದ ಅಂತರ ಕಾಯ್ದುಕೊಂಡವರು. ಅವರು ಬಾಲಿವುಡ್​ನಲ್ಲಿ ಕಾಂಟ್ರವರ್ಸಿ ಮಾಡಿಕೊಂಡಿದ್ದು ತುಂಬಾನೇ ಕಡಿಮೆ. ಆದರೆ, ಈಗ ಆಲಿಯಾ-ಕಂಗನಾ ರಣಾವತ್​ ನಡುವಣ ವಾಗ್ವಾದ ತಾರಕಕ್ಕೇರಿದೆ. ಆಲಿಯಾ ನಿರ್ಮಾಪಕ ಕರಣ್​ ಜೋಹರ್​ ಕೈಗೊಂಬೆ ಎಂದು ರಣಾವತ್​ ಆರೋಪಿಸಿದ್ದಾರೆ.

ಅಷ್ಟಕ್ಕೂ, ಇದು ಒನ್​ ವೇ ಜಗಳ! ಇಲ್ಲಿ ಆಲಿಯಾ ತುಂಬಾನೇ ಶಾಂತವಾಗಿ ಮಾತನಾಡುತ್ತಿದ್ದಾರೆ. ಆದರೆ, ಕಂಗನಾ ಮಾತ್ರ ತುಂಬಾ ಕೋಪದಿಂದ ಟಾಂಗ್​ ನೀಡಿದ್ದಾರೆ. ಅವರು ಕೋಪಗೊಳ್ಳಲು ಕಾರಣ ‘ಮಣಿಕರ್ಣಿಕಾ’ ಸಿನಿಮಾ.

ಜ.25ರಂದು ತೆರೆಕಂಡ ‘ಮಣಿಕರ್ಣಿಕಾ’ ಸಿನಿಮಾ ತುಂಬಾನೇ ವಿವಾದ ಸೃಷ್ಟಿಸಿತ್ತು. ಈ ಚಿತ್ರದ ನಿರ್ದೇಶನದಲ್ಲಿ ಕಂಗನಾ ಪಾಲು ಕೂಡ ಇತ್ತು. ಇದೇ ಕಾರಣಕ್ಕೆ ನಟ ಸೋನು ಸೂದ್​ ಚಿತ್ರದಿಂದ ಹಿಂದೆ ಸರಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಇದು ಕಂಗನಾಗೆ ಬೇಸರ ಮೂಡಿಸಿದೆಯಂತೆ. ಅಷ್ಟೇ ಅಲ್ಲ, ಸಿನಿಮಾ ಬಿಡುಗಡೆ ವೇಳೆ ಆಲಿಯಾ ಭಟ್​ ಸೇರಿದಂತೆ ಅನೇಕರು ಚಿತ್ರಕ್ಕೆ ಬೆಂಬಲ ಸೂಚಿಸಿಲ್ಲ ಎಂದು ಕಂಗನಾ ಆರೋಪಿಸಿದ್ದರು.

ಇದನ್ನೂ ಓದಿ: ಒಂದೇ ಚಿತ್ರದಲ್ಲಿ ರಾಕಿಂಗ್ ಸ್ಟಾರ್-ಪವರ್ ಸ್ಟಾರ್; ಯಶ್-ಅಪ್ಪು ಕೊಟ್ರು ಸಿಹಿ ಸುದ್ದಿ!

ಇದಕ್ಕೆ ಪ್ರತಿಕ್ರಿಯಿಸಿದ್ದ ಆಲಿಯಾ, “ನನ್ನಿಂದ ತಪ್ಪಾಗಿದ್ದರೆ ನಾನು ಕಂಗನಾ ಬಳಿ ವೈಯಕ್ತಿಕವಾಗಿ ಕ್ಷಮೆ ಕೇಳುತ್ತೇನೆ,” ಎಂದಿದ್ದರು.  ಈ ಹೇಳಿಕೆಗೆ ಉತ್ತರಿಸಿರುವ ಕಂಗನಾ, “ಆಲಿಯಾ ‘ಮಣಿಕರ್ಣಿಕಾ’ ಚಿತ್ರಕ್ಕೆ ಏಕೆ ಬೆಂಬಲ ನೀಡಿಲ್ಲ ಎಂಬುದು ನನಗೆ ತಿಳಿಯುತ್ತಿಲ್ಲ. ಅವರು ಮಹಿಳಾ ಸಬಲೀಕರಣ ಹಾಗೂ ರಾಷ್ಟ್ರೀಯತೆಗೆ ಬೆಂಬಲ ಸೂಚಿಸಬೇಕು. ಆಲಿಯಾಗೆ ತನ್ನದೇ ಆದ ಧ್ವನಿ ಇಲ್ಲ ಎಂದಾದರೆ ಅವರ ಯಶಸ್ಸನ್ನು ಪರಿಗಣಿಸಲು ಸಾಧ್ಯವೆ ಇಲ್ಲ. ಆಲಿಯಾ ವೃತ್ತಿ ಜೀವನಕ್ಕೆ ನಿರ್ಮಾಪಕ ಕರಣ್​ ಜೋಹರ್​ ಸೂತ್ರಧಾರ. ಆಲಿಯಾ ಕರಣ್​ ಕೈಗೊಂಬೆಯಾಗಿದ್ದಾರೆ. ನಿಜವಾಗಿ ಯಶಸ್ಸು ಎಂದರೇನು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಲಿದ್ದಾರೆ ಎಂಬ ನಂಬಿಕೆ ಇದೆ,” ಎಂದಿದ್ದಾರೆ.

ಆಲಿಯಾ ಭಟ್​ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಕರಣ್​ ಜೋಹರ್​. ಅವರ ಸಾಕಷ್ಟು ಸಿನಿಮಾಗಳಿಗೆ ಕರಣ್​ ಬಂಡವಾಳ ಹೂಡಿದ್ದಾರೆ. ಇದೇ ಕಾರಣಕ್ಕೆ ಕಂಗನಾ ಈ ರೀತಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ರಜನಿಗೆ ವಯಸ್ಸಾಯ್ತು ಎಂದವರಾರು?; ಮಗಳ ಮದುವೆಯಲ್ಲಿ ಸ್ಟೆಪ್ ಹಾಕಿದ ಸೂಪರ್​ಸ್ಟಾರ್
Loading...

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...