HOME » NEWS » Entertainment » KANGANA RANAUT HAS ONCE AGAIN LASHED OUT AT TAAPSEE PANNU CALLING HER A B GRADE ACTOR AE

Kangana Ranut: ತಾಪ್ಸಿಗೆ ಮತ್ತೊಮ್ಮೆ ಬಿ ಗ್ರೇಡ್​ ನಟಿ ಎಂದು ಟೀಕಿಸಿದ ಕಂಗನಾ ರನೌತ್​..!

Taapsee Pannu: ತಾಪ್ಸಿ ಪನ್ನು ಮಾಡಿದ ಟ್ವೀಟ್​ ನೋಡಿದ ಕಂಗನಾ ಸುಮ್ಮನೆ ಕೂರಲಿಲ್ಲ. ಅದಕ್ಕೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ತಾಪ್ಸಿ ಮಾಡಿದ ಟ್ವೀಟ್​ ಅನ್ನು ರೀ-ಟ್ವೀಟ್ ಮಾಡಿರುವ ಕಂಗನಾ ಬಿಗ್ರೇಡ್​ ಜನರ ಬಿ ಗ್ರೇಡ್​ ಆಲೋಚನೆ ಎಂದು ಪ್ರತಿಕ್ರಿಯಿಸಿದ್ದಾರೆ.

Anitha E | news18-kannada
Updated:February 4, 2021, 2:15 PM IST
Kangana Ranut: ತಾಪ್ಸಿಗೆ ಮತ್ತೊಮ್ಮೆ ಬಿ ಗ್ರೇಡ್​ ನಟಿ ಎಂದು ಟೀಕಿಸಿದ ಕಂಗನಾ ರನೌತ್​..!
ಕಂಗನಾ ರನೌತ್​ ಹಾಗೂ ತಾಪ್ಸಿ ಪನ್ನು
  • Share this:
ದೆಹಲಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಹೋರಾಟ (Farmers Protest) ನಡೆಸುತ್ತಿರುವ ರೈತರನ್ನು  ಭಯೋತ್ಪಾದಕರು ಎಂದು ಕರೆಯುವ ಮೂಲಕ ನಟಿ ಕಂಗನಾ ಅನೇಕರ ಟೀಕೆಗೆ ಗುರಿಯಾಗಿದ್ದರು. ರೈತರು ನಡೆಸುತ್ತಿರುವ ಪ್ರತಿಭಟನೆ ಹಾಗೂ ಇತರೆ ಪ್ರಸಕ್ತ ವಿಷಯಗಳು ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಕಂಗನಾ ಸದಾ ಸುದ್ದಿಯಲ್ಲಿರುತ್ತಾರೆ. ಇನ್ನು ನಟಿ ತಾಪ್ಸಿ ಪನ್ನು (Taapsee Pannu) ಹಾಗೂ ಕಂಗನಾ ರನೌತ್  (Kangana Ranaut) ನಡುವೆ ಆಗಾಗ ಟ್ವೀಟ್​ ವಾರ್ ನಡೆಯುತ್ತಲೇ ಇರುತ್ತದೆ. ಈ ಹಿಂದೆಯೂ ಸಾಕಷ್ಟು ವಿಷಯಗಳಿಗೆ ಸಂಬಂಧಿಸಿದಂತೆ ಈ ನಟಿಯರು ಒಬ್ಬರನ್ನೊಬ್ಬರು ಟೀಕಿಸುತ್ತಾ ಟ್ವೀಟ್​ ಮಾಡಿದ್ದರು. ಸುಶಾಂತ್​ ಸಾವಿನ ವಿಷಯದಲ್ಲೂ ಕಂಗನಾ-ತಾಪ್ಸಿ ನಡುವೆ  ಡೈಲಾಗ್​ಗಳ ವಿನಿಮಯವಾಗಿತ್ತು. ಈಗ ಮತ್ತೆ ನಟಿ ತಾಪ್ಸಿ ಪನ್ನುಕಂಗನಾ ಅವರ ಹೆಸರನ್ನು ಹೇಳದೆಯೇ ಪರೋಕ್ಷವಾಗಿ ಮಾಡಿರುವ ಟ್ವೀಟ್​ ಒಂದು ಸದ್ದು ಮಾಡುತ್ತಿದೆ. ಅಲ್ಲದೆ ಆ ಟ್ವೀಟ್​ಗೆ  ಕಂಗನಾ ಸಹ ಖಡಕ್​ ಪ್ರತಿಕ್ರಿಯೆ ನೀಡಿದ್ದಾರೆ. 

ರೈತರ ಪ್ರತಿಭಟನೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನ ಹಾಗೂ ಸೆಲೆಬ್ರಿಟಿಗಳು ಮಾಡುತ್ತಿರುವ ಕುರಿತಾಗಿಯೇ ತಾಪ್ಸಿ ಟ್ವೀಟ್​ ಮಾಡಿದ್ದಾರೆ. ಒಂದು ಟ್ವೀಟ್​ ನಿಮ್ಮ ಐಕ್ಯತೆಯನ್ನು ಒಡೆಯವುದಾದರೆ, ಒಂದು ಜೋಕ್​ ನಿಮ್ಮ ನಂಬಿಕೆಯ ಅಡಿಪಾಯವನ್ನೇ ಅಲುಗಾಡಿಸುವುದಾದರೆ, ಒಂದು ಘಟನೆ ನಿಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವಂತಾದರೆ ನೀವು ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಬೇರೆಯವರಿಗೆ ಆದರ್ಶ ಪಾಠ ಮಾಡುವ ಶಿಕ್ಷಕರಾಗಬಾರದು ಎಂದು ಬರೆದುಕೊಂಡಿದ್ದಾರೆ.

If one tweet rattles your unity, one joke rattles your faith or one show rattles your religious belief then it’s you who has to work on strengthening your value system not become ‘propaganda teacher’ for others.ತಾಪ್ಸಿ ಪನ್ನು ಮಾಡಿದ ಟ್ವೀಟ್​ ನೋಡಿದ ಕಂಗನಾ ಸುಮ್ಮನೆ ಕೂರಲಿಲ್ಲ. ಅದಕ್ಕೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ತಾಪ್ಸಿ ಮಾಡಿದ ಟ್ವೀಟ್​ ಅನ್ನು ರೀ-ಟ್ವೀಟ್ ಮಾಡಿರುವ ಕಂಗನಾ ಬಿಗ್ರೇಡ್​ ಜನರ ಬಿ ಗ್ರೇಡ್​ ಆಲೋಚನೆ ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರತಿಯೊಬ್ಬರು ಮಾತೃಭೂಮಿ ಹಾಗೂ ಕುಟುಂಬಕ್ಕಾಗಿ ಎದ್ದು ನಿಲ್ಲಲೇಬೇಕು. ಇದೇ ಕರ್ಮ ಹಾಗೂ ಇದೇ ಧರ್ಮ. ಕೇವಲ  ಉಚಿತ ನಿಧಿಯಿಂದ ತಿನ್ನುವವರಾಗಬೇಡಿ... ದೇಶಕ್ಕೆ ಭಾರವಾಗಿರಬೇಡಿ... ಅದಕ್ಕೆ ಇವರನ್ನು ನಾನು ಬಿ ಗ್ರೇಡ್​ ಎಂದು ಕರೆಯೋದು ಎಂದು ಕಂಗನಾ ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Kichcha Sudeep: ಕಿಚ್ಚನ ಅಡ್ಡಾದಿಂದ ಹೊರಬಿತ್ತು ಮತ್ತೊಂದು ಸಿಹಿ ಸುದ್ದಿ: ಇಲ್ಲಿದೆ ಕೋಟಿಗೊಬ್ಬ 3 ಸಿನಿಮಾ ಕುರಿತಾದ ಅಪ್ಡೇಟ್​ಗಾಯಕಿ ರಿಹಾನ್ನಾ ಅವರ ಟ್ವೀಟ್​ಗೆ ಪ್ರತಿಕ್ರಿಯಿಸಿ ಕಂಗನಾ ಮಾಡಿದ್ದ ಟ್ವೀಟ್​ಗೆ ಕುನಾಲ್ ಕಾಮ್ರಾ ವ್ಯಂಗ್ಯವಾಗಿಯೇ ಪ್ರತಿಕ್ರಿಯಿಸಿದ್ದಾರೆ.  ಕುನಾಲ್ ಈ ಹಿಂದೆಯೂ ಕಂಗನಾ ಅವರನ್ನು ಸಾಕಷ್ಟು ಸಲ ಟೀಕಿಸಿದ್ದಾರೆ.

Kangana Ranaut, Kangana Ranaut befitting reply to Taapsee Pannu, Taapsee Pannu, Kangana Ranaut tweet, Social Media, Viral Tweet, news 18, Taapsee Pannu tweet on farmers protest, rihanna on farmers, Bollywood reaction on Rihanna, ಅಮೆರಿಕನ್ ಪಾಪ್ ಗಾಯಕಿ ರಿಹಾನ್ನಾ, ರಿಹಾನ್ನಾ ಟ್ವೀಟ್‌ಗೆ ಬಾಲಿವುಡ್ ಪ್ರತಿಕ್ರಿಯೆ, ರಾಷ್ಟ್ರವಿರೋಧಿಬಾಲಿವುಡ್, Kangana Ranaut has once again lashed out at Taapsee Pannu calling her a B grade actor ae
ಕಂಗನಾ ರನೌತ್​ ಹಾಗೂ ತಾಪ್ಸಿ ಪನ್ನು ಮಾಡಿರುವ ಟ್ವೀಟ್​


ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಮತ್ತು ಪಂಜಾಬ್​ ರಾಜ್ಯದ ರೈತರು ಕಳೆದ ಎರಡು ತಿಂಗಳುಗಳಿಂದ ಸತತವಾಗಿ ದೆಹಲಿ ಹೊರ ವಲಯದಲ್ಲಿ ಹೋರಾಟದಲ್ಲಿ ನಿರತರಾಗಿದ್ದಾರೆ. ದೇಶದ ಇತರೆ ರಾಜ್ಯಗಳಲ್ಲೂ ಆದರೂ ಸರ್ಕಾರ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಈ ನಡುವೆ ಭಾರತದ ರೈತ ಹೋರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಂಬಲ ವ್ಯಕ್ತವಾಗುತ್ತಿದೆ. ರಿಹಾನ್ನಾ ಟ್ವೀಟ್​ ಮಾಡಿದ ನಂತರ ಬಾಲಿವುಡ್​ನ ಸೆಲೆಬ್ರಿಟಿಗಳಾದ ಅಕ್ಷಯ್  ಕುಮಾರ್​, ಅಜಯ್​ ದೇವಗನ್​, ಕರಣ್​ ಜೋಹರ್​, ಸುನೀಲ್​ ಶೆಟ್ಟಿ ಹಾಗೂ ಇತರರು ನಮ್ಮ ಆಂತರಿಕ ವಿಷಯಗಳಲ್ಲಿ ಬೇರೆಯವರ ಮಧ್ಯ ಪ್ರವೇಶದ ಅಗತ್ಯವಿಲ್ಲ ಎಂದು ಏಕತೆ ಪ್ರದರ್ಶಿಸುತ್ತಿದ್ದಾರೆ.
Published by: Anitha E
First published: February 4, 2021, 2:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories