ಬಾಲಿವುಡ್ (Bollywood) ಫೈರ್ ಬ್ರ್ಯಾಂಡ್ ಕಂಗನಾ ರಣಾವತ್ (Kangana Ranaut) ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಇತ್ತೀಚಿನ ಚಿತ್ರ ಧಾಕಡ್ (Dhaakad) ಶುಕ್ರವಾರ ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ನಟಿ ಕಂಗನಾ ರಣಾವತ್ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಅಲ್ಲದೇ ನಮ್ಮ ವೃತ್ತಿ ಜೀವನದಲ್ಲಿ ಇದು ಬಹಳ ಮುಖ್ಯವಾದ ಚಿತ್ರ ಎಂದು ಪ್ರಚಾರಕ್ಕೆ ಹೋದಲೆಲ್ಲ ಹೇಳಿಕೊಂಡಿದ್ದರು. ಅಲ್ಲದೇ ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಸಹ ಹೆಚ್ಚು ಮಗ್ನರಾಗಿದ್ದರು. ಆದರೆ ಬಾಕ್ಸ್ ಆಫೀಸ್ (Box Office) ಮಾಹಿತಿ ಪ್ರಕಾರ ಧಾಕಡ್ ಚಿತ್ರ ಕಳಪೆ ಪ್ರದರ್ಶನ ತೋರಿದೆ ಎನ್ನಲಾಗುತ್ತಿದೆ.
ಹೌದು, ಬಾಕ್ಸ್ ಆಫೀಸಿನಲ್ಲಿ ಈ ಸಿನಿಮಾ ಮೊದಲ ದಿನವೇ ಕೋಟಿ ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕಂಗನಾ ಕನಸು ಈ ಸಿನಿಮಾದ ಮೂಲಕ ನುಚ್ಚುನೂರಾಗಿದೆ ಎಂದು ಹೇಳಲಾಗುತ್ತಿದೆ.
ಧಾಕಡ್ ಸಿನಿಮಾ ಬಗ್ಗೆ ಕಂಗನಾ ಅಭಿಮಾನಿಗಳು ಸಹ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು, ಪ್ರಚಾರ ಕಾರ್ಯವನ್ನು ಸಹ ಭರದಿಂದ ಮಾಡಲಾಗಿತ್ತು. ಸಾಮಾಜಿಕ ಜಾಲಾತಾಣದಿಂದ ಹಿಡಿದು ರಿಯಾಲಿಟಿ ಶೊಗಳ ಮೂಲಕ ಸಹ ಈ ಚಿತ್ರವನ್ನು ಮಾಡಿದ್ದ ಕಂಗನಾಗೆ ಈ ಕಳಪೆ ಪ್ರದರ್ಶನದ ಸುದ್ದಿ ನಿಜಕ್ಕೂ ಬೇಸರ ಮೂಡಿಸಿದೆ.
ಕಂಗನಾ ಕನಸು ನುಚ್ಚುನೂರು
ಈ ಚಿತ್ರದ ಬಗ್ಗೆ ಬಹಳ ಕನಸನ್ನು ಹೊಂದಿದ್ದ ಕಂಗನಾ ಪ್ರಚಾರಕ್ಕಾಗಿಯೇ ಬಹಳಷ್ಟು ಸಮಯವನ್ನು ಮೀಸಲಿಟ್ಟು ಕೆಲಸ ಮಾಡಿದ್ದರು. ಎಷ್ಟು ಸಾಧ್ಯವೋ ಅಷ್ಟು ಈ ಪ್ರಚಾರದ ಬಗ್ಗೆ ಹೆಚ್ಚು ಗಮನ ನೀಡಿದ್ದ ನಟಿ, ಪ್ರಚಾರ ಕಾರ್ಯದ ವೇದಿಕೆಯ ಮೇಲೆ ಸಹ ವಿವಾದಿತ ಹೇಳಿಕೆಗಳನ್ನು ನೀಡಿ, ಸುದ್ದಿಯಲ್ಲಿದ್ದರು. ಚಿತ್ರಕ್ಕೆ ಸಂಬಂಧಪಟ್ಟ ಹೇಳಿಕೆ ಅಲ್ಲದಿದ್ದರೂ ಸಹ ಈ ಎಲ್ಲಾ ಹೇಳಿಕೆಗಳು ಚಿತ್ರವನ್ನು ಗೆಲ್ಲಿಸಲು ಸಹಾಯ ಮಾಡುತ್ತದೆ ಎಂದು ಚಿತ್ರತಂಡ ಅಂದಾಜಿಸಿತ್ತು. ಪ್ರಚಾರ ಕಾರ್ಯಕ್ಕೆ ಯಾವುದೇ ಕಡಿಮೆ ಆಗದಂತೆ ನೋಡಿಕೊಂಡಿದ್ದರೂ ಸಹ ಚಿತ್ರದ ಕಳಪೆ ಪ್ರದರ್ಶನ ಎಲ್ಲಾ ಕೆಲಸದ ಮೇಲೆ ತಣ್ಣೀರು ಎರೆಚಿದಂತೆ ಆಗಿದೆ.
ಇದನ್ನೂ ಓದಿ: ರಶ್ಮಿಕಾ ಅಲ್ವಂತೆ 'ರಶ್' ಅಂತೆ! 'ಕಿರಿಕ್ ಬೆಡಗಿ' ಹೀಗೆಂದಿದ್ದೇಕೆ?
ಮೂಲಗಳ ಪ್ರಕಾರ ಕಂಗನಾ ರಣಾವತ್ ಅವರ ಯಾವುದೇ ಚಿತ್ರವೂ ಮಾಡದಂತಹ ಕಳಪೆ ಪ್ರದರ್ಶನವನ್ನು ಈ ಧಕಡ್ ಚಿತ್ರ ಮಾಡಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಈ ಚಿತ್ರದ ಮೊದಲ ಬಾಕ್ಸ್ ಆಫೀಸ್ ಕಲೆಕ್ಷನ್ ಒಂದು ಕೋಟಿಯೂ ಆಗಿಲ್ಲ ಎಂಬ ಸುದ್ದಿ ಬಾಲಿವುಡ್ನಲ್ಲಿ ಹರಿದಾಡುತ್ತಿದೆ.
ಕೇವಲ ಒಂದು ಕೋಟಿ ಕಲೆಕ್ಷನ್
ಅಲ್ಲದೇ ಈ ಚಿತ್ರ ಫಸ್ಟ್ ಶೋದಲ್ಲಿ ಥಿಯೇಟರ್ ಬಳಿ ಜನರೇ ಸುಳಿದಿಲ್ಲ, ಖಾಲಿ ಖಾಲಿ ಇದ್ದವು ಎಂಬುದು ಮತ್ತೊಂದು ಸುದ್ದಿ. ನಂತರ ಸೆಕೆಂಡ್ ಶೊ ಸಮಯದಲ್ಲಿ ಸಹ ಯಾವುದೇ ಪ್ರಗತಿ ಕಾಣದೆ ಮಕಾಡೆ ಮಲಗಿದೆ ಎಂದು ಬಾಕ್ಸ್ಆಫೀಸ್ ಮೂಲಗಳು ತಿಳಿಸಿವೆ. ಆದರೆ ಚಿತ್ರತಂಡ ಮಾತ್ರ ಮೊದಲ ದಿನದ ಕಲೆಕ್ಷನ್ 5 ಕೋಟಿ ಎಂದು ಹೇಳಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಲಭ್ಯವಾಗಿಲ್ಲ.
ಈ ಚಿತ್ರದಲ್ಲಿ ಕಂಗನಾ ಏಜೆಂಟ್ ಅಗ್ನಿ ಎಂಬ ಸ್ಪೈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಕಂಗನಾ ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ನಟನೆಯಿಂದ ಒಳ್ಳೆಯ ಹಿಟ್ ಚಿತ್ರ ನೀಡಬಹುದು ಎಂಬ ಊಹೆಗಳು ತಲೆಕೆಳಗಾಗಿವೆ.
ಇದನ್ನೂ ಓದಿ: ಹೊಸ ಕಾರು ಖರೀದಿಸಿದ ಕಂಗನಾ - ಈ ಐಷಾರಾಮಿ ವಾಹನದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!
ಇನ್ನು ಇತ್ತೀಚೆಗೆ ಕಂಗನಾ ಬೆಲೆ ಬಾಳುವ ಕಾರನ್ನು ಖರೀದಿಸಿ ಸುದ್ದಿ ಮಾಡಿದ್ದರು. ಸಿನಿಮಾ ರಿಲೀಸ್ ಮುನ್ನಾ ದಿನವೇ ಕಂಗನಾ ರಣಾವತ್ ಕಾರು ಖರೀದಿಸಿದ್ದರು. ಬಾಲಿವುಡ್ ನಲ್ಲಿ ಈ ಸುದ್ದಿ ಹಾಟ್ ಟಾಪಿಕ್ ಆಗಿತ್ತು. ಕಂಗನಾ ರಣಾವತ್ ಅವರ ಕಾರು ಖರೀದಿ ಇಡೀ ಬಿಟೌನ್ನಲ್ಲಿ ಸದ್ದು ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ