Aparajitha Ayodhya: ಬಾಲಿವುಡ್​ನಲ್ಲಿ ಸಿನಿಮಾ ಆಗಲಿದೆ ಅಯೋಧ್ಯೆ ವಿವಾದ..!

Kangana: ಸದ್ಯ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಬಯೋಪಿಕ್ 'ತಲೈವಿ' ಚಿತ್ರದಲ್ಲಿ ಬ್ಯುಸಿಯಾಗಿರುವ ಕಂಗನಾ, ಹೊಸ ಸಿನಿಮಾ ಮಾಡುವುದಾಗಿ ಪ್ರಕಟಿಸಿದ್ದಾರೆ. ಈ ಚಿತ್ರ ಅನೌನ್ಸ್​ ಆಗಿದ್ದೇ ತಡ ಅದಾಗಲೇ ವಿವಾದಕ್ಕೀಡಾಗಿದೆ.

ನಟಿ ಕಂಗನಾ

ನಟಿ ಕಂಗನಾ

  • Share this:
ಬಾಲಿವುಡ್​ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ವಿವಾದಗಳ ಕ್ವೀನ್ ಎಂದೇ ಕರೆಯಲ್ಪಡುತ್ತಿರುವ ಕಂಗನಾ ರಣಾವತ್ ಕೇವಲ ತಮ್ಮ ಸಿನಿಮಾ ಹಾಗೂ ನಟನೆಯಿಂದ ಮಾತ್ರವಲ್ಲ ಆಗಾಗ ವಿವಾದಗಳಿಂದಲೂ ಸದ್ದು ಮಾಡುತ್ತಿರುತ್ತಾರೆ.

ಸದ್ಯ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಬಯೋಪಿಕ್ 'ತಲೈವಿ' ಚಿತ್ರದಲ್ಲಿ ಬ್ಯುಸಿಯಾಗಿರುವ ಕಂಗನಾ, ಹೊಸ ಸಿನಿಮಾ ಮಾಡುವುದಾಗಿ ಪ್ರಕಟಿಸಿದ್ದಾರೆ. ಈ ಚಿತ್ರ ಅನೌನ್ಸ್​ ಆಗಿದ್ದೇ ತಡ ಅದಾಗಲೇ ವಿವಾದಕ್ಕೀಡಾಗಿದೆ.ಹೌದು, ಕಂಗನಾ ರಣಾವತ್, ಅಯೋಧ್ಯೆ ರಾಮಮಂದಿರ ವಿವಾದ ಕುರಿತ ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ 'ಅಪರಾಜಿತ ಅಯೋಧ್ಯಾ' ಎಂದು ಟೈಟಲ್ ಫಿಕ್ಸ್  ಮಾಡಿದ್ದಾರಂತೆ. ಕಂಗನಾ ಅವರ ಹೋಮ್ ಬ್ಯಾನರ್​ನಲ್ಲಿ ನಿರ್ಮಾಣವಾಗಲಿರು ಈ ಚಿತ್ರದ ಮೂಲಕ ಕ್ವೀನ್​ ನಿರ್ಮಾಪಕಿಯಾಗಿ ಪರಿಚಯವಾಗಲಿದ್ದಾರೆ. ಖ್ಯಾತ ನಿರ್ದೇಶಕ ರಾಜಮೌಳಿ ಅವರ ತಂದೆ ಕೆವಿ ವಿಜಯೇಂದ್ರ ಪ್ರಸಾದ್ ಈಗಾಗಲೇ ಚಿತ್ರದ ಕಥೆ ಸಿದ್ಧಪಡಿಸುತ್ತಿದ್ದು, ಮುಂದಿನ ವರ್ಷ ಸಿನಿಮಾ ಸೆಟ್ಟೇರಲಿದೆ.

ಇದನ್ನೂ ಓದಿ: ವೈರಲ್​ ಆಗುತ್ತಿದೆ ನಟಿ ನಯನತಾರಾ ಟಿವಿ ನಿರೂಪಕಿಯಾಗಿದ್ದಾಗಿನ ವಿಡಿಯೋ..!

ಇತ್ತೀಚೆಗಷ್ಟೆ 'ತಲೈವಿ' ಸಿನಿಮಾದಲ್ಲಿ ಕಂಗನಾ ಅವರ ಫಸ್ಟ್​ ಲುಕ್​ ಬಿಡುಗಡೆಯಾಗಿದ್ದು, ಅದನ್ನೂ ಸಹ ಕೆಲ ಟ್ವೀಟಿಗರು ಟ್ರೋಲ್​ ಮಾಡಿದ್ದರು. ಈ ಸಿನಿಮಾ ಮುಂದಿನ ವರ್ಷ ತೆರೆ ಕಾಣಲಿದೆ.

Nabha Natesh: ಸಿನಿಮಾ ಬಿಟ್ಟು ನಾಡಿನಿಂದ ಕಾಡಿಗೆ ಹೋದ ಸ್ಯಾಂಡಲ್​ವುಡ್​ ನಟಿ ನಭಾ ನಟೇಶ್​..!

First published: