ನವದೆಹಲಿ(ಸೆ.17): ಬಾಲಿವುಡ್ನ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ಇದೇ ವಿಚಾರವಾಗಿ ಊರ್ಮಿಳಾ ಮಾತೋಂಡ್ಕರ್ ಮತ್ತು ಕಂಗನಾ ರಣಾವತ್ ನಡುವೇ ಕೋಲ್ಡ್ ವಾರ್ ಶುರುವಾಗಿತ್ತು. ಈ ಕೋಲ್ಡ್ ವಾರ್ ಈಗ ಇಬ್ಬರ ಮಧ್ಯೆ ಪರಸ್ಪರ ವೈಯಕ್ತಿಕ ಕೆಸರೆರಚಾಟಕ್ಕೆ ಎಡೆಮಾಡಿಕೊಟ್ಟಿದೆ. ನಟಿ ಊರ್ಮಿಳಾ ಮಾತೋಂಡ್ಕರ್ ಒಬ್ಬ ಸಾಫ್ಟ್ ಪಾರ್ನ್ ನಟಿ ಎಂದು ಕಂಗಾನ ರಣಾವತ್ ಹೇಳಿಕೆ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಳೆದ ಎರಡು ತಿಂಗಳಿನಿಂದ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಸದಾ ಸುದ್ದಿಯಲ್ಲಿರುವ ಕಂಗನಾ ರಣಾವತ್ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೀಗೆಂದಿದ್ದಾರೆ.
ಬಾಲಿವುಡ್ನ ಶೇ.90ರಷ್ಟು ಸೆಲೆಬ್ರಿಟಿಗಳು ಡ್ರಗ್ಸ್ ಸೇವನೆ ಮಾಡುತ್ತಾರೆ ಎಂದು ಕಂಗನಾ ಹೇಳಿದ್ದರು. ಇದಕ್ಕೆ ಊರ್ಮಿಳಾ ವಿರೋಧ ವ್ಯಕ್ತಪಡಿಸಿದ್ದರು. ಕಂಗನಾ ಹೀಗೆ ಹೇಳುವುದು ಸರಿಯಲ್ಲ. ಡ್ರಗ್ಸ್ ತೆಗೆದುಕೊಳ್ಳುವರ ಹೆಸರು ನೇರವಾಗಿ ಹೇಳಲಿ. ಒಂದು ವೇಳೆ ಕಂಗನಾ ನೇರವಾಗಿ ಡ್ರಗ್ಸ್ ಸೇವನೆ ಮಾಡುವವರ ಹೆಸರು ಹೇಳಿದರೇ ನಾನೇ ಬೆಂಬಲ ನೀಡುತ್ತೇನೆ ಎಂದಿದ್ದರು. ಇವರಿಗೆ ಬಂದ ಯಶಸ್ಸು ಮತ್ತು ಹಣಕ್ಕೆ ಬಾಲಿವುಂಡ್ ಕಾರಣ. ನೀವು ಬಾಲಿವುಡ್ಗೆ ಋಣಿಯಾಗಿರಬೇಕು ಎಂದಿದ್ದರು.
ಇನ್ನು, ಊರ್ಮಿಳಾ ಹೇಳಿಕೆಗೆ ಕಂಗನಾ ರಣಾವತ್ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಊರ್ಮಿಳಾ ಸಂದರ್ಶನ ನೋಡಿದೆ. ಸಂದರ್ಶನದಲ್ಲಿ ನನ್ನ ಬಗ್ಗೆ ಅಪಹಾಸ್ಯ ಮಾಡಿದ್ದಾರೆ. ನಾನು ಟಿಕೆಟ್ಗಾಗಿ ಬಿಜೆಪಿಯ ಪರ ವಹಿಸುತ್ತೇನೆ ಎಂದು ಹೇಳಿದ್ದಾರೆ. ಊರ್ಮಿಳಾ ಒಬ್ಬರು ಸಾಫ್ಟ್ ನೀಲಿ ತಾರೆ. ಆಕೆಯನ್ನು ನಟನೆಯಿಂದ ಯಾರು ಗುರುತಿಸಿಲ್ಲ. ಇಂತವರಿಗೆ ಟಿಕೆಟ್ ಸಿಗುವುದಾದರೇ ನನಗೆ ಯಾಕೇ ಸಿಗಬಾರ್ದು? ಎಂದು ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ