Kangana Ranaut: ಕಾಶ್ಮೀರಿ ಪಂಡಿತರ ಮೇಲೆ ಸಿನಿಮಾ ಮಾಡಲಿದ್ದಾರೆ ಕಂಗನಾ..!

Movie On Kashmiri Pandits: ನನ್ನ ಮನೆಯಂತೆಯೇ ಉದ್ಧವ್​ ಠಾಕ್ರೆ ನಿನ್ನ ಅಹಂ ಸಹ ಹೀಗೆ ಮುರಿಯಲಿದೆ. ಮೊದಲು ನನಗೆ ಕಾಶ್ಮೀರಿ ಪಂಡಿತರ ಮೇಲಾಗಿದ್ದ ದೌರ್ಜನ್ಯದ ಬಗ್ಗೆ ತಿಳಿದಿತ್ತು. ಆದರೆ, ನನ್ನ ಮನೆ ನೆಲಸಮ ಮಾಡಲು ಪ್ರಯತ್ನಿಸಿದಾಗ ನನಗೆ ಕಾಶ್ಮೀರಿ ಪಂಡಿತರ ಮನಸ್ಸಿಗಾಗಿದ್ದ ನೋವಿನ ಅರಿವಾಯಿತು. ಅದಕ್ಕೆ ಅಯೋಧ್ಯೆಯ ಜೊತೆಗೆ ಕಾಶ್ಮೀರಿ ಪಂಡಿತರ ಮೇಲೂ ಸಿನಿಮಾ ಮಾಡುತ್ತೇನೆ ಎಂದು ಜನರಿಗೆ ಮಾತು ನೀಡುತ್ತೇನೆ. ಅದನ್ನು ಜಗತ್ತಿಗೆ ತೋರಿಸುತ್ತೇನೆ ಎನ್ನುತ್ತಲೇ ತಮ್ಮ ಹೊಸ ಸಿನಿಮಾದ ಪ್ರಕಟಣೆ ಮಾಡಿದ್ದಾರೆ ಕಂಗನಾ.

ಕಂಗನಾ ಹಾಗೂ ಉದ್ಧವ್​ ಠಾಕ್ರೆ

ಕಂಗನಾ ಹಾಗೂ ಉದ್ಧವ್​ ಠಾಕ್ರೆ

  • Share this:
ನಟಿ ಕಂಗನಾ ರನೌತ್​ ನಿನ್ನೆಯಷ್ಟೆ ಶಿವಸೇನೆಯ ವಿರೋಧ ಹಾಗೂ ಬೆದರಿಕೆಯ ನಡುವೆಯೂ ಮುಂಬೈಗೆ ಕಾಲಿಟ್ಟಿದ್ದಾರೆ. ಕಂಗನಾ ಮುಂಬೈಗೆ ಬರುವ ಮುನ್ನವೇ ಅವರ ಕಚೇರಿಯ ಕಟ್ಟಡವನ್ನು ತೆರೆವುಗೊಳಿಸುವ ಕಾರ್ಯಕ್ಕೆ ಬಿಎಂಸಿ ಮುಂದಾಗಿತ್ತು. ಇದರಿಂದಾಗಿ ಮುಂಬೈ ಅನ್ನು ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದ ಕಂಗನಾ, ಮಹಾರಾಷ್ಟ್ರ ಸರ್ಕಾರವನ್ನು ಬಾಬರನ ಆಡಳಿತಕ್ಕೆ ಹೋಲಿಕೆ ಮಾಡಿದ್ದರು. ಇನ್ನು ಕಂಗನಾ ನ್ಯಾಯಲಯದ ಮೆಟ್ಟಿಲೇರಿ ತಮ್ಮ ಕಚೇರಿಯ ತೆರವು ಕಾರ್ಯ ನಿಲ್ಲಿಸುವಂತೆ ಮನವಿ ಮಾಡಿದ್ದರು. ಇದರಿಂದಾಗಿ ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ, ಬಿಎಂಸಿ ಆರೋಪ ಮಾಡುತ್ತಿದ್ದ ತೆರವು ಕಾರ್ಯ ನಿಂತಿತ್ತು. ಮನೆಗೆ ಬಂದ ಕೂಡಲೇ ಕಂಗನಾ ತಮ್ಮ ಒಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಈ ವಿಡಿಯೋದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರಿಗೆ ನೇರವಾಗಿ ಕೆಲವೊಂದು ಮಾತುಗಳನ್ನು ಹೇಳಿದ್ದಾರೆ ಕಂಗನಾ.

ನನ್ನ ಮನೆಯಂತೆಯೇ ಉದ್ಧವ್​ ಠಾಕ್ರೆ ನಿನ್ನ ಅಹಂ ಸಹ ಹೀಗೆ ಮುರಿಯಲಿದೆ. ಮೊದಲು ನನಗೆ ಕಾಶ್ಮೀರಿ ಪಂಡಿತರ ಮೇಲಾಗಿದ್ದ ದೌರ್ಜನ್ಯದ ಬಗ್ಗೆ ತಿಳಿದಿತ್ತು. ಆದರೆ, ನನ್ನ ಮನೆ ನೆಲಸಮ ಮಾಡಲು ಪ್ರಯತ್ನಿಸಿದಾಗ ನನಗೆ ಕಾಶ್ಮೀರಿ ಪಂಡಿತರ ಮನಸ್ಸಿಗಾಗಿದ್ದ ನೋವಿನ ಅರಿವಾಯಿತು. ಅದಕ್ಕೆ ಅಯೋಧ್ಯೆಯ ಜೊತೆಗೆ ಕಾಶ್ಮೀರಿ ಪಂಡಿತರ ಮೇಲೂ ಸಿನಿಮಾ ಮಾಡುತ್ತೇನೆ ಎಂದು ಜನರಿಗೆ ಮಾತು ನೀಡುತ್ತೇನೆ. ಅದನ್ನು ಜಗತ್ತಿಗೆ ತೋರಿಸುತ್ತೇನೆ ಎನ್ನುತ್ತಲೇ ತಮ್ಮ ಹೊಸ ಸಿನಿಮಾದ ಪ್ರಕಟಣೆ ಮಾಡಿದ್ದಾರೆ ಕಂಗನಾ. ಇನ್ನು ತಮ್ಮ ಕಚೇರಿಯನ್ನು ನೆಲಸಮ ಮಾಡಲು ಮುಂದಾದ ವಿಷಯದಿಂದ ಬೇಸರಗೊಂಡ ಕಂಗನಾ ಇದು ಪ್ರಜಾಪ್ರಭುತ್ವದ ಸಾವು ಎಂದು ಟ್ವೀಟ್​ ಮಾಡಿದ್ದರು.

तुमने जो किया अच्छा किया 🙂#DeathOfDemocracy pic.twitter.com/TBZiYytSEwಕಾಶ್ಮೀರಿ ಪಂಡಿತರ ಮೇಲೆ ಈಗಾಗಲೇ ಸಿನಿಮಾ ಬಂದಿದೆ. ಶಿಕಾರ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರನ್ನು ಕಾಶ್ಮೀರದಿಂದ ಹೊರ ಹಾಕಿದ ಬಗ್ಗೆ ತೋರಿಸಲಾಗಿದೆ. ಆದರೆ ಈ ಚಿತ್ರ ತೆರೆ ಕಂಡಾಗ ಇದರಲ್ಲಿ ಕಾಶ್ಮೀರಿ ಪಂಡಿತರ ನೋವನ್ನು ತೋರಿಸಿಯೇ ಇಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.


ಕಂಗನಾ ಅವರ 48 ಕೋಟಿ ವೆಚ್ಚದ ಕಟ್ಟಡವನ್ನು ನೆಲಸಮಯ ಮಾಡುವ ನಿರ್ಧಾರ ತೆಗೆದುಕೊಂಡು, ಆ ಕಾರ್ಯಕ್ಕೆ ಕೈ ಹಾಕಿದ್ದ ಬಿಎಂಸಿ ಹಾಗೂ ಮಹಾರಾಷ್ಟ್ರ ಸರ್ಕಾರದ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ರಾಜಕೀಯ ನಾಯಕರು ಸೇರಿದಂತೆ ಸೆಲೆಬ್ರಿಟಿಗಳು ಸಹ ಕಂಗನಾಗೆ ಬೆಂಬಲ ಸೂಚಿಸುತ್ತಿದ್ದಾರೆ. ಮುಂಬೈನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡಿರುವವರು ಸಾಕಷ್ಟು ಮಂದಿ ಇದ್ದಾರೆ. ಎಲ್ಲರನ್ನೂ ಬಿಟ್ಟು, ಕೇವಲ ರಾಜಕೀಯ ಕಾರಣದಿಂದಾಗಿ ಕಂಗನಾ ಅವರನ್ನು ಮಹಾರಾಷ್ಟ್ರ ಸರ್ಕಾರ ಟಾರ್ಗೆಟ್ ಮಾಡಿ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಟೀಕಿಸುತ್ತಿದ್ದಾರೆ.
Published by:Anitha E
First published: