• Home
  • »
  • News
  • »
  • entertainment
  • »
  • Rakshit Shetty: 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾಗಾಗಿ ರಕ್ಷಿತ್ ಶೆಟ್ಟಿ ಭರ್ಜರಿ ತಯಾರಿ ಹೇಗಿದೆ ಗೊತ್ತಾ..?

Rakshit Shetty: 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾಗಾಗಿ ರಕ್ಷಿತ್ ಶೆಟ್ಟಿ ಭರ್ಜರಿ ತಯಾರಿ ಹೇಗಿದೆ ಗೊತ್ತಾ..?

ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮೊದಲಾರ್ಧದಲ್ಲಿ ಸ್ಮಾರ್ಟ್ ಬಾಯ್‌ನಂತೆ ಇದ್ದ ರಕ್ಷಿತ್ ಸೆಕೆಂಡ್ ಹಾಫ್‌ನಲ್ಲಿ ಫುಲ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ರಕ್ಷಿತ್ ಶೆಟ್ಟಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮುಂದೆ ಓದಿ ...
  • Share this:

ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ 'ಸಪ್ತ ಸಾಗರದಾಚೆ ಎಲ್ಲೋ' (Sapta Sagaradaache Yello) ಚಿತ್ರದ ಮೊದಲಾರ್ಧ ಚಿತ್ರೀಕರಣ ಮುಕ್ತಾಯದ ಹಂತ ಯಶಸ್ವಿಯಾಗಿ ಮುಗಿದಿದ್ದು, ರಕ್ಷಿತ್ ಶೆಟ್ಟಿ (Rakshit Shetty) ಈಗ ಸೆಕೆಂಡ್ ಶೂಟಿಂಗ್ (Shooting) ಶೆಡ್ಯೂಲ್‌ಗೆ ರೆಡಿಯಾಗಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ (Movie) ಮೊದಲಾರ್ಧದಲ್ಲಿ ಸ್ಮಾರ್ಟ್ ಬಾಯ್‌ನಂತೆ ಇದ್ದ ರಕ್ಷಿತ್ ಸೆಕೆಂಡ್ ಹಾಫ್‌ನಲ್ಲಿ ಫುಲ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ರಕ್ಷಿತ್ ಶೆಟ್ಟಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾದ ಕೊನೆಯ ಸನ್ನಿವೇಶಗಳ ಚಿತ್ರಿಕರಣಕ್ಕಾಗಿ ರಕ್ಷಿತ್ ತಮ್ಮ ತೂಕ ಹೆಚ್ಚಿಸಿಕೊಳ್ಳುವುದರ ಜೊತೆಗೆ ಕಂಪ್ಲೀಟ್ ಲುಕ್ ಚೇಂಜ್ ಮಾಡಿಕೊಳ್ಳಲಿದ್ದಾರೆ. ಈಗಾಗಲೇ ಈ ಸಂಬಂಧ ತಯಾರಿ ನಡೆಸುತ್ತಿರುವ ರಕ್ಷಿತ್ ತಮ್ಮ ಚೇಂಜ್ ಓವರ್ ಬಗ್ಗೆ ಉತ್ಸುಕರಾಗಿದ್ದಾರೆ.


ಪುಷ್ಕರ್ ಫಿಲ್ಮ್ಸ್ ನಿರ್ಮಿಸಿರುವ ಹೇಮಂತ್ ಎಂ. ರಾವ್ ನಿರ್ದೇಶನದ ಈ ಚಿತ್ರದಲ್ಲಿ ರಕ್ಷಿತ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಬಳಿಕ ನಿರ್ದೇಶಕ ಹೇಮಂತ್ ಮತ್ತೆ ಕ್ಲಾಸಿಕ್ ರೊಮ್ಯಾಂಟಿಕ್ ಡ್ರಾಮಾ ಒಂದರ ಜತೆ ಬಂದಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಮನು ಪಾತ್ರವನ್ನು ನಿರ್ವಹಿಸುತ್ತಿದ್ದು ಅವರ ಲುಕ್ ಮೂಲಕ ಭಾವನಾತ್ಮಕ ಕಾಂಪ್ಲೆಕ್ಷನ್ ತರಲು ಪ್ರಯತ್ನಿಸಲಾಗಿದೆ ಎಂದು ಈ ಹಿಂದೆ ಸಿನಿಮಾ ತಂಡ ಹೇಳಿತ್ತು.


2 ಶೇಡ್​ಗಳಲ್ಲಿ ರಕ್ಷಿತ್:


ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿರುವ ರಕ್ಷಿತ್ ಫಸ್ಟ್ ಮತ್ತು ಸೆಕೆಂಡ್ ಹಾಫ್‌ ಎರಡರಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದು, ಮೊದಲ ಮತ್ತು ಎರಡನೇ ಹಂತಕ್ಕೆ ಒಂದು ದಶಕದ ಅಂತರ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ.


ಇದನ್ನೂ ಓದಿ: Rakshit Shetty: ಅರ್ಧ ಸಿನಿಮಾಕ್ಕಾಗಿ 15 ಕೆಜಿ ಹೆಚ್ಚಿಸಿಕೊಂಡ ರಕ್ಷಿತ್ ಉಳಿದರ್ಧಕ್ಕಾಗಿ ತೂಕ ಇಳಿಸಿಕೊಳ್ತಿದ್ದಾರಂತೆ!


ಸಿನಿಮಾದ ಮೊದಲ ಹಂತದಲ್ಲಿ ತೆಳ್ಳಗಿರುವ ರಕ್ಷಿತ್ ಮುಂದಿನ ಹಂತಕ್ಕಾಗಿ ಈಗಾಗಲೇ 6-8 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ನಿರ್ದೇಶಕ ಹೇಮಂತ್ ರಾವ್ ಹೇಳಿದ್ದಾರೆ. ಶೂಟಿಂಗ್‌ಗಾಗಿ ತೂಕ ಹೆಚ್ಚಿಸಿಕೊಳ್ಳುವುದರ ಜೊತೆ ರಕ್ಷಿತ್ ತಮಗೆ ಬೇಕಾದ, ಇಷ್ಟವಾದ ಎಲ್ಲವನ್ನೂ ತಿನ್ನುತ್ತಿದ್ದಾರಂತೆ. ರಕ್ಷಿತ್ ತಮ್ಮ ಚೇಂಜ್ ಓವರ್‌ಗಾಗಿ ದಪ್ಪ ಆಗಬೇಕಿದೆ. ಹೀಗಾಗಿ ರಕ್ಷಿತ್ ಈಗ ತನಗೆ ಬೇಕಾದಷ್ಟು ಜಂಕ್ ಫುಡ್ ತಿನ್ನಲು ಅನುಮತಿ ಇದೆ ಎಂದು ಹೇಳಿದ್ದಾರೆ.


ಎರಡನೇ ನಾಯಕಿಗಾಗಿ ಹುಡುಕಾಟ:


ಚಿತ್ರ ತಂಡವು ಎರಡನೇ ನಾಯಕಿಯ ಹುಡುಕಾಟದಲ್ಲಿದೆ ಮತ್ತು ಅವರ ಪಾತ್ರಕ್ಕೆ ಡಾರ್ಕ್ ಶೇಡ್ ಕೂಡ ಇದೆ. ಮತ್ತೊಬ್ಬ ನಾಯಕಿ ಮನುವಿನ ಪ್ರೇಮ ಜೀವನಕ್ಕೆ ಇನ್ನೊಂದು ಮೈಲಿಗಲ್ಲಾಗುತ್ತಾಳೆ. ಆದ್ದರಿಂದ, ಅಲ್ಲಿಂದ ಸಿನಿಮಾ ಹೆಚ್ಚು ಆಸಕ್ತಿದಾಯಕವಾಗುತ್ತವೆ ಎಂದು ಹೇಮಂತ್ ತಿಳಿಸಿದ್ದಾರೆ. 2ನೇ ಭಾಗದ ಶೂಟಿಂಗ್ ಏಪ್ರಿಲ್‌ನಲ್ಲಿ ಪುನಾರಂಭಿಸಲು ಚಿತ್ರತಂಡ ಯೋಜಿಸಿದೆ.


ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ "ಸಪ್ತ ಸಾಗರದಾಚೆ ಎಲ್ಲೋ" ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗ್ಲೇ ಬಿಡುಗಡೆಯಾಗಿದೆ. ಈ ಪೋಸ್ಟರ್‌ನಲ್ಲಿ ರಕ್ಷಿತ್ ಲುಕ್ ಹಿಂದೆ ಬೀರಬಲ್ ಚಿತ್ರದ  ನಾಯಕಿ ರುಕ್ಮಿಣಿ ವಸಂತ್ ಪರಿಕಲ್ಪನೆಯನ್ನು ಬಹಿರಂಗಪಡಿಸಿತ್ತು.


ರೊಮ್ಯಾಂಟಿಕ್ ಜೊತೆ ಒಂದು ಕ್ರೈಂ:


ಸಪ್ತ ಸಾಗರದಾಚೆ ಎಲ್ಲೋ ಟೈಟಲ್ ಕೇಳಿದೊಡನೆ ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಎಂಬ ಫೀಲ್ ಬರುತ್ತದೆ. ಅದರೊಳಗೆ ಒಂದು ಕ್ರೈಂ ಕೂಡ ಇದೆಯಂತೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮತ್ತು ಅದ್ವೈತ ಗುರುಮೂರ್ತಿ ಕ್ಯಾಮೆರಾ ಕೆಲಸ ಮಾಡಿದ್ದಾರೆ.


ಇದನ್ನೂ ಓದಿ: Rakshit Shetty: ರಕ್ಷಿತ್​ ಶೆಟ್ಟಿಗೆ ತಾಳಿ ಕಟ್ಟುವ ಶುಭ ವೇಳೆ ಬಂದಿದ್ಯಂತೆ.. `ಚಾರ್ಲಿ’ ಕೈಹಿಡಿಯೋ ಅದೃಷ್ಟವಂತೆ ಅವ್ರೇನಾ?


ಈ ಚಿತ್ರ ಕೇವಲ ಕನ್ನಡದಲ್ಲಿ ಮಾತ್ರ:


ರಕ್ಷಿತ್ ನಟಿಸಿದ್ದ 'ಅವನೇ ಶ್ರೀಮನ್ನಾರಾಯಣ' ಚಿತ್ರ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣಗೊಂಡಿತ್ತು ಮತ್ತು ಬಹುಭಾಷೆಯಲ್ಲಿ ತೆರೆಕಂಡಿತ್ತು. ಈಗ '777 ಚಾರ್ಲಿ' ಚಿತ್ರದ ಅದೇ ಹಾದಿಯಲ್ಲಿದೆ. ಆ ಸಿನಿಮಾ ಕೂಡ ಐದು ಭಾಷೆಗಳಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ. ಆದರೆ , 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಸಂಪೂರ್ಣವಾಗಿ ಕನ್ನಡದಲ್ಲೇ ನಿರ್ಮಾಣಗೊಂಡು, ಕನ್ನಡದಲ್ಲಿಯೇ ತೆರೆಗೆ ಬರಲಿದೆ. ಬೇರೆ ಯಾವ ಭಾಷೆಯಲ್ಲೂ ಸಿನಿಮಾ ಬರುವುದಿಲ್ಲ ಎಂದು  ನಿರ್ದೇಶಕ ಹೇಮಂತ್ ಸ್ಪಷ್ಟನೆ ನೀಡಿದ್ದಾರೆ.


ಬಿಡುಗಡೆ ಸಿದ್ಧವಾಗಿದೆ ’777 ಚಾರ್ಲಿ’:


ರಕ್ಷಿತ್ ಶೆಟ್ಟಿ ಅಭಿನಯದ ಮತ್ತೊಂದು ಸಿನಿಮಾ ಕಿರಣ್‌ ರಾಜ್‌ ನಿರ್ದೇಶನದ ’777 ಚಾರ್ಲಿ’ ಚಿತ್ರವು ಬಿಡುಗಡೆಗೆ ಕಾಯುತ್ತಿದೆ. ಇಲ್ಲಿ ರಕ್ಷಿತ್ ಶೆಟ್ಟಿ, ಧರ್ಮ ಅನ್ನೋ ಪಾತ್ರವನ್ನು ನಿಭಾಯಿಸಿದ್ದಾರೆ. ಚಿತ್ರವು ಕಳೆದ ವರ್ಷ ಡಿಸೆಂಬರ್ 31ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಚಿತ್ರದ ಬಿಡುಗಡೆ ಮುಂದೂಡಿದ್ದು, ಹೊಸ ದಿನಾಂಕ ಇನ್ನೂ ಚಿತ್ರತಂಡ ತಿಳಿಸಿಲ್ಲ.

Published by:shrikrishna bhat
First published: