Kamya Panjabi: ಮದುವೆ ಬಳಿಕ ಬದಲಾಯ್ತಂತೆ ಕಾಮ್ಯಾ ಪಂಜಾಬಿ ಅದೃಷ್ಟ; ಪತಿಯ ಬಗ್ಗೆ ಏನಂದ್ರು ನಟಿ?

ಕಾಮ್ಯಾ ಪಂಜಾಬಿ ಮೊದಲು ಬಂಟಿ ನೇಗಿ ಅವರನ್ನು ವಿವಾಹವಾಗಿದ್ದರು ಮತ್ತು ನಂತರ ಮೊದಲ ಪತಿಯಿಂದ ವಿಚ್ಛೇದನ ತೆಗೆದುಕೊಂಡು ನಂತರ ಶಲಭ್‌ ಡ್ಯಾಂಗ್‌ ಅವರನ್ನು ವಿವಾಹವಾದರು. ರೇತ್‌, ಅಸ್ತಿತ್ವ ಏಕ್‌ ಪ್ರೇಮ್‌ ಕಹಾನಿ, ಬನೂ ಮೇ ತೇರಿ ದುಲ್ಹನ್‌ ಖ್ಯಾತಿಯ ಕಾಮ್ಯಾ ಪಂಜಾಬಿ, ಶಲಭ್‌ ಡ್ಯಾಂಗ್‌ ಅವರನ್ನು ಪ್ರೀತಿಸಿ, ಫೆಬ್ರವರಿ 2020ರಲ್ಲಿ ವಿವಾಹವಾದರು. ಮದುವೆ ನಂತರ ಜೀವನ ಹೇಗಿದೆ ಎಂಬುದರ ಬಗ್ಗೆ ಮಾತನಾಡಿದ ಕಾಮ್ಯಾ ಸಂಗಾತಿ ಬಗ್ಗೆ ಮತ್ತು ಮದುವೆ ಜೀವನದ ಬಗ್ಗೆ ಖುಷಿ ವ್ಯಕ್ತ ಪಡಿಸಿದ್ದಾರೆ.

ಕಾಮ್ಯಾ ಪಂಜಾಬಿ ಮತ್ತು ಶಲಭ್‌​ ಡಂಗ್

ಕಾಮ್ಯಾ ಪಂಜಾಬಿ ಮತ್ತು ಶಲಭ್‌​ ಡಂಗ್

  • Share this:
ಹಿಂದಿ ಸಿನಿಮಾ  ಮತ್ತು ಧಾರಾವಾಹಿಗಳಲ್ಲಿ ಖಳನಾಯಕಿ (Villain) ಪಾತ್ರ ಮಾಡಿ, ಸೈ ಎನಿಸಿಕೊಂಡಿರುವ ಕಾಮ್ಯಾ ಪಂಜಾಬಿ ತಮ್ಮ ವೈಯಕ್ತಿಕ (Personal) ಮತ್ತು ಸಿನಿಮಾ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಮತ್ತು ರಾಜಕೀಯದಲ್ಲಿ ಸಕ್ರಿಯರಾಗಿರುವ ಕಾಮ್ಯಾ ಯಾವಾಗಲೂ ಕೆಲಸದಲ್ಲಿ ಬ್ಯೂಸಿ ಇರಲು ಬಯಸುವ ವ್ಯಕ್ತಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.‌ ಕಾಮ್ಯಾ ಪಂಜಾಬಿ (Kamya Pnajabi) ಮೊದಲು ಬಂಟಿ ನೇಗಿ ಅವರನ್ನು ವಿವಾಹವಾಗಿದ್ದರು ಮತ್ತು ನಂತರ ಮೊದಲ ಪತಿಯಿಂದ ವಿಚ್ಛೇದನ ತೆಗೆದುಕೊಂಡು ನಂತರ ಶಲಭ್​ ಡಂಗ್ (Shalabh Dang) ಅವರನ್ನು ವಿವಾಹವಾದರು.  ರೇತ್‌, ಅಸ್ತಿತ್ವ ಏಕ್‌ ಪ್ರೇಮ್‌ ಕಹಾನಿ, ಬನೂ ಮೇ ತೇರಿ ದುಲ್ಹನ್‌ ಖ್ಯಾತಿಯ ಕಾಮ್ಯಾ ಪಂಜಾಬಿ, ಶಲಭ್​ ಡಂಗ್ ಅವರನ್ನು ಪ್ರೀತಿಸಿ, ಫೆಬ್ರವರಿ 2020ರಲ್ಲಿ ವಿವಾಹವಾದರು.

ಮದುವೆ ನಂತರ ಜೀವನ ಹೇಗಿದೆ ಎಂಬುದರ ಬಗ್ಗೆ ಮಾತನಾಡಿದ ಕಾಮ್ಯಾ ಸಂಗಾತಿ ಬಗ್ಗೆ ಮತ್ತು ಮದುವೆ ಜೀವನದ ಬಗ್ಗೆ ಖುಷಿ ವ್ಯಕ್ತ ಪಡಿಸಿದ್ದಾರೆ.

"ನನ್ನ ಪತಿ ನನ್ನ ಎಲ್ಲಾ ಕೆಲಸಕ್ಕೂ ಬೆಂಬಲ ನೀಡುತ್ತಾರೆ"
“ನಿಮಗೆ ಸರಿಯಾದ ಸಂಗಾತಿ ಸಿಕ್ಕಾಗ ನೀವು ಮಾನಸಿಕವಾಗಿ ಸ್ಥಿರವಾಗಿರುತ್ತೀರಿ. ನಿಮಗೆ ಬೆಂಬಲ ನೀಡುವ, ನಿಮ್ಮನ್ನು ಅರ್ಥ ಮಾಡಿಕೊಳ್ಳುವ ಸಂಗಾತಿ ಸಿಕ್ಕರೆ ಮದುವೆ ಜೀವನ ಖುಷಿಯಾಗಿರುತ್ತದೆ. ಶಲಭ್ ರನ್ನು ಭೇಟಿಯಾಗುವ ಮುನ್ನ ನನಗೆ ಮದುವೆ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ ಸದ್ಯ ನನ್ನ ಭಾವನೆ, ಭದ್ರತೆ ಬದಲಾಗಿದೆ. ನಾನು ಈಗಲೂ ಮದುವೆ ಮುಂಚೆಯಂತೇ ಬಿಂದಾಸ್‌ ಆಗಿದ್ದೇನೆ. ನನ್ನ ಪತಿಯ ಬೆಂಬಲವಿರದಿದ್ದರೆ ರಾಜಕೀಯಕ್ಕೂ ಸಹ ಬರಲು ಆಗುತ್ತಿರಲಿಲ್ಲ ಎಂದು ಕಾಮ್ಯಾ ಪತಿ ಬಗ್ಗೆ ಮತ್ತು ಮದುವೆ ಜೀವನದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Viaan Raj Kundra: ಸಣ್ಣ ವಯಸ್ಸಲ್ಲೇ ಹೊಸ ಬ್ಯುಸಿನೆಸ್​ ಆರಂಭಿಸಿದ ಶಿಲ್ಪಾ ಶೆಟ್ಟಿ ಮಗ ವಿಯಾನ್!

"ನನ್ನ ಕೆಲಸಗಳು ನನಗೆ ಉತ್ಸಾಹ ನೀಡುತ್ತವೆ"
ಆರೋಗ್ಯಕರ ವೈಯಕ್ತಿಕ ಜೀವನವು ಹೊಸ ಕೆಲಸಗಳನ್ನು ಮಾಡಲು ನನ್ನನ್ನು ಪ್ರೇರೇಪಿಸುತ್ತದೆ ಎಂದು ಪ್ರಸ್ತುತ ಸಂಜೋಗ್‌ನಲ್ಲಿ ಕಾಣಿಸಿಕೊಂಡಿರುವ ನಟಿ ಕಾಮ್ಯಾ ಹೇಳಿದರು. “ನಾನು ಕೆಲಸ ಮಾಡಿಯೇ ಜೀವನ ನಡೆಸಬೇಕು ಎಂಬ ಅನಿವಾರ್ಯವಿಲ್ಲ. ಆದರೆ ನನ್ನ ಕೆಲಸವು ನನಗೆ ಉತ್ಸಾಹ ನೀಡುತ್ತದೆ. ಹೀಗಾಗಿ ನಾನು ಕೆಲಸ ಮಾಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಇದು ನನಗೆ ಚಿಕಿತ್ಸೆ ನೀಡುತ್ತದೆ ಎಂದು ಹೇಳಿದ್ದಾರೆ.

"ಮೂರನೇ ಮಗು ಬಗ್ಗೆ ಯೋಚಿಸುವುದಿಲ್ಲ"
ಸದ್ಯ ಶಲಭ್‌ ಅವರನ್ನು ಮದುವೆ ಆಗಿ ಎರಡು ಮುದ್ದಾದ ಮಕ್ಕಳು ಹೊಂದಿರುವ ಕಾಮ್ಯಾ ಪತಿ ಜೊತೆ ಮೂರನೇ ಮಗುವಿನ ಬಗ್ಗೆ ಆಗಾಗ ಚರ್ಚಿಸುತ್ತಾರಂತೆ. ಮಗುವನ್ನು ಹೊಂದುವುದು ಜೀವಮಾನದ ಜವಾಬ್ದಾರಿಯಾಗಿದೆ. ನಾನು ಅದರಿಂದ ದೂರ ಸರಿಯುವುದಿಲ್ಲ ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಾನು ಇನ್ನೊಂದು ಮಗುವಿನ ಬಗ್ಗೆ ಯೋಚಿಸುವುದಿಲ್ಲ ಎಂದಿದ್ದಾರೆ. “ಶಲಭ್ ಮತ್ತು ನಾನು ಆಗಾಗ್ಗೆ ಮಗುವನ್ನು ಹೊಂದುವ ಸಾಧ್ಯತೆಯ ಬಗ್ಗೆ ಚರ್ಚಿಸುತ್ತೇವೆ.

ಆದಾಗ್ಯೂ, ನಂತರ ನಾನು ಒಂದು ಹೆಜ್ಜೆ ಹಿಂದಕ್ಕೆ ತೆಗೆದುಕೊಳ್ಳುತ್ತೇನೆ, ಏಕೆಂದರೆ ನಾನು ಮತ್ತೆ ಆ ಪ್ರಕ್ರಿಯೆಯ ಮೂಲಕ ಹೋಗಲು ಬಯಸುವುದಿಲ್ಲ. ಬಂಟಿ ನೇಗಿಯೊಂದಿಗಿನ ವಿಚ್ಚೇದನದ ನಂತರ ನನ್ನ ಮಗಳನ್ನು (ಆರಾ) ಒಂಟಿಯಾಗಿ ಬೆಳೆಸುವುದು ತುಂಬಾ ಸವಾಲಿನ ಸಂಗತಿಯಾಯಿತು. ಈ ಸಮಯ ನಮ್ಮಿಬ್ಬರಿಗೂ ತುಂಬಾ ಕಷ್ಟಕರವಾದ ಪ್ರಯಾಣವಾಗಿತ್ತು. ನನ್ನ ಮಗಳು ಚಿಕ್ಕವಳಿದ್ದಾಗ ಅವಳನ್ನು ಬಿಟ್ಟು ಕೆಲಸಕ್ಕೆ ಹೋಗುವುದು ನನಗೆ ಕಷ್ಟವಾಗುತ್ತಿತ್ತು. ನಿನ್ನನ್ನು ಖುಷಿ ಪಡಿಸಲು ನಾನು ಕೆಲಸ ಮಾಡಬೇಕು ಎಂದು ಅವಳಿಗೆ ಹೇಳುತ್ತಿದ್ದೆ. ಕೆಲಸ ಮಾಡುತ್ತಾ ಮಗುವನ್ನು ಬೆಳೆಸುವುದು ಒಂಟಿ ತಾಯಿಗೆ ಇದು ಕಠಿಣ ಪ್ರಯಾಣ ಮತ್ತು ಸುದೀರ್ಘ ಹೋರಾಟವಾಗಿದೆ" ಎಂದು ಕಷ್ಟದ ಸಮಯದ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ:  Priyanka Chopra: ಲಾಸ್ ಏಂಜಲೀಸ್​ನಲ್ಲಿರೋ ಪ್ರಿಯಾಂಕಾ ಚೋಪ್ರಾ ಐಷಾರಾಮಿ ಮನೆ ಹೇಗಿದೆ?

"ಈಗ, ದೇವರು ನನಗೆ ಶಲಭನನ್ನು ಆಶೀರ್ವದಿಸುವ ಮೂಲಕ ನನ್ನ ಜೀವನಕ್ಕೆ ಸಂತೋಷ ನೀಡಿದ್ದಾನೆ. ನನ್ನ ಮಗನನ್ನು (ಶಲಭ್ ಅವರಿಂದ ಪಡೆದ ಮಗ ಇಶಾನ್) ನಾವಿಬ್ಬರೂ ಬೆಳೆಸಿದೆವು. ಸದ್ಯಕ್ಕೆ ನಮ್ಮ ಇಬ್ಬರು ಮಕ್ಕಳು ನಮ್ಮ ಜೀವನವನ್ನು ಆವರಿಸಿದ್ದಾರೆ. ಹೀಗಾಗಿ ಮೂರನೇ ಮಗು ಬಗ್ಗೆ ಯೋಚಿಸುತ್ತಿಲ್ಲ. ವಾಸ್ತವವಾಗಿ ನಮ್ಮ ಕುಟುಂಬದಲ್ಲಿ ನಾನೂ ಕೂಡ ನನ್ನ ಮಕ್ಕಳ ಜೊತೆ ಮಗುವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
Published by:Ashwini Prabhu
First published: