Kamali ಧಾರಾವಾಹಿ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್! ನಿರ್ಮಾಪಕರಿಗೆ ವಂಚಿಸಿ ತಗ್ಲಾಕೊಂಡ್ರಾ ಡೈರೆಕ್ಟರ್?

ಕಿರುತೆರೆ ಹಾಗೂ ಹಿರಿತೆರೆಯ ನಿರ್ದೇಶಕ, ನಟ ಅರವಿಂದ್ ಕೌಶಿಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಮಲಿ ಧಾರಾವಾಹಿ ನಿರ್ಮಾಪಕ ರೋಹಿತ್ ನೀಡಿದ್ದ ದೂರಿನ ಮೇರೆಗೆ ಬೆಂಗಳೂರಿನ ವಯ್ಯಾಲಿಕಾವಲ್ ಪೊಲೀಸರು ಅರವಿಂದ್ ಕೌಶಿಕ್ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ನಿರ್ದೇಶಕ ಅರವಿಂದ್ ಕೌಶಿಕ್

ನಿರ್ದೇಶಕ ಅರವಿಂದ್ ಕೌಶಿಕ್

  • Share this:
ಕನ್ನಡ ಕಿರುತೆರೆಯ (Kannada TV Channel) ಜನಪ್ರಿಯ ಮೆಗಾ ಧಾರಾವಾಹಿ (Mega Serial) ನಿರ್ದೇಶಕನ (Dirrector) ಬಂಧನವಾಗಿದೆ. ಹೌದು ಜೀ ಕನ್ನಡ (Zee Kannada) ವಾಹಿನಿಯ ಜನಪ್ರಿಯ ಮೆಗಾ ಧಾರಾವಾಹಿಗಳಲ್ಲಿ ಒಂದಾದ ‘ಕಮಲಿ’ (Kamali) ಧಾರಾವಾಹಿ ನಿರ್ದೇಶಕ ಅರವಿಂದ್ ಕೌಶಿಕ್ (Aravind Kosuhik) ಅವರನ್ನು ಪೊಲೀಸರು (Police) ಬಂಧಿಸಿದ್ದಾರೆ. ಧಾರಾವಾಹಿ ನಿರ್ಮಾಪಕರಿಗೆ (Producer) ವಂಚಿಸಿದ ಕೇಸ್‌ನಲ್ಲಿ (Fraud Case) ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ಬಂಧಿಸಲಾಗಿದೆ. 'ಕಮಲಿ' ಧಾರಾವಾಹಿಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದ ನಿರ್ಮಾಪಕ ರೋಹಿತ್.ಎಸ್ (Rohit S.), ತಮಗೆ ಸಿಗಬೇಕಾದ ರಿಟರ್ನ್ಸ್ (Returns) ಸಿಕ್ಕಿಲ್ಲ ಎಂದು ಈ ಹಿಂದೆ ಬೆಂಗಳೂರು ಪೊಲೀಸ್ ಕಮಿಷನರ್ (Bengaluru Police Commissioner) ಮೊರೆ ಹೋಗಿದ್ದರು. ಇದೀಗ ನಿರ್ಮಾಕಪರು ನೀಡದ ದೂರಿನನ್ವಯ ಅರವಿಂದ್ ಕೌಶಿಕ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

 ನಿರ್ದೇಶಕ ಅರವಿಂದ್ ಕೌಶಿಕ್ ಬಂಧನ

 ಕಿರುತೆರೆ ಹಾಗೂ ಹಿರಿತೆರೆಯ ನಿರ್ದೇಶಕ, ನಟ ಅರವಿಂದ್ ಕೌಶಿಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಮಲಿ ಧಾರಾವಾಹಿ ನಿರ್ಮಾಪಕ ರೋಹಿತ್ ನೀಡಿದ್ದ ದೂರಿನ ಮೇರೆಗೆ ಬೆಂಗಳೂರಿನ ವಯ್ಯಾಲಿಕಾವಲ್ ಪೊಲೀಸರು ಅರವಿಂದ್ ಕೌಶಿಕ್ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಲಾಭಾಂಶ ಕೊಡಿಸುವಂತೆ ದೂರು ನೀಡಿದ್ದ ನಿರ್ಮಾಪಕ

2018ರಲ್ಲಿ 'ಕಮಲಿ' ಧಾರಾವಾಹಿಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದ ನಿರ್ಮಾಪಕ ರೋಹಿತ್.ಎಸ್, ತಮಗೆ ಸಿಗಬೇಕಾದ ರಿಟರ್ನ್ಸ್ ಸಿಕ್ಕಿಲ್ಲ ಎಂದು ಈ ಹಿಂದೆ ಬೆಂಗಳೂರು ಪೊಲೀಸ್ ಕಮಿಷನರ್ ಮೊರೆ ಹೋಗಿದ್ದರು. ಕಮಲ ಧಾರಾವಾಹಿಗಾಗಿ ಸುಮಾರು 73 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೇನೆ, ಆದರೆ ನನಗೆ ಯಾವುದೇ ಲಾಭಾಂಶ ಸಿಕ್ಕಿಲ್ಲ ಹಾಗೂ ನಾನು ಹಾಕಿದ ಹಣವನ್ನೂ ವಾಪಸ್ ನೀಡಿಲ್ಲ ಎಂದು ರೋಹಿತ್ ದೂರು ನೀಡಿದ್ದರು.

ಇದನ್ನೂ ಓದಿ: Puneeth Rajkumarಗೆ ಇದೆಂಥಾ ಅಪಮಾನ! ಇಲ್ಲಿ ಅಪ್ಪು ಫೋಟೋ, ಕನ್ನಡ ಧ್ವಜಕ್ಕೆ ನೋ ಎಂಟ್ರಿ!

ಅರವಿಂದ್ ಕೌಶಿಕ್ ಮೇಲೆ ಕೇಸ್

ನಿರ್ಮಾಪಕ ರೋಹಿತ್ ನೀಡಿದ ದೂರಿನ ಅನ್ವಯ ನಿರ್ದೇಶಕ ಅರವಿಂದ್ ಕೌಶಿಕ್ ಹಾಗೂ ಧಾರಾವಾಹಿಗೆ ಸಂಬಂಧಿಸಿದಂತೆ ಇನ್ನಿತರರ ಮೇಲೆ ಐಪಿಸಿ ಸೆಕ್ಷನ್ 420 ಅನ್ವಯ ವಯ್ಯಾಲಿಕಾವಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಇದೇ ದೂರಿನನ್ವಯ ಅರವಿಂದ್ ಕೌಶಿಕ್‌ರನ್ನು ಬಂಧಿಸಲಾಗಿದೆ.

ನಿರ್ಮಾಪಕರ ವಿರುದ್ಧ ಅರವಿಂದ್ ಕೌಶಿಕ್ ಆರೋಪ

ಇನ್ನು ನಿರ್ದೇಶಕ ಅರವಿಂದ್ ಕೌಶಿಕ್ ಕೂಡ ನಿರ್ಮಾಪಕ ರೋಹಿತ್ ವಿರುದ್ಧ ಆರೋಪಿಸಿದ್ದರು. 'ರೋಹಿತ್ ಅವರು ಧಾರಾವಾಹಿಗೆ ಫೈನಾನ್ಸ್ ಹಾಕಿದ್ದರು. ಅವರಿಗೆ ಏನು ನೀಡಬೇಕೋ ಅದನ್ನು ನೀಡಿದ್ದೇವೆ. ಆದರೂ ಸುಮ್ಮನೆ ಈ ರೀತಿ ಮಾಡುತ್ತಿದ್ದಾರೆ. ತಮ್ಮ ಪ್ರಚಾರಕ್ಕಾಗಿ ನಮ್ಮ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ.'' ಅಂತ ಆರೋಪಿಸಿದ್ದರು.

“ಹೆಸರು ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದ ನಿರ್ಮಾಪಕ”

''ಫೈನಾನ್ಸ್ ಹಾಕಿದ್ದೇನೆ ಎಂಬ ಕಾರಣಕ್ಕೆ ಧಾರಾವಾಹಿಯ ಹಣಕಾಸಿನ ವ್ಯಾವಹಾರದ ಬಗ್ಗೆ ಕೇಳುತ್ತಿದ್ದರು. ಕೊನೆಗೆ ಇದ್ದಕ್ಕಿದ್ದ ಹಾಗೆ ಲೀಗನ್ ನೋಟಿಸ್ ಕಳುಹಿಸಿದರು. ಇವರು ಸಹ ನಿರ್ಮಾಪಕ ಎಂಬುದನ್ನು ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ ಅನಿಸಿ ಹೆಸರು ತೆಗೆದ್ವಿ ಅಂತ ಹೇಳಿದ್ದರು.

ಇದನ್ನೂ ಓದಿ: Explained: ಕಿಚ್ಚ ಸುದೀಪ್-ಅಜಯ್ ದೇವಗನ್ ಮಧ್ಯೆ 'ಹಿಂದಿ' ವಾರ್! ಶುರುವಾಗಿದ್ದು ಹೇಗೆ, ಬಂದು ನಿಂತಿದ್ದೆಲ್ಲಿಗೆ?

 ಯಾರು ಈ ಅರವಿಂದ್ ಕೌಶಿಕ್?

ನಿರ್ದೇಶಕ ಅರವಿಂದ ಕೌಶಿಕ್‌ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ನಮ್ಮ ಏರಿಯಾಲ್‌ ಒಂದಿನ, ತುಘಲಕ್‌, ಹುಲಿರಾಯ ಕಾಫಿ ವಿತ್ ಮೈ ವೈಫ್ ಹಾಗೂ ಶಾರ್ದೂಲ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಅಲ್ಲದೇ ಕಮಲಿ ಹಾಗೂ ಲಗ್ನ ಪತ್ರಿಕೆ ಧಾರವಾಹಿಯ ನಿರ್ದೇಶಕರಾಗಿದ್ದರು.
Published by:Annappa Achari
First published: