Comali Movie: ರಜಿನಿಯನ್ನು ಕೆಣಕಿದ್ರೆ ಕಮಲ್ ತಗೋತಾರೆ ಕ್ಲಾಸ್ : ಕೋಮಾಲಿ ತಂಡಕ್ಕೆ ಬಿಸಿ ಮುಟ್ಟಿಸಿದ ಉಳಗ ನಾಯಕನ್​

Comali Movie: ಸ್ಯಾಂಡಲ್​ವುಡ್​ನಲ್ಲಿ ಅಂಬಿ-ವಿಷ್ಣು,  ಬಾಲಿವುಡ್‍ನಲ್ಲಿ ಬಿಗ್‍ಬಿ ಅಮಿತಾಭ್ ಬಚ್ಚನ್ ಮತ್ತು ಧರ್ಮೇಂದ್ರ,  ಇನ್ನು ಕಾಲಿವುಡ್‍ನಲ್ಲಿ ಫ್ರೆಂಡ್‍ಶಿಪ್ ಅನ್ನೋ ವಿಷಯ ಬಂದಾಗ ನೆನಪಾಗೋದು ರಜಿನಿಕಾಂತ್ ಹಾಗೂ ಕಮಲ್ ಹಾಸನ್. ಅದೇ ಸ್ನೇಹದಿಂದಲೇ ಇಂದು ಕಮಲ್​ ಚಿತ್ರತಂಡವೊಂದಕ್ಕೆ ಬಿಸಿ ಮುಟ್ಟಿಸಿದ್ದಾರೆ.

Anitha E | news18
Updated:August 7, 2019, 12:24 PM IST
Comali Movie: ರಜಿನಿಯನ್ನು ಕೆಣಕಿದ್ರೆ ಕಮಲ್ ತಗೋತಾರೆ ಕ್ಲಾಸ್ : ಕೋಮಾಲಿ ತಂಡಕ್ಕೆ ಬಿಸಿ ಮುಟ್ಟಿಸಿದ ಉಳಗ ನಾಯಕನ್​
ಕಮಲ್​ ಹಾಸನ್​ ಹಾಗೂ ನಟ ರಜಿನಿ
  • News18
  • Last Updated: August 7, 2019, 12:24 PM IST
  • Share this:
ಗೆಳೆತನ ಅಂತ ಬಂದಾಗ ಕರ್ನಾಟಕದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಸಾಹಸ ಸಿಂಹ ಡಾ. ವಿಷ್ಣುವರ್ಧನ್ ನಿಲ್ತಾರೋ, ತಮಿಳಿನಲ್ಲಿ ಸೂಪರ್​ಸ್ಟಾರ್​ ರಜಿನಿಕಾಂತ್ ಹಾಗೂ ಉಳಗನಾಯಕನ್​ ಕಮಲ್ ಹಾಸನ್ ನೆನಪಾಗ್ತಾರೆ. ಅಷ್ಟರ ಮಟ್ಟಿಗಿನ ಗಟ್ಟಿ ಸ್ನೇಹ ರಜಿನಿ ಮತ್ತು ಕಮಲ್‍ ಅವರದ್ದು. ಇತ್ತೀಚೆಗಷ್ಟೇ ನಡೆದ ಘಟನೆಯೊಂದು ಅವರ ಗೆಳೆತನಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಸ್ಯಾಂಡಲ್​ವುಡ್​ನಲ್ಲಿ ಅಂಬಿ-ವಿಷ್ಣು,  ಬಾಲಿವುಡ್‍ನಲ್ಲಿ ಬಿಗ್‍ಬಿ ಅಮಿತಾಭ್ ಬಚ್ಚನ್ ಮತ್ತು ಧರ್ಮೇಂದ್ರ,  ಇನ್ನು ಕಾಲಿವುಡ್‍ನಲ್ಲಿ ಫ್ರೆಂಡ್‍ಶಿಪ್ ಅನ್ನೋ ವಿಷಯ ಬಂದಾಗ ನೆನಪಾಗೋದು ರಜಿನಿಕಾಂತ್ ಹಾಗೂ ಕಮಲ್ ಹಾಸನ್.

 kamalhassan-reacts to comali movie traile
ಕಮಲ್​ ಹಾಸನ್​ ಹಾಗೂ ನಟ ರಜಿನಿ


ಇವರದ್ದು ಬ್ಲ್ಯಾಕ್ ಆ್ಯಂಡ್ ವೈಟ್ ಕಾಲದಿಂದ ಹಿಡಿದು ಈಗ 3ಡಿ ಟೈಮ್‍ವರೆಗೂ, ಬರೋಬ್ಬರಿ 4 ದಶಕಗಳ ಗಾಢವಾದ ಗೆಳೆತನ. ಕೆ. ಬಾಲಚಂದರ್ ಅವರ ಗರಡಿಯಲ್ಲಿ ಒಂದೇ ಸಮಯದಲ್ಲಿ ಕಾಲಿವುಡ್‍ಗೆ ಎಂಟ್ರಿ ಕೊಟ್ಟ ಈ ಸೂಪರ್​ಸ್ಟಾರ್​ಗಳು, ಕ್ರಮೇಣ ಒಬ್ಬರಿಗೊಬ್ಬರು ಪ್ರತಿಸ್ಪರ್ಧಿಗಳಾದ್ರು. ಇಬ್ಬರೂ ಒಳ್ಳೇ ಫ್ರೆಂಡ್ಸ್ ಆಗಿದ್ದರೂ, ಬಾಕ್ಸಾಫಿಸ್​ನಲ್ಲೂ  ಮುಖಾಮುಖಿಯಾದ ಹಲವು ಉದಾಹರಣೆಗಳಿವೆ.

ಇದನ್ನೂ ಓದಿ: ಸಂಭಾವನೆ ವಿಷಯದಲ್ಲಿ ಬಾಲಿವುಡ್​ ಸ್ಟಾರ್​ ನಟರನ್ನೇ ಹಿಂದಿಕ್ಕಿದ ಪ್ರಭಾಸ್​..!

1975ರಲ್ಲಿ 'ಅಪೂರ್ವ ರಾಗಂಗಳ್' ಚಿತ್ರದಲ್ಲಿ ಒಟ್ಟಿಗೇ ಮೊದಲ ಬಾರಿಗೆ ನಟಿಸಿದ ಈ ದಿಗ್ಗಜರು, 1985ರ ಹೊತ್ತಿಗೆ 10 ವರ್ಷಗಳಲ್ಲಿ ಬರೋಬ್ಬರಿ 16 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಕಳೆದ ಮೂರೂವರೆ ದಶಕಗಳಿಂದ ಈ ಸ್ಟಾರ್​ಗಳು ಒಟ್ಟಿಗೆ ನಟಿಸಿಲ್ಲ. ಆದರೆ ರಜಿನಿ ಮತ್ತು ಕಮಲ್ ನಡುವಿನ ಫ್ರೆಂಡ್‍ಶಿಪ್ ಮಾತ್ರ ಹಾಗೇ ಉಳಿದಿದೆ. ಕಾರ್ಯಕ್ರಮಗಳಲ್ಲಿ ಒಬ್ಬರು ಇನ್ನೊಬ್ಬರನ್ನು ಹೊಗಳೋದು ಕೂಡ ಕಾಮನ್. ಅಷ್ಟೇ ಯಾಕೆ ಇಬ್ಬರೂ ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಕಟ್ಟಿಕೊಂಡು, ಬೇರೆ ಬೇರೆ ಸಿದ್ಧಾಂತಗಳನ್ನು ಹೊಂದಿದ್ದರೂ, ಅದನ್ನೂ ಮೀರಿದ ಗೆಳೆತನ ಇವರದ್ದು.

ಇತ್ತೀಚೆಗಷ್ಟೇ ಜಯಂ ರವಿ ನಾಯಕನಾಗಿ ನಟಿಸಿರುವ ತಮಿಳಿನ 'ಕೋಮಾಲಿ' ಚಿತ್ರದ ಟ್ರೈಲರ್ ರಿಲೀಸ್ ಆಯ್ತು. ಅದರಲ್ಲಿ ರಜಿನಿಕಾಂತ್ ಅವರು ರಾಜಕಾರಣಕ್ಕೆ ಬರುವ ಹೇಳಿಕೆಯ ಕುರಿತು ಜೋಕ್ ಮಾಡಲಾಗಿತ್ತು. ಈ ದೃಶ್ಯ ರಜಿನಿ ಅಭಿಮಾನಿಗಳನ್ನು ಕೆರಳಿಸಿತ್ತು. 'ಬಾಯ್ಕಾಟ್ ಕೋಮಾಲಿ' ಅನ್ನೋ ಹ್ಯಾಶ್‍ಟ್ಯಾಗ್ ಹಲವು ತಾಸುಗಳ ಕಾಲ ಟ್ವಿಟರ್​ನಲ್ಲಿ ಟ್ರೆಂಡ್ ಆಗಿತ್ತು.

'ಕೋಮಾಲಿ' ನಿರ್ಮಾಪಕ ಗಣೇಶ್‍ಗೆ ಖುದ್ದು ಕರೆ ಮಾಡಿದ ಕಮಲ್, ಅದು ಜೋಕ್ ಅಲ್ಲ, ಅದನ್ನು ತಾವು ಒಪ್ಪುವುದೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ರಜಿನಿ ಫ್ಯಾನ್ಸ್ ಮಾತ್ರವಲ್ಲ ಚಿತ್ರರಂಗದ ಗಣ್ಯರೂ ತರಾಟೆಗೆ ತೆಗೆದುಕೊಳ್ಳೋಕೆ ಶುರು ಮಾಡಿದ ಕಾರಣ ನಿರ್ಮಾಪಕ ಇಶಾರಿ ಕೆ. ಗಣೇಶ್ ಎಚ್ಚೆತ್ತುಕೊಂಡಿದ್ದಾರೆ.

ಇದನ್ನೂ ಓದಿ: Roberrt: ಜೂಜಾಟದಿಂದ ಹಣ-ಆಸ್ತಿ ಕಳೆದುಕೊಂಡ್ರಾ ರಾಬರ್ಟ್ ಚಿತ್ರದ ಈ ಸ್ಟಾರ್ ನಟ..!

ರಜಿನಿ ಕುರಿತಾದ ಸನ್ನಿವೇಶವನ್ನು ಸಿನಿಮಾದಲ್ಲಿ ಕಟ್ ಮಾಡೋದಾಗಿ ತಿಳಿಸಿದ್ದಾರೆ. ಅದೇನೇ ಇರಲಿ, 'ಕೋಮಾಲಿ' ಇದೇ ಆಗಸ್ಟ್ 15ರಂದು ರಿಲೀಸ್ ಆಗಲಿದ್ದು, ಅಂದು ಏನೆಲ್ಲಾ ಹೊಸ ವಿವಾದಕ್ಕೆ ಕಾರಣವಾಗುತ್ತೋ ನೋಡಬೇಕು.

Rakhi Sawant Honeymoon Pics: ಹನಿಮೂನ್​ ಚಿತ್ರಗಳನ್ನು ಹಂಚಿಕೊಂಡ ವಿವಾದಿತ ನಟಿ ರಾಖಿ ಸಾವಂತ್​..!

First published: August 7, 2019, 11:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading