ಬಾಲಿವುಡ್ನಲ್ಲೊಬ್ಬ ಕಿರಿಕ್ ಮ್ಯಾನ್ (Bollywood) ಇದ್ದಾರೆ. ಈ ವ್ಯಕ್ತಿ ಸುಮ್ನೆ ಇರೋದೇ ಇಲ್ಲ. ಒಂದಿಲ್ಲ ಒಂದು ಕಿರಿಕ್ (Kamal R Khan) ಮಾಡಿಕೊಳ್ಳುತ್ತಲೇ ಇರ್ತಾರೆ. ಬಾಲಿವುಡ್ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಶಾರುಖ್ (Shah Rukh Khan) ಖಾನ್,ಹೀಗೆ ದೊಡ್ಡ ಸ್ಟಾರ್ಗಳನ್ನೆ ಮೈಮೇಲೆ ಎಳೆದುಕೊಳ್ಳತ್ತಾರೆ. ವಿವಾದಾತ್ಮಕ ಟ್ವಿಟ್ಗಳನ್ನ ಮಾಡುತ್ತಲೇ ಕಿರಿಕ್ ಮಾಡಿಕೊಳ್ತಾರೆ. ಆ ವ್ಯಕ್ತಿ ಬೇರೆ ಯಾರೋ ಅಲ್ಲ. ಅದು ಕಮಲ್ ಆರ್ ಖಾನ್. ಒಂದು ಕಾಲದ ನಟ ಈಗೀನ ಕಿರಿಕ್ ಕ್ರಿಟಿಕ್ ಮ್ಯಾನ್. ಆದರೆ ಅದ್ಯಾವಾಗ್ಲೋ ಸಿನಿಮಾ (Rashmika Mandanna) ಕೂಡ ಮಾಡಿದ್ದರಂತೆ. ಅದಕ್ಕೇನೆ ಇವರನ್ನ ನಿರ್ಮಾಪಕ ಕಮಲ್ ಆರ್ ಖಾನ್ ಅಂತಲೂ ಕರೆಯುತ್ತಾರೆ. ಈ ಕಮಲ್ ಆರ್ ಖಾನ್ ಈಗ ರೊಚ್ಚಿಗೆದ್ದು ಬಿಟ್ಟಿದ್ದಾರೆ.
ಟ್ವಿಟರ್ ಮೂಲಕ ರಶ್ಮಿಕಾ ಮಂದಣ್ಣ ವಿರುದ್ಧ ಹಿಗ್ಗಾಮುಗ್ಗಾ ಕಾಮೆಂಟ್ ಕೂಡ ಮಾಡಿದ್ದಾರೆ. ಅದರ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ.
ನಿನ್ನ ಬಾಯ್ ಫ್ರೆಂಡ್ ಓಡಿಸಿದಂತೆ ನಿನ್ನನೂ ಓಡಿಸಿಬಿಡುತ್ತೇವೆ!
ರಶ್ಮಿಕಾ ಮಂದಣ್ಣ ಬಾಯ್ ಫ್ರೆಂಡ್ ಯಾರು? ಅಲ್ಲಿ ಬರೋ ಹೆಸರು ಸದ್ಯಕ್ಕೆ ಒಂದೇ. ಅದುವೇ ವಿಜಯ್ ದೇವರಕೊಂಡ ಅನ್ನೋದೇ ಬಹುತೇಕ ಒಟ್ಟು ಮಾತಿನ ತಾತ್ಪರ್ಯ. ನಿಜ, ಇದು ಎಷ್ಟು ನಿಜವೋ ಏನೋ. ಆದರೆ ಕಮಲ್ ಆರ್ ಖಾನ್ ಕೂಡ ಇದನ್ನೇ ಒತ್ತಿ ಇಲ್ಲಿ ಹೇಳಿದ್ದಾರೆ.
ನಿನ್ನ ಬಾಯ್ ಫ್ರೆಂಡ್ ಅನಕೊಂಡನನ್ನ ನಾವು ಓಡಿಸಿದ್ದೇವೆ. ಲೈಗರ್ ಅಂತ ಬಂದ ಈ ಅನಕೊಂಡನನ್ನ ಈಗಾಗಲೇ ಓಡಿಸಿದ್ದೇವೆ. ಈಗ ನಿನ್ನ ಸರದಿ, ನಿನ್ನನ್ನೂ ಓಡಿಸುತ್ತೇವೆ ಅಂತಲೇ ಕಮಲ್ ಆರ್ ಖಾನ್ ನಟಿ ರಶ್ಮಿಕಾ ಮಂದಣ್ಣಗೆ ಆವಾಜ್ ಹಾಕಿದ್ದಾರೆ.
ಕಮಲ್ ಆರ್ ಖಾನ್ ಹಿಂಗೆ ಟ್ವೀಟ್ ಮಾಡಿದ್ದೇಕೆ?
ಕಮಲ್ ಆರ್ ಖಾನ್ ಗೆ ಯಾವುದೇ ಕಾರಣವೂ ಬೇಕಿಲ್ಲ. ಏನೇನೋ ಟ್ವೀಟ್ ಮಾಡಿ ಕಿರಿಕ್ಗಳನ್ನ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಅದೇ ರೀತಿ ರಶ್ಮಿಕಾ ಮಂದಣ್ಣ ವಿಷಯದಲ್ಲೂ ಕಮಲ್ ಆರ್.ಖಾನ್ ಟ್ವೀಟ್ನಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.
ಕಮಲ್ ಆರ್ ಖಾನ್ ಇಷ್ಟಕ್ಕೆ ಸುಮ್ನೆ ಆಗಿಲ್ಲ. ಎಲ್ಲರೂ ನಿಮ್ಮ ಕಣ್ಣುಗಳನ್ನ ಚೆಕ್ ಮಾಡಿಸಿಕೊಳ್ಳಿ, ರಶ್ಮಿಕಾ ಮಂದಣ್ಣಳನ್ನ ನ್ಯಾಷನಲ್ ಕ್ರಶ್ ಅಂತಿರಲ್ಲೋ ಅಂತಲೇ ಕಮಲ್ ಆರ್ ಖಾನ್ ಕಾಮೆಂಟ್ ಮಾಡಿರೋದನ್ನ ಕೂಡ ಇಲ್ಲಿ ನೋಡಬಹುದು.
ಬೋಜಪುರಿ ಹೀರೋಗಳ ಜೊತೆಗೆ ರಶ್ಮಿಕಾ ನಟಿಸಬೇಕು!
ರಶ್ಮಿಕಾ ಮಂದಣ್ಣ ಬೋಜಪುರಿ ಸಿನಿಮಾಗಳಲ್ಲಿ ಅಭಿನಯಿಸಿದ್ರೆ ಬೇಸರ ಏನೂ ಇಲ್ಲ. ನಾವು ರಶ್ಮಿಕಾರನ್ನ ನೋಡೋಕೆ ಇಷ್ಟಪಡ್ತಿವಿ. ಹಾಗೇನೆ ರಶ್ಮಿಕಾ ರಾಕಿಂಗ್ ಹೀರೋಯಿನ್ ಆಗ್ಬೇಕು ಅಂದ್ರೆ, ರವಿ ಕಿಶನ್, ಪವನ್ ಸಿಂಗ್, ಕೇಸರಿ ಲಾಲ್ ರಂತಹ ನಟರ ಜೊತೆಗೆ ನಟಿಸಿದಾಗಲೇ ಅದು ಸಾಧ್ಯ ಅಂತಲೂ ಕಮಲ್ ಆರ್ ಖಾನ್ ಟ್ವಿಟರ್ನಲ್ಲಿಯೇ ಸಲಹೆ ಕೊಟ್ಟಿದ್ದಾರೆ.
ಈಗ ನೀವು ಓದಿರೋ ಅಷ್ಟು ಹೆಸರು ಬೋಜಪುರಿ ನಟರ ಹೆಸರುಗಳೇ ಆಗಿವೆ. ಇದನ್ನ ಅದ್ಯಾಕೆ ಕಮಲ್ ಆರ್. ಖಾನ್ ಹೇಳಿದ್ರೋ ಏನೋ, ಗೊತ್ತಿಲ್ಲ. ಆದರೆ ರಶ್ಮಿಕಾ ಮಂದಣ್ಣ ಈ ಬಗ್ಗೆ ಎಲ್ಲೂ ಏನೂ ಹೇಳಿಕೊಂಡಿಲ್ಲ.
ಇದನ್ನೂ ಓದಿ: Rakhi Sawant: ಕರ್ನಾಟಕದ ಸೊಸೆಯಾದ ರಾಖಿ ಸಾವಂತ್! ಆದಿಲ್ ಖಾನ್ ಜೊತೆ ಮದುವೆ
ಇದಕ್ಕೆ ಸಂಬಂಧಿಸಿದಂತೆ ಯಾವುದೇ ಟ್ವೀಟ್ ಅನ್ನೂ ರಶ್ಮಿಕಾ ಮಂದಣ್ಣ ಮಾಡಿಯೂ ಇಲ್ಲ. ಆದರೂ ಕಮಲ್ ಆರ್. ಖಾನ್ ಮಾಡಿರೋ ಟ್ವೀಟ್ ಭಾರೀ ವೈರಲ್ ಆಗಿವೆ. ಮನಸಿಗೆ ಬಂದ ರೀತಿನೇ ಕಮಲ್ ಆರ್. ಖಾನ್ ಇಲ್ಲಿ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಟ್ವೀಟ್ ಮಾಡಿ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ