• Home
  • »
  • News
  • »
  • entertainment
  • »
  • Kamal Haasan: ಕಾಂತಾರ ವೀಕ್ಷಿಸಿದ ಕಮಲ್ ಹಾಸನ್, ಕಾಲ್ ಮಾಡಿ ರಿಷಬ್ ಶೆಟ್ಟಿಗೆ ಹೇಳಿದ್ದೇನು?

Kamal Haasan: ಕಾಂತಾರ ವೀಕ್ಷಿಸಿದ ಕಮಲ್ ಹಾಸನ್, ಕಾಲ್ ಮಾಡಿ ರಿಷಬ್ ಶೆಟ್ಟಿಗೆ ಹೇಳಿದ್ದೇನು?

ರಿಷಬ್ ಶೆಟ್ಟಿಗೆ ಕಮಲ್ ಹಾಸನ್ ಕಾಲ್ ಮಾಡಿ ಹೇಳಿದ್ದೇನು?

ರಿಷಬ್ ಶೆಟ್ಟಿಗೆ ಕಮಲ್ ಹಾಸನ್ ಕಾಲ್ ಮಾಡಿ ಹೇಳಿದ್ದೇನು?

ಕಮಲ್ ಹಾಸನ್ ಕಾಂತಾರ ಚಿತ್ರ ನೋಡಿ ತುಂಬಾ ಮೆಚ್ಚಿಕೊಂಡಿದ್ದಾರೆ. ನೇರವಾಗಿ ಫೋನ್ ಮಾಡಿ ರಿಷಬ್ ಶೆಟ್ರಿಗೂ ತಿಳಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ ಸಿನಿಮಾ (Kantara Film) ಇನ್ನೂ ಹೌಸ್​ ಫುಲ್ ಓಡ್ತಿದೆ. ಕನ್ನಡದ ಮಟ್ಟಿಗೆ ಇದು ದೊಡ್ಡ ಸಾಧನೆನೆ ಆಗಿದೆ. 50 ದಿನ ಪೂರೈಸಿದೆ (Kantara 50 Days) ಕಾಂತಾರ ಸಿನಿಮಾವನ್ನ ಅನೇಕ ಸೂಪರ್ (Super Star) ಸ್ಟಾರ್​​ಗಳು ವೀಕ್ಷಿಸಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಚಿತ್ರವನ್ನ ಕೊಂಡಾಡಿದ್ದಾರೆ. ಸಿನಿಮಾ ನೋಡಿದ ಕೆಲ ಸ್ಟಾರ್​ ನಟರು ರಿಷಬ್ (Rishab Shetty) ಶೆಟ್ಟಿಗೆ ಕಾಲ್ ಮಾಡಿಯೇ ವಿಶ್ ಮಾಡಿದ್ದಾರೆ. ಸೂಪರ್ ಸ್ಟಾರ ರಜನಿಕಾಂತ್ ಆದ್ಮೇಲೆ ಈಗ ದಕ್ಷಿಣ ಭಾರತದ ಮತ್ತೊಬ್ಬ ಮಹಾನ್ ನಟ ಕಮಲ್ ಹಾಸನ್ ಕನ್ನಡದ ಕಾಂತಾರ ಸಿನಿಮಾವನ್ನ ತಮ್ಮದೇ ಭಾಷೆಯಲ್ಲಿ ವೀಕ್ಷಿಸಿ ಕೊಂಡಾಡಿದ್ದಾರೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಫೋನ್ ಮಾಡಿ ವಿಶ್ ಮಾಡಿದ್ದಾರೆ.


ಕಮಲ್ ಹಾಸನ್ ಮಹಾನ್ ನಟ-ನಟನೆಗೆ ಇವರಿಗೆ ಸಾಟಿನೇ ಇಲ್ಲ
ಕಮಲ್ ಹಾಸನ್ ಮಾಡದೇ ಇರೋ ಪಾತ್ರಗಳೇ ಇಲ್ಲ. ಒಂದೇ ಚಿತ್ರದಲ್ಲಿ 10 ಪಾತ್ರಗಳನ್ನ ನಿರ್ವಹಿಸಿರೋ ಖ್ಯಾತಿ ಈ ನಟ-ನಿರ್ದೇಶಕನಿಗೆ ಇದೆ. ಇಂತಹ ನಾಯಕ ನಟನ ಸಿನಿಮಾ ಪ್ರೀತಿಯಗೆ ಸಾಟಿನೇ ಇಲ್ಲ.


ಕಮಲ್ ಹಾಸನ್ ಸಿನಿಮಾ ಪ್ರೀತಿಯನ್ನ ಮೆಚ್ಚೋ ಸಿನಿ ಪ್ರೇಮಿಗಳೂ ಎಲ್ಲೆಡೆ ಇದ್ದಾರೆ. ಹೊಸ ಹೊಸ ಟೆಕ್ನಾಲಜಿಯನ್ನ ಅಳವಡಿಸಿಕೊಂಡು ಸಿನಿಮಾ ಮಾಡ್ತಿರೋ ಕಮಲ್ ಹಾಸನ್, ಈಗ ಇಂಡಿಯನ್-2 ಸಿನಿಮಾ ಕೂಡ ಮಾಡುತ್ತಿದ್ದಾರೆ.


Kamal Haasan watch Kantara Cinema and praises Rishab Shetty Work
ರಿಷಬ್ ಶೆಟ್ರಿಗೆ ಪೋನ್ ಮಾಡಿ ವಿಶ್ ಮಾಡಿದ ಕಮಲ್ ಹಾಸನ್


ಕಮಲ್ ಹಾಸನ್ ಸದಾ ಬ್ಯುಸಿಯೆಸ್ಟ್ ನಾಯಕ ನಟ
ಕಮಲ್ ಹಾಸನ್ ಯಾವಾಗಲೂ ಬ್ಯುಸಿ ಆಗಿರುತ್ತಾರೆ. ಸಿನಿಮಾಗಳನ್ನೇ ಜೀವಿಸುತ್ತಲೆ ಬಂದಿರೋ ಕಮಲ್ ಹಾಸನ್, ಹೊಸ ರೀತಿಯ ಕಥೆಯನ್ನ ಮಾಡಿಕೊಂಡು ಬೇರೆ ಲೆವಲ್​ನ ಚಿತ್ರ ಮಾಡೋಕೆ ರೆಡಿ ಆಗುತ್ತಾರೆ. ಅದರ ಮಧ್ಯೆ ಕನ್ನಡದ ಕಾಂತಾರ ಸಿನಿಮಾವನ್ನ ಕೂಡ ಈಗ ವೀಕ್ಷಿಸಿದ್ದಾರೆ.


ಕಾಂತಾರ ಸಿನಿಮಾ ಮೆಚ್ಚಿದ ಕಮಲ್ ಹಾಸನ್
ಕನ್ನಡದ ಕಾಂತಾರ ಸಿನಿಮಾವನ್ನ ಎಲ್ಲರೂ ಮೆಚ್ಚಿದ್ದಾರೆ. ತಮ್ಮ ಕೆಲಸಗಳನ್ನ ಮುಗಿಸಿಕೊಂಡು ಈಗ ಒಂಚೂರು ಫ್ರೀ ಆಗಿರೋ ಕಮಲ್ ಹಾಸನ್ ಕಾಂತಾರ ಸಿನಿಮಾ ವೀಕ್ಷಿಸಿದ್ದಾರೆ.




ಹೌದು, ಕಮಲ್ ಹಾಸನ್ ಕನ್ನಡದ ಹೆಮ್ಮೆಯ ಕಾಂತಾರ ಸಿನಿಮಾ ವೀಕ್ಷಿಸಿದ್ದಾರೆ. ಕನ್ನಡದ ಹೆಸರನ್ನ ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋದ ಕಾಂತಾರ ಸಿನಿಮಾವನ್ನ ಕಮಲ್ ಮೆಚ್ಚಿಕೊಂಡಿದ್ದಾರೆ. ಮೆಚ್ಚಿಕೊಂಡು ಸುಮ್ನೆ ಕುಳಿತಿಲ್ಲ. ಏನ್ ಮಾಡಿದ್ದಾರೆ ಗೊತ್ತೇ?


ರಿಷಬ್ ಶೆಟ್ರಿಗೆ ಪೋನ್ ಮಾಡಿ ವಿಶ್ ಮಾಡಿದ ಕಮಲ್ ಹಾಸನ್
ಕಮಲ್ ಹಾಸನ್ ಕಾಂತಾರ ಚಿತ್ರ ನೋಡಿದ್ದಾರೆ. ನೋಡಿದ ಬಳಿಕ ತುಂಬಾ ಖುಷಿ ಆಗಿದೆ. ಅದನ್ನ ತಾವೇ ಎಂಜಾಯ್ ಮಾಡಿದ್ದಾರೆ. ಆ ಖುಷಿಯನ್ನ ನೇರವಾಗಿ ಫೋನ್ ಮಾಡಿ ರಿಷಬ್ ಶೆಟ್ರಿಗೂ ತಿಳಿಸಿದ್ದಾರೆ.


ಕಮಲ್ ಹಾಸನ್ ರಿಷಬ್ ಶೆಟ್ರ ಪಾತ್ರ ಕಂಡು ತುಂಬಾ ಇಂಪ್ರೆಸ್ ಆಗಿದ್ದಾರೆ. ಚಿತ್ರದ ಕಥೆ ಹೇಳಿದ ರೀತಿಯನ್ನೂ ಇಷ್ಟಪಟ್ಟಿದ್ದಾರೆ. ಇಡೀ ಸಿನಿಮಾವನ್ನ ಕೂಡ ಹೊಗಳಿದ್ದಾರೆ.
ಕನ್ನಡದ ಕಾಂತಾರ ಸಿನಿಮಾದ ಮೋಡಿನೇ ಅದಲ್ವೇ?


Kamal Haasan watch Kantara Cinema and praises Rishab Shetty Work
ಕಾಂತಾರ ಸಿನಿಮಾ ಮೆಚ್ಚಿದ ಕಮಲ್ ಹಾಸನ್


ಕಾಂತಾರ ಸಿನಿಮಾ ಪಂಜುರ್ಲಿ ದೈವದ ಮೇಲೆ ಚಿತ್ರದ ಸಿನಿಮಾನೇ ಆಗಿದೆ. ಆದರೆ ಅದೇ ಕಥೆಯನ್ನ ಹಾಗಾಗಿಯೇ ಹೇಳಿದ್ದರೇ, ಇದೊಂದು ಕಲಾತ್ಮಕ ಸಿನಿಮಾ ಆಗಿ ಬಿಡುತ್ತಿತ್ತು. ಆದರೆ ರಿಷಬ್ ಶೆಟ್ಟಿ ಇದಕ್ಕೆ ಕಮರ್ಷಿಯಲ್ ಕಥೆಯ ಟಚ್ ಕೊಟ್ಟಿದ್ದಾರೆ.


ತಮ್ಮ ದೈವದ ಕಥೆಯನ್ನ ಸಿನಿಮಾ ಫ್ರೇಮ್​​ ನಲ್ಲಿಯೇ ಹೇಳಿಕೊಂಡಿದ್ದಾರೆ. ಇದರಿಂದ ತುಳುನಾಡಿನ ಕಥೆ ದೇಶ-ವಿದೇಶದಕ್ಕೂ ಹೋಗಲು ಅನುಕೂಲವಾಯಿತು. ಜೊತೆಗೆ ಕನ್ನಡದ ಹೆಸರನ್ನೂ ಎಲ್ಲೆಡೆ ಪಸರಿಸಲು ಹೆಲ್ಪ ಆಗಿದೆ.


ಇದನ್ನೂ ಓದಿ: Engagement: ಪಾರು ಜೊತೆ ಗಟ್ಟಿಮೇಳ, ಪ್ರಿಯಾ-ಸಿದ್ದು ನಿಶ್ಚಿತಾರ್ಥ! ಫೋಟೋ ನೋಡಿ


ಹೀಗೆ ಕನ್ನಡದ ಒಂದು ಕಾಂತಾರ ಸಿನಿಮಾ ನಂಬಿಕೆ, ದೈವ, ಪ್ರೇಮ ಎಲ್ಲವನ್ನೂ ಒಂದೇ ಚಿತ್ರದಲ್ಲಿ ಹೇಳಿಕೊಂಡು ಚಿತ್ರದ ಜಗತ್ತಿನಲ್ಲಿ ಹೊಸ ಹಾದಿಯನ್ನೆ ತೋರಿಸಿಕೊಟ್ಟಿದ್ದಾರೆ. ನಮ್ಮ ನೆಲದ ಕಥೆಗಳನ್ನ ಹೀಗೂ ಮಾಡಬಹುದು ಎಂದು ಕಾಂತಾರ ಸಿನಿಮಾ ಹೇಳಿಕೊಟ್ಟಿದೆ.

First published: