ಇತ್ತೀಚಿಗೆ ತಾನೇ ತಮಿಳು ಚಿತ್ರರಂಗದ ಜನಪ್ರಿಯ ನಟ ಕಮಲ್ ಹಾಸನ್ (Kamal Haasan) ಅವರು ತಾವು ಅಭಿನಯಿಸಿದ ‘ವಿಕ್ರಮ್’ (Vikram) ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ 300 ಕೋಟಿ ರೂಪಾಯಿ ಗಳಿಕೆ ಮಾಡಿದರೆ ಮೊದಲು ಮಾಡುವ ಕೆಲಸವೇ ಅವರು ತಮ್ಮೆಲ್ಲಾ ಸಾಲಗಳನ್ನು ತೀರಿಸುವುದೆಂದು ಬಹಿರಂಗವಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು ನಮಗೆ ಇನ್ನೂ ನೆನಪಿದೆ. ಈ ಸುದ್ದಿಯನ್ನು ಮರೆಯುವ ಮುಂಚೆಯೇ ಕಮಲ್ ಹಾಸನ್ ಅಭಿನಯದ ‘ವಿಕ್ರಮ್’ ಚಿತ್ರದ ಬಗ್ಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ ನೋಡಿ. ಹೌದು, ಕಮಲ್ ಅಭಿನಯದ ‘ವಿಕ್ರಮ್’ ಚಿತ್ರ ಈಗಾಗಲೇ ಚಿತ್ರಮಂದಿರಗಳಲ್ಲಿ (Theatre) ಭರ್ಜರಿ ಗಳಿಕೆ ಮಾಡುತ್ತಿದ್ದು, ಎರಡನೆಯ ವಾರದಲ್ಲಿಯೂ ಸಹ ತನ್ನ ಗಳಿಕೆಯನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗುತ್ತಿದೆ .
ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿರುವ ಸಿನೆಮಾ
ಅಂತೂ ಕಮಲ್ ಅವರ ಅಭಿಮಾನಿಗಳಿಗೆ ‘ವಿಕ್ರಮ್’ ಚಿತ್ರ ತುಂಬಾನೇ ಇಷ್ಟವಾಗಿದೆ ಅಂತ ಆಯ್ತು. ಈ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮವಾಗಿ ಗಳಿಕೆ ಮಾಡುತ್ತಿದೆ ಮತ್ತು ಚಿತ್ರ ಬಿಡುಗಡೆಯಾದ 15ನೇ ದಿನವೂ ಸಹ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರವು ಈಗಾಗಲೇ ವಿಶ್ವಾದ್ಯಂತ ಉತ್ತಮ ಪ್ರದರ್ಶನ ನೀಡುತ್ತಿದ್ದು, ತಮಿಳುನಾಡಿನಲ್ಲಿ ಎರಡು ವಾರಗಳಲ್ಲಿ 150 ಕೋಟಿ ರೂಪಾಯಿ ಗಳಿಸಿದೆ ಎಂದು ಹೇಳಲಾಗುತ್ತಿದೆ.
‘ವಿಕ್ರಮ್’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಹೇಗಿದೆ ನೋಡಿ
ಟ್ರೇಡ್ ಅನಾಲಿಸ್ಟ್ ಆದಂತಹ ಎಲ್.ಎಂ.ಕೌಶಿಕ್ ಅವರ ಟ್ವೀಟ್ ಪ್ರಕಾರ, ಈ ಚಿತ್ರವು ತಮಿಳುನಾಡಿನಲ್ಲಿ 150 ಕೋಟಿ ರೂಪಾಯಿ ಗಳಿಸಿದೆ. "ಇಂದು ಎಂದರೆ ಚಿತ್ರ ಬಿಡುಗಡೆಯಾದ 16ನೇ ದಿನ ವಿಕ್ರಮ್ ಚಿತ್ರವು ತಮಿಳುನಾಡಿನಲ್ಲಿ 150 ಕೋಟಿ ರೂಪಾಯಿ ಗಳಿಕೆಯನ್ನು ದಾಟಿ ಮುಂದಕ್ಕೆ ಹೋಗುತ್ತದೆ ಮತ್ತು ಇದರೊಂದಿಗೆ ಈ ಚಿತ್ರದ ಗಳಿಕೆಯೂ ಬಾಹುಬಲಿ 2 ಚಿತ್ರದ ಸಾಧನೆಯನ್ನು ಅನುಕರಿಸಿದೆ ಎಂದು ಹೇಳಬಹುದು. ಈ ವಾರಾಂತ್ಯದಲ್ಲಿ, ಖಂಡಿತವಾಗಿಯೂ 5 ದೀರ್ಘ ವರ್ಷಗಳ ನಂತರ ತಮಿಳುನಾಡಿನಲ್ಲಿ ಇಷ್ಟೊಂದು ಹಣ ಗಳಿಸಿದ ಚಿತ್ರವಾಗಿ ಹೊರ ಹೊಮ್ಮುತ್ತದೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Reality Show: ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವಿಜೇತರಿಗೆ ದೊರಕಲಿದೆ ಅಪ್ಪು ಟ್ರೋಫಿ
ಇನ್ನೊಬ್ಬ ಟ್ರೇಡ್ ಅನಾಲಿಸ್ಟ್ ಮನೋಬಾಲಾ ವಿಜಯಬಾಲನ್ ಅವರು ಈ ಚಿತ್ರವು ದೇಶಾದ್ಯಂತದ ಚಿತ್ರಮಂದಿರಗಳಲ್ಲಿ ಮತ್ತು ಅಂತರರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ಈ ಚಿತ್ರವು ವಿಶ್ವದಾದ್ಯಂತ ಈಗಾಗಲೇ 283 ಕೋಟಿ ರೂಪಾಯಿಗಳನ್ನು ಗಳಿಸಿದ್ದು, ಇದೇ ವೇಗದಲ್ಲಿ ಗಳಿಕೆ ಮುಂದುವರೆದಿದೆ ಎಂದು ಬರೆದಿದ್ದಾರೆ.
140 ಕೋಟಿ ರೂಪಾಯಿಗಳಿಗೂ ಹೆಚ್ಚು ಗಳಿಕೆ
‘ವಿಕ್ರಮ್’ ಚಿತ್ರವು ಆಕ್ಷನ್ ಚಿತ್ರಕಥೆಯನ್ನು ಹೊಂದಿದ್ದು, ಲೋಕೇಶ್ ಕನಗರಾಜ್ ಅವರು ಇದರ ಕಥೆಯನ್ನು ಬರೆದು ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಟರಾದ ಕಮಲ್ ಹಾಸನ್, ಫಹಾದ್ ಫಾಸಿಲ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೋಲೆಕ್ಸ್ ಪಾತ್ರವನ್ನು ಸೂರ್ಯ ನಿರ್ವಹಿಸಿದ್ದಾರೆ. ಅವರ ಐದು ನಿಮಿಷಗಳ ಅತಿಥಿ ಪಾತ್ರವು ಚಿತ್ರದ ಮುಖ್ಯಾಂಶಗಳಲ್ಲಿ ಒಂದಾಗಿದೆ. ಕಾಳಿದಾಸ್ ಜಯರಾಮ್, ನಾರಾಯಣ್, ವಾಸಂತಿ, ಗಾಯತ್ರಿ ಮತ್ತು ಸಂತಾನ ಭಾರತಿ ಅವರು ಈ ಚಿತ್ರದ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Sandalwood: ಸ್ಯಾಂಡಲ್ವುಡ್ನ ಈ ಜೋಡಿಗಳು ಅಂದ್ರೆ ಫ್ಯಾನ್ಸ್ಗೆ ಬಹಳ ಇಷ್ಟವಂತೆ, ಇಲ್ಲಿದೆ ನೋಡಿ ಲಿಸ್ಟ್
ವಿಕ್ರಮ್ 14ನೇ ದಿನದ ಅಂತ್ಯದವರೆಗೆ ತಮಿಳುನಾಡಿನಲ್ಲಿ 140 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಗಳಿಸಿತ್ತು ಮತ್ತು ವಾರಾಂತ್ಯದಲ್ಲಿ ಈ ಹಣದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಅಭಿಮಾನಿಗಳ ಭಾರಿ ನಿರೀಕ್ಷೆಗಳ ನಡುವೆ ವಿಕ್ರಮ್ ಜೂನ್ 3 ರಂದು ಚಿತ್ರಮಂದಿರಗಳಿಗೆ ಬಂದಿತು. ಈ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಅಪಾರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಇದಷ್ಟೇ ಅಲ್ಲದೆ ಕಳೆದ ತಿಂಗಳು ಈ ಚಿತ್ರದ ಟ್ರೈಲರ್ ಬಿಡುಗಡೆಯಾದಾಗ ಸಹ ಟ್ರೈಲರ್ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಯೂಟ್ಯೂಬ್ ನಲ್ಲಿ 1.1 ಕೋಟಿ ವೀಕ್ಷಣೆಗಳನ್ನು ದಾಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ