news18-kannada Updated:May 26, 2020, 1:21 PM IST
ಕಮಲ್ ಹಾಸನ್
ಹಲವಾರು ದಶಕಗಳ ಕಾಲ ಚಿತ್ರರಂಗದಲ್ಲಿ ಶ್ರಮಿಸಿದ್ದ ನಟ ಕಮಲ್ ಹಾಸನ್ ತಮಿಳುನಾಡಿನ ರಾಜಕೀಯಕ್ಕೆ ಧುಮುಕಿದ್ದಾರೆ. ಪಕ್ಷ ಕಟ್ಟುವ ಕೆಲಸದಲ್ಲಿ ಬ್ಯುಸಿ ಇರುವ ಅವರು ಸಿನಿಮಾದಿಂದ ದೂರ ಉಳಿದಿಲ್ಲ. ಈಗ ಅವರ ಮುಂದಿನ ಸಿನಿಮಾ ಸಖತ್ ಆಕ್ಷನ್ ಥ್ರಿಲ್ಲರ್ ಇರಲಿದ್ದು, ಈ ಸಿನಿಮಾಗೆ ಮೂವರು ಹೀರೋಯಿನ್ಗಳಂತೆ!
ಹೌದು, ಹೀಗೊಂದು ವಿಚಾರ ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಕಮಲ್ ಹಾಸನ್ ತಲೈವನ್ ಇರುಕ್ಕಿರಾನ್ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಲಾಕ್ಡೌನ್ ಪೂರ್ಣಗೊಂಡ ನಂತರ ಈ ಚಿತ್ರದ ಕೆಲಸಗಳು ಆರಂಭವಾಗಲಿದೆಯಂತೆ. ಈ ಸಿನಿಮಾಗೆ ಮೂರು ಹೀರೋಯಿನ್ಗಳು ಎನ್ನುವ ಮಾತು ಈಗ ಕೇಳಿ ಬಂದಿದೆ.
ಈ ಸಿನಿಮಾದಲ್ಲಿ ತಮಿಳಿನಿನ ಸ್ಟಾರ್ ನಟ ವಿಜಯ್ ಸೇತುಪತಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಲೇಟೆಸ್ಟ್ ಅಪ್ಡೇಟ್ ಎಂದರೆ, 1992ರಲ್ಲಿ ತೆರೆಕಂಡಿದ್ದ ತೇವರ್ ಮಗನ್ ಸಿನಿಮಾದ ಸಹ ನಟಿ ರೇವತಿ, ವಿಶ್ವರೂಪಂ ಸಿನಿಮಾದ ನಾಯಕಿಯರಾದ ಆಂಡ್ರಿಯಾ ಜೆರೆಮಿಯ ಹಾಗೂ ಪೂಜಾ ಕುಮಾರ್ ಈ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ತಂದೆಯ ಹುಟ್ಟುಹಬ್ಬಕ್ಕೆ ಮನಮುಟ್ಟುವಂತಹ ವಿಡಿಯೋ ಹಂಚಿಕೊಂಡ ರಿತೇಶ್ ದೇಶ್ಮುಖ್
ಈ ಚಿತ್ರಕ್ಕೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಕಮಲ್ ಹಾಸನ್ ಅವರೇ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ಹಾಗೂ ಕಮಲ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
First published:
May 26, 2020, 1:10 PM IST