Kamal Haasan: ಸಖತ್​ ರಾ ಲುಕ್​ನಲ್ಲಿ ಬಂದ `ವಿಕ್ರಂ’! ಹಿಂದೆಂದೂ ಮಾಡಿರದ ಪಾತ್ರದಲ್ಲಿ ಕಮಲ್ ಹಾಸನ್​

ನಟ ಕಮಲ್ ಹಾಸನ್ ಅಭಿನಯದ ‘ವಿಕ್ರಮ್’(Vikram) ಚಿತ್ರ ಇಡೀ ದಕ್ಷಿಣ ಭಾರತದಲ್ಲಿಯೇ ಅತ್ಯಂತ ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ನಟ ಕಮಲ್ ಜೊತೆಗೆ ಇನ್ನಿಬ್ಬರು ತಮಿಳಿನ ನಟರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ನಟ ಕಮಲ್​ ಹಾಸನ್​

ನಟ ಕಮಲ್​ ಹಾಸನ್​

  • Share this:
ಭಾರತೀಯ ಸಿನಿಮಾದಲ್ಲಿಯೇ ನಟ ಕಮಲ್ ಹಾಸನ್(Kamal Haasan) ಅವರು ತಮ್ಮ ವಿಭಿನ್ನವಾದ ನಟನೆಯಿಂದ ಮತ್ತು ವಿಭಿನ್ನ ಕಥೆ(Different Story)ಯುಳ್ಳ ಸಿನೆಮಾದಲ್ಲಿ ನಟಿಸುವುದರಿಂದ ಗುರುತಿಸಿಕೊಂಡವರು ಎಂದರೆ ಅತಿಶಯೋಕ್ತಿಯಲ್ಲ. ಈ 67 ವರ್ಷ ವಯಸ್ಸಿನ ನಟ ಈಗಾಗಲೇ ತಮಿಳು(Tamil), ತೆಲುಗು(Telugu), ಕನ್ನಡ(Kannada), ಹಿಂದಿ(Hindi) ಭಾಷೆಗಳಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟ ಕಮಲ್ ಹಾಸನ್ ಅಭಿನಯದ ‘ವಿಕ್ರಮ್’(Vikram) ಚಿತ್ರ ಇಡೀ ದಕ್ಷಿಣ ಭಾರತದಲ್ಲಿಯೇ ಅತ್ಯಂತ ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ನಟ ಕಮಲ್ ಜೊತೆಗೆ ಇನ್ನಿಬ್ಬರು ತಮಿಳಿನ ನಟರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಾರಪ್ಪಾ ಅವರು ಅಂತೀರಾ? ಮುಂದೆ ನೋಡಿ..

ಕಮಲ್​ ಜೊತೆಯಾದ ಸೇತುಪತಿ ಮತ್ತು ಫಾಸಿಲ್​!

ಟರಾದ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ಅವರು ಸಹ ಅಭಿನಯಿಸಿದ್ದು, ಈಗಾಗಲೇ ಇದರ ಬಿಡುಗಡೆಯ ದಿನಾಂಕವನ್ನು ಚಿತ್ರ ತಂಡದವರು ಘೋಷಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಕಮಲ್ ಮತ್ತು ವಿಜಯ್ ಅಭಿಮಾನಿಗಳಂತೂ ಮಾರ್ಚ್ 14ನೇ ತಾರೀಖಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಮಾರ್ಚ್​ 14ಕ್ಕೆ ರಿಲೀಸ್​ ಡೇಟ್​ ಅನೌನ್ಸ್​!

‘ವಿಕ್ರಮ್’ ಚಿತ್ರ ತಯಾರಕರು ಈ ಚಿತ್ರವು ಮಾರ್ಚ್ 14 ರಂದು ಬೆಳಗ್ಗೆ 7 ಗಂಟೆಗೆ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಒಂದು ಹೊಸ ಪೋಸ್ಟರ್ ಮೂಲಕ ಘೋಷಿಸಿದ್ದಾರೆ. ಈ ಹೊಸದಾಗಿ ಬಿಡುಗಡೆಯಾದ ಪೋಸ್ಟರ್‌ನಲ್ಲಿ ನಟ ಕಮಲ್ ಹಾಸನ್ ಅವರು ತುಂಬಾನೇ ಗಂಭೀರವಾಗಿ ಕಾಣುತ್ತಿದ್ದಾರೆ. ಪೋಸ್ಟರ್‌ನಲ್ಲಿ ಕೆಳಗಡೆ ಸಿನೆಮಾ ಬಿಡುಗಡೆ ದಿನಾಂಕ ಬರೆದಿರುವುದನ್ನು ಕಾಣಬಹುದಾಗಿದೆ. ಈ ಪೋಸ್ಟರ್‌ನಲ್ಲಿರುವ ನಟ ಕಮಲ್ ಅವರ ಲುಕ್ ಅನ್ನು ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಜನರು ಇಷ್ಟ ಪಟ್ಟಿದ್ದಾರೆ ಮತ್ತು 7 ಸಾವಿರಕ್ಕೂ ಹೆಚ್ಚು ಜನರು ಮರು ಟ್ವೀಟ್ ಮಾಡಿದ್ದಾರೆ.

ಡಿಫ್ರೆಂಟ್​  ಪಾತ್ರದಲ್ಲಿ ನಟಿಸಿದ್ದಾರೆ ಕಮಲ್​ ಹಾಸನ್​!

ಈ ಹೊಸ ಪೋಸ್ಟರ್‌ನಲ್ಲಿ ನಟ ಕಮಲ್ ಒಬ್ಬ ಕೊಲೆಗಾರನಂತೆ ಲುಕ್ ನೀಡಿದ್ದನ್ನು ಇದರಲ್ಲಿ ಕಾಣಬಹುದು. ಈ ಕೆಂಪು ಬಣ್ಣದ ಪೋಸ್ಟರ್‌ನಲ್ಲಿ ಸೂಟ್ ಧರಿಸಿ ಮತ್ತು ಬಂದೂಕನ್ನು ಹಿಡಿದಿದ್ದಾರೆ. ಸದ್ಯ ಈ ಹೊಸ ಪೋಸ್ಟರ್ ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಹಿಂದೆ ಚಿತ್ರ ನಿರ್ದೇಶಕರು ಲೋಕೇಶ್ ಕನಗರಾಜ್ ಅವರು ಕಮಲ್ ಹಾಸನ್ ಮತ್ತು ವಿಜಯ್ ಸೇತುಪತಿ ಅಭಿನಯದ ವಿಕ್ರಮ್ ಚಿತ್ರದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಈ ಕನಸಿನ ಯೋಜನೆಗಾಗಿ 110 ದಿನಗಳ ಕಾಲ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದರು.

ಇದನ್ನೂ ಓದಿ: 'RRR' ಪ್ರಮೋಷನ್, ಪೋಸ್ಟರ್​​ಗೆ ಎಷ್ಟು ಖರ್ಚಾಗಿದೆ? ಈ ಹಣದಲ್ಲಿ ಇನ್ನೊಂದು ಚಿತ್ರ ಮಾಡಬಹುದಿತ್ತು!

ಸಿನಿಮಾ ತಂಡಕ್ಕೆ ಧನ್ಯವಾದ ತಿಳಿಸಿದ ಚಿತ್ರದ ನಿರ್ದೇಶಕ!

ಇಷ್ಟೇ ಅಲ್ಲದೆ ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ನಿರ್ದೇಶಕರು "110 ದಿನಗಳ ಚಿತ್ರೀಕರಣ ಮುಗಿದಿದ್ದು, ಈ ಅಸಾಧಾರಣ ಪ್ರಯತ್ನಕ್ಕಾಗಿ ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಥಾಂಕ್ಸ್" ಹೇಳಿದ್ದು, ಚಿತ್ರ ತಂಡದವರು ಚಿತ್ರದ ಚಿತ್ರೀಕರಣ ಪೂರ್ಣವಾಗಿರುವುದನ್ನು ವಿಭಿನ್ನವಾಗಿ ಆಚರಿಸಿದರು ಎಂದು ಹೇಳಲಾಗುತ್ತಿದೆ. ಇನ್ನೊಂದು ವಿಷಯವೆಂದರೆ ‘ವಿಕ್ರಮ್’ ಚಿತ್ರದ ಚಿತ್ರೀಕರಣವನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ನಟ ಕಮಲ್ ಹಾಸನ್ ಅವರು ತಾವು ನಿರೂಪಕರಾಗಿದ್ದ ತಮಿಳಿನ ‘ಬಿಗ್‌ಬಾಸ್’ ನಿಂದ ಸಹ ಇವರು ಈ ಬಾರಿ ಹೊರಗುಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : RRR ಮೇಲೆ KGF- 2 ಅಭಿಮಾನಿಗಳ ಕಿಡಿ: KGF ಪ್ರಚಾರದ ವಿಳಂಬಕ್ಕೆ ರಾಜಮೌಳಿ ಕಾರಣ ಎನ್ನುತ್ತಿದ್ದಾರೆ ಅಭಿಮಾನಿಗಳು

‘ವಿಕ್ರಮ್’ ಚಿತ್ರವು ಲೋಕೇಶ್ ಕನಗರಾಜ್ ಅವರು ಬರೆದು ನಿರ್ದೇಶಿಸಿರುವ ಆಕ್ಷನ್ ಥ್ರಿಲ್ಲರ್ ಸಿನೆಮಾ ಎಂದು ಹೇಳಲಾಗುತ್ತಿದೆ. ರಾಜ್ ಕಮಲ್ ಫಿಲ್ಮ್ಸ್ ಇಂಟರ್ ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಕಮಲ್ ಹಾಸನ್ ಈ ಮಲ್ಟಿಸ್ಟಾರರ್ ಚಿತ್ರವನ್ನು ನಿರ್ಮಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಈ ಚಿತ್ರಕ್ಕೆ ಸಂಗೀತವನ್ನು ಸಂಯೋಜಿಸಿದ್ದಾರೆ. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಿವಾನಿ ನಾರಾಯಣನ್, ಕಾಳಿದಾಸ್ ಜಯರಾಂ, ನರೈನ್, ಆಂಟನಿ ವರ್ಗೀಸ್ ಮತ್ತು ಅರ್ಜುನ್ ದಾಸ್ ಸಹ ನಟಿಸಿದ್ದಾರೆ. ಅಲ್ಲದೆ ಈ ಚಿತ್ರದ ಛಾಯಾಗ್ರಹಣವನ್ನು ಗಿರೀಶ ಗಂಗಾಧರನ್ ನಿರ್ವಹಿಸಿದ್ದು, ಫಿಲೋಮಿನ್ ರಾಜ್ ಅವರ ಸಂಕಲನವಿದೆ ಎಂದು ತಿಳಿದುಬಂದಿದೆ.
Published by:Vasudeva M
First published: