• Home
  • »
  • News
  • »
  • entertainment
  • »
  • Kamal Haasan: ಮಾಜಿ ಪತ್ನಿಯ ಸ್ವಾಭಿಮಾನದ ಬಗ್ಗೆ ಕಮಲ್ ಹಾಸನ್ ಹೆಮ್ಮೆಯ ಮಾತು

Kamal Haasan: ಮಾಜಿ ಪತ್ನಿಯ ಸ್ವಾಭಿಮಾನದ ಬಗ್ಗೆ ಕಮಲ್ ಹಾಸನ್ ಹೆಮ್ಮೆಯ ಮಾತು

ಕಮಲ್ ಹಾಸನ್-ಸಾರಿಕ

ಕಮಲ್ ಹಾಸನ್-ಸಾರಿಕ

ಕಮಲ್ ಹಾಸನ್ ಅವರು ಸಾರಿಕಾ ಅವರನ್ನು ಯಾಕೆ ಮೆಚ್ಚಿದರು ಗೊತ್ತೇ? ಅವರು ಪ್ರೀತಿಯಲ್ಲಿ ಬಿದ್ದ ಕಾರಣವೇ ವಿಶೇಷ. ಇಲ್ಲಿದೆ ಡೀಟೆಲ್ಸ್.

  • News18 Kannada
  • 4-MIN READ
  • Last Updated :
  • Bangalore, India
  • Share this:

ತಮಿಳು ಚಿತ್ರರಂಗದ (Kollywood) ಜನಪ್ರಿಯ ನಟ ಕಮಲ್ ಹಾಸನ್ (Kamal Haasan) ಅವರ ಮಾಜಿ ಪತ್ನಿಯಾದ ನಟಿ ಸಾರಿಕಾ (Actress Sarika) ಅವರು ತಮ್ಮ ಕಷ್ಟದ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಮೂಲಕ ನಟಿಮಣಿಯರಿಗೂ ಸಾಕಷ್ಟು ಕಷ್ಟಗಳು ಇರುತ್ತವೆ ಎಂದು ಮತ್ತೊಂದು ಬಾರಿ ಪ್ರೂವ್‌ ಮಾಡಿದ್ದಾರೆ. ಎಲ್ಲರೂ ಕೆಲಸ ಮಾಡಿಯೇ ಹಣವನ್ನು ಸಂಪಾದಿಸುತ್ತಾರೆ. ಕೆಲಸಗಳೇ ಇಲ್ಲವಾದ ಮೇಲೆ ಮತ್ತು ಮನೆಯಿಂದ ಆಚೆ ಬರದೇ ಹೋದರೆ ಶ್ರೀಮಂತ ಜನರ ಬ್ಯಾಂಕ್ ಖಾತೆಯಲ್ಲಿರುವ ಉಳಿತಾಯದ ಹಣ ಹಾಗೆಯೇ ದಿನದಿಂದ ದಿನಕ್ಕೆ ಕಡಿಮೆ ಆಗಿಯೇ ಆಗುತ್ತದೆ. ಅಂತಹ ದಿನಗಳ ಬಗ್ಗೆ ಕಮಲ್‌ ಹಾಸನ್‌ ಅವರ ಮಾಜಿ ಪತ್ನಿ ಸಾರಿಕಾ ಅವರು ಮಾತನಾಡಿದ್ದಾರೆ.


ಸೂಪರ್‌ಸ್ಟಾರ್ ಕಮಲ್ ಹಾಸನ್ ಅವರ ಮಾಜಿ ಪತ್ನಿ, ನಟಿ ಸಾರಿಕಾ, ಒಂದು ಕಾಲದಲ್ಲಿ ಉತ್ತಮ ಕಲಾವಿದೆಯಾಗಿ ಚಿತ್ರರಂಗದಲ್ಲಿ ಮಿಂಚುತ್ತಿದ್ದರು. ಆದರೆ ನನ್ನಂತ ಸ್ಟಾರ್‌ಗಳಿಗೂ ಈ ಕಷ್ಟ ಬಿಟ್ಟಿದ್ದಲ್ಲ ಎಂದು ಹೇಳುತ್ತಾ, ತನ್ನ ಕಷ್ಟಕರವಾದ ಜೀವನ ಪ್ರಯಾಣ ಮತ್ತು ಮತ್ತೆ ತನ್ನ ಜೀವನವನ್ನು ಹೇಗೆ ಪ್ರಾರಂಭಿಸಬೇಕು ಎಂಬುದರ ಕುರಿತು ಆ ಸಮಯದಲ್ಲಿ ತುಂಬಾ ಯೋಚಿಸುತ್ತಿದ್ದೆ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.




ಹಿರಿಯ ನಟಿ ಸಿಮಿ ಗರೆವಾಲ್‌ಗೆ ಕೊಟ್ಟ ಹಳೆಯ ಸಂದರ್ಶನಯೊಂದರಲ್ಲಿ ಸಾರಿಕಾ ತನ್ನ 21 ನೇ ವಯಸ್ಸಿನಲ್ಲಿ ತನ್ನ ಜೀವನ ಮತ್ತು ವೃತ್ತಿಜೀವನವನ್ನು ಪುನರಾರಂಭಿಸುವ ಬಗ್ಗೆ ಮಾತನಾಡಿದ್ದಾರೆ. ನಾನು ಈಗ ಕೆಲಸ ಆರಂಭಿಸದಿದ್ದರೆ ನನ್ನ ಕೈಯಲ್ಲಿ ಬಿಡಿಗಾಸು ಇರಲ್ಲ ಎಂದು ಹೇಳಿಕೆ ನೀಡಿದ್ದಾರೆ.


ಸಂದರ್ಶನದಲ್ಲಿ ಸಾರಿಕಾ ಹೇಳಿರುವುದೇನು?


ನಾನು ನನಗೆ ಮತ್ತು ನನ್ನ ತಾಯಿಗೆ ಸಾಕಷ್ಟು ಪ್ರಾಮಾಣಿಕ ವ್ಯಕ್ತಿಯಾಗಿ ಇದ್ದೆ. ಅವರಿಗೆ ಸಾಧ್ಯವಾಗುವಷ್ಟು ಒಳ್ಳೆಯದನ್ನೇ ಮಾಡಿದ್ದೇನೆ. ಇದನ್ನು ಪ್ರತಿಯೊಬ್ಬರು ಕೂಡ ಮಾಡಲೇಬೇಕು. ನೀವು ರಾತ್ರೋ ರಾತ್ರಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಸಾರಿಕಾ ಸಿಮಿ ಗರೆವಾಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.




ಸಂದರ್ಶನದ ಮುಂದುವರಿಸ ಭಾಗವಾಗಿ ಸಿಮಿ ಗರೆವಾಲ್‌ ಅವರು “ನಿಮ್ಮ ಹತ್ತಿರ ಆಗ ಕೇವಲ 60 ರೂ. ಮಾತ್ರವೇ ಉಳಿದಿತ್ತಾ”? ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ “ನನ್ನ ಕಾರು ಸಹ ನನ್ನ ಜೊತೆ ಇತ್ತು” ಎಂದು ಸಾರಿಕಾ ವಿವರಿಸಿದಳು.


ಇದನ್ನೂ ಓದಿ: Niveditha Gowda: ನಟಿ ನಿವೇದಿತಾ ಗೌಡ ಹಾಟ್ ಲುಕ್! ಫೋಟೋ ತೆಗೆದೋರು ಯಾರು?


“ಆ ದಿನಗಳು ನನ್ನ ಅತ್ಯಂತ ಕಷ್ಟದ ದಿನಗಳು ಎಂದ್ರೂ ತಪ್ಪಾಗಲಾರದು. ಆದ್ರೂ ಸಹ ನಾನು ಧೈರ್ಯದಿಂದ ಅವನ್ನೆಲ್ಲ ಮ್ಯಾನೇಜ್‌ ಮಾಡಿದೆ. ನನಗೆ ಮುಂದೆ ಊಟ ಎಲ್ಲಿ ಮಾಡುತ್ತೇನೆ ಎನ್ನುವ ಖಾತ್ರಿ ಇರುತ್ತಿರಲಿಲ್ಲ. ನನ್ನ ಸ್ನೇಹಿತರ ಮನೆಗೆ ಹೋಗಿದ್ದೆ, ಅವರ ಮನೆಯಲ್ಲಿಯೇ ಸ್ನಾನ ಮಾಡಿ, ನನ್ನ ಕಾರಿನಲ್ಲಿ ಮಲಗುತ್ತಿದ್ದೆ. ಆದ್ರೆ ನಾನು ಕಷ್ಟಗಳಿಗೆ ಯಾವತ್ತು ಹೆದರಿಲ್ಲ, ಮುಂದೆಯೂ ಹೆದರುವುದಿಲ್ಲ” ಎಂದು ಸಾರಿಕಾ ಹೇಳಿದರು.




"ನೀವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಅಂದುಕೊಂಡಿದ್ದರೆ, ನಿಮಗೆ ಪ್ರಕೃತಿಯೇ ಅದನ್ನು ಸಾಧಿಸುವ ಶಕ್ತಿಯನ್ನು ನೀಡುತ್ತದೆ. ಆ ಶಕ್ತಿಯನ್ನು ಬಳಸಿ ನೀವು ಉತ್ತಮವಾಗಿ ಪ್ರಯತ್ನಿಸಬೇಕು. ಅದು ಬಿಟ್ಟು ಆ ಪರಿಸ್ಥಿತಿಯನ್ನು ಮತ್ತು ಪ್ರಕ್ರಿಯೆಯನ್ನು ವಿಶ್ಲೇಷಿಸಲು ಹೋಗಬಾರದು. ನನಗೆ ವಿಶ್ಲೇಷಿಸಲು ಸಹ ಸಮಯ ಇರಲಿಲ್ಲ. ನಾನು ನನ್ನ ಕಷ್ಟದ ದಿನಗಳ ಬಗ್ಗೆ ಇಲ್ಲಿವರೆಗೂ ಯಾರಿಗೂ ಹೇಳಿಕೊಂಡಿಲ್ಲ . ನಂತರದ ದಿನಗಳಲ್ಲಿ ನನ್ನ ಸ್ನೇಹಿತರ ಮನೆ ಬಿಟ್ಟು ವಸತಿಗಾಗಿ ಪಿಜಿ ಸೇರಿಕೊಂಡೆ” ಎನ್ನುತ್ತಾರೆ ಸಾರಿಕಾ. |


ಸಂದರ್ಶನದಲ್ಲಿ ಭಾಗವಹಿಸಿದ್ದ ಕಮಲ್‌ ಹಾಸನ್‌


ಈ ಸಂದರ್ಶನದಲ್ಲಿ ಕಮಲ್‌ ಹಾಸನ್‌ ಕೂಡ ಭಾಗವಹಿಸಿದ್ದರು. ಆಗ ಅವರು “ಸಾರಿಕಾಳ ಕಷ್ಟದ ಪರಿಸ್ಥಿತಿ ನನಗೆ ತಿಳಿದಿತ್ತು. ಅವಳ ಆಗಿನ ಪರಿಸ್ಥಿತಿ ನೀವು ನೋಡಿದ್ದರೆ ನಿಜಕ್ಕೂ ಆಘಾತಕ್ಕೊಳಗಾಗುತ್ತೀರಿ. ಆದರೆ ಸೆಟ್‌ನಲ್ಲಿ ಅವಳು ದೊಡ್ಡ ಸ್ಟಾರ್‌ ಆಗಿ ಮಿಂಚುತ್ತಿದ್ದಳು. ಆದರೆ ಅವಳು ವಾಸಿಸುವ ಸ್ಥಳ ನೋಡಿದರೆ ಅವಳು ಸ್ಟಾರ್‌ ಅಲ್ಲ ಎಂದು ಅನಿಸುತ್ತಿತ್ತು.


ನಾನು ಅವಳ ಕಷ್ಟದ ಬಗ್ಗೆ ತಿಳಿದು ಸಹಾನುಭೂತಿ ತೋರಿಸಿದೆ. ಆದರೆ ಆ ಸಹಾನೂಭೂತಿ ಅವಳಿಗೆ ಬೇಕಿರಲಿಲ್ಲ. ಸಹಾಯವೂ ಬೇಕಿರಲಿಲ್ಲ. ಅವಳಿಗೆ ಹಣದ ಸಹಾಯ ಮಾಡುತ್ತೇನೆ ಎಂದರೂ ಸಹ ಕೋಪ ಬರುತ್ತಿತ್ತು. ಆದ್ದರಿಂದ ಆಕೆಯನ್ನು ಕಂಡರೆ ನನಗೆ ಅಪಾರ ಹೆಮ್ಮೆ. ಆದ ಕಾರಣವೇ ಆಕೆಯನ್ನು ನಾನು ಮೆಚ್ಚಿ ಮದುವೆಯಾದೆ” ಎಂದು ಹೇಳಿದರು. 2004ರಲ್ಲಿ ಕಮಲ್ ಹಾಸನ್ ಮತ್ತು ಸಾರಿಕಾ ವಿಚ್ಛೇದನ ಪಡೆದುಕೊಂಡ ದೂರವಾಗಿದ್ದರು.

Published by:Divya D
First published: