Kamal Haasan: ‘ವಿಕ್ರಮ್’ ಚಿತ್ರದಿಂದ ಬಂದ ಗಳಿಕೆಯಲ್ಲಿ ನಟ ಕಮಲ್ ಹಾಸನ್ ಈ ಕೆಲ್ಸ ಮೊದಲು ಮಾಡ್ತಾರಂತೆ

ಈ ಚಲನಚಿತ್ರ ನಟ ಮತ್ತು ನಟಿಯರ ಜೀವನಶೈಲಿಯ ಬಗ್ಗೆ ನಿಮಗೆ ಹೊಸದಾಗಿ ಏನು ಹೇಳಬೇಕಿಲ್ಲ ಬಿಡಿ. ನಟ ಕಮಲ್ ಹಾಸನ್ ಅವರು ತಮ್ಮ ಹೊಸ ಚಿತ್ರ ವಿಕ್ರಮ್ ಗಲ್ಲಾಪೆಟ್ಟಿಗೆಯಲ್ಲಿ 300 ಕೋಟಿ ರೂಪಾಯಿಯ ಗಡಿ ದಾಟಿದ ನಂತರ, ಅವರು ಬಂದ ಗಳಿಕೆಯಲ್ಲಿ ಏನು ಮಾಡಲಿದ್ದಾರೆ ಎಂದು ನೀವು ಕೇಳಿದರೆ ‘ಅಬ್ಬಬ್ಬಾ ಈ ನಟನಿಗೆ ಇಷ್ಟೆಲ್ಲಾ ಸಾಲ ಇದೆಯಾ ಅಂತ’ ಅಂದು ಕೊಳ್ಳುವುದಂತೂ ಗ್ಯಾರಂಟಿ.

ಕಮಲ್ ಹಾಸನ್

ಕಮಲ್ ಹಾಸನ್

  • Share this:
ಭೂಮಿ (Earth) ಮೇಲೆ ಬದುಕುತ್ತಿರುವ ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದಂತಹ ಖರ್ಚುಗಳು ಇದ್ದೇ ಇರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಗಳಿಕೆ ಹೆಚ್ಚಾದಂತೆಲ್ಲಾ ಖರ್ಚು ಸಹ ಹೆಚ್ಚಾಗುವುದು ಸಹಜ ಬಿಡಿ. ಗಳಿಕೆಗೆ ಅನುಗುಣವಾಗಿಯೇ ಬಹುತೇಕರು ತಮ್ಮ ಜೀವನಶೈಲಿಯನ್ನು (Life Style) ರೂಢಿಸಿಕೊಳ್ಳುತ್ತಾರೆ ಎಂದು ಹೇಳಬಹುದು. ಅದರಲ್ಲೂ ಈ ಚಲನಚಿತ್ರ ನಟ (Movie Actor) ಮತ್ತು ನಟಿಯರ (Actress) ಜೀವನಶೈಲಿಯ ಬಗ್ಗೆ ನಿಮಗೆ ಹೊಸದಾಗಿ ಏನು ಹೇಳಬೇಕಿಲ್ಲ ಬಿಡಿ. ನಟ ಕಮಲ್ ಹಾಸನ್ ಅವರು ತಮ್ಮ ಹೊಸ ಚಿತ್ರ ವಿಕ್ರಮ್ ಗಲ್ಲಾಪೆಟ್ಟಿಗೆಯಲ್ಲಿ 300 ಕೋಟಿ ರೂಪಾಯಿಯ ಗಡಿ ದಾಟಿದ ನಂತರ, ಅವರು ಬಂದ ಗಳಿಕೆಯಲ್ಲಿ ಏನು ಮಾಡಲಿದ್ದಾರೆ ಎಂದು ನೀವು ಕೇಳಿದರೆ ‘ಅಬ್ಬಬ್ಬಾ ಈ ನಟನಿಗೆ ಇಷ್ಟೆಲ್ಲಾ ಸಾಲ ಇದೆಯಾ ಅಂತ’ ಅಂದು ಕೊಳ್ಳುವುದಂತೂ ಗ್ಯಾರಂಟಿ.

ಬಂದ ಗಳಿಕೆಯಲ್ಲಿ ಸಾಲ ಮರುಪಾವತಿ ಮಾಡುತ್ತಾರಂತೆ
ಹೌದು.. ಕಮಲ್ ಬಂದ ಗಳಿಕೆಯಲ್ಲಿ ತಮ್ಮ ಎಲ್ಲಾ ಸಾಲಗಳನ್ನು ಮರುಪಾವತಿಸುತ್ತಾರೆ ಎಂದು ಖುದ್ದು ಅವರೇ ಹೇಳಿದರು. ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ, ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಸಹ ಅವರ ಕೈಲಾದಷ್ಟು ಹಣ ಕೊಡುತ್ತೇನೆ ಎಂದು ಹೇಳಿದರು. ಈ ಹಿಂದೆ, ಅವರು 'ಕ್ಷಣಾರ್ಧದಲ್ಲಿ 300 ಕೋಟಿ ಗಳಿಸಬಹುದು' ಎಂದು ಹೇಳಿದಾಗ ಅದನ್ನು ಯಾರೂ ಅರ್ಥಮಾಡಿಕೊಳ್ಳಲಿಲ್ಲ ಎಂದು ಅವರು ಇದೇ ಸಮಯದಲ್ಲಿ ಬಹಿರಂಗಪಡಿಸಿದರು.

ವಿಕ್ರಮ್ ಚಿತ್ರ ಆಕ್ಷನ್ ಕಥೆಯನ್ನು ಹೊಂದಿದ್ದು, ಲೋಕೇಶ್ ಕನಗರಾಜ್ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ, ಫಹಾದ್ ಫಾಸಿಲ್, ಕಾಳಿದಾಸ್ ಜಯರಾಮ್, ನಾರಾಯಣ್, ಆಂಟೋನಿ ವರ್ಗೀಸ್ ಮತ್ತು ಅರ್ಜುನ್ ದಾಸ್ ನಟಿಸಿದ್ದಾರೆ. ಸೂರ್ಯ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಅಲ್ಲಿ ಅವರು ರೋಲೆಕ್ಸ್ ಪಾತ್ರವನ್ನು ನಿರ್ವಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಮಲ್ ಹಾಸನ್ ಹೇಳಿದ್ದೇನು?
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಲ್ "ಪ್ರತಿಯೊಬ್ಬರೂ ಪ್ರಗತಿ ಹೊಂದಬೇಕಾದರೆ, ಹಣದ ಬಗ್ಗೆ ಚಿಂತಿಸದ ಒಬ್ಬ ನಿಜವಾದ ನಾಯಕ ನಿಮಗೆ ಬೇಕು. 'ನಾನು ಒಂದು ಕ್ಷಣದಲ್ಲಿ 300 ಕೋಟಿ ಗಳಿಸಬಲ್ಲೆ' ಎಂದು ಹೇಳಿದಾಗ, ಅದು ಯಾರಿಗೂ ಅರ್ಥವಾಗಲಿಲ್ಲ. ನಾನು ಏನೋ ಜಂಬ ಕೊಚ್ಚಿಕೊಳ್ಳುತ್ತಿದ್ದೇನೆ ಎಂದು ಅನೇಕರು ಭಾವಿಸಿದರು. ಈಗ ಅದು ವಿಕ್ರಮ್ ಚಿತ್ರದ ಗಲ್ಲಾಪೆಟ್ಟಿಗೆ ಸಂಗ್ರಹ ರೂಪದಲ್ಲಿ ಇದೀಗ ಬರುತ್ತಿದೆ ಎಂದು ನೀವು ನೋಡಬಹುದು.

ಇದನ್ನೂ ಓದಿ: Meghana Raj: ಅಮ್ಮ ಅಂತ ಹೇಳಿಕೊಟ್ರು ಅಪ್ಪ ಎಂದ ರಾಯನ್, ಚಿರು ಮಗನ ಮುದ್ದಾದ ವಿಡಿಯೋ ನೋಡಿ

ನಾನು ನನ್ನ ಎಲ್ಲಾ ಸಾಲಗಳನ್ನು ಮರುಪಾವತಿಸುತ್ತೇನೆ, ನನಗೆ ತೃಪ್ತಿಯಾಗುವಷ್ಟು ಹೊಟ್ಟೆ ತುಂಬುವಷ್ಟು ತಿನ್ನುತ್ತೇನೆ ಮತ್ತು ಇದಷ್ಟೇ ಅಲ್ಲದೆ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಕೈಲಾದಷ್ಟು ಹಣವನ್ನು ನೀಡುತ್ತೇನೆ. ಅದರ ನಂತರ, ನನ್ನ ಬಳಿ ಏನೂ ಉಳಿದಿಲ್ಲದಿದ್ದರೆ, ನಾನು ನೀಡಲು ಇನ್ನು ಮುಂದೆ ಏನೂ ಇಲ್ಲ ಎಂದು ಹೇಳುತ್ತೇನೆ. ಬೇರೆಯವರ ಹಣವನ್ನು ತೆಗೆದುಕೊಳ್ಳುವ ಮೂಲಕ ಇತರರಿಗೆ ಸಹಾಯ ಮಾಡುವಂತೆ ನಾನು ನಟಿಸಬೇಕಾಗಿಲ್ಲ. ನಾನು ಯಾವುದೇ ದೊಡ್ಡ ಬಿರುದುಗಳನ್ನು ಬಯಸುವುದಿಲ್ಲ. ನಾನು ಉತ್ತಮ ಮನುಷ್ಯನಾಗಿರಲು ಬಯಸುತ್ತೇನೆ" ಎಂದು ಹೇಳಿದರು. ವರದಿಯ ಪ್ರಕಾರ, ಕಮಲ್ ಸೋಮವಾರ ಚೆನ್ನೈನಲ್ಲಿ ರಕ್ತದಾನ ಅಭಿಯಾನವನ್ನು ಪ್ರಾರಂಭಿಸಿದ ನಂತರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದರು.

300 ಕೋಟಿಗಳ ಗಡಿ ದಾಟಿದ ವಿಕ್ರಮ್ ಸಿನೆಮಾ
ಈ ಹಿಂದೆ, ಇಂಡಸ್ಟ್ರಿ ಟ್ರ್ಯಾಕರ್ ರಮೇಶ್ ಬಾಲಾ ಅವರು ಟ್ವಿಟ್ಟರ್ ನಲ್ಲಿ ವಿಕ್ರಮ್ ವಿಶ್ವದಾದ್ಯಂತ 300 ಕೋಟಿ ರೂಪಾಯಿ ಗಳಿಕೆಯ ಕ್ಲಬ್ ಗೆ ಸೇರಿದೆ ಎಂದು ಬಹಿರಂಗಪಡಿಸಿದ್ದಾರೆ. "2ನೇ ವಾರಾಂತ್ಯದ ಕೊನೆಯಲ್ಲಿ, ವಿಕ್ರಮ್ ಬಾಕ್ಸ್ ಆಫೀಸ್ ನಲ್ಲಿ ಒಟ್ಟು 300 ಕೋಟಿಗಳ ಗಡಿ ದಾಟಿದೆ" ಎಂದು ಅವರು ಸೋಮವಾರ ಟ್ವೀಟ್ ಮಾಡಿದ್ದಾರೆ. ಕಮಲ್ ಹಾಸನ್ ಅವರ ಇಡೀ ವೃತ್ತಿಜೀವನದಲ್ಲಿ ಇದು ಮೊದಲ 300 ಕೋಟಿ ರೂಪಾಯಿ ಗಳಿಕೆಯ ಚಿತ್ರವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Trivikrama ಸಿನಿಮಾ ನೋಡಿದ್ರೆ ಪರೀಕ್ಷೆಯಲ್ಲಿ 5 ಗ್ರೇಸ್ ಮಾರ್ಕ್ಸ್, ಬೆಳಗಾವಿ ಕಾಲೇಜಿನಲ್ಲಿ ಹೊಸಾ ಆಫರ್

ಇತ್ತೀಚೆಗೆ, ವಿಕ್ರಮ್ ಚಿತ್ರದ ಯಶಸ್ಸನ್ನು ಆಚರಿಸಲು ತೆಲುಗು ನಟ ಚಿರಂಜೀವಿ ಅವರು ಕಮಲ್ ಅವರಿಗೆ ಅವರ ನಿವಾಸದಲ್ಲಿ ಔತಣಕೂಟವನ್ನು ಆಯೋಜಿಸಿದ್ದರು. ಇದರಲ್ಲಿ ನಟ ಸಲ್ಮಾನ್ ಖಾನ್ ಕೂಡ ಭಾಗವಹಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಚಿರಂಜೀವಿ, ಸಲ್ಮಾನ್ ಮತ್ತು ಕಮಲ್ ಅವರೊಂದಿಗಿನ ಭೇಟಿಯ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ನಟ ಕಮಲ್ ಕೂಡ ಇದೇ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಚಿರಂಜೀವಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
Published by:Ashwini Prabhu
First published: