ಬಿಗ್ಬಾಸ್ (Big Boss).. ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ (Reality Show). ಈ ಕಾರ್ಯಕ್ರಮ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಒಂದೇ ಮನೆಲಿ 12 ರಿಂದ 13 ಸೆಲೆಬ್ರಿಟಿ (Celebrity)ಗಳು 100 ದಿನ ಜೊತೆಯಾಗಿರುಗ ಈ ಶೋ, ನೋಡೋಕೆ ಒಂದು ಥ್ರಿಲ್ (Thrill). ಎಲ್ಲ ಭಾಷೆಗಳಲ್ಲೂ ಬಿಗ್ ಬಾಸ್ ಶೋ ಬಂದಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ (Kiccha Sudeep) ಅವರು ನಿರೂಪಕರಾಗಿದ್ದರೆ, ಹಿಂದಿಯಲ್ಲಿ ಬಜರಂಗಿ ಭಾಯ್ಜಾನ್ ಸಲ್ಮಾನ್ ಖಾನ್ (Salman Khan) ಬಿಗ್ ಬಾಸ್ ನಡೆಸಿಕೊಡುತ್ತಾರೆ. ಇನ್ನೂ ತೆಲುಗಿನಲ್ಲಿ ನಾಗಾರ್ಜುನ (Nagarajuna) ಅವರು ಈ ರಿಯಾಲಿಟಿ ಶೋ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇತ್ತ ತಮಿಳಿನಲ್ಲಿ ಉಳಗನಯನನ್ ಕಮಲ್ ಹಾಸನ್ (Kamal Haasan) ಬಿಗ್ ಬಾಸ್ ಶೋ ಹೋಸ್ಟ್ ಆಗಿದ್ದರು. ಇದೀಗ ಈ ಜವಾಬ್ದಾರಿಯಿಂದ ನಟ ಕಮಲ್ ಹಾಸನ್ ಹಿಂದೆ ಸರಿದಿದ್ದಾರೆ. ಇನ್ನೂ ಮುಂದೆ ತಮಿಳಿನ ಬಿಗ್ ಬಾಸ್ ಶೋ ಕಮಲ್ ಹಾಸನ್ ನಿರೂಪಣೆ ಮಾಡುವುದಿಲ್ಲ. ಈ ಸುದ್ದಿ ಅಧಿಕೃತವಾಗಿ ಬಂದಿದೆ.
ನಿರೂಪಣೆ ಮಾಡಲ್ವಂತೆ ಕಮಲ್ ಹಾಸನ್!
ತಮಿಳು ಬಿಗ್ ಬಾಸ್ ನಿರೂಪಕನ ಸ್ಥಾನಕ್ಕೆ ವಿದಾಯ ಹೇಳಲು ಕಮಲ್ ಹಾಸನ್ ತೀರ್ಮಾನಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕಮಲ್ ಹಾಸನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ, ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲದೇ ನಿರ್ದೇಶನ, ನಿರ್ಮಾಣ, ರಾಜಕೀಯ ರಂಗದಲ್ಲೂ ಕಮಲ್ ಹಾಸನ್ ಬ್ಯುಸಿ. ಇದೆಲ್ಲದರ ನಡುವ ಬಿಗ್ ಬಾಸ್ ತಮಿಳು ಅಲ್ಟಿಮೇಟ್ ಕಾರ್ಯಕ್ರಮದ ನಿರೂಪಣ ಮಾಡುತ್ತಿದ್ದರು. ಇದು ತಮಿಳು ಬಿಗ್ಬಾಸ್ ಒಟಿಟಿ ವರ್ಷನ್, ಆದರೆ, ಈಗ ಅವರು ಈ ಶೋ ನಿರೂಪಣೆಯಿದ ಹೊರಬುರುವುದಾಗಿ ತಿಳಿಸಿದ್ದಾರೆ.
‘ವಿಕ್ರಮ್’ ಸಿನಿಮಾ ಕೆಲಸದಲ್ಲಿ ತೊಡಗಿಕೊಂಡಿರುವ ಕಮಲ್!
ಕಮಲ್ ಹಾಸನ್ ಅವರು ಬಹುನಿರೀಕ್ಷಿತ ‘ವಿಕ್ರಮ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಚಿತ್ರಕ್ಕೆ ಆ್ಯಕ್ಷ ನ್ ಕಟ್ ಹೇಳುತ್ತಿದ್ದಾರೆ. ಬಿಗ್ ಬಾಸ್ನಿಂದಾಗಿ ಈ ಸಿನಿಮಾದ ಶೂಟಿಂಗ್ ಮತ್ತು ಇತರೆ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಇವರು ಬಿಗ್ ಬಾಸ್ ತಮಿಳು ಅಲ್ಟಿಮೇಟ್ ಶೋ ನಿಂದ ಹೊರಬರಲು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: ಮತ್ತೊಬ್ಬ ಯುವ ನಿರ್ದೇಶಕನಿಗೆ ಕಾಲ್ಶಿಟ್ ಕೊಟ್ಟ ರಜನಿಕಾಂತ್.. ಇದು ಬೇರೆ ಲೆವೆಲ್ ಸಿನಿಮಾ ಅಂತೆ!
ಎರಡೂ ಡೇಟ್ ಕ್ಲ್ಯಾಶ್ ಆಗಿದೆ ಎಂದ ಕಮಲ್
‘ನನ್ನ ನಟನೆಯ ‘ವಿಕ್ರಮ್’ ಸಿನಿಮಾ ಮತ್ತು ಬಿಗ್ ಬಾಸ್ ಕಾರ್ಯಕ್ರಮದ ಶೂಟಿಂಗ್ ನಡುವೆ ಕ್ಲ್ಯಾಶ್ ಆಗಬಾರದು ಎಂದು ಎರಡೂ ತಂಡಗಳು ಕಷ್ಟಪಟ್ಟು ಈ ದಿನದವರೆಗೂ ಪ್ಲ್ಯಾನ್ ಮಾಡುತ್ತಿದ್ದವು. ಆದರೆ ಎರಡೂ ಪ್ರಾಜೆಕ್ಟ್ಗಳನ್ನು ಏಕಕಾಲಕ್ಕೆ ಮಾಡಲು ನನಗೆ ಪ್ರಾಯೋಗಿಕವಾಗಿ ಸಾಧ್ಯವಾಗುತ್ತಿಲ್ಲ. ಲಾಕ್ಡೌನ್ ಮತ್ತು ಕೊರೊನಾ ನಿರ್ಬಂಧದ ಕಾರಣದಿಂದ ‘ವಿಕ್ರಮ್’ ಸಿನಿಮಾದ ಕೆಲಸಗಳು ಮುಂದೂಡಲ್ಪಟ್ಟವು. ಅದರ ಪರಿಣಾಮವಾಗಿ ಬಿಗ್ ಬಾಸ್ ಅಲ್ಟಿಮೇಟ್ ಶೋಗೆ ನೀಡಿದ್ದ ಡೇಟ್ಸ್ ಜೊತೆ ಈಗ ಕ್ಲ್ಯಾಶ್ ಆಗಿದೆ’ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಇದನ್ನೂ ಓದಿ: ‘ದಳಪತಿ’ ನೋಡಲು ಮುಗಿಬಿದ್ದ ಫ್ಯಾನ್ಸ್, ತಮಿಳು ನಟ ವಿಜಯ್ ಕೈ ಮುಗಿದು ಕ್ಷಮೆಯಾಚಿಸಿದ್ದು ಯಾಕೆ ಗೊತ್ತಾ?
ವಿಕ್ರಮ್ ಸಿನಿಮಾದಲ್ಲಿ ಘಟಾನುಘಟಿಗಳ ಸಮಾಗಮ!
‘ವಿಕ್ರಮ್’ ಸಿನಿಮಾದಲ್ಲಿ ನನ್ನ ಸಲುವಾಗಿ ದೊಡ್ಡ ದೊಡ್ಡ ಸ್ಟಾರ್ ನಟರು ಮತ್ತು ತಂತ್ರಜ್ಞರು ಕಾಯುವಂತೆ ಮಾಡುವುದು ನ್ಯಾಯಸಮ್ಮತ ಅಲ್ಲ’ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಸದ್ಯ ಹೊಸದಾಗಿ ಬಿಗ್ ಬಾಸ್ ನಿರೂಪಕನ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬ ಕೌತುಕ ಮೂಡಿದೆ. ಇನ್ನೂ ಇವರ ಜಾಗಕ್ಕೆ ಯಾರಾದರೂ ಸೂಪರ್ ಸ್ಟಾರ್ ನಟನನ್ನೆ ಕರೆತರಬೇಕೆಂದು ತಂಡ ನಿರ್ಧರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ