ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ವಾರ್ (Star War) ಸರ್ವೇ ಸಾಮನ್ಯ. ಅದರಲ್ಲೂ ಕಾಲಿವುಡ್ (Kollywood) ನಲ್ಲಿ ಈ ಸ್ಟಾರ್ ವಾರ್ಗಳು ಹೆಚ್ಚು. ಸ್ಟಾರ್ ನಟರ ಅಭಿಮಾನಿಗಳು ಪ್ರತಿ ಸಿನಿಮಾ ಬಿಡುಗಡೆಯಾದಗ ಗಲಾಟೆ ಮಾಡುವುದು ಕಾಮನ್ ಆಗೋಗಿದೆ. ಇತ್ತೀಚೆಗೆ ತೆರೆಕಂಡಿದ್ದ ಅಜಿತ್ (Ajith) ನಟನೆಯ ವಲಿಮೈ ಸಿನಿಮಾ ಬಿಡುಗಡೆ ವೇಳೆ ವಿಜಯ್ (Vijay) ಅಭಿಮಾನಿಗಳು ಹಲ್ಲೆ ಮಾಡಿದ್ದರು ಅಂತ ಅಜಿತ್ ಅಭಿಮಾನಿಗಳು ಆರೋಪ ಮಾಡಿದ್ದರು. ಇವರಿಬ್ಬರಿಗೂ ಆಗಲ್ಲ ಎಂದು ಅವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಾರೆ. ಇವರಿಬ್ಬರಿಗೂ ಮುನ್ನ ಈ ಹಿಂದೆಯಿಂದಲೂ ತಮಿಳು ಚಿತ್ರರಂಗದಲ್ಲಿ ಸ್ಟಾರ್ ವಾರ್ ನಡೆದುಕೊಂಡು ಬಂದಿದೆ ಅಂದರೆ ತಪ್ಪಾಗಲಾರದು. ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಹಾಗೂ ಕಮಲ್ ಹಾಸನ್ (Kamal Haasan) ನಡುವೆ ಎಲ್ಲವೂ ಸರಿಯಿಲ್ಲ ಎಂಬುಂದು ಎಲ್ಲರಿಗೂ ಗೊತ್ತಿದೆ. ಆದರೆ, ಇದೀಗ ಕಮಲ್ ಹಾಸನ್ ರಜನಿಕಾಂತ್ ಅವರನ್ನು ಭೇಟಿ ಮಾಡಿ ಅವರ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರಜನಿ ಭೇಟಿಯಾದ ಕಮಲ್ ಹಾಸನ್
ಭಾರತೀಯ ಸಿನಿಮಾದಲ್ಲಿಯೇ ನಟ ಕಮಲ್ ಹಾಸನ್(Kamal Haasan) ಅವರು ತಮ್ಮ ವಿಭಿನ್ನವಾದ ನಟನೆಯಿಂದ ಮತ್ತು ವಿಭಿನ್ನ ಕಥೆ(Different Story)ಯುಳ್ಳ ಸಿನೆಮಾದಲ್ಲಿ ನಟಿಸುವುದರಿಂದ ಗುರುತಿಸಿಕೊಂಡವರು ಎಂದರೆ ಅತಿಶಯೋಕ್ತಿಯಲ್ಲ. ನಿರ್ದೇಶಕ ದಿವಂಗತ ಕೆ ಬಾಲಚಂದರ್ ಈ ಇಬ್ಬರು ನಟರಿಗೂ ಗುರುಗಳು. ಇವರ ಗರಡಿಯಲ್ಲೇ ಬೆಳೆದು ಸೂಪರ್ ಸ್ಟಾರ್ ಪಟ್ಟ ಪಡೆದುಕೊಂಡವರು ರಜನಿಕಾಂತ್ ಹಾಗೂ ಕಮಲ್ ಹಾಸನ್.
ಇದನ್ನೂ ಓದಿ: Sarkaru Vaari Paata ಒಟಿಟಿ ರಿಲೀಸ್ ಡೇಟ್ ಫಿಕ್ಸ್, ಮನೆಯಲ್ಲೇ ಕುಳಿತು ಮಹೇಶ್ ಬಾಬು ಹೊಸ ಸಿನಿಮಾ ನೋಡಿ!
ಭಾರತೀಯ ಚಿತ್ರರಂಗದಲ್ಲಿ ಇವರಿಬ್ಬರಿಗೆ ಸರಿಸಾಟಿ ಇನ್ಯಾರಿಲ್ಲ. ಇವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂದು ಹಲವಾರು ಬಾರಿ ಸುದ್ದಿಯಾಗಿದೆ. ಆದರೆ, ಇದೀಗ ಕಮಲ್ ಹಾಸನ್ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದಾರೆ.
ಸೂಪರ್ ಸ್ಟಾರ್ ರಜಿನಿಕಾಂತ್ ಅಂದರೆ ಭಾರತೀಯ ಚಿತ್ರರಂಗದ ಧ್ರುವತಾರೆ. ಭಾರತವಷ್ಟೇ ಅಲ್ಲದೇ ವಿದೇಶಗಳಲ್ಲೂ ಮೊದಲ ಬಾರಿಗೆ ಕ್ರೇಜ್ ಹುಟ್ಟಿಸಿದ ಭಾರತೀಯ ನಟ ಅಂದರೆ, ಅದೇ ತಲೈವಾ ರಜಿನಿಕಾಂತ್. ಸಾಲು ಸಾಲು ಸಿನಿಮಾಗಳಲ್ಲಿ ರಜನಿಕಾಂತ್ ಬ್ಯುಸಿಯಾಗಿದ್ದಾರೆ. ಇತ್ತ ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹಿಂದೆ ಕಮಲ್ ಹಾಸನ್ ರಾಜಕೀಯನೇ ಬೇರೆ, ಸ್ನೇಹನೇ ಬೇರೆ ಎಂದಿದ್ದರು. ಹೀಗೆ ಹೇಳಿಕೆ ಕೊಟ್ಟ ಕೆಲವೇ ದಿನಗಳಲ್ಲಿ ಕಮಲ್ ಹಾಸನ್ ಸೂಪರ್ಸ್ಟಾರ್ ರಜನಿಕಾಂತ್ರನ್ನು ಭೇಟಿ ಮಾಡಿದ್ದಾರೆ.
Thank you @ikamalhaasan Sir! @rajinikanth Sir! What a friendship! inspiring Love you Sir's❤️❤️❤️ pic.twitter.com/l61EuttG89
— Lokesh Kanagaraj (@Dir_Lokesh) May 29, 2022
ಇದನ್ನೂ ಓದಿ: ಸಖತ್ ರಾ ಲುಕ್ನಲ್ಲಿ ಬಂದ `ವಿಕ್ರಂ’! ಹಿಂದೆಂದೂ ಮಾಡಿರದ ಪಾತ್ರದಲ್ಲಿ ಕಮಲ್ ಹಾಸನ್
ರಜನಿಕಾಂತ್ ಹಾಗೂ ಕಮಲ್ ಭೆಟಿ ಫೋಟೋ ವೈರಲ್!
ರಜನಿಕಾಂತ್ ಹಾಗೂ ಕಮಲ್ ಹಾಸನ್ ನಡುವೆ ಸಿನಿಮಾ ವಿಚಾರದಲ್ಲೂ ಪೈಪೋಟಿ ಇತ್ತು. ಜೊತೆಗೆ ಇಬ್ಬರ ರಾಜಕೀಯ ನಿಲುವುಗಳು ಕೂಡ ಬೇರೆ. ಆದರೂ ಇಬ್ಬರ ಸ್ನೇಹದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಅಂತ ಕಮಲ್ ಹಾಸನ್ ಪ್ರಚಾರದ ವೇಳೆ ಹೇಳಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದಾದ ಬಳಿಕ ಕಮಲ್ ಹಾಸನ್ ಇದ್ದಕಿದ್ದ ಹಾಗೇ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದಾರೆ. ಕಮಲ್ ಸೂಪರ್ಸ್ಟಾರ್ ರಜನಿಯನ್ನು ಭೇಟಿ ಮಾಡಿದ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ