Kamal Haasan: ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಂತೆ ಕಮಲ್ ಹಾಸನ್! ಈ ಬಾರಿಯಾದರೂ ಸಿಗುತ್ತಾ ರಾಜಕಾರಣದಲ್ಲಿ ವಿಕ್ರಮ?

‘ವಿಕ್ರಮ್’ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ನಲ್ಲೂ ವಿಕ್ರಮ್ ಧೂಳೆಬ್ಬಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಕಮಲ್ ಹಾಸನ್.

ರಾಜಕೀಯ ಪ್ರವೇಶಕ್ಕೆ ಸಜ್ಜಾದ ಕಮಲ್ ಹಾಸನ್

ರಾಜಕೀಯ ಪ್ರವೇಶಕ್ಕೆ ಸಜ್ಜಾದ ಕಮಲ್ ಹಾಸನ್

  • Share this:
ಬಹುಭಾಷಾ ನಟ, ಸೂಪರ್ ಸ್ಟಾರ್ (Super Star) ಕಮಲ್ ಹಾಸನ್ (Kamal Haasan) ಭಾರೀ ಸಂತಸದಲ್ಲಿದ್ದಾರೆ. ಅವರು ನಟಿಸಿದ್ದ ‘ವಿಕ್ರಮ್’ (Vikram) ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ (Successful Show) ಕಾಣುತ್ತಿದೆ. ಭಾರತೀಯ ಚಿತ್ರರಂಗದ (Indian Film Industry) ಬಾಕ್ಸ್ ಆಫೀಸ್‌ನಲ್ಲೂ (Box Office) ವಿಕ್ರಮ್ ಧೂಳೆಬ್ಬಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅಭಿಮಾನಿಗಳಿಗೆ (Fans) ಗುಡ್ ನ್ಯೂಸ್ (Good News) ಕೊಟ್ಟಿದ್ದಾರೆ ಕಮಲ್ ಹಾಸನ್. ಅದೇನಪ್ಪಾ ಅಂದರೆ ಈಗಾಗಲೇ ಕಮಲ್ ಹಾಸನ್ ರಾಜಕಾರಣ (Politics) ಪ್ರವೇಶಿಸಿದ್ದಾರೆ. ಇದೀಗ ಮತ್ತೆ ಚುನಾವಣಾ (Election) ಅಖಾಡಕ್ಕೆ ಧುಮುಕಲಿದ್ದಾರಂತೆ. ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ (Tamil Nadu Assembly Election) ಕಮಲ್ ಹಾಸನ್ ಸ್ಪರ್ಧೆ ಮಾಡುತ್ತಾರಂತೆ. ಅವರ ನೇತೃತ್ವದ ‘ಮಕ್ಕಳ್ ನೀಧಿ ಮಯ್ಯಂ’ (Makkal Needhi Maiam) ಪಕ್ಷದ ಅಭ್ಯರ್ಥಿಗಳು (Candidates) ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರಂತೆ.

ಚುನಾವಣಾ ಅಖಾಡಕ್ಕೆ ಕಮಲ್ ಹಾಸನ್

ಸೂಪರ್‌ಸ್ಟಾರ್ ಕಮಲ್ ಹಾಸನ್ ಅವರು ರಾಜಕೀಯದಿಂದ ಹಿಂದೆ ಸರಿಯುವುದಿಲ್ಲ ಅಂತ ಹೇಳಿದ್ದಾರೆ. ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕಮಲ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಪಕ್ಷವು ಐದನೇ ವರ್ಷಕ್ಕೆ ಕಾಲಿಟ್ಟಿದೆಯ ಈ ಸಂದರ್ಭದಲ್ಲಿ ಚಲನಚಿತ್ರದ ಯಶಸ್ಸಿನಿಂದ ನಾನು ರಾಜಕೀಯ ಮರೆಯುವುದಿಲ್ಲ. ರಾಜಕೀಯದಿಂದ ವಿರಾಮ ತೆಗೆದುಕೊಳ್ಳುವುದಿಲ್ಲ ಎಂದು ಹಿರಿಯ ನಟ ಹೇಳಿದ್ದಾರೆ.

ಐದು ವರ್ಷದ ಹಿಂದೆ ಮಕ್ಕಳ್ ನೀಧಿ ಮೈಯಂ ಸ್ಥಾಪನೆ

ತಮಿಳು ರಾಜಕೀಯದ ಇಬ್ಬರು ದಿಗ್ಗಜರಾದ ಎಐಎಡಿಎಂಕೆಯ ಜೆ. ಜಯಲಲಿತಾ ಮತ್ತು ಡಿಎಂಕೆಯ ಎಂ. ಕರುಣಾನಿಧಿ ಅವರ ನಿಧನದ ಶೂನ್ಯವನ್ನು ತುಂಬುವ ಚಿಂತನೆಯೊಂದಿಗೆ ಕಮಲ್ ಹಾಸನ್ ಅವರು ಐದು ವರ್ಷಗಳ ಹಿಂದೆ ಮಕ್ಕಳ್ ನೀಧಿ ಮೈಯಂ MNM ಅನ್ನು ಪ್ರಾರಂಭಿಸಿದರು. ಆದಾಗ್ಯೂ, ಪಕ್ಷವು 2019 ರ ಲೋಕಸಭೆ ಚುನಾವಣೆಯಲ್ಲಿ ಶೇಕಡಾ 3.7 ರಷ್ಟು ಮತಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಇದಾದ ಬಳಿಕ 2021ರ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಿತ್ತು. ಆದರೆ ಅದರ ಮತ ಹಂಚಿಕೆ ಶೇಕಡಾ 2.6 ಕ್ಕೆ ಕುಸಿದಿತ್ತು.

ಇದನ್ನೂ ಓದಿ: Hombale Films: ಮಲಯಾಳಂಗೂ ಹೊಂಬಾಳೆ ಫಿಲ್ಮ್ಸ್ ಗ್ಯಾಂಡ್‌ ಎಂಟ್ರಿ! ಟೈಸನ್‌ ಆಗಲಿದ್ದಾರೆ ಸೂಪರ್‌ ಸ್ಟಾರ್ ಪೃಥ್ವಿರಾಜ್‌

ಹೀನಾಯವಾಗಿ ಸೋಲು ಕಂಡಿದ್ದ ಕಮಲ್ ಹಾಸನ್

ಕಮಲ್ ಹಾಸನ್ ಈ ಹಿಂದೆಯೂ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದರು. 2021ರ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಕಮಲ್ ಸ್ವತಃ ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಆಗ ಬಿಜೆಪಿಯ ವನತಿ ಶ್ರೀನಿವಾಸನ್ ವಿರುದ್ಧ ದಯನೀಯವಾಗಿ ಸೋತಿದ್ದರು.

ಸತತ ಸೋಲಿನಿಂದ ಹಿರಿಯ ನಾಯಕರ ರಾಜೀನಾಮೆ

ಇನ್ನು 2021ರ ಪಂಚಾಯತ್ ಚುನಾವಣೆಗಳು ಮತ್ತು 2022 ರ ನಗರ ಸಂಸ್ಥೆಗಳ ಚುನಾವಣೆಯಲ್ಲಿ MNM ದಯನೀಯವಾಗಿ ಸೋತಿತು. ಹೀಗೆ ಸತತ ಸೋಲಿನಿಂದ ಕಂಗೆಟ್ಟ ಅದರ ಸ್ಥಾಪಕ ನಾಯಕರು ಸೇರಿದಂತೆ ಹಲವಾರು ಹಿರಿಯ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ನಾಲ್ಕು ವರ್ಷಗಳ ಬಳಿಕ ಮಿಂಚಿದ ವಿಕ್ರಮ್

ಸದ್ಯ ನಟ ಕಮಲ್ ಹಾಸನ್ ವಿಕ್ರಮ್ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿದ್ದಾರಪೆ. "ವಿಕ್ರಮ್" ಯಶಸ್ಸಿನಿಂದ ಕಮಲ್ ಹಾಸನ್ ನಟನಾಗಿ ಮತ್ತೆ ಬೆಳಕಿಗೆ ಬಂದಿದ್ದು, ಹಿರಿಯ ನಟ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಚಿತ್ರರಂಗದಿಂದ ನಾಲ್ಕು ವರ್ಷಗಳ ಕಾಲ ವಿರಾಮ ತೆಗೆದುಕೊಂಡಿದ್ದ ಕಮಲ್ ಹಾಸನ್ ಅವರು "ವಿಕ್ರಮ್" ನಲ್ಲಿ ಅಬ್ಬರಿಸುವ ಮೂಲಕ ಮತ್ತೆ ಬಂದಿದ್ದಾರೆ ಅದು ಸೂಪರ್-ಡೂಪರ್ ಯಶಸ್ಸು ಕಂಡಿದೆ.

ಇದನ್ನೂ ಓದಿ: Anushree Meet Ramya: ಯಾಕೆ ಇಷ್ಟು ಚೆಂದ ನೀನು? ರಮ್ಯಾ ನೋಡಿ ಕವಯಿತ್ರಿಯಾದ ಆ್ಯಂಕರ್ ಅನುಶ್ರೀ!

ವಿಕ್ರಮ್‌ನಲ್ಲಿ ಘಟಾನುಘಟಿಗಳ ಅಭಿನಯ

ವಿಕ್ರಮ್ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ ವಿಜಯ್ ಸೇತುಪತಿ, ಸೂರ್ಯ, ಫಹಾದ್ ಫಾಜಿಲ್, ನರೇನ್, ಕಾಳಿದಾಸ್ ಜಯರಾಮ್, ಚೆಂಬನ್ ವಿನೋದ್, ಶಿವಾನಿ ನಾರಾಯಣನ್ ಮತ್ತು ಆಂಟೋನಿ ವರ್ಗೀಸ್ ಕೂಡ ಇದ್ದಾರೆ.
Published by:Annappa Achari
First published: