• Home
  • »
  • News
  • »
  • entertainment
  • »
  • Kamal Haasan Dance: 68ನೇ ವಯಸ್ಸಲ್ಲೂ ಕಮಲ್‌ ಹಾಸನ್‌ ಸಖತ್‌ ಡ್ಯಾನ್ಸ್

Kamal Haasan Dance: 68ನೇ ವಯಸ್ಸಲ್ಲೂ ಕಮಲ್‌ ಹಾಸನ್‌ ಸಖತ್‌ ಡ್ಯಾನ್ಸ್

ಕಮಲ್ ಹಾಸನ್‍

ಕಮಲ್ ಹಾಸನ್‍

ಕಮಲ್ ಹಾಸನ್ ಮತ್ತು ಮಣಿರತ್ನಂ ಅವರು 35 ವರ್ಷಗಳ ಸುದೀರ್ಘ ಸಮಯದ ನಂತರ ಇನ್ನೂ ಹೆಸರಿಡದ ಸಿನಿಮಾಗಾಗಿ ಮತ್ತೆ ಒಂದಾಗುತ್ತಿದ್ದಾರೆ. ಇವರಿಬ್ಬರು 1987 ರ ‘ನಾಯಕನ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

  • Share this:

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕಮಲ್ ಹಾಸನ್ (Kamal Haasan) ಅವರ ನಟನೆ ಮತ್ತು ಡ್ಯಾನ್ಸ್ (Dance) ಯಾರು ತಾನೇ ನೋಡಿರುವುದಿಲ್ಲ ಹೇಳಿ? ಪರದೆಯ ಮೇಲೆ ಅದ್ಭುತವಾಗಿ ನಟಿಸಿ ಕೋಟ್ಯಾಂತರ ಅಭಿಮಾನಿಗಳನ್ನು (Fans) ಹೊಂದಿರುವ ಕಮಲ್ ಹಾಸನ್ ತಮ್ಮ ಸಿನಿಮಾ ವೃತ್ತಿಜೀವನದಲ್ಲಿ ಬರೀ ತಮಿಳು  (Tamil)ಚಿತ್ರಗಳಿಗೆ ಸೀಮಿತವಾಗಿರಲಿಲ್ಲ. ಇವರು ಹಿಂದಿ, ಕನ್ನಡ, ತೆಲುಗು, ಮಲಯಾಳಂ ಮತ್ತು ಬಂಗಾಳಿ ಚಿತ್ರಗಳಲ್ಲಿಯೂ ಸಹ ನಟಿಸಿ ಅನೇಕ ಹಿಟ್ ಚಿತ್ರಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಇಡೀ ಭಾರತೀಯ ಚಲನಚಿತ್ರೋದ್ಯಮಕ್ಕೆ ನಟ ಕಮಲ್ ಹಾಸನ್ ಅವರ ಕೊಡುಗೆ ತುಂಬಾನೇ ಇದೆ ಅಂತ ಹೇಳಬಹುದು.


ಇವರ ಬಹುತೇಕ ಚಲನ ಚಿತ್ರಗಳಲ್ಲಿ ಇವರ ಸ್ಟೈಲಿಶ್ ಆದ ಡ್ಯಾನ್ಸ್ ಸ್ಟೆಪ್ಸ್ ಗಳನ್ನು ನೋಡಿರುತ್ತೀರಿ. ಈಗ ಮತ್ತೊಮ್ಮೆ ಇವರ ಡ್ಯಾನ್ಸ್ ಸ್ಟೆಪ್ಸ್ ಗಳನ್ನು ನೋಡಬೇಕು ಅಂತ ನಿಮಗೆ ಅನ್ನಿಸಿದರೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ಹೊಸ ವೀಡಿಯೋ ಹರಿದಾಡುತ್ತಿದೆ ನೋಡಿ.




ತಮ್ಮ ಹುಟ್ಟುಹಬ್ಬದ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ್ರು ಕಮಲ್


ಈ ವಾರದ ಆರಂಭದಲ್ಲಿ 68ನೇ ವರ್ಷಕ್ಕೆ ಕಾಲಿಟ್ಟ ಕಮಲ್ ಹಾಸನ್ ಅವರು ಚೆನ್ನೈನಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ತುಂಬಾನೇ ಸಂಭ್ರಮದಿಂದ ಆಚರಿಸಿಕೊಂಡರು. ಹಿರಿಯ ನಟನ ಹುಟ್ಟುಹಬ್ಬದ ಆಚರಣೆಯ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ನಲ್ಲಿದೆ. ಈ ವೀಡಿಯೋದಲ್ಲಿ ನಟ ಕಮಲ್ ಹಾಸನ್ ಅವರು ಡ್ಯಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ ನೋಡಿ.









View this post on Instagram






A post shared by Kamal Haasan (@ikamalhaasan)





ಈ ವೀಡಿಯೋವನ್ನು ನಟನಿಗೆ ಮೀಸಲಾದ ಹಲವಾರು ಫ್ಯಾನ್ಸ್ ಪೇಜ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿವೆ. ಅವರ ಜನ್ಮದಿನದಂದು, ಸೂಪರ್ ಸ್ಟಾರ್ ತಮ್ಮ ಮುಂದಿನ ಯೋಜನೆಯನ್ನು ಸಹ ಘೋಷಿಸಿದ್ದಾರೆ. ಕಮಲ್ ಅವರ ಮುಂದಿನ ಚಿತ್ರ ಮಣಿರತ್ನಂ ಅವರೊಂದಿಗೆ ಮಾಡುತ್ತಿದ್ದಾರಂತೆ, ಆದರೆ ಇನ್ನೂ ಇದಕ್ಕೆ ಏನೂ ಹೆಸರಿಟ್ಟಿಲ್ಲ ಎಂದು ಹೇಳಲಾಗುತ್ತಿದೆ.


35 ವರ್ಷಗಳ ನಂತರ ಮತ್ತೆ ಜೊತೆಯಾಗಿದ್ದಾರೆ ಕಮಲ್ ಮತ್ತು ಮಣಿರತ್ನಂ


ಕಮಲ್ ಹಾಸನ್ ಮತ್ತು ಮಣಿರತ್ನಂ ಅವರು 35 ವರ್ಷಗಳ ಸುದೀರ್ಘ ಸಮಯದ ನಂತರ ಇನ್ನೂ ಹೆಸರಿಡದ ಸಿನಿಮಾಗಾಗಿ ಮತ್ತೆ ಒಂದಾಗುತ್ತಿದ್ದಾರೆ. ಇವರಿಬ್ಬರು 1987 ರ ‘ನಾಯಕನ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ತಮ್ಮ ಹುಟ್ಟುಹಬ್ಬದಂದು ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡಿದ ನಟ, ಮಣಿರತ್ನಂ ಅವರೊಂದಿಗೆ ಮತ್ತೆ ಕೆಲಸ ಮಾಡುವ ಬಗ್ಗೆ "ಈ ಮುಂಬರುವ ಯೋಜನೆಯ ಬಗ್ಗೆ ನಾನು ತುಂಬಾನೇ ಉತ್ಸುಕನಾಗಿದ್ದೇನೆ" ಎಂದು ಹೇಳಿದರು.


ಇದನ್ನೂ ಓದಿ: PS1-Kamal Hassan: ಚೋಳರ ಕಾಲದಲ್ಲಿ ಹಿಂದು ಧರ್ಮವೇ ಇರಲಿಲ್ಲ ಎಂದ ನಟ ಕಮಲ್ ಹಾಸನ್!


ತಮ್ಮ ಹುಟ್ಟುಹಬ್ಬದಂದು ಕಮಲ್ ಹಾಸನ್ ಅವರು ಮಣಿರತ್ನಂ ಅವರೊಂದಿಗಿನ ತಮ್ಮ ಚಿತ್ರದ ಟೀಸರ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಅವರು ಆ ಪೋಸ್ಟ್ ಗೆ "ಇಲ್ಲಿ ನಾವು ಮತ್ತೆ ಒಂದಾಗುತ್ತಿದ್ದೇವೆ" ಎಂದು ಶೀರ್ಷಿಕೆ ನೀಡಿದ್ದಾರೆ. ಈ ವರ್ಷದ ಆರಂಭದಲ್ಲಿ, ಕಮಲ್ ಹಾಸನ್ ಅವರು ಚೆನ್ನೈನಲ್ಲಿ ಮಣಿರತ್ನಂ ಅವರ ಚಿತ್ರ ಪೊನ್ನಿಯಿನ್ ಸೆಲ್ವನ್: ಐ ಚಿತ್ರದ ಗ್ರ್ಯಾಂಡ್ ಟ್ರೈಲರ್ ಮತ್ತು ಹಾಡಿನ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಅವರು ಚಿತ್ರದ ಕಥೆಯ ಪರಿಚಯಕ್ಕೂ ಸಹ ಧ್ವನಿ ನೀಡಿದ್ದರು.


Actor Kamal Haasan dance
ಕಮಲ್ ಹಾಸನ್‍


ಇನ್ನೂ ಕೆಲಸದ ವಿಷಯಕ್ಕೆ ಬಂದರೆ ನಟ ಕಮಲ್ ಹಾಸನ್ ಅವರು ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ಅವರೊಂದಿಗೆ ಸೇರಿಕೊಂಡು ಸ್ಮ್ಯಾಶ್ ಹಿಟ್ ವಿಕ್ರಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ನಟ ಸೂರ್ಯ ಅವರ ಅತಿಥಿ ಪಾತ್ರವೂ ಇತ್ತು. ನಟಿ ಕಾಜಲ್ ಅಗರ್ವಾಲ್, ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಬಾಬಿ ಸಿಂಹ, ಗುರು ಸೋಮಸುಂದರಂ ಮತ್ತು ಸಮುಥಿರಕಣಿ ನಟಿಸಿರುವ ಇಂಡಿಯನ್ 2 ಚಿತ್ರದಲ್ಲಿಯೂ ಸಹ ಅವರು ಕಾಣಿಸಿಕೊಳ್ಳಲಿದ್ದಾರೆ.

Published by:Divya D
First published: