HBD Kamal Haasan: ಸ್ಯಾಂಡಲ್​ವುಡ್​ನಲ್ಲೂ ಕಮಾಲ್ ಮಾಡಿರುವ ಕಮಲ್ ಹಾಸನ್; ಆ 5 ಸಿನಿಮಾಗಳು ಯಾವುದು ಗೊತ್ತಾ?

Kamal Haasan Birthday: ತಮಿಳಿನ ನಾಯಕನ್, ದಶಾವತಾರಂ, ವಿಶ್ವರೂಪಂ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಕಮಲ್ ಹಾಸನ್ ಕನ್ನಡದಲ್ಲಿಯೂ 5 ಸಿನಿಮಾಗಳಲ್ಲಿ ನಟಿಸಿದ್ದಾರೆ.

Sushma Chakre | news18-kannada
Updated:November 7, 2019, 5:30 PM IST
HBD Kamal Haasan: ಸ್ಯಾಂಡಲ್​ವುಡ್​ನಲ್ಲೂ ಕಮಾಲ್ ಮಾಡಿರುವ ಕಮಲ್ ಹಾಸನ್; ಆ 5 ಸಿನಿಮಾಗಳು ಯಾವುದು ಗೊತ್ತಾ?
ಕಮಲ್ ಹಾಸನ್.
Sushma Chakre | news18-kannada
Updated: November 7, 2019, 5:30 PM IST
ಭಾರತೀಯ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಕಮಲ್ ಹಾಸನ್ ಕೂಡ ಒಬ್ಬರು. ತಮಿಳು, ತೆಲುಗು, ಕನ್ನಡ, ಮಲೆಯಾಳಂ, ಬೆಂಗಾಲಿ ಮತ್ತು ಹಿಂದಿ ಭಾಷೆಯಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಕಮಲ್ ಹಾಸನ್ ಇಂದು 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅನೇಕ ರಾಷ್ಟ್ರ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿಗಳನ್ನು ಗಳಿಸಿರುವ ಕಮಲ್ ಹಾಸನ್ ಭಾರತ ಚಿತ್ರರಂಗದ ಸೆನ್ಸಿಬಲ್ ನಿರ್ದೇಶಕರೂ ಹೌದು. ನಟನೆ, ಚಿತ್ರಕತೆ, ನಿರ್ದೇಶನ, ಸಾಹಿತ್ಯ ರಚನೆ, ಹಿನ್ನೆಲೆ ಗಾಯನ ಹೀಗೆ ಹಲವು ವಿಭಾಗಗಳಲ್ಲಿ ಕಮಲ್ ಹಾಸನ್ ತೊಡಗಿಸಿಕೊಂಡಿದ್ದಾರೆ.

ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್ ಮತ್ತು ಕಮಲ್ ಹಾಸನ್ ಇಬ್ಬರೂ ಬಹಳ ಆಪ್ತ ಸ್ನೇಹಿತರು. ಇಬ್ಬರಿಗೂ ಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕಿಕೊಟ್ಟವರು ತಮಿಳಿನ ಖ್ಯಾತ ನಿರ್ದೇಶಕ ಕೆ. ಬಾಲಚಂದರ್. ಇಂದಿಗೂ ಈ ಇಬ್ಬರೂ ನಟರ ನಡುವೆ ಹಿಂದಿನಷ್ಟೇ ಆತ್ಮೀಯ ಒಡನಾಟವಿದೆ. ಆ ಕಾರಣದಿಂದಲೇ ರಮೇಶ್ ಅರವಿಂದ್ ನಿರ್ದೇಶಿಸಿ, ನಟಿಸಿದ್ದ 'ರಾಮ ಶ್ಯಾಮ ಭಾಮ' ಸಿನಿಮಾದಲ್ಲಿ ಕಮಲ್ ಹಾಸನ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಧ್ರುವ ಸರ್ಜಾ- ಪ್ರೇರಣಾ ವಿವಾಹಕ್ಕೆ ದಿನಗಣನೆ ಶುರು; ಹೇಗಿದೆ ಗೊತ್ತಾ ಆ್ಯಕ್ಷನ್ ಪ್ರಿನ್ಸ್​ ಮದುವೆ ಪತ್ರಿಕೆ?

ರಮೇಶ್ ಅರವಿಂದ್​


ತಮಿಳಿನ 'ನಾಯಕನ್', 'ದಶಾವತಾರಂ', 'ವಿಶ್ವರೂಪಂ' ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಕಮಲ್ ಹಾಸನ್ ಕನ್ನಡದಲ್ಲಿಯೂ 5 ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿರುವ ಕಮಲ್ ಹಾಸನ್ ಅವರ ಮಗಳು ಶ್ರುತಿ ಹಾಸನ್ ಕೂಡ ಕಾಲಿವುಡ್, ಕಾಲಿವುಡ್​ನಲ್ಲಿ ಬೇಡಿಕೆಯಿರುವ ನಟಿ. ಕರ್ನಾಟಕದ ನೃತ್ಯಗಾರ್ತಿ ವಾಣಿ ಗಣಪತಿ ಅವರನ್ನು ವಿವಾಹವಾಗಿದ್ದ ಕಮಲ್ ಹಾಸನ್ ನಂತರ ಅವರಿಗೆ ವಿಚ್ಛೇದನ ನೀಡಿ ತಮಿಳಿನ ನಟಿ ಸಾರಿಕಾ ಅವರನ್ನು ಮದುವೆಯಾದರು. ನಂತರ ಸಾರಿಕಾಗೂ ಕಮಲ್ ಡೈವೋರ್ಸ್​ ನೀಡಿದರು. ತಮ್ಮ ಜೊತೆ ನಟಿಸಿದ್ದ ನಟಿ ಗೌತಮಿ ಅವರೊಂದಿಗೆ ಕಮಲ್ ಹಾಸನ್ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದರು.

Actress Shruti Hassan
ಶ್ರುತಿ ಹಾಸನ್​


ಕನ್ನಡದಲ್ಲಿ 5 ಸಿನಿಮಾಗಳಲ್ಲಿ ಕಮಲ್ ಹಾಸನ್ ನಟಿಸಿದ್ದಾರೆ. 1977ರಲ್ಲಿ ತೆರೆಕಂಡಿದ್ದ ಬಾಲು ಮಹೇಂದ್ರ ನಿರ್ದೇಶನದ 'ಕೋಕಿಲ' ಸಿನಿಮಾದಲ್ಲಿ ಕಮಲ್ ಹಾಸನ್ ನಟಿಸಿದ್ದರು. ಈ ಸಿನಿಮಾ ಮಲಯಾಳಂ ಮತ್ತು ಹಿಂದಿ ಭಾಷೆಗೆ ಡಬ್​ ಆಗಿತ್ತು. ಕೆ. ಬಾಲಚಂದರ್ ನಿರ್ದೇಶಿಸಿದ್ದ '​​ತಪ್ಪಿದ ತಾಳ' ಸಿನಿಮಾದಲ್ಲೂ ಕಮಲ್ ಹಾಸನ್ ನಟಿಸಿದ್ದರು. ಈ ಸಿನಿಮಾ 1978ರಲ್ಲಿ ತೆರೆಕಂಡಿತ್ತು.
Loading...

ನಂತರ 1980ರಲ್ಲಿ '​​ಮರಿಯಾ ಮೈ ಡಾರ್ಲಿಂಗ್' ಸಿನಿಮಾದಲ್ಲಿ ನಟಿಸಿದ್ದರು. ನಂತರ 1983ರಲ್ಲಿ ಕೆ. ಬಾಲಚಂದರ್ ನಿರ್ದೇಶನದಲ್ಲಿ 'ಬೆಂಕಿಯಲ್ಲಿ ಅರಳಿದ ಹೂವು' ಸಿನಿಮಾದಲ್ಲಿ ಕಮಲ್ ನಟಿಸಿದ್ದರು. ಈ ಸಿನಿಮಾಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ತಮ್ಮ ಅಣ್ಣ ಚಾರುಹಾಸನ್ ಮಗಳು ಸುಹಾಸಿನಿ ಜೊತೆಗೆ ಈ ಸಿನಿಮಾದಲ್ಲಿ ಕಮಲ್ ಹಾಸನ್ ತೆರೆ ಹಂಚಿಕೊಂಡಿದ್ದರು. ಅದಾಗಿ 22 ವರ್ಷಗಳ ಬಳಿಕ ರಮೇಶ್​ ಅರವಿಂದ್​ ನಿರ್ದೇಶನದಲ್ಲಿ 'ರಾಮ ಶಾಮ ಭಾಮ' ಎಂಬ ಕಾಮಿಡಿ ಸಿನಿಮಾದಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿ ಕಮಲ್ ಜೊತೆಗೆ ರಮೇಶ್ ಅರವಿಂದ್, ಶ್ರುತಿ, ಡೈಸಿ ಬೋಪಣ್ಣ, ಹಿರಿಯ ನಟಿ ಊರ್ವಶಿ ಕೂಡ ನಟಿಸಿದ್ದರು.

First published:November 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...