Kalave Mosagara Teaser: ಸಖತ್ ಆಗಿದೆ ಭರತ್ ಸಾಗರ್ ಅಭಿನಯದ ಕಾಲವೇ ಮೋಸಗಾರ ಟೀಸರ್

Bharath Sagar: ಭರತ್​ಗೆ ಜೋಡಿಯಾಗಿ ಕಿರುತೆರೆ ನಟಿ ಯಶಸ್ವಿನಿ ರವೀಂದ್ರ ನಾಯಕಿಯಾಗಿ ನಟಿಸಿದ್ದಾರೆ. ಭಾವಸ್ಪಂದನ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ರಜತ್ ಸಾಳಂಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರೆ.

Vinay Bhat | news18-kannada
Updated:May 23, 2020, 12:08 PM IST
Kalave Mosagara Teaser: ಸಖತ್ ಆಗಿದೆ ಭರತ್ ಸಾಗರ್ ಅಭಿನಯದ ಕಾಲವೇ ಮೋಸಗಾರ ಟೀಸರ್
ಕಾಲವೇ ಮೋಸಗಾರ.
  • Share this:
ಚಂದನವನದಲ್ಲಿ ಹೊಸಬರ ಹೊಸತನದ ಸಿನಿಮಾಗಳು ಸಖತ್ ಸದ್ದು ಮಾಡುತ್ತಿದ್ದು, ಈಗ ಸರದಿಯಲ್ಲಿ ಕಾಲವೇ ಮೋಸಗಾರ ತಂಡ ಬಂದಿದೆ. ಕೆಲ ದಿನಗಳ ಹಿಂದೆ ಟೀಸರ್ ರಿಲೀಸ್ ಮಾಡಿ ಸಾಕಷ್ಟು ಚರ್ಚೆಯಲ್ಲಿದ್ದ ಈ ಸಿನಿಮಾ ಸದ್ಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿ ಸಖತ್ ಸುದ್ದಿಯಲ್ಲಿದೆ.

ಹೌದು, ಭರತ್ ಸಾಗರ್, ಯಶಸ್ವಿನಿ ರವೀಂದ್ರ ಮತ್ತು ಶಂಕರಮೂರ್ತಿ ಮುಖ್ಯಭೂಮಿಕೆಯಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಎರಡನೇ ಟೀಸರ್ ಬಿಡುಗಡೆಯಾಗಿದ್ದು, ಎಲ್ಲಾ ಕಡೆಯಿಂದ ಒಳ್ಳೆಯ ಮಾತುಗಳು ಕೇಳಿಬರುತ್ತವೆ.ಭಾವಸ್ಪಂದನ ಪ್ರೊಡಕ್ಷನ್ ಬ್ಯಾನರ್​ನಡಿ ನಿರ್ಮಾಣವಾಗಿರುವ ಕಾಲವೇ ಮೋಸಗಾರ  ಲವ್ ಮಾಸ್ ಸಿನಿಮಾವಾಗಿದ್ದು, ಹೊಸತನದಿಂದ ತುಂಬಿರುವ ಟೀಸರ್ ಲವ್, ಮಾಸ್, ಎಮೋಷನ್ಸ್ ಎಲ್ಲವನ್ನೂ ಒಳಗೊಂಡಿದೆ. ಪ್ರಮುಖವಾಗಿ ಯುವ ಮನಸ್ಸುಗಳನ್ನು ಆಕರ್ಷಿಸುತ್ತಿದೆ.

ಕಾಲವೇ ಮೋಸಗಾರ ಕನ್ನಡ ಸಿನಿಮಾವು ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂನಲ್ಲಿ ‘ಲಾಸ್ಟ್ ಪೆಗ್’ ಹೆಸರಿನಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ. ಇದು ಸಂಜಯ್ ವದತ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ.

ಮುಖ್ಯ ಪಾತ್ರದಲ್ಲಿ ನಾಯಕನಾಗಿ ಭರತ್ ಸಾಗರ್ ನಟಿಸಿದ್ದಾರೆ. ಭರತ್ ಅವರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಇದು ಮೊದಲ ಚಿತ್ರ. ರಗಡ್ ಲುಕ್​ನಲ್ಲಿ, ವಿಭಿನ್ನ ಗೆಟಪ್​ನಲ್ಲಿ ಭರತ್ ಮಿಂಚಿದ್ದು ಈ ಪಾತ್ರಕ್ಕಾಗಿ ಇವರು ಸಾಕಷ್ಟು ತಯಾರಿ ನಡೆಸಿದ್ದಾರಂತೆ. ಆಟಕ್ಕೂಂಟು ಲೆಕ್ಕಕ್ಕಿಲ್ಲ, ನಾಗರಕಟ್ಟೆ, ಮಯೂರಿ ಚಿತ್ರದಲ್ಲಿ ಈ ಹಿಂದೆ ಭರತ್ ಕಾಣಿಸಿಕೊಂಡಿದ್ದರು.

ಇನ್ನೂ ಭರತ್​ಗೆ ಜೋಡಿಯಾಗಿ ಕಿರುತೆರೆ ನಟಿ ಯಶಸ್ವಿನಿ ರವೀಂದ್ರ ನಾಯಕಿಯಾಗಿ ನಟಿಸಿದ್ದಾರೆ. ಭಾವಸ್ಪಂದನ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ರಜತ್ ಸಾಳಂಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರೆ. ಕ್ರಾಂತಿ ಕುಮಾರ್ ಕೋನಿಡೇಲಾ ಛಾಯಾಗ್ರಹಣ, ಲೋಕೆಶ್ ಕೆ ಸಂಗೀತ, ರಿತ್ವಿಕ್ ಸಂಕಲನ ಚಿತ್ರಕ್ಕಿದೆ.  ಥ್ರಿಲ್ಲರ್‌ ಮಂಜು ಸಾಹಸ ನಿರ್ದೇಶನ ಇರುವ ಚಿತ್ರದಲ್ಲಿಅದ್ಭುತ ಸಾಹಸ ದೃಶ್ಯಗಳು ಮೂಡಿಬಂದಿವೆಯಂತೆ. ಇನ್ನು ಚಿತ್ರವನ್ನು ಬೆಂಗಳೂರಿನಲ್ಲಿಚಿತ್ರೀಕರಣ ಮಾಡಲಾಗಿದ್ದು, 2.5 ಕೋಟಿ ರೂ. ವೆಚ್ಚದಲ್ಲಿಚಿತ್ರ ನಿರ್ಮಾಣವಾಗಿದೆ.

ಈ ಚಿತ್ರದ ಮತ್ತೊಂದು ವಿಶೇಷತೆ ಎಂದರೆ ಭಾರತೀಯ ಸಂಗೀತವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಖ್ಯಾತ ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್ ಅವರ ಸ್ಟುಡಿಯೋದಲ್ಲಿ ಕಾಲವೇ ಮೋಸಗಾರ ಹಾಡುಗಳ ರೆಕಾರ್ಡಿಂಗ್ ಮಾಡಲಾಗಿದೆ. ಕನ್ನಡದಲ್ಲಿ ಇಂತಹ ಪ್ರಯತ್ನ ಮಾಡಿರುವುದು ಇದೇ ಮೊದಲ ಬಾರಿ. ಒಟ್ಟು ನಾಲ್ಕು ಹಾಡುಗಳಿದ್ದು, ಅಂಥೋನಿ ದಾಸ್, ಸಂಚಿತ್ ಹೆಗ್ಡೆ, ಅನುರಾದ ಭಟ್, ಇಂಚರಾ ರಾವ್ ಸೇರಿದಂತೆ ಪ್ರಮುಖ ಗಾಯಕರು ಹಾಡಿದ್ದಾರೆ.

ಚಿತ್ರದ ತಾರಾಗಣದಲ್ಲಿ ಭರತ್ ಸಾಗರ್, ಯಶಸ್ವಿನಿ ರವೀಂದ್ರ ಜೊತೆ ಶಂಕರ್ ಮೂರ್ತಿ, ಕುರಿ ಪ್ರತಾಪ್, ವಿಜಯ್ ಚೆಂಡೂರ್, ಬ್ಯಾಂಕ್ ಜನಾರ್ದನ್, ದರ್ಶನ್ ವರ್ನೆಕಾರ್, ಮುರಳಿ ಹಾಸನ್, ಆಶಾ ಸುಜಯ್​ರಂತಹ ಪ್ರಮುಖ ಕಲಾವಿದರಿದ್ದಾರೆ.

First published: May 23, 2020, 11:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading