Bollywood: ಗುಟ್ಟಾಗಿ ಮದುವೆಯಾದ್ರಾ ಕಾಜೋಲ್​ ತಂಗಿ ತನಿಶಾ ಮುಖರ್ಜಿ? ಫೋಟೋ ಹೇಳ್ತಿದೆ ಹೊಸ ಕಥೆ

ನಟಿ ತನಿಶಾ ಮುಖರ್ಜಿ ತನ್ನ ಮದುವೆಯ ವದಂತಿಗಳಿಗೆ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ

ತನೀಶಾ ಮುಖರ್ಜಿ

ತನೀಶಾ ಮುಖರ್ಜಿ

  • Share this:
ಚಲನಚಿತ್ರೋದ್ಯಮದಲ್ಲಿ (Film Industry) ಕೆಲ ನಟ ನಟಿಯರು ತಮ್ಮ ವೈಯಕ್ತಿಕ ಬದುಕನ್ನು ತುಂಬಾನೇ ರಹಸ್ಯವಾಗಿಟ್ಟುಕೊಳ್ಳುತ್ತಾರೆ (Personal Lives Secret) ಎನ್ನುವುದು ಎಲ್ಲರಿಗೂ ತಿಳಿದಂತಹ ವಿಷಯವೇ ಆಗಿದೆ.ಅದರಲ್ಲೂ ಬಾಲಿವುಡ್‌ನಲ್ಲಂತೂ(Bollywood) ಕೆಲವು ನಟ ನಟಿಯರು (Actresses) ತಮ್ಮ ನಿಜ ಬದುಕಿನಲ್ಲಿ ಮದುವೆ ಆಗಿದ್ದಾರೆ ಅಥವಾ ಇಲ್ಲವೇ ಎಂಬ ವಿಚಾರವೇ ಬಹಿರಂಗವಾಗುವುದಿಲ್ಲ, ಆ ರೀತಿಯಲ್ಲಿ ಅವರು ಯಾರಿಗೂ ತಿಳಿಯದಂತೆ ಗುಟ್ಟಾಗಿಟ್ಟಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ನಟಿ ಕಾಜೋಲ್‌ ಜೊತೆ ಚಕಮಕಿ
ಇಲ್ಲಿ ನಾವು ಇದೇ ರೀತಿಯ ಒಂದು ಸುದ್ದಿಯನ್ನು ನಿಮಗೆ ಹೇಳಲು ಹೊರಟಿದ್ದೇವೆ. ಈ ನಟಿ ಬಾಲಿವುಡ್‌ನಲ್ಲಿ ತೀರಾ ಕಡಿಮೆ ಚಿತ್ರಗಳಲ್ಲಿ ಅಭಿನಯಿಸಿದ್ದು, ಇವರ ಹೆಸರು ಹೇಳಿದರೆ ನಿಮಗೆ ಥಟ್ಟನೆ ನೆನಪಾಗದೆ ಇರಬಹುದು. ಕೆಲವು ತಿಂಗಳುಗಳ ಹಿಂದೆಯಷ್ಟೆ ತನ್ನ ಅಕ್ಕಳಾದ ಮತ್ತು ಬಾಲಿವುಡ್ ನಟಿ ಕಾಜೋಲ್‌ನೊಂದಿಗೆ ಒಂದು ಖಾಸಗಿ ಸಮಾರಂಭದಲ್ಲಿ ಮಾತಿನ ಚಕಮಕಿಗೆ ಇಳಿದ ಅವರ ಸಹೋದರಿ ಮತ್ತು ನಟಿ ತನಿಶಾ ಮುಖರ್ಜಿ ಎಂದರೆ ನಿಮಗೆ ನೆನಪಾಗಬಹುದು.

ಅಷ್ಟೇ ಏಕೆ..? 'ಬಿಗ್ ಬಾಸ್' ಖ್ಯಾತಿಯ ತನಿಶಾ ಮುಖರ್ಜಿ ಎಂದರೂ ಸಹ ಕೆಲವರಿಗೆ ಥಟ್ಟನೆ ಅವರ ನೆನಪಾಗಬಹುದು. ಇತ್ತೀಚಿನ ದಿನಗಳಲ್ಲಿ ಸಕ್ರಿಯವಾಗಿ ಚಲನಚಿತ್ರಗಳನ್ನು ಮಾಡದಿರಬಹುದು, ಆದರೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 'ನೀಲ್ ಮತ್ತು ನಿಕ್ಕಿ’ ನಟಿ ಪ್ರಸ್ತುತ ರಜೆಯಲ್ಲಿದ್ದಾರೆ ಮತ್ತು ಅವರ ವಿಹಾರದ ಸರಣಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಒಬ್ಬ ಸ್ಟಾರ್​ ನಟನ ಮನೆ ಮುಂದೆ ಹೋಗಿ ಹೀಗಾ ಮಾಡೋದು? ಈ ಹೆಣೈಕ್ಳು ಮಾಡಿದ್ದು ನೋಡಿದ್ರೆ... ಅಷ್ಟೇ...!

Tanishaa Mukerji reveals on secret wedding rumours says Not married yet I like wearing toe rings ss - Digall

ವಿವಾಹದ ವದಂತಿ
ಈ ಫೋಟೋ ನೋಡಿದ ನಂತರ ಅಭಿಮಾನಿಗಳು ಈ ನಟಿ ರಹಸ್ಯವಾಗಿ ಮದುವೆಯಾದರೆ ಎಂದು ಅನುಮಾನ ಪಡುವಂತಾಗಿದೆ, ಏಕೆಂದರೆ ಇವರು ಹಂಚಿಕೊಂಡ ಒಂದು ಫೋಟೋ ಇವರ ವಿವಾಹದ ವದಂತಿಗಳನ್ನು ಹುಟ್ಟು ಹಾಕಿದೆ ಎಂದು ಹೇಳಬಹುದು. ತನಿಶಾ ಅವರು ಹೊಸ ವರ್ಷವನ್ನು ಹೇಗೆ ಸ್ವಾಗತಿಸಿದ್ದಾರೆ ಎಂಬುದರ ಒಂದು ನೋಟವನ್ನು ಈ ಫೋಟೋ ಮೂಲಕ ನೀಡಿದ್ದಾರೆ. ಒಂದು ಫೋಟೋದಲ್ಲಿ ಅವಳು ಸ್ವಯಂ-ನಿರ್ಮಿತ ಕ್ರೋಚೆಟ್ ಟಾಪ್ ಧರಿಸಿರುವುದನ್ನು ನಾವು ಕಾಣಬಹುದಾಗಿದೆ.

ಮತ್ತೊಂದು ಫೋಟೋದಲ್ಲಿ ಅವರು ತನ್ನ ಎರಡೂ ಕಾಲುಗಳನ್ನು ಸಮುದ್ರದ ಕಡೆಗೆ ಇರಿಸಿಕೊಂಡಿರುವುದನ್ನು ಕಾಣಬಹುದಾಗಿದ್ದು, ಕಾಲುಗಳ ಬೆರಳುಗಳಿಗೆ ಕಾಲುಂಗುರ ಧರಿಸಿದ್ದನ್ನು ನೋಡಬಹುದಾಗಿದೆ. ಈ ಫೋಟೋ ನಟಿ ತನಿಶಾ ಮುಖರ್ಜಿ ರಹಸ್ಯವಾಗಿ ಮದುವೆಯಾಗಿದ್ದಾರೆಯೇ ಎಂಬ ವದಂತಿಗಳನ್ನು ಹುಟ್ಟು ಹಾಕಿದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರು ಮದುವೆಯಾದಾಗ ಕಾಲುಂಗುರವನ್ನು ಸಾಂಪ್ರದಾಯಿಕವಾಗಿ ಹಾಕಿಕೊಳ್ಳುತ್ತಾರೆ. ಆದರೂ, ಇತ್ತೀಚಿನ ದಿನಗಳಲ್ಲಿ, ಅನೇಕ ಅವಿವಾಹಿತ ಹುಡುಗಿಯರು ಸಹ ಈ ರೀತಿಯ ಕಾಲುಂಗುರವನ್ನು ಫ್ಯಾಷನ್‌ಗಾಗಿ ಹಾಕಿಕೊಳ್ಳುತ್ತಾ ಇದ್ದಾರೆ ಎನ್ನುವುದನ್ನು ಇಲ್ಲಿ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: Katrina Kaif ಧರಿಸಿರುವ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ? ವಜ್ರಖಚಿತ ಮಂಗಳಸೂತ್ರದ ವಿಶೇಷತೆ ಏನು ಇಲ್ಲಿದೆ ನೋಡಿ.

ನನ್ನ ಕಾಲ್ಬೆರಳುಗಳಲ್ಲಿ ಮರಳು
ನಟಿ ತನಿಶಾ ಮುಖರ್ಜಿ ತನ್ನ ಮದುವೆಯ ವದಂತಿಗಳಿಗೆ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಈ ಫೋಟೋಗಳನ್ನು ಹಂಚಿಕೊಳ್ಳುತ್ತಾ ತನಿಶಾ "ನನ್ನ ಕಾಲ್ಬೆರಳುಗಳಲ್ಲಿ ಮರಳು ಮತ್ತು ನನ್ನ ಆತ್ಮದಲ್ಲಿ ಸಮುದ್ರ! ನಾನು ಬದುಕುತ್ತಿರುವ ಪ್ರತಿಯೊಂದು ಕ್ಷಣವನ್ನು ನಾನು ಆನಂದಿಸುತ್ತಿದ್ದೇನೆ! ನಾನೇ ತಯಾರಿಸಿದ ಟಾಪ್ ಧರಿಸಿ ಹೊಸ ವರ್ಷವನ್ನು ಪ್ರಾರಂಭಿಸಿದೆ. ಲಾಕ್‌ಡೌನ್‌ನಲ್ಲಿ ನಾನು ಒಂದು ಹೊಸ ಕೌಶಲ್ಯವನ್ನು ಕಲಿತುಕೊಂಡೆ ಮತ್ತು ನಿರ್ಬಂಧಿತ ಜೀವನದ ಎಲ್ಲಾ ಚಡಪಡಿಕೆಯನ್ನು ಈ ಸುಂದರ ಸೃಜನಶೀಲ ಶಕ್ತಿಯಾಗಿ ಪರಿವರ್ತಿಸಿದೆ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ತನೀಶಾ ಇತ್ತೀಚೆಗೆ ಡಿಸೆಂಬರ್ 2020ರಲ್ಲಿ ಬಿಡುಗಡೆಯಾದ 'ಕೋಡ್ ನೇಮ್ ಅಬ್ದುಲ್' ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಮತ್ತೊಮ್ಮೆ ಎಂಟ್ರಿ ನೀಡಿದ್ದಾರೆ. ಅವರು ಭಯಾನಕ ಚಿತ್ರ 'ರೋಸಿ: ದಿ ಕೇಸರಿ ಚಾಪ್ಟರ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Published by:vanithasanjevani vanithasanjevani
First published: