Sushmita Sen: ಕಾಜೋಲ್ ಬದಲು ಸುಶ್ಮಿತಾ ಸೇನ್​ಗೆ ಆಫರ್​! ಇದಕ್ಕೆ ಏನು ಕಾರಣ?

ಸುಶ್ಮಿತಾ ಸೇನ್ ಅವರು ನಿರ್ವಹಿಸಿದ ಪಾತ್ರಕ್ಕೆ ಈ ಮೊದಲು ನಿರ್ದೇಶಕರು ಬಾಲಿವುಡ್ ನ ಮತ್ತೊಬ್ಬ ಅತ್ಯದ್ಭುತ ನಟಿ ಕಾಜೋಲ್ ಅವರನ್ನು ಸಂಪರ್ಕ ಮಾಡಿದ್ದರಂತೆ. ಆದರೆ ಕೆಲ ಕಾರಣಗಳಿಂದ ಕಾಜೋಲ್ ಇದಕ್ಕೆ ಒಪ್ಪಿಕೊಂಡಿಲ್ಲದಿದ್ದರಿಂದ ಅವಕಾಶ ಸುಶ್ಮಿತಾ ಸೇನ್ ಪಾಲಾಯಿತು.

ಕಾಜೋಲ್ ಮತ್ತು ಸುಶ್ಮಿತಾ ಸೇನ್

ಕಾಜೋಲ್ ಮತ್ತು ಸುಶ್ಮಿತಾ ಸೇನ್

  • Share this:
ತೆರೆಮೇಲೆ ಒಂದು ಚಿತ್ರ, ವೆಬ್ ಸೀರೀಸ್ (Web Series) ಏನೇ ಆಗಲಿ ಉತ್ತಮವಾಗಿ ಮೂಡಿಬರಬೇಕಾದರೆ, ಪಾತ್ರ ಆಯ್ಕೆ ಮುಖ್ಯವಾಗಿರುತ್ತದೆ. ಒಂದು ಹೊಸ ಪ್ರಾಜೆಕ್ಟ್ ಬರುತ್ತಿದೆ ಎಂದರೆ ಅದರ ಸುತ್ತಲೂ ಅನೇಕ ನಟರ ಹೆಸರು ಬಂದು ಹೋಗುತ್ತದೆ. ನಿರ್ದೇಶಕರು ಕೂಡ ಪಾತ್ರ ಆಯ್ಕೆಗೆ ಸೂಕ್ತ ಕಲಾವಿದರನ್ನು  ಹುಡುಕುತ್ತಿರುತ್ತಾರೆ. ಕೆಲವೊಮ್ಮೆ ಈ ಪಾತ್ರಕ್ಕೆ ಇವರೇ ಬೆಸ್ಟ್ ಎಂದು ಕೊಳ್ಳುತ್ತಾರೆ. ಆದರೆ ಆ ನಟರ ಕಾಲ್ ಶೀಟ್, ಡೇಟ್ಸ್ ಹೊಂದಾಣಿಕೆಯಾಗದೇ ಇರುವಾಗ ಇನ್ನೊಂದು ಕಲಾವಿದರನ್ನು ಆಯ್ಕೆ ಮಾಡೋದು ಚಿತ್ರರಂಗದಲ್ಲಿ (Cinematography) ತುಂಬಾನೇ ಸಹಜ. ಬಾಲಿವುಡ್ ನಲ್ಲಿ ಇತ್ತೀಚೆಗೆ ಬಂದ ಜನಪ್ರಿಯ ವೆಬ್ ಸೀರೀಸ್ ಆರ್ಯ ತುಂಬಾನೇ ಹಿಟ್ ಆಯಿತು. ಇಲ್ಲಿ ಸುಶ್ಮಿತಾ ಸೇನ್ (Sushmita Sen) ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ.

ಸುಶ್ಮಿತಾ ಸೇನ್ ಗೆ ಈ ಆಫರ್ ಬಂದಿದ್ದು ಹೇಗೆ 
ಇಲ್ಲೂ ಕೂಡ ಸುಶ್ಮಿತಾ ಸೇನ್ ಅವರು ನಿರ್ವಹಿಸಿದ ಪಾತ್ರಕ್ಕೆ ಈ ಮೊದಲು ನಿರ್ದೇಶಕರು ಬಾಲಿವುಡ್ ನ ಮತ್ತೊಬ್ಬ ಅತ್ಯದ್ಭುತ ನಟಿ ಕಾಜೋಲ್ ಅವರನ್ನು ಸಂಪರ್ಕ ಮಾಡಿದ್ದರಂತೆ. ಆದರೆ ಕೆಲ ಕಾರಣಗಳಿಂದ ಕಾಜೋಲ್ ಇದಕ್ಕೆ ಒಪ್ಪಿಕೊಂಡಿಲ್ಲದಿದ್ದರಿಂದ ಅವಕಾಶ ಸುಶ್ಮಿತಾ ಸೇನ್ ಪಾಲಾಯಿತು.

ಎರಡೂ ಸೂಪರ್ ಹಿಟ್
ರಾಮ್ ಮಾಧ್ವನಿಯ ವೆಬ್ ಸೀರೀಸ್ ಆರ್ಯ ಮೂಲಕ ಸುಶ್ಮಿತಾ ಸೇನ್ ಓಟಿಟಿಯಲ್ಲಿ ಕಾಣಿಸಿಕೊಂಡಿದ್ದು ಇಲ್ಲಿನ ಮತ್ತೊಂದು ವಿಶೇಷ. ಈ ಸೀರೀಸ್ ನ ಮೊದಲ ಸೀಸನ್ ಇಂಟರ್ನ್ಯಾಷನಲ್ ಎಮ್ಮಿ ಆವಾರ್ಡ್ಸ್ ಸಮಾರಂಭದಲ್ಲಿ ಅತ್ಯುತ್ತಮ ನಾಟಕ ಸರಣಿಗೆ ನಾಮನಿರ್ದೇಶನಗೊಂಡಿತ್ತು. ಆರ್ಯ ಎರಡು ಸೀಸನ್‌ಗಳನ್ನು ಹೊಂದಿದ್ದು ಎರಡೂ ಸೂಪರ್ ಹಿಟ್ ಆಗಿವೆ.

ನಿರ್ದೇಶಕ ರಾಮ್ ಮಾಧ್ವನಿ ಆರ್ಯ ನಿರ್ಮಾಣದ ವೇಳೆ ಆರಂಭದಲ್ಲಿ ಕಾಜೋಲ್ ಅವರನ್ನು ಸಂಪರ್ಕಿಸಿದ್ದರು ಎಂಬ ವಿಚಾರ ಸದ್ಯ ಬಹಿರಂಗವಾಗಿದೆ.

“ಆರ್ಯ ಸೀರೀಸ್ ಒಪ್ಪಿಕೊಳ್ಳದಿರಲು ಬೇರೆ ಕಾರಣಗಳಿವೆ”
ಹಿಂದೂಸ್ತಾನ್ ಟೈಮ್ಸ್ ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಕಾಜೋಲ್ ತನಗೆ ಆರ್ಯದಲ್ಲಿ ನಟಿಸಲು ಆಫರ್ ಬಂದಿತ್ತು ಎಂದು ಬಹಿರಂಗಪಡಿಸಿದ್ದಾರೆ. ರಾಮ್ ಮಾಧ್ವನಿ ಆರ್ಯದಲ್ಲಿ ನಟಿಸುತ್ತೀರಾ ಎಂದು ಕೇಳಿದರು. ನನಗೆ ಕಥೆ ಕೂಡ ಇಷ್ಟವಾಯಿತು, ಆದರೆ ಕೆಲ ಕಾರಣಗಳಿಂದ ಪ್ರಾಜೆಕ್ಟ್ ಒಪ್ಪಿಕೊಳ್ಳಲು ಆಗಿಲ್ಲ ಎಂದರು. ಡೇಟ್ ಸಮಸ್ಯೆಯಾಯಿತೇ ಎಂದು ಮರು ಪ್ರಶ್ನೆ ಮಾಡಿದಾಗ ಇಲ್ಲ ಇದಕ್ಕೆ ಬೇರೆ ಕಾರಣಗಳಿವೆ ಅಂತಾ ಏನೋ ಸರಿಯಿಲ್ಲ ಎಂಬಂತೆ ಕಾಜೋಲ್ ಉತ್ತರಿಸಿದರು.

ಇದನ್ನೂ ಓದಿ:  Sushmita Sen: ಅಕ್ಕನ ಪ್ರೇಮ್​ ಕಹಾನಿ ಬಗ್ಗೆ ತಮ್ಮನ ಶಾಕಿಂಗ್​ ಹೇಳಿಕೆ! ಹುಡುಗನ್ನ ಬಿಟ್ಟು ಅಂಕಲ್​ ಹಿಂದೆ ಯಾಕ್​ ಹೋದ್ರು ಅಂತ ಟ್ರೋಲ್​

ಕಾಜೋಲ್ ಅವರು ಶೀಘ್ರದಲ್ಲೇ ಮತ್ತೊಂದು ಪ್ರಾಜೆಕ್ಟ್ ಜೊತೆ ಓಟಿಟಿಗೆ ಬರುವುದಾಗಿ ಬಹಿರಂಗಪಡಿಸಿದರು, ಆದರೆ ಅದರ ಬಗ್ಗೆ ಯಾವುದೇ ಹೆಚ್ಚಿನ ವಿವರಗಳನ್ನು ಅವರು ಬಿಟ್ಟುಕೊಟ್ಟಿಲ್ಲ. ಕಾಜೋಲ್ ಕೊನೆಯದಾಗಿ ನೆಟ್‌ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗಿದ್ದ ರೇಣುಕಾ ಶಹಾನೆ ಅವರ ತ್ರಿಭಂಗಾದಲ್ಲಿ ಕಾಣಿಸಿಕೊಂಡಿದ್ದರು, ಇದರಲ್ಲಿ ಮಿಥಿಲಾ ಪಾಲ್ಕರ್ ಮತ್ತು ತಾಂಜಿ ಅಜ್ಮಿ ಕೂಡ ನಟಿಸಿದ್ದಾರೆ.

ಆರ್ಯ ವೆಬ್ ಸಿರೀಸ್ ನಲ್ಲಿ ಸುಶ್ಮಿತಾ ಸೇನ್ ಅವರ ಪಾತ್ರವೇನು
ಇನ್ನೂ ವೆಬ್ ಸೀರೀಸ್ ಆರ್ಯ ಒಂದು ಕ್ರೈಮ್ ಥ್ರಿಲ್ಲರ್ ನಾಟಕ ವಾಗಿದ್ದು, ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ತೆರೆಕಂಡಿತ್ತು. ಈ ಸರಣಿ ಮೂಲಕ ನಟಿ ಸುಶ್ಮಿತಾ ಸೇನ್ ಮೊದಲ ಬಾರಿಗೆ ಓಟಿಟಿಗೆ ಪ್ರವೇಶಿಸಿದ್ದಾರೆ. ಚಂದ್ರಚೂರ್ ಸಿಂಗ್, ಸಿಕಂದರ್ ಖೇರ್, ಅಂಕುರ್ ಭಾಟಿಯಾ ಮತ್ತು ವಿಕಾಸ್ ಕುಮಾರ್ ಇತರರು ಮುಖ್ಯ ಭೂಮಿಕೆಯಲ್ಲಿದ್ದಾರೆ. ವೆಬ್ ಶೋನಲ್ಲಿ, ಸುಶ್ಮಿತಾ ಅವರು ಫಾರ್ಮಾ ಬ್ಯಾರನ್ ಆಗಿದ್ದ ತನ್ನ ಗಂಡನ ನಿಗೂಢ ಸಾವಿನ ನಂತರ ತನ್ನ ಕುಟುಂಬವನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಆರ್ಯ ಸರೀನ್ ಎಂಬ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಆಕೆಯ ಅಭಿನಯವನ್ನು ಪ್ರೇಕ್ಷಕರು ಮತ್ತು ವಿಮರ್ಶಕರು ಶ್ಲಾಘಿಸಿದ್ದಾರೆ ಮತ್ತು ಈ ವೆಬ್ ಸೀರೀಸ್ ಸೇನ್ ಅವರ ವೃತ್ತಿಜೀವನದ ಎರಡನೇ ಇನ್ನಿಂಗ್ಸ್ ಆಗಿರುವುದರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: Sushmita Sen: ಕೋಟಿ ಆಸ್ತಿಗಳ ಒಡತಿ ಈ ಮಾಜಿ ವಿಶ್ವ ಸುಂದರಿ, ಸುಶ್ಮಿತಾ ಬಳಿ ಇರುವ ಕಾರು ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತಿರಾ!

ನಿರ್ದೇಶಕ ರಾಮ್ ಮಾಧ್ವನಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಆರ್ಯದ ಮೂರನೇ ಸೀಸನ್ ನ ಕೆಲಸ ನಡೆಯುತ್ತಿದೆ ಎಂದು ಘೋಷಿಸಿದರು.
Published by:Ashwini Prabhu
First published: