• Home
 • »
 • News
 • »
 • entertainment
 • »
 • ಕ್ರಶ್ ಆಗಿದ್ದು ಅಕ್ಷಯ್ ಕುಮಾರ್​ ಮೇಲೆ… ಮದುವೆಯಾಗಿದ್ದು ಅಜಯ್​​ ಅವರನ್ನು!; ಇದು ಕಾಜಲ್ ಕಥೆ!

ಕ್ರಶ್ ಆಗಿದ್ದು ಅಕ್ಷಯ್ ಕುಮಾರ್​ ಮೇಲೆ… ಮದುವೆಯಾಗಿದ್ದು ಅಜಯ್​​ ಅವರನ್ನು!; ಇದು ಕಾಜಲ್ ಕಥೆ!

Kajol Once Had A Huge Crush On The Khiladi Of B Town Akshay Kumar

Kajol Once Had A Huge Crush On The Khiladi Of B Town Akshay Kumar

ಬಾಲಿವುಡ್ ನಟಿ ಕಾಜಲ್​ಗೆ ಆರಂಭದಲ್ಲಿ ನಟ ಅಕ್ಷಯ್ ಕುಮಾರ್ ಮೇಲೆ ಕ್ರಶ್ ಆಗಿತ್ತು. ಆದರೆ, ನಂತರದಲ್ಲಿ ಅವರು ಮದುವೆಯಾಗಿದ್ದು ಮಾತ್ರ ಅಜಯ್ ದೇವಗನ್​​ ಅವರನ್ನು. ಈ ವಿಚಾರ ಅವರ ಆಪ್ತ ಸ್ನೇಹಿತನಿಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿರಲಿಲ್ಲ.

 • Share this:

  ಬಾಲಿವುಡ್ ನಟಿ ಕಾಜಲ್​ಗೆ ಆರಂಭದಲ್ಲಿ ನಟ ಅಕ್ಷಯ್ ಕುಮಾರ್ ಮೇಲೆ ಕ್ರಶ್ ಆಗಿತ್ತು. ಆದರೆ, ನಂತರದಲ್ಲಿ ಅವರು ಮದುವೆಯಾಗಿದ್ದು ಮಾತ್ರ ಅಜಯ್ ದೇವಗನ್​​ ಅವರನ್ನು. ಈ ವಿಚಾರ ಅವರ ಆಪ್ತ ಸ್ನೇಹಿತನಿಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿರಲಿಲ್ಲ.


  ಇದೀಗ ಈ ಸುದ್ದಿ ಬಹಿರಂಗವಾಗಿದೆ. ಕಾಜಲ್ ಅವರ ಆಪ್ತ ಸ್ನೇಹಿತ ನಿರ್ದೇಶಕ ಕರಣ್ ಜೋಹಾರ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.


  ಒಂದು ಕಾಲಕ್ಕೆ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ಕಾಜಲ್​ಗೆ ಅಕ್ಷಯ್ ಕುಮಾರ್ ಮೇಲೆ ಕ್ರಶ್ ಆಗಿತ್ತಂತೆ. ರಿಷಿ ಕಪೂರ್ ಅಭಿನಯದ ಹೆನ್ನಾ ಚಿತ್ರದ ಸಮಾರಂಭದಲ್ಲಿ ಅಕ್ಷಯ್ ಕುಮಾರ್ ಅವರನ್ನು ಮಾತನಾಡಿಸಬೇಕೆಂಬ ಆಸೆಯನ್ನು ಕಾಜಲ್​​ಇಟ್ಟುಕೊಂಡಿದ್ದರಂತೆ. ಆದರೆ ಅಂದು ಅಕ್ಷಯ್ ಅವರನ್ನು ಭೇಟಿ ಮಾಡಲು ಕಾಜಲ್​ಗೆ ಸಾಧ್ಯವಾಗಲಿಲ್ಲ.


  ಆ ಸಮಯದಲ್ಲಿ ಕರಣ್ ಜೋಹಾರ್ ಅಕ್ಷಯ್ ಕುಮಾರ್​​​ ಅವರನ್ನು ಕಾಜಲ್​​ಗೆ ಭೇಟಿ ಮಾಡಿಸುದಕ್ಕೆ ಪ್ರಯತ್ನಿಸಿದಂತೆ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ ಎಂದಿದ್ದಾರೆ.


  ನಂತರ ದಿನಗಳಲ್ಲಿ ನಾನು ಕಾಜಲ್ ಒಳ್ಳೆಯ ಸ್ನೇಹಿತರಾದೆವು. ಅದೇ ಸ್ನೇಹದಿಂದ ಕಾಜಲ್ ಅವರ ಕೆಲ ಸಿನಿಮಗಳು ನನಗೆ ನಿರ್ದೇಶಿಸುವ ಅವಕಾಶ ಸಿಕ್ಕಿತು ಎಂದು ಕರಣ್ ಹೇಳಿದ್ದಾರೆ.


  ಕಾಜಲ್​ಗೆ ಅಕ್ಷಯ್ ಮೇಲೆ ಪ್ರೀತಿ ಇದ್ದರೂ ಅದನ್ನು ಎಲ್ಲೂ ಹೇಳಿಕೊಳ್ಳಲಿಲ್ಲ. ಮಾತ್ರವಲ್ಲದೆ ಅದನ್ನು ಅವರ ಬಳಿ ಹೇಳಲು ಹೋಗಲಿಲ್ಲ. ಸಿನಿಮಾ ಮತ್ತು ವೃತ್ತಿ ಜೀವನದತ್ತ ಹೆಚ್ಚು ಒತ್ತು ನೀಡಿದ ಕಾಜಲ್ ಬಾಲಿವುಡ್​​ ರಂಗದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದರು. ನಂತರ ಅಜಯ್ ದೇವಗನ್ ಅವರನ್ನು ವಿವಾಹವಾದರು.


  ಕಾಜಲ್ ಮತ್ತು ಅಕ್ಷಯ್ ಕುಮಾರ್ ‘ಯೇ ದಿಲ್ಲಗಿ‘ ಸಿನಿಮಾದಲ್ಲಿ ಜೊತೆಯಾ ನಟಿಸಿದ್ದಾರೆ.


  ಅಜಯ್ ದೇವಗನ್

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು